ಫೋರ್ಬ್ಸ್ ಪ್ರಕಾರ, 2023ರಲ್ಲಿ ಭಾರತದಲ್ಲಿ ಬಿಲಿಯನೇರ್ ಆದ ಮೂವರು ಮಹಿಳೆಯರಲ್ಲಿ ರೋಹಿಕಾ ಮಿಸ್ತ್ರಿ ಕೂಡ ಒಬ್ಬರು. ಆಕೆಯ ನಿವ್ವಳ ಆಸ್ತಿ ಮೌಲ್ಯ 7 ಶತಕೋಟಿ ಡಾಲರ್ ಆಗಿದ್ದು, ಅದು 56000 ಕೋಟಿ ರೂ. ಆಗಿದೆ. ಅಷ್ಟೇಅಲ್ಲ ಅವರು ಭಾರತದ 2ನೇ ಅತಿದೊಡ್ಡ ಮಹಿಳೆಯಾಗಿದ್ದಾರೆ. 17 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಸಾವಿತ್ರಿ ಜಿಂದಾಲ್ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ರೇಖಾ ಜುಂಜುನ್‌ವಾಲಾ ಅವರು ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಜುಂಜುನ್‌ವಾಲಾ ಹಾಗೂ ಸರೋಜ್ ರಾಣಿ ಗುಪ್ತ ಅವರು ಬಿಲಿಯನೇರ್ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.
ರೋಹಿಕಾ ಮಿಸ್ತ್ರಿ ಅವರು ಯಾರು?: ರೋಹಿಕಾ ಮಿಸ್ತ್ರಿ ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಸೈರಿಸ್ ಮಿಸ್ತ್ರಿ ಅವರ ಪತ್ನಿ. ಆಕೆಯ ಮಾವ ಪಲ್ಲೊಂಜಿ ಮಿಸ್ತ್ರಿ ಕೆಲವು ತಿಂಗಳ ಹಿಂದೆ ನಿಧನರಾಗಿದ್ದರು. 55 ವರ್ಷದ ಮಹಿಳೆ ರೋಹಿಕಾ ಅವರು ಹಿರಿಯ ವಕೀಲ ಇಕ್ಬಾಲ್ ಚಾಗ್ಲಾ ಅವರ ಪುತ್ರಿ. ಕಳೆದ ವರ್ಷ ಜೂನ್‌ನಲ್ಲಿ ನಿಧನರಾದ ಪಲ್ಲೊಂಜಿ ಮಿಸ್ತ್ರಿ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರೇ ಶಪೂರ್ ಮಿಸ್ತ್ರಿ ಹಾಗೂ ಸೈರಿಸ್ ಮಿಸ್ತ್ರಿ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದ ಕಾರು ಅಪಘಾತದಲ್ಲಿ ಸೈರಸ್ ಕೆಲವು ವಾರಗಳ ನಂತರ ಸಾವನ್ನಪ್ಪಿದ್ದರು.

ಈ ದಂಪತಿಯು ಮದುವೆಯಾಗಿ ಸುಮಾರು ಮೂವತ್ತು ವರ್ಷಗಳನ್ನು ಕಳೆದಿದ್ದಾರೆ. ಅವರು 1992ರಲ್ಲಿ ಮದುವೆಯಾಗಿದ್ದರು. ಅವರಿಗೆ ಇಬ್ಬರು ಪುತ್ರರಿದ್ದು, ಅವರ ಹೆಸರು ಜಹಾನ್ ಮಿಸ್ತ್ರಿ ಮತ್ತು ಫಿರೋಜ್ ಮಿಸ್ತ್ರಿ. ಅವರು ಕಾನೂನು ಪದವೀಧರ ಕುಟುಂಬದ ಮೂಲದಿಂದ ಬಂದವರಾಗಿದ್ದಾರೆ. ಆಕೆಯ ಸಹೋದರ ರಿಯಾಜ್ ಚಾಗ್ಲಾ. ಅವರು 2017ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿದ್ದರು.
ಆಕೆಯ ಅಜ್ಜ ಎಂಸಿ ಚಾಗ್ಲಾ ಅವರು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ಸಚಿವರೂ ಆಗಿದ್ದರು.
