ರಿಲಯನ್ಸ್ ರಿಟೇಲ್‌ನ ಮೊದಲ ಉದ್ಯೋಗಿ, ಇಶಾ ಅಂಬಾನಿಯ ಬಲಗೈ ಬಂಟ ಇವರೇ!

ಮುಖೇಶ್ ಅಂಬಾನಿ ಅವರು 9,04,369 ಕೋಟಿ ರೂಪಾಯಿಗಿಂತ ಹೆಚ್ಚು ನಿವ್ವಳ ಮೌಲ್ಯ ಹೊಂದಿರುವ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಮಾತ್ರವಲ್ಲದೆ 19,35,000 ಕೋಟಿ ರೂಪಾಯಿಗಿಂತ ಹೆಚ್ಚಿನ ಮಾರುಕಟ್ಟೆ ಕ್ಯಾಪ್ ಹೊಂದಿರುವ ಭಾರತದ ಬೃಹತ್ ಸಂಸ್ಥೆಯಾದ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್‌ ಅಂಗಸಂಸ್ಥೆಗಳನ್ನು ಮುಕೇಶ್ ಅಂಬಾನಿ ಅವರ ಮಕ್ಕಳು ಮತ್ತು ನಿಕಟ ಸಹವರ್ತಿ ನೋಡಿಕೊಳ್ಳುತ್ತಿದ್ದು ಈ ಮೂಲಕ ವ್ಯಾಪಕ ಶ್ರೇಣಿಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್‌ನ ಸಂಸ್ಥೆಗಳಲ್ಲಿ ಒಂದಾಗಿರುವ , ಅತ್ಯುತ್ತಮ ಕಾರ್ಯನಿರ್ವಹಣೆಯ ಹೆಸರಾದ ರಿಲಯನ್ಸ್ ರಿಟೇಲ್ ಇದು ಬಿಲಿಯನೇರ್ ಅಂಬಾನಿ ಪುತ್ರಿ ಇಶಾ ಅಂಬಾನಿಯವರ ನೇತೃತ್ವದಲ್ಲಿ.

 ಇಶಾ ಅಂಬಾನಿಯ ಬಲಗೈ ಬಂಟರ ಬಗ್ಗೆ ನಿಮಗೆ ತಿಳದಿದೆಯೇ?

ರಿಲಯನ್ಸ್ ರಿಟೇಲ್ ಪ್ರಸ್ತುತ 840000 ಕೋಟಿ ರೂಪಾಯಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದ್ದು, ಅಮೀರಿ, ಅರ್ಮಾನಿ, ವರ್ಸೇಸ್, ಬಾಲೆನ್ಸಿಯಾಗ ಮತ್ತು ಇತರ ದೊಡ್ಡ ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳು ರಿಲಯನ್ಸ್ ರೀಟೈಲ್‌ನ ಪಾಲುದಾರಾಗಿದ್ದು ಇದು ಭಾರತದಲ್ಲಿ ಲಭ್ಯವಿದೆ.

ಮುಕೇಶ್ ಅಂಬಾನಿ ಇಶಾ ಅಂಬಾನಿ ಅವರನ್ನು ಆಗಸ್ಟ್ 2022 ರಲ್ಲಿ ರಿಲಯನ್ಸ್ ರಿಟೇಲ್‌ನ ನಾಯಕಿ ಎಂದು ಹೆಸರಿಸಿದ್ದಾರೆ ಮತ್ತು ಯುವ ಉದ್ಯಮಿಯಾಗಿ ಇಶಾ ಅಂದಿನಿಂದ ಭಾರತಕ್ಕೆ ಹಲವಾರು ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳನ್ನು ಪರಿಚಯಿಸಿದ್ದಾರೆ.

ಕಂಪನಿಯನ್ನು ಹೊಸ ಎತ್ತರಕ್ಕೆ ಏರಿಸಲು, ಇಶಾ ಅಂಬಾನಿ ಕೆಲವು ವಿಶ್ವಾಸಾರ್ಹ ಸಹಾಯಕರನ್ನು ಹೊಂದಿದ್ದು, ಅವರು ಕಂಪನಿಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಶಾ ಅವರಿಗೆ ಸಹಾಯ ಮಾಡುತ್ತಾರೆ. ಹೀಗೆ ಇಶಾ ಅವರಿಗೆ ಪ್ರಮುಖ ಸಹಾಯಕ ಹಾಗೂ ಅವರ ಬಲಗೈ ಭಂಟರಂತೆ ಇರುವವರು ಮುಖೇಶ್ ಅಂಬಾನಿ ಸಂಸ್ಥೆಯ ಮೊದಲ ಉದ್ಯೋಗಿ ದರ್ಶನ್ ಮೆಹ್ತಾ.

ರಿಲಯನ್ಸ್ ರಿಟೇಲ್‌ನ ಪ್ರಮುಖ ಅಂಗಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಬ್ರಾಂಡ್ಸ್ ಅನ್ನು 2007 ರಲ್ಲಿ ಮುಖೇಶ್ ಅಂಬಾನಿ ಸ್ಥಾಪಿಸಿದ್ದು ಈ ವೇಳೆ ಈ ಬ್ರ್ಯಾಂಡ್‌ನ ಮೊದಲ ಉದ್ಯೋಗಿಯಾಗಿದ್ದರು ದರ್ಶನ್ ಮೆಹ್ತಾ ಆಗಿದ್ದರು. ಆದರೆ ಈಗ ಅವರು ರಿಲಯನ್ಸ್ ಬ್ರ್ಯಾಂಡ್‌ನ ಅಧ್ಯಕ್ಷ ಮತ್ತು ಎಂಡಿ ಆಗಿದ್ದಾರೆ.

ಮೆಹ್ತಾ ಅವರು ಆರಂಭದಲ್ಲಿ ಜಾಹೀರಾತು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ನಿಧಾನಕ್ಕೆ ಅವರ ಆಸಕ್ತಿಯೂ ರಿಟೇಲ್ ಬ್ಯುಸಿನೆಸ್ ನತ್ತ ಹೊರಳಿತು. ವರದಿಗಳ ಪ್ರಕಾರ ಟಾಮಿ ಹಿಲಿಗರ್, ಗ್ಯಾಂಟ್ ಮತ್ತು ನಾಟಿಕಾದಂತಹ ಬ್ರ್ಯಾಂಡ್‌ಗಳನ್ನು ಭಾರತಕ್ಕೆ ತರುವಲ್ಲಿ ಮೆಹ್ತಾ ಪ್ರಮುಖ ಪಾತ್ರ ವಹಿಸಿದೆ.

ಕಂಪನಿಯ ಫೈಲಿಂಗ್ಸ್ ಪ್ರಕಾರ, ದರ್ಶನ್ ಮೆಹ್ತಾ ಅವರು 2020-21ನೇ ಸಾಲಿಗೆ 4.89 ಕೋಟಿ ರೂಪಾಯಿ ಪಡೆದಿದ್ದಾರೆ. ಅವರು ಚಾರಣಪ್ರಿಯರಾಗಿದ್ದು, ಪರ್ವತಗಳನ್ನು ಏರುವುದು ಅವರ ಹವ್ಯಾಸವಾಗಿದೆ. ರಿಲಯನ್ಸ್ ರಿಟೇಲ್‌ನಲ್ಲಿ ಇಶಾ ಅಂಬಾನಿಯವರ ಯಶಸ್ಸಿನ ಹಿಂದೆ ಅವರು ಪ್ರಮುಖ ವ್ಯಕ್ತಿಯಾಗಿದ್ದಾರೆ. ಮೆಗಾ ರಿಲಯನ್ಸ್ ಇಂಡಸ್ಟ್ರೀಸ್ ಈವೆಂಟ್‌ನಲ್ಲಿ ಇಶಾ ಅಂಬಾನಿ ಬಹಿರಂಗಪಡಿಸಿದಂತೆ, ರಿಲಯನ್ಸ್ ರಿಟೇಲ್ ಕಳೆದ ವರ್ಷ 3300 ಸ್ಟೋರ್‌ಗಳನ್ನು ತೆರೆದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+