Ruchi Kalra: 2 ಸ್ಟಾರ್ಟ್-ಅಪ್ ಸ್ಥಾಪಿಸಿದ ಈ ಮಹಿಳೆ 52,000 ಕೋಟಿ ರೂ.ಗಳ ಒಡತಿ!

ಜಗತ್ತಿನಲ್ಲೆಡೆ ಸ್ಟಾರ್ಟ್‌ಅಪ್‌ಗಳ ಅಲೆ ಜೋರಾಗಿದೆ. ಆದರೆ ಪ್ರತಿ ಸ್ಟಾರ್ಟ್‌ಅಪ್‌ಗಳೂ ಯಶಸ್ವಿಯಾಗುತ್ತವೆ ಎಂದು ಹೇಳಲಾಗದು. ಭಾರತದ ಅತ್ಯಂತ ಯಶಸ್ವಿ ಸ್ಟಾರ್ಟ್- ಅಪ್ ಸಂಸ್ಥಾಪಕರಲ್ಲಿ ರುಚಿ ಕಲ್ರಾ ಕೂಡಾ ಓರ್ವರು. ಇವರು ತಮ್ಮ ಪತಿ ಆಶಿಶ್ ಮೊಹಾಪಾತ್ರ ಅವರೊಂದಿಗೆ ಸೇರಿಕೊಂಡು ನವೋದ್ಯಮ ಪ್ರಾರಂಭಿಸಿ ಯಶಸ್ವಿಯಾಗಿದ್ದಾರೆ.

ರುಚಿ ಕಲ್ರಾ ಅವರು ಎರಡು ಯುನಿಕಾರ್ನ್ ಸ್ಟಾರ್ಟ್-ಅಪ್ ಸಂಸ್ಥೆಯ ಸಹ-ಸಂಸ್ಥಾಪಕಿಯಾಗಿದ್ದು ಇವೆರಡು ಲಾಭದಲ್ಲಿದೆ. ಬೃಹತ್ ಸ್ಟಾರ್ಟ್‌ಅಪ್‌ಗಳು ಲಾಭ ಗಳಿಸುವುದಕ್ಕೆ ಸಾಧ್ಯವಾಗದ ಸಮಯದಲ್ಲಿ ಎರಡು ಬೃಹತ್ ಲಾಭದಾಯಕ ವ್ಯವಹಾರಗಳನ್ನು ಮುನ್ನಡೆಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.

 2 ಸ್ಟಾರ್ಟ್-ಅಪ್ ಸ್ಥಾಪಿಸಿದ ಈ ಮಹಿಳೆ 52,000 ಕೋಟಿ ರೂ.ಗಳ ಒಡತಿ

ಕಲ್ರಾ ಅವರ ಬ್ಯುಸಿನೆಸ್ ತಂತ್ರಗಾರಿಕೆ ತುಂಬಾ ಸರಳವಾಗಿದ್ದು, ಅದೇನೆಂದ್ರೆ ಪ್ರತಿ ವಹಿವಾಟಿನಿಂದಲೂ ನಿಖರವಾದ ಲಾಭವನ್ನು ನಿರೀಕ್ಷಿಸುವುದು. ನಷ್ಟವೂ ಲಾಭದ ಭಾಗವಾಗಿರುವ ಕಾರಣ ಈ ತಂತ್ರಗಾರಿಕೆಯೂ ಹೂಡಿಕೆದಾರರಿಗೆ ಸರಿ ಹೊಂದಲಿಲ್ಲ. ಆದರೆ ಇದನ್ನು ಲೆಕ್ಕಿಸಿದ ಈ ದಂಪತಿಯೂ ಯಾವುದೇ ಸವಾಲಿಗೆ ಹೆದರದೆ ಲಾಭದಾಯಕತೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಸ್ಟಾರ್ಟಪ್‌ಗಳನ್ನು ಮುನ್ನಡೆಸಿದ್ದಾರೆ.

2015ರಲ್ಲಿ, ರುಚಿ ಕಲ್ರಾ ಅವರು ಆಫ್ ಬ್ಯುಸಿನೆಸ್ (OfBusiness) ಅನ್ನು ಸ್ಥಾಪಿಸಿದ್ದು ಇದು ಕಚ್ಚಾವಸ್ತುಗಳು, ಕೈಗಾರಿಕಾ ಸರಬರಾಜು ಇತ್ಯಾದಿಗಳನ್ನು ಪೂರೈಕೆ ಮಾಡುವ ಬ್ಯುಸಿನೆಸ್ ಟು ಬ್ಯುಸಿನೆಸ್ ಫ್ಲಾಟ್ ಫಾರ್ಮ್ ಆಗಿದೆ. ಕಂಪನಿಯ ಮೌಲ್ಯವು 44,000 ಕೋಟಿ ರೂ. ತಲುಪಿದೆ.

ಅವರು 1 ಶತಕೋಟಿ ಡಾಲರ್ (ರೂ. 8,200 ಕೋಟಿ) ಮೌಲ್ಯದಲ್ಲಿ 200 ಮಿಲಿಯನ್ ಡಾಲರ್‌ಗಳನ್ನು ಸಂಗ್ರಹಿಸಿರುವ ಆಫ್ ಬ್ಯುಸಿನೆಸ್‌ನ ಸಾಲ ನೀಡುವ ಅಂಗವಾದ Oxyzo ಫೈನಾನ್ಷಿಯಲ್ ಸರ್ವಿಸಸ್‌ನ CEO ಆಗಿದ್ದಾರೆ. ಇದರೊಂದಿಗೆ, ಅವರು ಎರಡು ಯುನಿಕಾರ್ನ್‌ಗಳನ್ನು ಸ್ಥಾಪಿಸಿದ ಭಾರತದಲ್ಲಿ ಮೊದಲ ದಂಪತಿಗಳಾಗಿದ್ದಾರೆ.

ಪತಿಯಂತೆ ರುಚಿ ಕಲ್ರಾ ಕೂಡ ಐಐಟಿ ಪದವೀಧರರಾಗಿದ್ದಾರೆ. ದೆಹಲಿಯ ಐಐಟಿಯಲ್ಲಿ ಬಿ-ಟೆಕ್ ಮುಗಿಸಿದ್ದಾರೆ. ನಂತರ ಅವರು ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಎಂಬಿಎ ಪಡೆದಿದ್ದಾರೆ. 2017 ರಲ್ಲಿ Oxyzo ಅನ್ನು ಸ್ಥಾಪಿಸಿಲಾಯಿತು. ಅವರು ತಮ್ಮ ಪ್ಲಾಟ್‌ಫಾರ್ಮ್‌ನಿಂದ ವಸ್ತುಗಳನ್ನು ಖರೀದಿಸುವವರಿಗೆ ಹಣಕಾಸು ನೆರವನ್ನು ಒದಗಿಸುತ್ತಾರೆ. ಅವರು ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಸಾಲ ನೀಡುತ್ತಾರೆ.

ಕಲ್ರಾ ಎಂಟು ವರ್ಷಗಳ ಕಾಲ McKinseyಯ ಪಾಲುದಾರರಾಗಿ ಕೆಲಸ ಮಾಡಿದ್ದಾರೆ. ಕಲ್ರಾ ಅವರು ತಮ್ಮ ಹಾಗೂ ಅವರ ಪತಿ ಪ್ರತ್ಯೇಕ ಆಫೀಸ್ ಹೊಂದಿದ್ದಾರೆ. ಇವರಿಬ್ಬರ ಕಚೇರಿಗಳೂ ಗುರುಗ್ರಾಮದಲ್ಲಿದೆ. 2021ರ ಆರ್ಥಿಕ ವರ್ಷದಲ್ಲಿ 197.53 ಕೋಟಿ ರೂ. ಆದಾಯವನ್ನು ಕಂಪನಿಯು ಗಳಿಸಿದೆ. ಮುಂದಿನ ವರ್ಷದಲ್ಲಿ ಅದು 312.97 ಕೋಟಿ ರೂ.ಗೆ ಏರಿದೆ. 2021-2022ರಲ್ಲಿ 60.34 ಕೋಟಿ ರೂ. ಲಾಭ ಗಳಿಸಿದ್ದು , ಕಳೆದ ವರ್ಷ ಅದು 39.94 ಕೋಟಿ ರೂ ಆಗಿದೆ.

ಫೋರ್ಬ್ಸ್ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು, ತಮ್ಮ ದೃಷ್ಟಿಯಲ್ಲಿ ಲಾಭದ ಕುರಿತಂತೆ ಮಾತನಾಡಿದ್ದಾರೆ. ಲಾಭವು ಬೆಳವಣಿಗೆಯೊಂದಿಗೆ ಜೊತೆಯಾಗಿರುತ್ತದೆ. ದೇಶದ ಎಲ್ಲಾ ಕಾನೂನುಗಳನ್ನು ಅನುಸರಿಸಬೇಕು ಮತ್ತು ವೆಚ್ಚದ ಮೇಲೆ ತೀವ್ರ ಕಣ್ಣಿಟ್ಟರಬೇಕು ಎಂದು ಹೇಳಿದ್ದಾರೆ

ಇವರು OfBusiness ನ ಸಹ-ಸಂಸ್ಥಾಪಕರಾಗಿದ್ದು ಅವರ ಆದಾಯವು 2022ರ ಆರ್ಥಿಕ ವರ್ಷದಲ್ಲಿ 7269 ಕೋಟಿ ರೂ. ಆದಾಯ ಸೃಷ್ಟಿಸಿದೆ. ಈ ಕಂಪನಿಯೂ 125.63 ಕೋಟಿ ರೂ. ನಿವ್ವಳ ಗಳಿಸಿದೆ. ಸಂದರ್ಶನವೊಂದರಲ್ಲಿಹೇಳಿದ ಪ್ರಕಾರ, 2016 ರಲ್ಲಿ 73 ಹೂಡಿಕೆದಾರರು ತಮ್ಮ ಐಡಿಯಾವನ್ನು ತಿರಸ್ಕರಿಸಿದ್ದರು. ಆದರೆ ಕಂಪನಿಯನ್ನು ನಡೆಸಲು ಅವರಿಗೆ ಒಬ್ಬರ ಅಗತ್ಯವಿತ್ತು. ಅವರ 2022 ನಿವ್ವಳ ಮೌಲ್ಯ ಸುಮಾರು 2600 ಕೋಟಿ ರೂ. ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+