ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಹಿನ್ನಲೆ ನೋಡಿದಾಗ ಅವರು ಅದಕ್ಕಾಗಿ ಪಟ್ಟ ಶ್ರಮ ಬಹಳ ದೀರ್ಘಾವಧಿಯಾಗಿರುತ್ತದೆ. ಆದರೆ ಉದ್ಯಮಿ ಸಾಗರ್ ಗುಪ್ತಾ ಅವರು ಅಲ್ಪಾವಧಿಯಲ್ಲಿ ಸಾಧಿಸಿ ತೋರಿಸಿರುವುದು ಅನೇಕರು ಕಷ್ಟಸಾಧ್ಯ.
ಸಿಎ ಆಗಬೇಕೆಂದು ಬಯಸಿದ್ದ ಸಾಗರ್ ಗುಪ್ತಾ ದೆಹಲಿ ವಿಶ್ವವಿದ್ಯಾನಿಲಯದಿಂದ ಬಿ.ಕಾಂ ಪೂರ್ಣಗೊಳಿಸಿದ ಒಂದು ವರ್ಷದ ಬಳಿಕ, ಅವರು ತಮ್ಮ ತಂದೆಯೊಂದಿಗೆ ವ್ಯವಹಾರದಲ್ಲಿ ಕೈ ಜೋಡಿಸಿದರು. ಸಾಗರ್ ಗುಪ್ತಾ ಅವರ ತಂದೆ ಸಿಪಿ ಗುಪ್ತಾ ಮೂರು ದಶಕಗಳ ಕಾಲ ಸೆಮಿಕಂಡಕ್ಟರ್ ವ್ಯವಹಾರದಲ್ಲಿ ತೊಡಗಿದ್ದು 2017 ರಲ್ಲಿ ಇದನ್ನು ಸಂಪೂರ್ಣವಾಗಿ ಬದಲಾಯಿಸಿ ಎಲ್ಇಡಿ ಟೆಲಿವಿಷನ್ ಗಳ ಉತ್ಪಾದನಾ ಘಟಕವನ್ನು ಪ್ರಾರಂಭಿಸಿದರು.

ಸಾಗರ್ ಅವರು ಉತ್ಪಾದನಾ ಉದ್ಯಮಕ್ಕೆ ಬರಲು ಬಯಸಿದ್ದು, ಅವರ ತಂದೆ ಕಂಪನಿ ಆರಂಭಿಸಿದಾಗ ಅವರು ಬಯಸಿದಂತೆ ಸುವರ್ಣಾವಕಾಶ ಒದಗಿಬಂತು. 2019 ರಲ್ಲಿ, ಅವರು ತಮ್ಮ ಕಂಪನಿಯನ್ನು ನೋಯ್ಡಾದಲ್ಲಿ ಪ್ರಾರಂಭಿಸಿದರು. ಆದರೆ ಇದುಅವರಂದುಕೊಂಡಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರೆ ತಂದೆಗೆ ಉದ್ಯಮದಲ್ಲಿ ಒಂದಷ್ಟು ಜನರ ಸಂಪರ್ಕವಿದ್ದದ್ದು ಅವರಿಗೆ ಸಹಾಯ ಮಾಡಿತು.
ಹೀಗಾಗಿ ಅವರು Samsung, Toshiba ಮತ್ತು Sony ನಂತಹ ಬ್ರ್ಯಾಂಡ್‌ಗಳಿಗೆ ಎಲ್ಇಡಿ ಟೆಲಿವಿಷನ್ ಗಳ ಉತ್ಪಾದನೆಯನ್ನು ಪ್ರಾರಂಭಿಸಿದರು. ಎಲ್ಇಡಿ ಉತ್ಪಾದನಾ ಉದ್ಯಮವೆಂದರೇ ಹೇಳಬೇಕೆ, ಯಾಕೆಂದರೆ ಹಿಂದಿನಿಂದ ಈ ಕ್ಷೇತ್ರದಲ್ಲಿ ಚೀನಾ ದೇಶ ಪ್ರಾಬಲ್ಯವನ್ನು ಹೊಂದಿತ್ತು. ಆದರೆ ಈ ಕ್ಷೇತ್ರದಲ್ಲಿ ಭಾರತದಲ್ಲಿ ಬಲಪಡಿಸುತ್ತಿದ್ದಾರೆ ಸಾಗರ್ ಗುಪ್ತಾ.
ಇವರ ಸಂಸ್ಥೆಯೂ ಸುಮಾರು 100 ಕಂಪನಿಗಳಿಗೆ 24ರಿಂದ 60 ಇಂಚುಗಳವರೆಗೆ ಎಲ್‌ಸಿಡಿ ಟಿವಿ, ಎಲ್‌ಇಡಿ ಟಿವಿ ಮತ್ತು ಹೈ-ಎಂಡ್ ಟಿವಿಗಳನ್ನು ತಯಾರಿಸುತ್ತದೆ. ತಿಂಗಳಿಗೆ ಸುಮಾರು 1 ಲಕ್ಷ ಟಿವಿಯನ್ನು ತಯಾರಿಸುತ್ತಿದ್ದು ಕೆಲವೇ ವರ್ಷಗಳಲ್ಲಿ ಲಕ್ಷಾಂತರ ದೂರದರ್ಶನಗಳನ್ನು ಮಾರಾಟ ಮಾಡಿದೆ.
"ವೆಚ್ಚಗಳು ಮತ್ತಷ್ಟು ತಗ್ಗಿಸಿ ಟಿವಿಗಳನ್ನು ಜಗತ್ತಿಗೆ ತಲುಪಿಸುವುದು ತಮ್ಮ ಗುರಿಯಾಗಿದೆ" ಎಂದು ಸಾಗರ್ ಅವರು ಯುವರ್ ಸ್ಟೋರಿಗೆ ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಹೇಳಿದ್ದರು. ಟೈರ್-2 ಮತ್ತು ಟೈರ್-3 ನಗರಗಳು ಅವರ ದೊಡ್ಡ ಮಾರುಕಟ್ಟೆಯಾಗಿದ್ದು 2022-23ರಲ್ಲಿ ಅವರ ಕಂಪನಿಯ ಆದಾಯ 600 ಕೋಟಿ ರೂಪಾಯಿ ಗಳಿಸಿದೆ.
ಟಿವಿ ಕ್ಷೇತ್ರದಲ್ಲಿ ಮಾತ್ರವಲ್ಲದೇ ಕಂಪನಿಯು ವಾಷಿಂಗ್ ಮೆಷಿನ್‌ಗಳು, ಸ್ಪೀಕರ್‌ಗಳು ಮತ್ತು ಸ್ಮಾರ್ಟ್ ವಾಚ್‌ಗಳಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸಲು ಬಯಸುತ್ತದೆ. ವರದಿಗಳ ಪ್ರಕಾರ, ಈ ಉದ್ದೇಶಕ್ಕಾಗಿ ನೋಯ್ಡಾದಲ್ಲಿ 1,000 ಕೋಟಿ ರೂ. ಇನ್ವೆಸ್ಟ್ ಮಾಡಲು ಬಯಸಿದ್ದು, ಅದಕ್ಕಾಗಿ ಮೊದಲು ಜಮೀನು, ಇಕ್ವಿಪ್ಮೆಂಟ್ ಮತ್ತು ಸೌಲಭ್ಯಗಗಳಿಗಾಗಿಯೇ ಖರೀದಿಸಲು 400 ಕೋಟಿ ರೂ.ಇನ್ವೆಸ್ಟ್ ಮಾಡಲಿದೆ.
ಪ್ರಸ್ತುತ ಸಾಗರ್ ಗುಪ್ತಾ ಸೋನೆಪತ್‌ನಲ್ಲಿ ಕಾರ್ಖಾನೆಯನ್ನು ಹೊಂದಿದ್ದು 1000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದಾರೆ. ಹೊಸ ಘಟಕದಲ್ಲಿ43 - 90 ಇಂಚುಗಳ ನಡುವಿನ ಗಾತ್ರದ ಟೆಲಿವಿಷನ್‌ಗಳನ್ನು ತಯಾರಿಸುವ ಯೋಜನೆ ಹಾಕಿಕೊಂಡಿದ್ದು. ಇಲ್ಲೂ 1500 ಜನರಿಗೆ ಉದ್ಯೋಗ ಕಲ್ಪಿಸುವ ಭರವಸೆ ಇದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications