ಭಾರತದ ಸ್ವಯಂ ನಿರ್ಮಿತ ಬಿಲಿಯನೇರ್ ಸಚಿನ್ ಬನ್ಸಾಲಿ ಅವರು ಬಿಲಿಯನ್ ಡಾಲರ್ ಕಂಪೆನಿಯಾದ ಫ್ಲಿಪ್‌ಕಾರ್ಟ್‌ನ ಮಾಜಿ ಸಹ-ಸಂಸ್ಥಾಪಕರು. 2018ರಲ್ಲಿ ಈ ಕಂಪೆನಿಯು $20.8 ಬಿಲಿಯನ್ ಮೌಲ್ಯವನ್ನು ಹೊಂದಿತ್ತು. 2018ರಲ್ಲಿ ಸಚಿನ್ ಬನ್ಸಾಲ್ ಅವರು ಫ್ಲಿಪ್‌ಕಾರ್ಟ್‌ನ ಶೇ.5.5ರಷ್ಟು ಷೇರುಗಳನ್ನು ವಾಲ್‌ಮಾರ್ಟ್‌ಗೆ ಮಾರಾಟ ಮಾಡಿದ್ದರು. ಫ್ಲಿಪ್‌ಕಾರ್ಟ್‌ನ ಕಾರ್ಯಕಾರಿ ಅಧ್ಯಕ್ಷ ಸ್ಥಾನವನ್ನು ತೊರೆದ ಅವರು ನವಿ ಗ್ರೂಪ್‌ನ ವ್ಯವಸ್ಥಾಪಕರಾಗಿ ನೇಮಕಗೊಂಡರು.
ಸಚಿನ್ ಬನ್ಸಾಲಿ ಯಾರು?: ಚಂಡೀಗಢ ಮೂಲದ ಸಚಿನ್ ಬನ್ಸಾಲಿ ಅವರು 1981ರಲ್ಲಿ ಹುಟ್ಟಿದ್ದಾರೆ. ಅವರು ನವಿ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. ಸಚಿನ್ ಅವರು ದಿಲ್ಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದಿದ್ದು, 2005ರಲ್ಲಿ ಸಾಫ್ಟ್‌ವೇರ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ.

ಸಚಿನ್ ಬನ್ಸಾಲಿ ಅವರು ಪದವಿ ಪೂರ್ಣಗೊಳಿಸಿದ ಬಳಿಕ ಅಮೆಜಾನ್‌ಗೆ ಸೇರುವುದಕ್ಕೂ ಮೊದಲು ಸ್ವಲ್ಪ ಅವಧಿಗೆ ಟೆಕ್‌ಸ್ಪಾಮ್‌ಗೆ ಕೆಲಸ ಮಾಡಿದ್ದರು. ಬಳಿಕ 2006ರಲ್ಲಿ ಅಮೆಜಾನ್ ವೆಬ್ ಸರ್ವೀಸಸ್‌ನಲ್ಲಿ ಹಿರಿಯ ಸಾಫ್ಟ್‌ವೇರ್ ಡೆವಲ್ಪರ್ ಆಗಿ ಸೇರಿಕೊಡರು. 2007ರಲ್ಲಿ ಅಮೆಜಾನ್‌ನಿಂದ ಹೊರಬಂದು ತಮ್ಮದೇ ಸ್ವಂಯ ಬಿಸಿನೆಸ್ ಅನ್ನು ಪ್ರಾರಂಭಿಸಿದರು.
2007ರಲ್ಲಿ ಅಮೆಜಾನ್ ಮಾಜಿ ಎಕ್ಸಿಕ್ಯೂಟೀವ್ ಸಚಿನ್ ಬನ್ಸಾಲಿ ತಮ್ಮ ಬಿಲಿಯನೇರ್ ಗೆಳೆಯ ಬಿನ್ನಿ ಬನ್ಸಾಲಿ ಜತೆ ಸೇರಿಕೊಂಡು ಇಂಟರ್‌ನೆಟ್ ಆಧಾರಿತ ಬುಕ್ ರಿಟೇಲರ್ ಫ್ಲಿಪ್‌ಕಾರ್ಟ್‌ನ್ನು ಪ್ರಾರಂಭಿಸಿದರು. ಇಬ್ಬರ ಹೆಸರಿಯಲ್ಲಿಯೂ ಬನ್ಸಾಲಿ ಇದ್ದರೂ ಅವರು ಯಾವುದೇ ಕುಟುಂಬದ ಸಂಬಂಧವನ್ನು ಹೊಂದಿರಲಿಲ್ಲ. $6,000 ಹಣವನ್ನು ಒಟ್ಟುಗೂಡಿಸಿಕೊಂಡು ಬಿಸಿನೆಸ್‌ನ್ನು ಮಾಡಲು ಪ್ರಾರಂಭಿಸಿದರು.