ಶಾಪೂರ್ಜಿ ಪಲ್ಲೊಂಜಿ ಗ್ರೂಪ್ ಟಾಟಾ ಸನ್ಸ್‌ನ ಏಕೈಕ ಅತಿದೊಡ್ಡ ಷೇರುದಾರರಾಗಿದ್ದಾರೆ. ಅವರು ಹೆಚ್ಚಾಗಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ರತನ್ ಟಾಟಾ ಅವರು ಟಾಟಾ ಸನ್ಸ್ ಎಮಿರಿಟಸ್ ಅಧ್ಯಕ್ಷರಾಗಿದ್ದಾರೆ. ಕಂಪೆನಿಯು ಟಾಟಾ ಗ್ರೂಪ್‌ನ ಪಟ್ಟಿ ಮಾಡದ ಹಿಡುವಳಿ ಕಂಪೆನಿಯಲ್ಲಿ ತನ್ನ ಉಳಿದ ಅರ್ಧದಷ್ಟು ಪಾಲನ್ನು ವಾಗ್ಧಾನ ಮಾಡುವ ಮೂಲಕ 1.75 ಬಿಲಿಯನ್ ಡಾಲರ್ ಸಂಗ್ರಹಿಸಲು ಯೋಚಿಸುತ್ತಿದೆ ಎಂದು ವರದಿಯಾಗಿದೆ. ಇದು ಈಗಾಗಲೇ ಟಾಟಾ ಸನ್ಸ್‌ನಲ್ಲಿ ತಮ್ಮ ಶೇ.18.37ರಷ್ಟು ಶೇಕಡಾ ಪಾಲನ್ನು 9 ಪ್ರತಿಶತದಂತೆ ವಾಗ್ಧಾನ ಮಾಡಿದೆ. ಅದು ತನ್ನ ಸಾಲವನ್ನು ಕಡಿಮೆ ಮಾಡಲು ಈ ಹಣವನ್ನು ಬಳಸುವುದಾಗಿ ಹೇಳಿದೆ.
ಇದರೊಂದಿಗೆ ಅವರು ತೆಗೆದುಕೊಂಡಿರುವ ಟಾಟಾ ಸನ್ಸ್ ಷೇರುಗಳ ಮೇಲಿನ ಒಟ್ಟು ಸಾಲವು 3 ಬಿಲಿಯನ್ ಡಾಲರ್ ಮೀರಲಿದೆ. ಎಸ್‌ಪಿ ಗ್ರೂಪ್ ಹೆಚ್ಚಾಗಿ ಕುಟುಂಬದ ಸದಸ್ಯರ ಒಡೆತನದಲ್ಲಿದೆ. ಈ ಗ್ರೂಪ್ ಅನ್ನು ಪಲ್ಲೊಂಜಿ ಮಿಸ್ತ್ರಿ ಅವರು 1865ರಲ್ಲಿ ಸ್ಥಾಪಿಸಿದ್ದರು. ಇದು ರಿಯಲ್ ಎಸ್ಟೇಟ್, ನಿರ್ಮಾಣ, ಮೂಲ ಸೌಕರ್ಯ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ.
ರತನ್ ಟಾಟಾರ ಸೊಸೆ ಲೇಹ್ ಟಾಟಾ ಬಗ್ಗೆ ತಿಳಿಯಿರಿ
ಲೇಹ್ ಟಾಟಾ ಅವರು ನೋಯೆಲ್ ಅವರ ಹಿರಿಯ ಮಗಳು. ವರದಿಗಳ ಪ್ರಕಾರ, ಲೇಹ್ ಟಾಟಾ ಅವರು ಸ್ಪೈನ್‌ನ ಮ್ಯಾಡ್ರಿಡ್‌ನಲ್ಲಿರುವ ಐಇ ಬಿಸಿನೆಸ್ ಸ್ಕೂಲ್‌ನಲ್ಲಿ ಮಾರ್ಕೆಟಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಲೇಹ್ ಟಾಟಾ ಅವರು 2006ರಲ್ಲಿ ತಾಜ್ ಹೋಟೆಲ್ ರೆಸಾರ್ಟ್ ಮತ್ತು ಪ್ಯಾಲೇಸ್‌ಗಳಲ್ಲಿ ಸಹಾಯಕ ಮಾರಾಟ ಮ್ಯಾನೇಜರ್ ಆಗಿ ಕೆಲಸ ಪ್ರಾರಂಭಿಸುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು.
ಟಾಟಾ ಹೋಟೆಲ್ಸ್‌ನಲ್ಲಿ ಅಭಿವೃದ್ಧಿ ಮತ್ತು ವಿಸ್ತರಣೆ ವಿಭಾಗದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಲೇಹ್ ಟಾಟಾ(37) ಅವರು ರತನ್ ಟಾಟಾ ಅವರ ಹಿರಿಯ ಸೊಸೆಯಾಗಿದ್ದು, ಮುಂಬೈಯ ಜೈ ಹಿಂದ್ ಕಾಲೇಜು ಹಳೇ ವಿದ್ಯಾರ್ಥಿನಿ.


Click it and Unblock the Notifications