ಗ್ರೋಹೆ ಹುರೇನ್ ಇಂಡಿಯಾ ಪ್ರಕಾರ, ಡಿಎಲ್‌ಎಫ್ ಅಧ್ಯಕ್ಷ ರಾಜೀವ್ ಸಿಂಗ್ ಅವರು 59,030 ಕೋಟಿ ರೂಪಾಯಿಗಳ ಅಪಾರ ಸಂಸತ್ತು ಹೊಂದಿರುವ ಭಾರತದ ಅತ್ಯಂತ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ.
ಮುಂಬೈ ಮೂಲದ ಮ್ಯಾಕ್ರೋಟೆಕ್ ಡೆವಲಪರ್ಸ್‌ನ(ಲೋಧಾ ಗ್ರೂಪ್) ಮಂಗಲ್ ಪ್ರಭಾತ್ ಲೋಧಾ ಮತ್ತು ಅವರ ಕುಟುಂಬವು 42,270 ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ ಆರ್‌ಎಂಝಡ್ ಕಾರ್ಪ್‌ನ ಅರ್ಜುನ್ ಮೆಂಡಾ ಮತ್ತು ಕುಟುಂಬವು 37,000 ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಮೂರನೇ ಸ್ಥಾನದಲ್ಲಿದೆ.

ಟಾಪ್ 10ರ ಪ್ರವೇಶವು 2017ರಲ್ಲಿ 3,350 ಕೋಟಿಯಿಂದ ಪ್ರಸ್ತುತ 15,000 ಕೋಟಿ ರೂ.ಗೆ ಏರಿದೆ. ಅದೇರೀತಿ ಟಾಪ್ 50ರಲ್ಲಿ ಸ್ಥಾನ ಪಡೆಯುವ ಮಿತಿ ಕೂಡ 2017ರಲ್ಲಿ 660 ರೂ.ನಿಂದ ಪ್ರಸ್ತುತ 1,300 ಕೋಟಿಗೆ ಏರಿದೆ ಎಂದು ಹುರೇನ್ ಇಂಡಿಯಾ ಎಂಡಿ ಅನಸ್ ರೆಹಮಾನ್ ಜುನೈದ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ರಾಜೀವ್ ಸಿಂಗ್ ಯಾರು?
ರಾಜೀವ್ ಸಿಂಗ್ ಅವರು ರಿಯಲ್ ಎಸ್ಟೇಟ್ ಒಡೆಯ ರಾಜ ಕುಶಾಲ್ ಪಾಲ್ ಸಿಂಗ್ ಅವರ ಏಕೈಕ ಉತ್ತರಾಧಿಕಾರಿಯಾಗಿದ್ದಾರೆ. ಅವರು 2020ರಲ್ಲಿ ತಮ್ಮ 90ನೇ ವಯಸ್ಸಿನಲ್ಲಿ ನಿವೃತ್ತರಾಗಿದ್ದು, ರಾಜೀವ್ ಸಿಂಗ್ ಅವರಿಗೆ ಡಿಎಲ್‌ಎಫ್ ಉಸ್ತುವಾರಿ ನೀಡಿದ್ದಾರೆ. ರಾಜೀವ್ ಸಿಂಗ್ ಅವರು ಡಿಎಲ್‌ಎಫ್‌ಗೆ ಸೇರಿದ ನಂತರ ಕಂಪೆನಿಯ ಬಿಸಿನೆಸ್‌ನ್ನು ರಿಟೇಲ್, ಹಾಸ್ಪಿಟಾಲಿಟಿ ಹಾಗೂ ಇನ್ಶೂರೆನ್ಸ್ ಕ್ಷೇತ್ರಗಳಿಗೂ ವಿಸ್ತರಿಸಿದರು.
ಡಿಎಲ್‌ಎಫ್ ಒಮ್ಮೆ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಪ್ರಾಯೋಜಕತ್ವವನ್ನು ಮಾಡಿತ್ತು. ರಾಜೀವ್ ಸಿಂಗ್ ಅವರು 2007ರಲ್ಲಿ 1.55 ಕೋಟಿಯಷ್ಟು ಇದ್ದ ಡಿಎಲ್‌ಎಫ್‌ನ ವ್ಯಾಪಾರ ವಹಿವಾಟನ್ನು 2019ರಲ್ಲಿ 2,900 ಕೋಟಿಗೆ ಹೆಚ್ಚಿಸಿದ ಕೀರ್ತಿ ಪಡೆದುಕೊಂಡಿದ್ದಾರೆ.
ರಾಜೀವ್ ಸಿಂಗ್ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಜತೆಗೆ, ಯುಎಸ್‌ಎ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪದವೀಧರರಾಗಿದ್ದಾರೆ. ಅವರು ಸುಮಾರು 30 ವರ್ಷಗಳ ವೃತ್ತಿ ಅನುಭವವನ್ನು ಹೊಂದಿದ್ದಾರೆ.
ರಿಯಲ್ ಎಸ್ಟೇಟ್‌ನ ದೊಡ್ಡ ಉದ್ಯಮಿಯಾಗಿ ರಾಜೀವ್ ಸಿಂಗ್ ಅವರು ಭವಿಷ್ಯದಲ್ಲಿ ಬಹಳ ಬೃಹತ್ ಯೋಜನೆಗಳತ್ತ ಹೆಚ್ಚಿನ ಗಮನಹರಿಸಲು ಬಯಸಿದ್ದಾರೆ. "ಬಹುಶಃ ನಮಗೆ ಯಾವುದೇ ಮಹಡಿಗಳು ಉಳಿದಿಲ್ಲ ಮತ್ತು ಎಲ್ಲವೂ ಬಹುಮಹಡಿ ವಸತಿಗಳಾಗಿ ಪರಿವರ್ತನೆಯಾಗುತ್ತವೆ ಎಂದು ನಾನು ನಂಬಲು ಇಷ್ಟಪಡುತ್ತೇನೆ" ಎಂದು ಅವರು 2022ರಲ್ಲಿ ಎಕನಾಮಿಕ್ಸ್ ಟೈಮ್ಸ್‌ಗೆ ಹೇಳಿದ್ದರು.
2021-22ರಲ್ಲಿ ಡಿಎಲ್ಎಫ್ 6,138 ಕೋಟಿ ಆದಾಯವನ್ನು ದಾಖಲಿಸಿದ್ದು, ರಿಯಾಲ್ಟಿ ವಲಯದ ಒಟ್ಟು ಆದಾಯವು 1,513 ಕೋಟಿ ರೂ. ಆಗಿದೆ. ರಾಜೀವ್ ಸಿಂಗ್ ಅವರ ಒಟ್ಟು ಪರಿಹಾರವು 2021-22ರಲ್ಲಿ 15.49 ಕೋಟಿ ರೂ. ಆಗಿದ್ದರೆ, 2020-21ರಲ್ಲಿ ಅದು 3.2 ಕೋಟಿ ಆಗಿತ್ತು.
"ಗ್ರೋಹೆ-ಹುರುನ್ ಇಂಡಿಯಾ ರಿಯಲ್ ಎಸ್ಟೇಟ್ ಶ್ರೀಮಂತ ಪಟ್ಟಿಯ ಟಾಪ್ 10 ರ ಎಂಟ್ರಿ ಪಾಯಿಂಟ್ ಬದಲಾಗಿದ್ದು, 2017ರಲ್ಲಿ 3,350 ಕೋಟಿ ರೂಪಾಯಿ ಇದ್ದು, ಇಂದು ಅದು 15,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ, ಟಾಪ್ 50 ರಲ್ಲಿ ಸ್ಥಾನ ಪಡೆಯುವ ಮಿತಿಯು 2017 ರಲ್ಲಿ 660 ಕೋಟಿ ರೂಪಾಯಿನಿಂದ ಪ್ರಸ್ತುತ 1,300 ಕೋಟಿ ರೂಪಾಯಿಗೆ ಏರಿಕೆಯಾಗಿದೆ," ಎಂದು ಹುರುನ್ ಇಂಡಿಯಾ ಎಂಡಿ ಅನಸ್ ರೆಹಮಾನ್ ಜುನೈದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
2007 ರಲ್ಲಿ 1.55 ಕೋಟಿ ರೂಪಾಯಿಗಳಿಂದ ಡಿಎಲ್‌ಎಫ್‌ನ ವಾರ್ಷಿಕ ವ್ಯವಹಾರವನ್ನು 2019 ರಲ್ಲಿ 2,900 ಕೋಟಿ ರೂಪಾಯಿ ಹೆಚ್ಚಿಸಿದ ಕೀರ್ತಿ ರಾಜೀವ್ ಸಿಂಗ್ ಅವರಿಗೆ ಸಲ್ಲುತ್ತದೆ. 2021-22ರಲ್ಲಿ ಡಿಎಲ್ಎಫ್ 6,138 ಕೋಟಿ ಆದಾಯವನ್ನು ದಾಖಲಿಸಿದ್ದು, ರಿಯಾಲ್ಟಿ ವಲಯದ ಒಟ್ಟು ಆದಾಯವು 1,513 ಕೋಟಿ ರೂಪಾಯಿ ಆಗಿದೆ. ರಾಜೀವ್ ಸಿಂಗ್ ಅವರ ಒಟ್ಟು ಕಂಪೆನ್ಸಷನ್ 2021-22ರಲ್ಲಿ 15.49 ಕೋಟಿ ರೂಪಾಯಿ ಆಗಿದ್ದರೆ, 2020-21ರಲ್ಲಿ ಅದು 3.2 ಕೋಟಿ ರೂಪಾಯಿ ಆಗಿತ್ತು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications