Rajnish Kumar: ಮಾಸ್ಟರ್‌ ಕಾರ್ಡ್‌ ಇಂಡಿಯಾದ ಅಧ್ಯಕ್ಷ, ಎಸ್‌ಬಿಐ ಮಾಜಿ ಮುಖ್ಯಸ್ಥ ರಜನೀಶ್ ಕುಮಾರ್ ಯಾರು?

ಸ್ಟೇಟ್‌ಬ್ಯಾಂಕ್‌ ಆಫ್‌ ಇಂಡಿಯಾದ (ಎಸ್‌ಬಿಐ) ಮಾಜಿ ಅಧ್ಯಕ್ಷ ರಜನೀಶ್‌ ಕುಮಾರ್‌ ಅವರನ್ನು ಪೇಮೆಂಟ್‌ ಟೆಕ್ನಾಲಜಿಯಾದ ಮಾಸ್ಟರ್‌ ಕಾರ್ಡ್‌ ಇಂಡಿಯಾದ ಅಧ್ಯಕ್ಷರನ್ನಾಗಿ ನೇಮಕಗೊಳಿಸಿರುವುದಾಗಿ ಕಂಪನಿಯು ಘೋಷಿಸಿದೆ. ರಜನೀಶ್‌ ಕುಮಾರ್‌ ಅವರ ಹುದ್ದೆಯು ಕಾರ್ಯನಿರ್ವಾಹಣೇತರವಾಗಿದ್ದರೂ ಬಹಳ ನಿರ್ಣಾಯಕವಾದದ್ದು ಎಂದು ಕಂಪನಿಯು ಹೇಳಿದೆ.

ರಜನೀಶ್‌ ಕುಮಾರ್‌ ಅವರು ದಕ್ಷಿಣ ಏಷ್ಯಾದ ವಿಭಾಗೀಯ ಅಧ್ಯಕ್ಷರು ಹಾಗೂ ಭಾರತದ ಕಾರ್ಪೊರೇಟರ್‌ ಅಧಿಕಾರಿ ಗೌತಮ್‌ ಅಗರ್‌ವಾಲ್‌ ಅವರಿಗೆ ದೇಶೀಯ ಪಾವತಿಗಳ ಭೂದೃಶ್ಯವನ್ನು ನ್ಯಾವಿಗೇಟ್‌ ಮಾಡಲು ನೆರವಾಗುತ್ತಾರೆ ಎಂದು ಮಾಸ್ಟರ್‌ ಕಾರ್ಡ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

 ಮಾಸ್ಟರ್‌ ಕಾರ್ಡ್‌ ಇಂಡಿಯಾದ ಅಧ್ಯಕ್ಷ ರಜನೀಶ್ ಕುಮಾರ್ ಯಾರು?

ರಜನೀಶ್‌ ಕುಮಾರ್‌ ಅವರು ಸುಮಾರು ನಾಲ್ಕು ದಶಕಗಳ ಕಾಲ ಎಸ್‌ಬಿಐ ಬ್ಯಾಂಕ್‌ ಜತೆಗೆ ಕೆಲಸ ಮಾಡಿದ್ದು, ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ರಜನೀಶ್‌ ಕುಮಾರ್‌ ಅವರು ಎಸ್‌ಬಿಐನಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಹಲವಾರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅದರಲ್ಲಿಯೂ ರಜನೀಶ್‌ ಅವರು ಯೋನೊ ಪ್ಲಾಟ್‌ಫಾರ್ಮ್‌ ಅನ್ನು ಮುನ್ನಡೆಸುವಲ್ಲಿ ಹೆಚ್ಚಿನ ಮನ್ನಣೆಯನ್ನು ಪಡೆದುಕೊಂಡಿದ್ದಾರೆ. 2020ರ ಅಕ್ಟೋಬರ್‌ನಲ್ಲಿ ಎಸ್‌ಬಿಐ ಅಧ್ಯಕ್ಷರಾಗಿ ನೇಮಕಗೊಂಡು ಮೂರು ವರ್ಷಗಳ ಕಾಲ ತಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ರಜನೀಶ್‌ ಕುಮಾರ್‌ ಅವರು ಎಚ್‌ಎಸ್‌ಬಿಸಿ ಏಷ್ಯಾ ಪೆಸಿಫಿಕ್‌, ಎಲ್‌&ಟಿ ಹಾಗೂ ಬ್ರೂಕ್‌ಫೀಲ್ಡ್‌ ಪ್ರಾಪರ್ಟಿ ಮ್ಯಾನೇಜ್‌ಮೆಂಟ್‌ನಂಥಹ ಹಲವಾರು ಕಾರ್ಪೊರೇಟ್‌ ಕಂಪನಿಗಳ ಬೋರ್ಡ್‌ಗಳಲ್ಲಿನಿರ್ದೇಶಕತ್ವ ಸ್ಥಾನಗಳನ್ನು ಹೊಂದಿದ್ದರು. ಅವುಗಳ ಜತೆಗೆ ಭಾರತ್‌ಪೇ ಹಾಗೂ ಮುಂಚೂಣಿಯಲ್ಲಿರುವ ಗುರ್‌ಗಾಂವ್‌ನ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ ಎಂಡಿಐ ಬೋರ್ಡ್‌ನಲ್ಲಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+