ಬೇಸಿಗೆ ಬಂತೆಂದರೆ ಸಾಕು ಬಾಯರಿಕೆ ನೀಗಿಸಲು ಹೆಚ್ಚಿನವರು ತಂಪು ಪಾನೀಯ ಮೊರೆ ಹೋಗುತ್ತಾರೆ. ಅದರಲ್ಲೂ ಜನಪ್ರಿಯ ತಂಪು ಪಾನೀಯಗಳಾದ ಪೆಪ್ಸಿ, 7 ಅಪ್, ಮೌಂಟೇನ್ ಡ್ಯೂ ಮತ್ತು ಮಿರಿಂಡಾದಂತಹ ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ಬಾಯಿ ಚಪ್ಪರಿಸಿಕೊಂಡು ಕುಡಿಯುತ್ತಾರೆ. ಆದರೆ ಈ ತಂಪು ಪಾನೀಯಗಳ ಹಿಂದಿರುವ ವ್ಯಕ್ತಿ ಯಾರು ಎಂದು ಎಂದಾದರೂ ಯೋಚಿಸುತ್ತೇವಾ?, ಈ ತಂಪು ಪಾನೀಯ ಮಾರಾಟದ ಮೂಲಕವೇ ಕೋಟ್ಯಾಂತರ ರೂಪಾಯಿ ಸಂಪಾದಿಸಿಕೊಂಡಿದ್ದಾರೆ.
ಇವತ್ತು ನಿಮಗಾಗಿ ತಂಪು ಪಾನೀಯ ಲೋಕದ ಉದ್ಯಮಿ "ರವಿ ಜೈಪುರಿಯಾ" ಅವರನ್ನು ಪರಿಚಯಿಸುತ್ತೇವೆ. ಇವರ ಕಂಪನಿ "ವರುಣ್ ಬೆವರೇಜಸ್" ಭಾರತದಲ್ಲಿ ಪ್ರಸಿದ್ದವಾದ ತಂಪು ಪಾನೀಯಗಳನ್ನು ಉತ್ಪಾದಿಸಿ, ಬಾಟಲಿಂಗ್ ಮಾಡಿ ವಿತರಿಸುತ್ತದೆ. ಇದು ಅಮೇರಿಕಾ ಹೊರತುಪಡಿಸಿ, ಪ್ರಪಂಚದಲ್ಲಿಯೇ PepsiCo ನ ಪಾನೀಯಗಳಿಗೆ ಎರಡನೇ ಅತಿ ದೊಡ್ಡ ಬಾಟ್ಲಿಂಗ್ ಪಾರ್ಟ್‌ನರ್. ಹಾಗಿದ್ರೆ ಭಾರತದ "ಕೋಲಾ ಕಿಂಗ್" ಎಂದು ಖ್ಯಾತರಾದ ರವಿ ಜೈಪುರಿಯಾ ಯಾರು? ಅವರ ಹಿನ್ನಲೆ ಏನು ತಿಳಿಯೋಣ ಮುಂದೆ ಓದಿ...

ರವಿ ಜೈಪುರಿಯಾ ಒಬ್ಬ ಭಾರತೀಯ ಬಿಲಿಯನೇರ್ ಉದ್ಯಮಿಯಾಗಿದ್ದಾರೆ. ಮಾರ್ವಾಡಿ ಕುಟುಂಬದಲ್ಲಿ ಜನಿಸಿದ ಅವರು, ಇಂದು "ಆರ್‌ಜೆ ಕಾರ್ಪ್" ಸಂಸ್ಥೆಯ ಚೆರ್ಮೆನ್ ಆಗಿದ್ದಾರೆ, ಈ ಸಂಸ್ಥೆಯ ಅಡಿಯಲ್ಲಿ ದೇವಯಾನಿ ಇಂಟರ್‌ನ್ಯಾಶನಲ್ ಮತ್ತು ವರುಣ್ ಬೆವರೇಜಸ್ ಬರುತ್ತದೆ. ರವಿ ಜೈಪುರಿಯಾ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಅಮೇರಿಕಾದಲ್ಲಿ ಮಾಡಿದ್ದಾರೆ. ಇದಲ್ಲದೆ ನವದೆಹಲಿಯ ಡಿಪಿಎಸ್ ಮಥುರಾ ರಸ್ತೆಯಲ್ಲಿ ಡಿಪಿಎಸ್ ನಲ್ಲಿಯೂ ಶಿಕ್ಷಣವನ್ನು ಪಡೆದಿದ್ದಾರೆ.
1985 ರಲ್ಲಿ ಭಾರತಕ್ಕೆ ಮರಳಿದ ಅವರು, ಪೆಪ್ಸಿ-ಕೋಲಾಗೆ ಬಾಟಲ್ ನೀಡುವ ವ್ಯವಹಾರಕ್ಕೆ ಕೈ ಜೋಡಿಸಿದರು. . 1987 ರಲ್ಲಿ, ಅವರು ಕುಟುಂಬದ ವಿಭಜನೆಕೊಂಡಾಗ ಒಂದು ಬಾಟ್ಲಿಂಗ್ ಪ್ಲಾಂಟ್ ತಮ್ಮ ಪಾಲಿನ ರೂಪದಲ್ಲಿ ಪಡೆದರು ನಂತರ ಅದನ್ನು ಪೆಪ್ಸಿಕೋಗೆ ಬದಲಾಯಿಸಿದರು. ರವಿ ಜೈಪುರಿಯಾ ಅವರು ಇದಲ್ಲದೇ ಮೆಡಾಂಟಾ ಹೆಲ್ತ್‌ಕೇರ್ ಸಂಸ್ಥೆ ಮತ್ತು ಚೈನ್ ಲೆಮನ್ ಟ್ರೀ ಹೋಟೆಲ್ ನಲ್ಲೂ ಇವರು ಪಾಲುದಾರರಾಗಿದ್ದಾರೆ.
ಫೋರ್ಬ್ಸ್ ಪ್ರಕಾರ, 2023 ರ ಏಪ್ರಿಲ್ ನಲ್ಲಿ ವೇಳೆಗೆ ಅವರ ನಿವ್ವಳ ಮೌಲ್ಯವು 8.9 ಬಿಲಿಯನ್ ಯುಎಸ್ ಡಾಲರ್ (ರೂ. 7301,635,65,000) ಆಗಿದೆ. ಮ್ಯಾಗಝೀನ್ ಬಿಲಿಯನೇರ್ಸ್ (2023) ಪಟ್ಟಿಯಲ್ಲಿವರು 232 ನೇ ಸ್ಥಾನದಲ್ಲಿದ್ದಾರೆ. 2022 ರಲ್ಲಿ ಅವರು ಫೋರ್ಬ್ಸ್ ಪ್ರಕಾರ ಭಾರತದ ಶ್ರೀಮಂತರ ಲಿಸ್ಟ್ ನಲ್ಲಿ 21ನೇ ಸ್ಥಾನದಲ್ಲಿದ್ದರು.
ರವಿ ಜೈಪುರಿಯಾ ಅವರ ಪತ್ನಿ 1985 ರಲ್ಲಿ ನಡೆದ ವಿಮಾನ ಅವಘಡದಲ್ಲಿ ನಿಧನರಾದರು. ಇವರಿಗೆ ವರುಣ್ ಎಂಬ ಪುತ್ರ ಹಾಗೂ ದೇವಯಾನಿ ಎಂಬ ಮಗಳಿದ್ದಾರೆ. ತಮ್ಮ ಕಂಪನಿಗೆ ತಮ್ಮ ಮಗನ ಹೆಸರನ್ನು ವರುಣ್ ಬೆವರೆಜಸ್ ಮತ್ತು ಅವರ ಮಗಳ ಹೆಸರನ್ನು ದೇವಯಾನಿ ಇಂಟರ್ನ್ಯಾಷನಲ್ ಗೆ ಇಟ್ಟಿದ್ದಾರೆ.
ದೇವಯಾನಿ ಇಂಟರ್‌ನ್ಯಾಶನಲ್ ಕೆಎಫ್‌ಸಿ, ಪಿಜ್ಜಾ ಹಟ್, ಕೋಸ್ಟಾ ಕಾಫಿ ಮತ್ತು ಟಿಡಬ್ಲ್ಯೂಜಿ ಟೀ ಔಟ್‌ಲೆಟ್‌ಗಳನ್ನು ನಿರ್ವಹಿಸುತ್ತಿದ್ದು, ವರುಣ್ ಬೆವರೇಜಸ್ ಯುಎಸ್ ಹೊರತುಪಡಿಸಿ ಪೆಪ್ಸಿಕೋದ ಅತಿದೊಡ್ಡ ಬಾಟಲಿಂಗ್ ಕಂಪನಿಯಾಗಿದೆ. ಟ್ರೆಂಡ್‌ಲೈನ್ ಪ್ರಕಾರ, 2023 ಮಾರ್ಚ್ 31, ಕ್ಕೆ ಸಲ್ಲಿಸಿದ ಕಾರ್ಪೊರೇಟ್ ಷೇರುಗಳ ವಿವರದಂತೆ, ಆರ್.ಜೆ ಕಾರ್ಪ್ ಲಿಮಿಟೆಡ್ ಸಾರ್ವಜನಿಕವಾಗಿ 37,334.1 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ 7 ಷೇರುಗಳನ್ನು ಹೊಂದಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications