ದೇಶದ ಪ್ರಮುಖ ಎಥ್ನಿಕ್ ವೇರ್ ಲೈಫ್ ಸ್ಟೈಲ್ ಬ್ರಾಂಡ್‌ಗಳ (ಪ್ರಸಿದ್ಧ ಉಡುಪು ಸಂಸ್ಥೆ) ಹಿಂದಿರುವ ವ್ಯಕ್ತಿಯೇ ಉದ್ಯಮಿ ರವಿ ಮೋದಿ. ಮಾಧ್ಯಮಗಳ ವಿಚಾರಕ್ಕೆ ಬಂದಾಗ ಮಾಧ್ಯಮ ಪ್ರತಿನಿಧಿಗಳ ಮುಂದೆ ಬಂದು ಮಾತಾನಾಡಲು ಬಹಳ ಸಂಕೋಚಪಡುವ ಉದ್ಯಮಿ ರವಿ ಮೋದಿ ವೇದಾಂತ್ ಫ್ಯಾಶನ್ಸ್‌ನ ಸ್ಥಾಪಕರಾಗಿದ್ದಾರೆ. ರವಿ ಮೋದಿ ಕಂಪನಿಯೂ 'ಮಾನ್ಯವರ್', 'ಮೋಹೇ', 'ಮಂಥನ್', 'ಮೆಬಾಜ್' ಮತ್ತು 'ತ್ವಮೇವ್' ನಂತಹ ಹಲವಾರು ಜನಪ್ರಿಯ ಬ್ರ್ಯಾಂಡ್‌ಗಳನ್ನು ಹೊಂದಿದೆ.
2022ರಲ್ಲಿ ತಮ್ಮ ಕಂಪನಿಯನ್ನು ಯಶಸ್ವಿ IPOಗೆ ಕೊಂಡೊಯ್ಯುವ ಮೂಲಕ ಕಳೆದ ವರ್ಷ ಹೆಚ್ಚಿನ ಸಂಪತ್ತು ಗಳಿಸಿದವರಲ್ಲಿ ಪಟ್ಟಿಯಲ್ಲಿ ಭಾರತದಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಇಂದು ವೇದಾಂತ್ ಫ್ಯಾಶನ್ಸ್ ನ ಮಾರುಕಟ್ತೆ ಮೌಲ್ಯ 27,660 ಕೋಟಿ ರೂ. ಆಗಿದೆ. ರವಿ ಮೋದಿ ತಮ್ಮ 13ನೇ ವಯಸ್ಸಿನಲ್ಲಿ ತಮ್ಮ ತಂದೆಯ ಜವಳಿ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇಲ್ಲಿ ಅನುಭವ ಪಡೆದುಕೊಂಡು ತಾವೇ ತಂದೆಯ ವ್ಯವಹಾರವನ್ನು ವಹಿಸಿಕೊಂಡರು. ಪಾರಂಪರಿಕ ವ್ಯವಹಾರವು ಮೋದಿಯವರಿಗೆ ಉತ್ತಮ ಸ್ಥಾನಮಾನ ನೀಡಿತು.

ಹೀಗಾಗಿ 2002ರಲ್ಲಿ ಐಷಾರಾಮಿ ಮರ್ಸಿಡಿಸ್ ಕಾರನ್ನು ಖರೀದಿಸುವ ತಮ್ಮ ಕನಸನ್ನು ನನಸಾಗಿಸಲು ನಿರ್ಧರಿಸಿದರು. ಆದರೂ ಬರುತ್ತಿರುವ ಲಾಭವನ್ನು ಮತ್ತಷ್ಟು ಬೆಳೆಸುವುದು ಉತ್ತಮ ಆಯ್ಕೆ ಎಂದು ಏಕಾಗ್ರತೆಯಿಂದ ಯೋಚಿಸಿ ತಮ್ಮ ಕನಸಿನ ಕಾರನ್ನು ಕೊಂಡುಕೊಳ್ಳುವ ಬದಲು 2002ರಲ್ಲಿ ವೇದಾಂತ್ ಫ್ಯಾಶನ್ಸ್ ಅನ್ನು ಸ್ಥಾಪಿಸಿದರು. ಉದ್ಯಮ ಮತ್ತು ಉತ್ಪಾದನೆಯ ನಡುವೆ ಇದ್ದ ಅಂತರವನ್ನು ಗುರುತಿಸಿ, ಉತ್ಪಾದನಾ ಕ್ಷೇತ್ರವನ್ನು ಪ್ರವೇಶಿಸಲು ನಿರ್ಧರಿಸಿದರು.
