ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್‌ನಲ್ಲಿ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಆ ಮೂಲಕ ಫೈನಲ್‌ಗೂ ಪ್ರವೇಶ ಪಡೆದುಕೊಂಡಿತ್ತು. ಐಪಿಎಲ್ ಪ್ರಸ್ತುತ ಎಲ್ಲರ ಗಮನಸೆಳೆದಿದ್ದು, ಇಡೀ ಜಗತ್ತಿನಲ್ಲೇ ಅತ್ಯಂತ ಲಾಭದಾಯಕ ಕ್ರಿಕೆಟ್ ಟೂರ್ನಮೆಂಟ್ ಆಗಿ ಗುರುತಿಸಿಕೊಂಡಿದೆ.
2023-27ರವರೆಗಿನ ಐಪಿಎಲ್ ಮಾಧ್ಯಮ ಪ್ರಸಾರದ ಹಕ್ಕುಗಳನ್ನು ಬರೋಬ್ಬರಿ 48,390 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಅದೇರೀತಿ, ಡಿಜಿಟಲ್ ಹಕ್ಕುಗಳು ಕೂಡ 23,575 ಕೋಟಿ ರೂಪಾಯಿಗೆ ಮಾರಾಟಗೊಂಡಿವೆ.

ಐಪಿಎಲ್‌ನಲ್ಲಿ ಅತ್ಯಂತ ಪ್ರಸಿದ್ಧ ಪ್ರಾಂಚೈಸಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಒಂದಾಗಿದ್ದು, ಇದು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಒಟ್ಟು ನಾಲ್ಕು ಬಾರಿ ಟ್ರೋಫಿ ಗೆದ್ದುಕೊಂಡಿದೆ. ಅಸಂಖ್ಯ ಅಭಿಮಾನಿಗಳ ಫೇವರೇಟ್ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರ ಬಗ್ಗೆ ನಿಮಗೆ ಗೊತ್ತೇ?
ಎನ್. ಶ್ರೀನಿವಾಸನ್, ರೂಪಾ ಗುರುನಾಥ್ ಬಗ್ಗೆ ಮಾಹಿತಿ
ಸಿಎಸ್‌ಕೆ ತಂಡದ ಮಾಲಿಕತ್ವವನ್ನು ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ ಹೊಂದಿದ್ದು, ಇದರ ವ್ಯವಸ್ಥಾಪಕ ನಿರ್ದೇಶಕರು ಎನ್. ಶ್ರೀನಿವಾಸನ್. ಸಿಎಸ್‌ಕೆಯ ಈಗಿನ ಮಾಲೀಕರಾದ ಶ್ರೀನಿವಾಸನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮಾಜಿ ಅಧ್ಯಕ್ಷರು ಹಾಗೂ ಭಾರತೀಯ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಮಾಜಿ ಅಧ್ಯಕ್ಷರೂ ಹೌದು.
1945ರ ಜನವರಿ 3ರಂದು ಜನಿಸಿದ ಶ್ರೀನಿವಾಸನ್ ಅವರು ಇಂಡಿಯಾ ಸಿಮೆಂಟ್ಸ್‌ನ ಸಹ-ಸಂಸ್ಥಾಪಕ ಟಿಎಸ್ ನಾರಾಯಣಸ್ವಾಮಿ ಅವರ ಮಗ. ಶ್ರೀನಿವಾಸನ್ ಅವರ ಪುತ್ರಿ ರೂಪಾ ಗುರುನಾಥ್ ಅವರು ಇಂಡಿಯಾ ಸಿಮೆಂಟ್ಸ್‌ನ ಪೂರ್ಣಾವಧಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರೂಪಾ ಗುರುನಾಥ್ ಅವರು ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ ಸೇರಿದಂತೆ ಒಟ್ಟು ಎಂಟು ವಿವಿಧ ಕಂಪೆನಿಗಳ ಆಡಳಿತ ಮಂಡಳಿಯಲ್ಲಿದ್ದಾರೆ. ಚೆನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್ (ಸಿಎಸ್‌ಕೆಸಿಎಲ್) ಹೋಲ್ಡಿಂಗ್ ಕಂಪನಿ ಮೂಲಕ ಸಿಎಸ್‌ಕೆ ಫ್ರಾಂಚೈಸಿ ಮಾಲೀಕರಾಗಿದ್ದಾರೆ. ಅವರು ಒಮ್ಮೆ ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು.
1974ರಲ್ಲಿ ಜನಿಸಿದ ರೂಪಾ ಗುರುನಾಥ್ ಅವರು ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಜಿ ಡಿಪ್ಲೋಮಾ ಪದವಿ ಪಡೆದುಕೊಂಡಿದ್ದಾರೆ. ಅವರ ಪತಿಯ ಹೆಸರು ಗುರುನಾಥ್ ಮೇಯಿಯಪ್ಪನ್. 2019ರಲ್ಲಿ 87ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗುರುನಾಥ್ ಅವರು ತಮಿಳುನಾಡು ಕ್ರಿಕೆಟ್ ಸಂಸ್ಥೆಯ (TNCA) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ್ದರು.
ರೂಪಾ ಗುರುನಾಥ್ ಅವರು ಭಾರತದಲ್ಲಿ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ ಮುಖ್ಯಸ್ಥರಾಗಿರುವ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ತಮ್ಮ ತಂದೆ ಎನ್. ಶ್ರೀನಿವಾಸನ್ ಅವರ ನಂತರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದರು. 2008ರಲ್ಲಿ CSK ಅನ್ನು ಇಂಡಿಯಾ ಸಿಮೆಂಟ್ಸ್ 91 ಮಿಲಿಯನ್ ಅಮೆರಿಕನ್ ಡಾಲರ್‌ಗೆ ಖರೀದಿಸಿತ್ತು. 2022ರ ವೇಳೆಗೆ ಎನ್. ಶ್ರೀನಿವಾಸನ್ ಅವರ ನಿವ್ವಳ ಆಸ್ತಿ ಮೌಲ್ಯ 7.2 ಬಿಲಿಯನ್ ಆಗಿದೆ.
5ನೆ ಬಾರಿಗೆ ಟ್ರೋಫಿ ಗೆದ್ದ ಚೆನ್ನೈ
ಐಪಿಎಲ್ 2023ರ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಐದು ನಿಯಮಗಳ ಅಂತರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸಿದೆ. ಈ ಮೂಲಕ ಐದನೇ ಬಾರಿಗೆ ಐಪಿಎಲ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಚೆನ್ನೈ ತಂಡವು ಪಡೆದಿದೆ. ಒಟ್ಟಿನಲ್ಲಿ ಚೆನ್ನೈ ಹತ್ತು ಬಾರಿ ಫೈನಲ್‌ಗೇರಿದ ಸಾಧನೆಯನ್ನು ಮಾಡಿದೆ. ಧೋನಿ ನಾಯಕತ್ವದಲ್ಲಿಯೇ 2010ರಲ್ಲಿ ಚೆನ್ನೈ ಮೊದಲ ಬಾರಿಗೆ ಪ್ರಶಸ್ತಿಯನ್ನು ಗಳಿಸಿತ್ತು. ಅದಾದ ಬಳಿಕ ಐದು ಬಾರಿ ಗೆದ್ದಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications