Rajeshwari Srinivasan: ಮಾಜಿ ಟಾಟಾ ಉದ್ಯೋಗಿ ಈಗ ಫ್ಯಾಬ್ ಇಂಡಿಯಾ ಸಿಇಒ ರಾಜೇಶ್ವರಿ ಬಗ್ಗೆ ತಿಳಿಯಿರಿ

ಫ್ಯಾಬ್ ಇಂಡಿಯಾ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ರಾಜೇಶ್ವರಿ ಶ್ರೀನಿವಾಸನ್ ಅವರನ್ನು ಸೋಮವಾರ ನೇಮಿಸಲಾಗಿದೆ. ಏಳು ವರ್ಷಗಳ ಕಾಲ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನಿವೃತ್ತರಾದ ವಿನಿ ಸಿಂಗ್ ಅವರ ಉತ್ತರಾಧಿಕಾರಿಯಾಗಿ ರಾಜೇಶ್ವರಿ ಅವರು ನೇಮಕಗೊಂಡಿದ್ದಾರೆ.

ಫ್ಯಾಬ್ ಇಂಡಿಯಾ ಸಿಇಒ ಆಗಿ ರಾಜೇಶ್ವರಿ ಶ್ರೀನಿವಾಸನ್ ಅವರು ನೇಮಕಗೊಳ್ಳವ ಮೊದಲು ರಾಲಿಸ್ ಇಂಡಿಯಾ, ಟಾಟಾ ಕನ್ಯ್ಸೂಮರ್, ಇಂಡಿಯನ್ ಹೋಟೇಲ್ ಆಂಡ್ ಟೈಟಾನ್‌ ಸೇರಿದಂತೆ ಟಾಟಾ ಗ್ರೂಪ್‌ ನಲ್ಲಿ ಹಲವು ಪ್ರಮುಖ ಕಾರ್ಯನಿರ್ವಾಹಕ ಹುದ್ದೆಗಳನ್ನು ನಿರ್ವಹಿಸಿದ್ದರು. ಇವರು ತಮ್ಮ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳ ವೃತ್ತಿ ಅನುಭವವನ್ನು ಹೊಂದಿದ್ದಾರೆ. ರಾಜೇಶ್ವರಿ ಅವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಟಿವ್ ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮಾಡಿದ್ದು ಇದಲ್ಲದೇ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್‌ನಿಂದ (IIFT) ಎಂಬಿಎ ಪದವಿ ಪಡೆದಿದ್ದಾರೆ.

 ಮಾಜಿ ಟಾಟಾ ಉದ್ಯೋಗಿ, ಫ್ಯಾಬ್ ಇಂಡಿಯಾ ಸಿಇಒ ಬಗ್ಗೆ ತಿಳಿಯಿರಿ

ಫ್ಯಾಬ್ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಾಗಿರುವ ವಿಲಿಯಂ ಬಿಸ್ಸೆಲ್ ಅವರು ರಾಜೇಶ್ವರಿ ಅವರ ಸೇರ್ಪಡೆ ಕುರಿತಂತೆ "ಫ್ಯಾಬ್ಇಂಡಿಯಾ ಕುಟುಂಬಕ್ಕೆ ರಾಜೇಶ್ವರಿ ಶ್ರೀನಿವಾಸನ್ ಅವರಿಗೆ ಸ್ವಾಗತ. ಅವರ ನಾಯಕತ್ವದಲ್ಲಿ, ಫ್ಯಾಬ್ಇಂಡಿಯಾ ಬಿಸಿನೆಸ್ ಸ್ಥಿರವಾದ ಬೆಳವಣಿಗೆಯತ್ತ ಗಮನಹರಿಸುವುದನ್ನು ಮುಂದುವರಿಸುತ್ತದೆ ಮತ್ತು ನಮ್ಮ ಪಾಲುದಾರರು ಮತ್ತು ಷೇರುದಾರರಿಗೆ ಧನಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ನಮಗೆ ವಿಶ್ವಾಸವಿದೆ" ಎಂದು ಹೇಳಿದ್ದಾರೆ.

1960 ರಲ್ಲಿ ಫ್ಯಾಬ್ಇಂಡಿಯಾವನ್ನು ಸ್ಥಾಪನೆ ಮಾಡಲಾಗಿದೆ. ಈ ಸಂಸ್ಥೆಯು ದೇಶದೆಲ್ಲೆಡೆ 309 ಸ್ಟೋರ್‌ಗಳು ಮತ್ತು ಎಕ್ಸಿಪೀರಿಯನ್ಸ್ ಸೆಂಟರ್ , 74 ಆರ್ಗ್ಯಾನಿಕ್ ಇಂಡಿಯಾ ಸ್ಟೋರ್‌ಗಳು ಮತ್ತು ಆರ್ಗ್ಯಾನಿಕ್ ಇಂಡಿಯಾಗಾಗಿ ರಿಟೇಲ್ ಟಚ್‌ಪಾಯಿಂಟ್‌ಗಳ ಜಾಲವನ್ನು ಹೊಂದಿದೆ. ಫ್ಯಾಬ್ಇಂಡಿಯಾ ಸುಮಾರು 50,000 ಗ್ರಾಮೀಣ ಕುಶಲಕರ್ಮಿಗಳು ಮತ್ತು 12,000 ರೈತರೊಂದಿಗೆ ಕೆಲಸ ಮಾಡುತ್ತದೆ.

ಭಾರತದ ಪ್ರಮುಖ ಎಥ್ನಿಕ್ ವೇರ್ ಮತ್ತು ಲೈಫ್ ಸ್ಟೈಲ್ ರಿಟೇಲರ್‌ಗಳಲ್ಲಿ ಒಂದಾದ ಫ್ಯಾಬ್‌ಇಂಡಿಯಾವನ್ನು ಅಜೀಂ ಪ್ರೇಮ್‌ಜಿ ಅವರ ಹೂಡಿಕೆ ಸಂಸ್ಥೆಯಾಗಿರುವ ಪ್ರೇಮ್‌ಜಿ ಇನ್ವೆಸ್ಟ್ ಮತ್ತು ನಂದನ್ ನಿಲೇಕಣಿ ಸೇರಿದಂತೆ ವಿವಿಧ ಹೂಡಿಕೆದಾರರು ಹೂಡಿಕೆ ಮಾಡುವ ಮೂಲ್ಕಕ ಬೆಂಬಲಿಸಿದ್ದಾರೆ. ಪ್ರೇಮ್‌ಜಿ ಅವರ ಸಂಸ್ಥೆಯು ಕಂಪನಿಯ ಶೇಕಡಾ 7ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಟಾಟಾ ಬ್ಯುಜಿನೆಸ್ ಪಾರ್ಟ್‌ನರ್‌ ಬಗ್ಗೆ ತಿಳಿಯಿರಿ

ಫೋರ್ಬ್ಸ್‌ ಪ್ರಕಾರ, 2023ರಲ್ಲಿ ಭಾರತದಲ್ಲಿ ಬಿಲಿಯನೇರ್‌ ಆದ ಮೂವರು ಮಹಿಳೆಯರಲ್ಲಿ ರೋಹಿಕಾ ಮಿಸ್ತ್ರಿ ಕೂಡ ಒಬ್ಬರು. ಆಕೆಯ ನಿವ್ವಳ ಆಸ್ತಿ ಮೌಲ್ಯ 7 ಶತಕೋಟಿ ಡಾಲರ್‌ ಆಗಿದ್ದು, ಅದು 56000 ಕೋಟಿ ರೂ. ಆಗಿದೆ. ಅಷ್ಟೇಅಲ್ಲ ಅವರು ಭಾರತದ 2ನೇ ಅತಿದೊಡ್ಡ ಮಹಿಳೆಯಾಗಿದ್ದಾರೆ.

ರೋಹಿಕಾ ಮಿಸ್ತ್ರಿ ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಸೈರಿಸ್‌ ಮಿಸ್ತ್ರಿ ಅವರ ಪತ್ನಿ. ಆಕೆಯ ಮಾವ ಪಲ್ಲೊಂಜಿ ಮಿಸ್ತ್ರಿ ಕೆಲವು ತಿಂಗಳ ಹಿಂದೆ ನಿಧನರಾಗಿದ್ದರು. 55 ವರ್ಷದ ಮಹಿಳೆ ರೋಹಿಕಾ ಅವರು ಹಿರಿಯ ವಕೀಲ ಇಕ್ಬಾಲ್‌ ಚಾಗ್ಲಾ ಅವರ ಪುತ್ರಿ. ಕಳೆದ ವರ್ಷ ಜೂನ್‌ನಲ್ಲಿ ನಿಧನರಾದ ಪಲ್ಲೊಂಜಿ ಮಿಸ್ತ್ರಿ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರೇ ಶಪೂರ್‌ ಮಿಸ್ತ್ರಿ ಹಾಗೂ ಸೈರಿಸ್‌ ಮಿಸ್ತ್ರಿ. ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ನಡೆದ ಕಾರು ಅಪಘಾತದಲ್ಲಿ ಸೈರಸ್‌ ಕೆಲವು ವಾರಗಳ ನಂತರ ಸಾವನ್ನಪ್ಪಿದ್ದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+