ಉತ್ತರ ಪ್ರದೇಶದಲ್ಲಿ ತಮ್ಮದೇ ಆದ ಎಥ್ನಿಕ್ ವೇರ್ ಅನ್ನು ಸ್ಥಾಪಿಸಿದರು. ಛಲ ಬಿಡದೆ "ವೇದಾಂತ್ ಫ್ಯಾಶನ್ಸ್" ಅನ್ನು ಮಾರುಕಟ್ಟೆಯ "ಲೀಡರ್" ಆಗಿ ಮಾಡಿದರು. ದೇಶಾದ್ಯಂತ ವಧುವಿನ ಮತ್ತು ಮದುವೆಯ ಉಡುಗೆಗಳಿಗೆ 'ಮಾನ್ಯವರ್' ಬ್ರ್ಯಾಂಡ್ ಅನ್ನು ಮನೆಮಾತಾಗುವಂತೆ ಮಾಡಿದರು. ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ, ರಣವೀರ್ ಸಿಂಗ್, ಆಲಿಯಾ ಭಟ್ ಮತ್ತು ಕಾರ್ತಿಕ್ ಆರ್ಯನ್ ಅವರಂತಹ ಜನಪ್ರಿಯ ಸೆಲೆಬ್ರಿಟಿಗಳನ್ನು ಪ್ರಚಾರದಲ್ಲಿ ಬಳಸಿಕೊಳ್ಳುವ ಮೂಲಕ ಬ್ರ್ಯಾಂಡ್‌ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದರು.
ಹಣಕ್ಕಾಗಿ ಬಟ್ಟೆಗಳನ್ನು ಮಾರಾಟ ಮಾಡುವ ಪುಟ್ಟ ಅಂಗಡಿಯಿಂದ ರವಿ ಮೋದಿಯವರ ಕಂಪನಿಯು 600 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದುವವರೆಗೆ ಬೆಳೆಯಿತು. ರವಿ ಅವರ ಪುತ್ರನ ಹೆಸರು ವೇದಾಂತ್ ಆಗಿದ್ದು ಇದೇ ಹೆಸರಿನಲ್ಲಿ ಅವರು ತಮ್ಮ ಕಂಪನಿಯನ್ನು ಸ್ಥಾಪಿಸಿದರು. ಇಂದು ವೇದಾಂತ್ ಅವರು ಕಂಪನಿಯ ಚೀಫ್ ಮಾರ್ಕೆಟಿಂಗ್ ಆಫೀಸರ್ ಆಗಿದ್ದಾರೆ. ಇವರ ಪತ್ನಿ ಶಿಲ್ಪಿ ಬೋರ್ಡ್ ಮೆಂಬರ್ ಆಗಿದ್ದಾರೆ.
ರವಿ ಮೋದಿಯವರ ನಿವ್ವಳ ಮೌಲ್ಯ ಇಂದು 25,000 ಕೋಟಿ ರೂ. (3.1 ಬಿಲಿಯನ್ ಡಾಲರ್) ಆಗಿದೆ. ಆದರೂ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಹೌಸಿಂಗ್ ಸೊಸೈಟಿಯಲ್ಲಿ ಸರಳ ಜೀವನ ನಡೆಸುತ್ತಿದ್ದಾರೆ. ಇವರ ಕಂಪನಿಯೂ ಸಾರ್ವಜನಿಕ ಪಟ್ಟಿಯಲ್ಲಿ ಕಾಣಿಸಿಕೊಂಡರೂ ಇದರ ಯಶಸ್ಸಿ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಸಂಕೋಚಪಡುವ ತಮ್ಮ ಗುಣದಿಂದಾಗಿ ರವಿ ಮೋದಿ ಭಾಗವಹಿಸಿರಲಿಲ್ಲ. ಇನ್ನು ಕನಸಿನ ಕಾರಿನ ಬಗ್ಗೆ ಹೇಳೆಬೇಕೆಂದರೆ , ರವಿ 15 ವರ್ಷಗಳ ನಂತರ ಅಂದರೆ 2017 ರಲ್ಲಿ ತಮ್ಮ ಮರ್ಸಿಡಿಸ್ ತಮ್ಮದಾಗಿಸುವ ಮೂಲಕ ಆಸೆಯನ್ನು ಪೂರೈಸಿದರು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications