ಷೇರುಪೇಟೆಯ ದಿಗ್ಗಜ ರಾಕೇಶ್ ಜುಂಜುನ್‌ವಾಲಾ ಭಾರತದಲ್ಲಿ ಅತೀ ಪ್ರಸಿದ್ಧ ಹೂಡಿಕೆದಾರರಾಗಿದ್ದಾರೆ. ಭಾರತೀಯ ಷೇರು ಮಾರುಕಟ್ಟೆಯನ್ನು ಆಳಿದ ವ್ಯಕ್ತಿ ರಾಕೇಶ್ ಜುಂಜುನ್‌ವಾಲಾ ಆಗಿದ್ದಾರೆ. ಇವರನ್ನು ಭಾರತದ ವಾರೆನ್ ಬಫೆಟ್ ಎಂದು ಕರೆಯಲಾಗುತ್ತದೆ.
ರಾಕೇಶ್ ಜುಂಜುನ್‌ವಾಲಾ 1987 ರಲ್ಲಿ ರೇಖಾರನ್ನು ವಿವಾಹವಾದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ರಾಕೇಶ್ ಜುಂಜುನ್‌ವಾಲಾರ ಮರಣದ ನಂತರ ಪ್ರಸ್ತುತ ಪತ್ನಿ ರೇಖಾ ಜುಂಜುನ್‌ವಾಲಾ ಈ ಸ್ಟಾಕ್ ಪೋರ್ಟ್‌ಪೋಲಿಯೋವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಈ ಮೂವರು ಮಕ್ಕಳ ಬಗ್ಗೆ ನಿಮಗೆ ಮಾಹಿತಿಯಿದೆಯೇ? ಇಲ್ಲಿದೆ ವಿವರ ಮುಂದೆ ಓದಿ...

ರಾಕೇಶ್ - ರೇಖಾ ಜುಂಜುನ್‌ವಾಲಾರ ಮಕ್ಕಳು
ರಾಕೇಶ್ - ರೇಖಾ ಜುಂಜುನ್‌ವಾಲಾರಿಗೆ ಮೂವರು ಮಕ್ಕಳು ಇದ್ದಾರೆ. ಒಬ್ಬಳು ಮಗಳು ಮತ್ತು ಇಬ್ಬರು ಗಂಡು ಮಕ್ಕಳು ಇದ್ದಾರೆ. ಮಗಳು ನಿಶ್ತಾ 30 ಜೂನ್ 2004 ರಂದು ಜನಿಸಿದರು. ಅವಳಿ ಮಕ್ಕಳಾದ ಆರ್ಯಮನ್ ಮತ್ತು ಆರ್ಯವೀರ್ 2 ಮಾರ್ಚ್ 2009 ರಂದು ಜನಿಸಿದರು.
ಹೂಡಿಕೆಗೆ ಹೆಸರುವಾಸಿಯಾದ ಬಿಗ್ ಬುಲ್ 2022 ರಲ್ಲಿ ನಿಧನರಾದರು. 1985 ರಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಸೂಚ್ಯಂಕ 150 ರೂಪಾಯಿಯಲ್ಲಿದ್ದಾಗ 5000 ರೂಪಾಯಿ ಹೂಡಿಕೆಯೊಂದಿಗೆ ತನ್ನ ವಹಿವಾಟನ್ನು ಆರಂಭ ಮಾಡಿದ್ದಾರೆ. ಪತ್ನಿ ರೇಖಾ ಜುಂಜುನ್‌ವಾಲಾ ವ್ಯಾಪಾರದ ಪೋರ್ಟ್‌ಪೋಲಿಯೋವನ್ನು ವಿಸ್ತರಣೆ ಮಾಡಿದ್ದಾರೆ.
ರಾಕೇಶ್ ಹೆಸರು ಮತ್ತು ಅವರ ಪತ್ನಿ ರೇಖಾರ ಹೆಸರಿನ ಮೊದಲ ಎರಡು ಅಕ್ಷರಗಳನ್ನು ಸೇರಿಸಿ ಈ ದಂಪತಿಯ ಒಡೆತನದ ಸ್ಟಾಕ್ ಟ್ರೇಡಿಂಗ್ ಫರ್ಮ್‌ಗೆ ರೇರ್ ಎಂಟರ್‌ಪ್ರೈಸಸ್ ಎಂದು ಹೆಸರಿಡಲಾಗಿದೆ. ರಾಕೇಶ್ ಚಾರ್ಟರ್ಡ್ ಅಕೌಂಟೆಂಟ್, ಷೇರು ವ್ಯಾಪಾರಿ ಮತ್ತು ಹೂಡಿಕೆದಾರರಾಗಿದ್ದರು.
ರಾಕೇಶ್ ಜುಂಜುನ್‌ವಾಲಾರ ನಿಧನದ ಸಂದರ್ಭದಲ್ಲಿ ಅವರು 5.8 ಬಿಲಿಯನ್ ಯುಎಸ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದರು. ಸಕ್ರಿಯ ಹೂಡಿಕೆದಾರರಲ್ಲದೆ, ರಾಕೇಶ್ ಜುಂಜುನ್‌ವಾಲಾ ಹಲವಾರು ಕಂಪನಿಗಳಿಗೆ ಅಧ್ಯಕ್ಷರಾಗಿ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಆಕಾಶ ಏರ್ ಸಂಸ್ಥಾಪಕರೂ ಆಗಿದ್ದರು.
ರಾಕೇಶ್ ಜುಂಜುನ್‌ವಾಲಾರು 1960 ರಲ್ಲಿ ರಾಜಸ್ಥಾನಿ ಮಾರ್ವಾಡಿ ಕುಟುಂಬದಲ್ಲಿದ್ದರು. ಸಿಡೆನ್ಹ್ಯಾಮ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾಕ್ಕೆ ಸೇರ್ಪಡೆಗೊಂಡರು.
ರಾಕೇಶ್ ಜುಂಜುನ್‌ವಾಲಾರ ತಂದೆ ಆದಾಯ ತೆರಿಗೆ ಅಧಿಕಾರಿ ಮತ್ತು ಅವರ ತಾಯಿ ಮನೆಕೆಲಸಗಾರರಾಗಿದ್ದರು. ಜುಂಜುನ್‌ವಾಲಾ ಅವರ ಹಿರಿಯ ಸಹೋದರ ರಾಜೇಶ್ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಇದಲ್ಲದೆ ರಾಕೇಶ್ ಜುಂಜುನ್‌ವಾಲಾರಿಗೆ ಇಬ್ಬರು ಸಹೋದರಿಯರಿದ್ದಾರೆ.
ಭಾರತದ 'ಬಿಗ್ ಬುಲ್' ಎಂದು ಖ್ಯಾತಿಯಾದ ದಿವಂಗತ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಪ್ರಭಾವಶಾಲಿ ಸ್ಟಾಕ್ ಪೋರ್ಟ್‌ಪೋಲಿಯೋವನ್ನು ಹೊಂದಿದ್ದರು. ರಾಕೇಶ್ ಜುಂಜುನ್‌ವಾಲ್‌ರ ನಿಧನದ ನಂತರ, ಪತ್ನಿ ರೇಖಾ ಜುಂಜುನ್‌ವಾಲಾ ಕುಟುಂಬದ ಹೂಡಿಕೆ ಸಾಮ್ರಾಜ್ಯವನ್ನು ಮುಂದುವರಿಸಿದ್ದಾರೆ. ಇತ್ತೀಚೆಗೆ ಟಾಟಾ-ಮಾಲೀಕತ್ವದ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡುವ ಮೂಲಕ ರೇಖಾ ಭಾರೀ ಲಾಭವನ್ನು ಪಡೆದುಕೊಂಡಿದ್ದಾರೆ.
ಕಳೆದ ತಿಂಗಳ ಅವಧಿಯಲ್ಲಿ ಟೈಟಾನ್ ಕಂಪನಿಯ ಷೇರಿನ ಬೆಲೆಯಲ್ಲಿನ ಭಾರೀ ಏರಿಕೆಯಿಂದಾಗಿ ರೇಖಾ ಜುಂಜುನ್‌ವಾಲಾ ಕೇವಲ 30 ದಿನಗಳಲ್ಲಿ 1390 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. ರೇಖಾ ಜುಂಜುನ್‌ವಾಲಾ ಟೈಟಾನ್ ಕಂಪನಿಯ 4,75,95,970 ಷೇರುಗಳನ್ನು ಹೊಂದಿದ್ದಾರೆ.
ಇದು ಕಂಪನಿಯ ಒಟ್ಟು ಷೇರುಗಳ ಶೇಕಡ 5.36 ರಷ್ಟಾಗಿದೆ. ಟೈಟಾನ್‌ನ ಪ್ರತಿ ಷೇರುಗಳು 291.80 ರೂಪಾಯಿಗಳ ಏರಿಕೆಯಿಂದಾಗಿ, ರೇಖಾ ಜುಂಜುನ್‌ವಾಲಾರ ನಿವ್ವಳ ಮೌಲ್ಯವು 1390 ರೂಪಾಯಿಗಳನ್ನು (4,75,95,970 x 291.80) ಹೆಚ್ಚಾಗಿದೆ.


Click it and Unblock the Notifications