ಫ್ಲಿಪ್‌ಕಾರ್ಟ್‌ನ್ನು ಪ್ರಾರಂಭಿಸುವ ಮೊದಲು ಬಿನ್ನಿ ಅವರನ್ನು ಗೂಗಲ್ ಎರಡು ಬಾರಿ ಕೆಲಸದ ಹಿನ್ನೆಲೆಯಲ್ಲಿ ತಿರಸ್ಕರಿಸಿತ್ತು. ಅಮೆಜಾನ್‌ನಲ್ಲಿ ಕೆಲಸಕ್ಕೆ ಸೇರುವ ಮೊದಲು 9 ತಿಂಗಳು ಅಲ್ಲಿ ಕಳೆದಿದ್ದರು. ಬಿನ್ನಿ ಬನ್ಸಾಲಿ ಹಾಗೂ ಸಹೋದ್ಯೋಗಿ ಸಚಿನ್ ಬನ್ಸಾಲಿ ಅವರು ಮೊದಲ ಬಾರಿಗೆ ಒಂದೇ ರೀತಿಯ ಸರ್ಚ್ ಎಂಜಿನ್ ಅನ್ನು ಅಭಿವೃದ್ಧಿಪಡಿಸಲು ಯೋಜಿಸಿದಾಗ ಭಾರತದಲ್ಲಿ ಇ-ಕಾಮರ್ಸ್ ಉದ್ಯಮಗಳು ಅಷ್ಟೊಂದು ಇರಲಿಲ್ಲ. ಆ ಸಂದರ್ಭದಲ್ಲಿ ಅವರು 2007ರಲ್ಲಿ ಅಮೆಜಾನ್ ಅನ್ನು ತೊರೆದು ಫ್ಲಿಪ್‌ಕಾರ್ಟ್ ಎಂಬ ಆನ್‌ಲೈನ್ ಸ್ಟೋರ್ ಅನ್ನು ಪ್ರಾರಂಭಿಸಿದರು.
ವೆಬ್‌ಸೈಟ್ ಕಂಪೆನಿ ಕ್ಷೇತ್ರದ ಅತ್ಯಂತ ದೊಡ್ಡ ವ್ಯಾಪಾರ ಡೀಲ್ ನಡೆಯುವ ಮೂಲಕ ವಾಲ್‌ಮಾರ್ಟ್ $16 ಬಿಲಿಯನ್ ಅನ್ನು ಪಾವತಿಸುವ ಮೂಲಕ ಫ್ಲಿಪ್‌ಕಾರ್ಟ್‌ನ 77% ಪಾಲನ್ನು ಖರೀದಿಸಿದೆ. ಸಚಿನ್ ಬನ್ಸಾಲಿ ಕೂಡ ತಮ್ಮ ಸಣ್ಣ ಷೇರನ್ನು ಕೂಡ ಮಾರಾಟ ಮಾಡುವ ಮೂಲಕ $1 ಬಿಲಿಯನ್ ಹಣವನ್ನು ಪಡೆದುಕೊಂಡರು.
ಸಚಿನ್ ಆಸ್ತಿ ಮೌಲ್ಯ, ಫೋರ್ಬ್ಸ್ ಪ್ರಕಾರ, ಸಚಿನ್ ಬನ್ಸಾಲಿ ಅವರ ನಿವ್ವಳ ಆಸ್ತಿ ಮೌಲ್ಯ: ಸಸಚಿನ್ ಬನ್ಸಾಲಿ ಅವರು $ 1.3 ಬಿಲಿಯನ್(1,06,20,05,10,000) ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ.


Click it and Unblock the Notifications