ಉದ್ಯಮಿ ಮತ್ತು ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಮಗ ಆಕಾಶ್ ಅಂಬಾನಿ ಅವರನ್ನು ಮಹಿಳಾ ಉದ್ಯಮಿ ಶ್ಲೋಕಾ ಮೆಹ್ತಾ ಅವರು 2019 ರಲ್ಲಿ ವಿವಾಹವಾಗುವ ಮೂಲಕ ಕೋಟ್ಯಾಧಿಪತಿ ಕುಟುಂಬಕ್ಕೆ ಎಂಟ್ರಿ ಕೊಟ್ಟು ಹಿರಿ ಸೊಸೆಯಾದರು.
ಅಂಬಾನಿ ಕುಟುಂಬದ ಬಗ್ಗೆ ನಾವೆಲ್ಲರೂ ಹೆಚ್ಚಿನ ಮಾಹಿತಿ ತಿಳಿದುಕೊಂಡರೂ, ಶ್ಲೋಕಾ ಮೆಹ್ತಾ ಅವರ ತಂದೆ ರಸ್ಸೆಲ್ ಮೆಹ್ತಾ ಬಗ್ಗೆ ಹೆಚ್ಚಿನ ಮಾಹಿತಿ ನಿಮಗೆ ತಿಳಿಯದಿರಬಹುದು.ಅವರ ವಿವರ ಇಲ್ಲಿದೆ.
ಶ್ಲೋಕಾ ಮೆಹ್ತಾ ಅವರ ತಂದೆ ಮತ್ತು ಆಕಾಶ್ ಅಂಬಾನಿಯವರ ಮಾವ ರಸೆಲ್ ಮೆಹ್ತಾ ಯಾರು?

ಅಂಬಾನಿ ಕುಟುಂಬದ ಬೀಗರಾಗಿರುವ ಶ್ಲೋಕಾ ಮೆಹ್ತಾ ಅವರ ತಂದೆ ರಸ್ಸೆಲ್ ಮೆಹ್ತಾ ಅವರೇನೂ ಸಾಮಾನ್ಯದವರಲ್ಲ. ಇವರು ಬಹು-ಶತಕೋಟಿ ಡಾಲರ್ ಯಶಸ್ವಿ ಸಂಸ್ಥೆಯೊಂದನ್ನು ಮುನ್ನಡೆಸುತ್ತಿದ್ದಾರೆ. ದೇಶದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಓರ್ವರಾಗಿರುವ ಸಾವಿರಾರು ಕೋಟಿ ಮೌಲ್ಯದ ಭಾರತೀಯ ಸಂಘಟಿತ ಸಂಸ್ಥೆ ರೋಸಿ ಬ್ಲೂ ಮಾಲೀಕರೂ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅವರ ಪುತ್ರಿ ಶ್ಲೋಕಾ ಮೆಹ್ತಾ ಈ ಕಂಪನಿಯ ನಿರ್ದೇಶಕರಾಗಿದ್ದಾರೆ
ರೋಸಿ ಬ್ಲೂ ವಜ್ರಾಭರಣ ಸಂಸ್ಥೆಯಾದರೂ, ಇದು ರಿಟೇಲ್, ರಿಯಲ್ ಎಸ್ಟೇಟ್, ಮೀಡಿಯಾ, ವಜ್ರ, ಹಣಕಾಸು ಸೇವೆಗಳಲ್ಲಿ ತನ್ನ ಕಂಪನಿಗಳನ್ನುಸ್ಥಾಪಿಸಿದೆ. ಇದೆಲ್ಲದರ ಸಂಘಟಿತ ಸಂಸ್ಥೆಯಾಗಿ ರೋಸಿ ಬ್ಲೂ ಹೊರಹೊಮ್ಮಿದ್ದು ಇದು ಬೃಹತ್ ಆದಾಯವನ್ನು ಹೊಂದಿದೆ.
ರಸ್ಸೆಲ್ ಮೆಹ್ತಾ, ಮೋನಾ ಮೆಹ್ತಾ ಅವರನ್ನು ವಿವಾಹವಾಗಿದ್ದುಈ ದಂಪತಿಗಳಿಗೆ ವಿರಾಜ್ ಮೆಹ್ತಾ, ದಿಯಾ ಮೆಹ್ತಾ ಮತ್ತು ಶ್ಲೋಕಾ ಮೆಹ್ತಾ ಎಂಬ ಮೂವರು ಮಕ್ಕಳಿದ್ದಾರೆ. ಪುತ್ರ ವಿರಾಜ್ 2012 ರಲ್ಲಿ ಭಾರತದ ಅತಿದೊಡ್ಡ ಖಾಸಗಿ ವಲಯದ ಹಡಗು ಕಂಪನಿಯಾಗಿರುವ ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ ಕುಟುಂಬ ಭರತ್ ಶೇತ್ ಅವರ ಪುತ್ರಿ ನಿಶಾ ಶೇತ್ ಅವರನ್ನು ವಿವಾಹವಾದರು.
ಇವರ ಕಿರಿಯ ಪುತ್ರಿ ದಿಯಾ ಮೆಹ್ತಾ ಅವರು 2017 ರಲ್ಲಿ ಬಹ್ರೇನ್‌ನಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಆಯುಷ್ ಜತಿಯಾ ಅವರನ್ನು ವರಿಸಿದರು. ಆಯುಷ್ ಜಟಿಯಾ ಅವರು ಅಮಿತ್ ಜಟಿಯಾ ಅವರ ಪುತ್ರರಾಗಿದ್ದು, ಇವರು ದಕ್ಷಿಣ ಮತ್ತು ಪಶ್ಚಿಮ ಭಾಗದ ಭಾರತದಲ್ಲಿ ಎಲ್ಲಾ ಮೆಕ್‌ಡೊನಾಲ್ಡ್ ಫ್ರಾಂಚೈಸಿಗಳ್ ಮಾಲಕರಾಗಿದ್ದಾರೆ.
ಕೊನೆಯದಾಗಿ, ಅವರ ಮಗಳು ಶ್ಲೋಕಾ ಮೆಹ್ತಾ ಅವರು ಭಾರತದ ಬಿಲಿಯನೇರ್ ಆಗಿರುವ ಮುಖೇಶ್ ಅಂಬಾನಿಯವರ ಮಗ ಆಕಾಶ್ ಅಂಬಾನಿಯನ್ನು ವಿವಾಹವಾದರು. ರಸೆಲ್ ಮೆಹ್ತಾ ಆಕಾಶ್ ಅಂಬಾನಿಯ ಮಾವ ಮತ್ತು ಮುಖೇಶ್ ಅಂಬಾನಿಯವರ ಬೀಗರು ಆಗಿದ್ದಾರೆ.
ರೋಸಿ ಬ್ಲೂ ಇಂಡಿಯಾ ಸಂಸ್ಥೆಯೂ ಭಾರತದಲ್ಲಿ ಅಗ್ರ ವಜ್ರ ಕಂಪನಿಯಾಗಿದೆ. ರೋಸಿ ಬ್ಲೂ ಬೆಲ್ಜಿಯಂ, ಇಸ್ರೇಲ್, ಜಪಾನ್, ಹಾಂಗ್ ಕಾಂಗ್, ಯುಎಸ್ಎ ಮತ್ತು ಚೀನಾ ಸೇರಿದಂತೆ 12 ದೇಶಗಳಲ್ಲಿ ಕಚೇರಿಗಳನ್ನು ಹೊಂದಿದೆ. ರೋಸಿ ಬ್ಲೂ 2022 ರ ಹಣಕಾಸು ವರ್ಷದಲ್ಲಿ 5599 ಕೋಟಿ ರೂ. ಆದಾಯ ಗಳಿಸಿದೆ.
ರಸ್ಸೆಲ್ ಮೆಹ್ತಾ ಅವರು ರೂ 1,844 ಕೋಟಿ ನಿವ್ವಳ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ. ಇದು ಬೃಹತ್ ಪ್ರಮಾಣದ ಆಸ್ತಿಯಾದರೂ ಇದು ಮುಕೇಶ್ ಅಂಬಾನಿಗೆ ಹೋಲಿಸಿದರೆ ಅವರ ಮುಂದೆ ಏನೂ ಇಲ್ಲ ಎನ್ನಬಹುದು.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?



Click it and Unblock the Notifications