ಭಾರತದ ಶ್ರೀಮಂತ ವ್ಯಕ್ತಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಆಪ್ತ ಸಹಾಯಕ, ಬಲಗೈ ಬಂಟ ಎಂದು ಕರೆಯಲ್ಪಡುವವರಲ್ಲಿ ಮನೋಜ್ ಮೋದಿ ಕೂಡಾ ಒರ್ವರು. ಇವರು ಇತ್ತೀಚೆಗೆ ತಮ್ಮ ಬಾಸ್ ಮುಖೇಶ್ ಅಂಬಾನಿಯಿಂದ 1500 ಕೋಟಿ ರೂಪಾಯಿಗಳ ಬಹುಮಹಡಿ ಕಟ್ಟಡವನ್ನು ಉಡುಗೊರೆ ರೂಪದಲ್ಲಿ ಪಡೆದುಕೊಂಡಿದ್ದಾರೆ.
ಮುಂಬೈನ ಅತ್ಯಂತ ಐಷಾರಾಮಿ ಪ್ರದೇಶದಲ್ಲಿ ನೇಪಿಯನ್ ಸೀ ರೋಡ್ ನಲ್ಲಿ 22 ಅಂತಸ್ತಿನ ಕಟ್ಟಡ ಇದಾಗಿದೆ. JSW ಗ್ರೂಪ್ ಅಧ್ಯಕ್ಷ ಸಜ್ಜನ್ ಜಿಂದಾಲ್ ಇವರ ನೆರೆಹೊರೆಯವರಾಗಿದ್ದಾರೆ. ಪ್ರತಿಯೊಂದು ಮಹಡಿಯು 8,000 ಚದರ ಅಡಿ ಹೊಂದಿದ್ದು ಒಟ್ಟು 1.7 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ನೇಪಿಯನ್ ಸೀ ರೋಡ್ ನಲ್ಲಿ ವಸತಿ ಪ್ರಾಪರ್ಟಿಗಳು ಸಾಮಾನ್ಯವಾಗಿ ಪ್ರತಿ ಚದರ ಅಡಿಗೆ 70,600 ರೂ. ಬೆಲೆಬಾಳುತ್ತವೆ.

ಮನೋಜ್ ಮೋದಿ ಯಾರು?
55ರ ಹರೆಯದ ಮನೋಜ್ ಮೋದಿ ರಿಲಯನ್ಸ್ ರಿಟೇಲ್ ಮತ್ತು ರಿಲಯನ್ಸ್ ಜಿಯೋದಲ್ಲಿ ನಿರ್ದೇಶಕರಾಗಿದ್ದಾರೆ. ಇವರು ಮುಕೇಶ್ ಅಂಬಾನಿಯವರ ನಿಕಟ ಉದ್ಯೋಗಿ ಮತ್ತು ಸ್ನೇಹಿತರಾಗಿದ್ದು ಇವರನ್ನು ಅಂಬಾನಿಯವರ ಬಲಗೈ ಬಂಟ ಎಂದೇ ಕರೆಯಲಾಗುತ್ತದೆ. ಸಾರ್ವಜನಿಕವಾಗಿ ಗುರುತಿಸಲು ಹೆಚ್ಚು ಇಷ್ಟಪಡದ ಮನೋಜ್ ಮೋದಿ ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ.
ಇವರು ಕೆಲವು ದೈತ್ಯ ಬ್ಯುಸಿನೆಸ್ ಡೀಲ್ ಭೇದಿಸಲು ಅಂಬಾನಿ ಅವರಿಗೆ ಸಹಾಯ ಮಾಡಿದ್ದಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಮನೋಜ್ ಮೋದಿಯವರ ಹಿರಿಯ ಅಳಿಯ ರಾಜೀವ್ ಪೊದ್ದಾರ್ ಸ್ವತಃ ಓರ್ವ ಕೈಗಾರಿಕೋದ್ಯಮಿಯಾಗಿದ್ದಾರೆ.
"ವೃಂದಾವನ" ಹೆಸರಿನ ಹೊಸ ಕಟ್ಟಡವೂ 22 ಮಹಡಿಗಳನ್ನು ಹೊಂದಿದ್ದು, ಬಹುಮಹಡಿ ಕಟ್ಟಡದ ಮೊದಲ ಏಳು ಮಹಡಿಗಳನ್ನು ಕಾರ್ ಪಾರ್ಕಿಂಗ್‌ಗೆ ಮೀಸಲಿಡಲಾಗಿದೆ. ಇದಾದ ಬಳಿಕ ಎರಡು ಮಹಡಿಗಳನ್ನು ಮೋದಿ ಕುಟುಂಬಕ್ಕೆ ಮೀಸಲಿಡಲಾಗಿದೆ. ಇದಲ್ಲದೇ 16, 17 ಮತ್ತು 18 ಮಹಡಿಗಳು ಅವರ ಹಿರಿಯ ಮಗಳು ಖುಷ್ಬೂ ಪೊದ್ದಾರ್ ಮತ್ತು ಅವರ ಕುಟುಂಬಕ್ಕೆ ನೀಡಲಾಗಿದೆ.
ಮ್ಯಾಜಿಕ್‌ಬ್ರಿಕ್ಸ್.ಕಾಂ ಪ್ರಕಾರ ಈ ಕಟ್ಟಡವನ್ನು "ತಲಾತಿ & ಪಾರ್ಟ್‌ನರ್ಸ್ ಎಲ್‌ಎಲ್‌ಪಿ" ಈ ಮನೆಯ ವಿನ್ಯಾಸಕರಾಗಿದ್ದು, ಈ ಮನೆ ಎಷ್ಟು ಐಷಾರಾಮಿಯಾಗಿದೆ ಎಂದರೆ, ಕೆಲವು ಪೀಠೋಪಕರಣಗಳನ್ನು ಇಟಲಿಯಿಂದ ತರಿಸಲಾಗಿದೆ.
ರಾಜೀವ್ ಪೊದ್ದಾರ್ ಬಗ್ಗೆ ಮಾಹಿತಿ
ಇನ್ನು ಮನೋಜ್ ಮೋದಿಯವರ ಮಗಳು ಖುಷ್ಬೂ ಪೊದ್ದಾರ್ ಬಾಲಕೃಷ್ಣ ಇಂಡಸ್ಟ್ರೀಸ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ರಾಜೀವ್ ಪೊದ್ದಾರ್ ಅವರನ್ನು ವಿವಾಹವಾಗಿದ್ದಾರೆ. ಇವರ ತಂದೆ ಅರವಿಂದ್ ಮತ್ತು ತಾಯಿ ವಿಜಯಲಕ್ಷ್ಮಿ ಪೊದ್ದಾರ್ ಕಂಪನಿಯ ಮಾಲೀಕರಾಗಿದ್ದಾರೆ. ಇವರು ಕಿಂಗ್ಸ್ಟನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ.
ಇವರ ಕಂಪನಿಯು ಕೃಷಿ ಉಪಕರಣಗಳಿಗೆ ಟೈರ್‌ಗಳನ್ನು ತಯಾರಿಸುತ್ತದೆ. ಕಂಪನಿಯು ರಫ್ತು ವ್ಯವಹಾರದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ. ಸೈಕಲ್ ಟೈರ್ ತಯಾರಿಸುವ ಮೂಲಕ ಬಾಲಕೃಷ್ಣ ಇಂಡಸ್ಟ್ರೀಸ್ 1963 ರಲ್ಲಿ ಪ್ರಾರಂಭವಾಯಿತು. ಈ ಕುಟುಂಬದ ನಿವ್ವಳ ಮೌಲ್ಯ 22,900 ಕೋಟಿ ರೂ.ಆಗಿದೆ.
ರಾಜೀವ್ ಪೊದ್ದಾರ್ ವ್ಯವಸ್ಥಾಪಕ ನಿರ್ದೇಶಕರಾಗುವ ಮೊದಲು, ವ್ಯವಹಾರ ತಂತ್ರಗಳನ್ನು ಕಲಿಯಲು ಉತ್ಪಾದನಾ ಘಟಕಗಳಲ್ಲಿ ಸಾಕಷ್ಟು ಸಮಯಕಳೆದಿದ್ದಾರೆ ಕ್ರೀಡೆಗಳನ್ನು ಹೆಚ್ಚಾಗಿ ಇಷ್ಟಪಡುವ ಇವರು ಕ್ರೀಡಾ ತಂಡಗಳಿಗೆ ಪ್ರಾಯೋಜಕತ್ವವನ್ನು ಸಹ ನೀಡುತ್ತಾರೆ. ಅವರು ರಗ್ಬಿ ವಿಶ್ವಕಪ್ ಫ್ರಾನ್ಸ್ (2023), Monster Jam,ಮತ್ತು LaLigaದಂತಹ ಈವೆಂಟ್‌ಗಳನ್ನು ಪ್ರಾಯೋಜಿಸಿದ್ದಾರೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications