ಕಳೆದ ಎರಡು ತಿಂಗಳಲ್ಲಿ ಟೈಟಾನ್ ಷೇರುಗಳು 65 ಪ್ರತಿಶತದಷ್ಟು ಏರಿಕೆಯಾದ ಪರಿಣಾಮ ಅದರ ಷೇರುದಾರರು ಉತ್ತಮ ರಿಟರ್ನ್ಸ್ ಗಳಿಸಿದ್ದಾರೆ. ಹೀಗೆ ಷೇರು ಮಾರುಕಟ್ಟೆಯಲ್ಲಿ ಲಾಭ ಗಳಿಸಿದವರಲ್ಲಿ ಭಾರತದ ಶ್ರೀಮಂತ ಮಹಿಳೆಯೂ ಒಬ್ಬರಾಗಿದ್ದಾರೆ.
ಅವರ ಪತಿ ಷೇರು ಮಾರುಕಟ್ಟೆಯಲ್ಲಿ ದೇಶದ ಪ್ರಸಿದ್ಧ ಹೂಡಿಕೆದಾರರಾಗಿದ್ದು ಕಳೆದ ವರ್ಷ ಅವರು ನಿಧನರಾದ ನಂತರ ದೇಶದ ಹೊಸ ಬಿಲಿಯನೇರ್‌ಗಳಲ್ಲಿ ಒಬ್ಬರಾಗಿ ಈ ಮಹಿಳೆ ಹೊರಹೊಮ್ಮಿದ್ದಾರೆ. ಈ ಮಹಿಳೆ ಕಳೆದ ಎರಡು ತಿಂಗಳಿನಿಂದ ಬರೋಬ್ಬರಿ 2400 ಕೋಟಿ ಗಳಿಸಿದ್ದಾರೆ. ಅಂದರೆ ದಿನವೊಂದಕ್ಕೆ 40 ಕೋಟಿ ರೂಪಾಯಿ ಗಳಿಸಿದಂತೆ ಹಾಗಿದ್ರೆ ಆಕೆ ಯಾರು?

ರೇಖಾ ಜುಂಜುನ್‌ವಾಲಾ ಯಾರು?
ಹೌದು ನಿಮ್ಮ ಊಹೆ ಸರಿಯಾಗಿದೆ. ಇವರೇ ಪ್ರಸಿದ್ಧ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರ ಪತ್ನಿ ರೇಖಾ ಜುಂಜುನ್‌ವಾಲಾ. ಷೇರು ಮಾರುಕಟ್ಟೆಯಲ್ಲಿ ತಮ್ಮ ಪತಿ ಹುಟ್ಟುಹಾಕಿದ ಪರಂಪರೆಯಂತೆ ಅದೇ ಅತ್ಯುತ್ತಮ ಪ್ರದರ್ಶನದೊಂದಿಗೆ ಮುಂದೆ ಸಾಗಿಸುತ್ತಿದ್ದಾರೆ.
ರೇಖಾ ಜುಂಜುನ್ವಾಲಾ ಅವರು ಟೈಟನ್‌ನ ಷೇರುಗಳಲ್ಲಿ ಪ್ರಮುಖ ಮಾನ್ಯತೆ ಪಡೆದವರಾಗಿದ್ದಾರೆ. ಟಾಟಾ ಗ್ರೂಪ್ ಕಂಪನಿಯ ಷೇರುಗಳ ಬೆಲೆ ಏರಿಕೆಯೊಂದಿಗೆ, ಕಂಪನಿಯಲ್ಲಿನ ರೇಖಾ ಅವರ ಷೇರುಗಳ ಮೌಲ್ಯ 2400 ಕೋಟಿ ರೂಪಾಯಿ ತಲುಪಿದೆ. ರೇಖಾ ಜುಂಜುನ್ವಾಲಾ ಅವರು ಶೇಕಡ 5.29 ಪಾಲನ್ನು ಅಥವಾ 4,58,95,970 ಟೈಟಾನ್ ಷೇರುಗಳನ್ನು ಹೊಂದಿದ್ದಾರೆ. ಕಳೆದ ಎರಡು ತಿಂಗಳಿನಿಂದ ಟೈಟಾನ್ ಷೇರುಗಳು 512 ರೂ.ಗಳಷ್ಟು ದುಬಾರಿಯಾಗಿದೆ.
ಆಗಸ್ಟ್ 2022 ರಲ್ಲಿ ರಾಕೇಶ್ ಜುಂಜುನ್‌ವಾಲಾ ಅವರು ನಿಧನರಾದಾಗ ಅವರ ಷೇರುಗಳನ್ನು ರೇಖಾ ಜುಂಜುನ್ವಾಲಾ ಅವರಿಗೆ ವರ್ಗಾಯಿಸಲಾಯಿತು. 59 ವರ್ಷದ ರೇಖಾ ಜುಂಜುನ್ವಾಲಾ ಅವರು ಮೌಲ್ಯಯುತ ಸ್ಟಾಕ್ ಪೋರ್ಟ್ ಪೋಲಿಯೊವನ್ನು ಪಡೆದುಕೊಂಡಿದ್ದು, ಟೈಟಾನ್, ಮೆಟ್ರೋ ಬ್ರಾಂಡ್ಸ್, ಸ್ಟಾರ್ ಹೆಲ್ತ್, ಟಾಟಾ ಮೋಟಾರ್ಸ್, ಕ್ರಿಸ್ಲಿ ಸೇರಿದಂತೆ 29 ಪ್ರತಿಷ್ಟಿತ ಕಂಪೆನಿಗಳ ಷೇರುಗಳನ್ನು ಹೊಂದಿದ್ದಾರೆ.
ರೇಖಾ ಜುಂಜುನ್ವಾಲಾ ಅವರು 1963ರ ಸೆಪ್ಟಂಬರ್ 12ರಂದು ಜನಿಸಿದ್ದು, ಮುಂಬೈ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದುಕೊಂಡಿದ್ದಾರೆ. 1987ರಲ್ಲಿ ರೇಖಾ ಅವರು ಸ್ಟಾಕ್ ಮಾರ್ಕೆಟ್ ನಲ್ಲಿ ಬಹಳ ಜನಪ್ರಿಯತೆ ಪಡೆದುಕೊಂಡಿದ್ದ ರಾಕೇಶ್ ಜುಂಜುನ್‌ವಾಲಾ ಅವರನ್ನು ಮದುವೆಯಾಗಿದ್ದರು.
ರಾಕೇಶ್ ಜುಂಜುನ್‌ವಾಲಾ ಅವರನ್ನು ಭಾರತದ ವಾರೆನ್ ಬಫೆಟ್ ಅವರಿಗೆ ಹೋಲಿಸಲಾಗುತ್ತದೆ. ರಾಕೇಶ್-ರೇಖಾ ಜುಂಜುನ್‌ವಾಲಾ ದಂಪತಿಗೆ ಮೂವರು ಮಕ್ಕಳು ಇದ್ದಾರೆ. ರೇಖಾ ಜುಂಜುನ್ವಾಲಾ ಅವರು ಭಾರತದ 3ನೇ ಅತಿದೊಡ್ಡ ಶ್ರೀಮಂತ ಮಹಿಳೆಯಾಗಿದ್ದಾರೆ. ಅವರ ಒಟ್ಟು ನಿವ್ವಳ ಆಸ್ತಿ ಮೌಲ್ಯ 47,650 ಕೋಟಿ ರೂ. ಆಗಿದೆ.
ಒಂದು ತಿಂಗಳಲ್ಲೇ 692 ಕೋಟಿ ರೂ. ಗಳಿಕೆ!
ಏಪ್ರಿಲ್ ವೇಳೆಗೆ ಕಳೆದ ಒಂದು ತಿಂಗಳಲ್ಲಿ ರೇಖಾ ಜುಂಜುನ್‌ವಾಲಾ ಅವರ ಪೋರ್ಟ್‌ಪೋಲಿಯೊ ಸ್ಟಾಕ್ ಟೈಟಾನ್ ಕಂಪೆನಿಯ ಷೇರು ಬೆಲೆಯು ತಲಾ 150.90 ಅಥವಾ ಶೇಕಡ 6.30ರಷ್ಟು ಜಿಗಿತ ಕಂಡಿದೆ. ಕೇವಲ 15 ನಿಮಿಷದಲ್ಲಿ ರೇಖಾ ಅವರ ಸಂಪತ್ತು 400 ಕೋಟಿ ರೂಪಾಯಿಯಷ್ಟು ಏರಿಕೆ ಕಂಡು ಮುಂಬೈ ಷೇರುಪೇಟೆಯಲ್ಲಿ ಗಮನ ಸೆಳೆದಿದ್ದರು.
ಅಂದರೆ ರೇಖಾ ಜುಂಜುನ್‌ವಾಲಾ ಅವರ ನಿವ್ವಳ ಮೌಲ್ಯವು ಈ ಸಮಯದಲ್ಲಿ ಸುಮಾರು 692 ಕೋಟಿ ರೂ. ಟೈಟಾನ್ ಎಲ್‌ಐಸಿ ಬೆಂಬಲಿತ ಟಾಟಾ ಗ್ರೂಪ್ ಕಂಪನಿಯಾಗಿದೆ. ಜತೆಗೆ ಇದರಲ್ಲಿ ರೇಖಾ ಜುಂಜುನ್ವಾಲಾ ಅವರು ಶೇಕಡ 5.17 ಪಾಲನ್ನು ಅಥವಾ 4,58,95,970 ಟೈಟಾನ್ ಷೇರುಗಳನ್ನು ಹೊಂದಿದ್ದಾರೆ.
2022ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ತ್ರೈಮಾಸಿಕದಲ್ಲಿ ಟೈಟಾನ್ ಕಂಪೆನಿಯ ಷೇರುದಾರರ ಮಾದರಿಯಂತೆ ರೇಖಾ ಜುಂಜುನ್ವಾಲಾ ಅವರು ಕಂಪನಿಯ 4,58,95,970 ಷೇರುಗಳ ಮಾಲೀಕರಾಗಿದ್ದಾರೆ. ಭಾರತೀಯ ಜೀವ ವಿಮೆಯು (ಎಲ್‌ಐಸಿ) ಟೈಟಾನ್ ಕಂಪೆನಿಯ 2,05,19,699 ಕೋಟಿ ಷೇರುಗಳನ್ನು ಹೊಂದಿವೆ. ಎಸ್‌ಬಿಐ ನಿಫ್ಟಿ ಇಟಿಇ ಕೂಡ 1,40,05,693 ಟೈಟಾನ್ ಷೇರುಗಳನ್ನು ಅಥವಾ ಶೇ.1.58ರಷ್ಟು ಪಾಲನ್ನು ಹೊಂದಿದೆ.


Click it and Unblock the Notifications