ಡೆಲಿವೆರಿ ಲಾಜಿಸ್ಟಿಕ್ ಕಂಪನಿಯು ಶೇಕಡ 10ರಷ್ಟು ಆದಾಯದ ಕೊರತೆಯನ್ನು ದಾಖಲಿಸಿದೆ. ಆ ಮೂಲಕ ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು 1859 ಕೋಟಿ ರೂಪಾಯಿಗೆ ಕುಸಿದಿದೆ. ಜತೆಗೆ 158 ಕೋಟಿ ರೂಪಾಯಿ ನಷ್ಟವನ್ನೂ ದಾಖಲಿಸಿದೆ.
ಕಂಪನಿಯ ಮಾರುಕಟ್ಟೆ ಬಂಡವಾಳವು 26,332.12 ಕೋಟಿ ರೂಪಾಯಿ ಆಗಿದ್ದು, ಅದರ ಪೂರ್ವ ಐಪಿಒ ಮೌಲ್ಯವು 35,283 ಕೋಟಿ ರೂಪಾಯಿ ಡೆಲಿವೆರಿ ಕಂಪನಿಯನ್ನು 2011ರಲ್ಲಿ ಸಾಹಿಲ್ ಬರುವಾ, ಮೋಹಿತ್ ಟಂಡನ್, ಭವೇಶ್ ಮಂಗ್ಲಾನಿ ಹಾಗೂ ಕಪಿಲ್ ಭಾರತಿ ಅವರು ಸ್ಥಾಪಿಸಿದ್ದಾರೆ. ಅಂದಿನಿಂದ ಸಾಹಿಲ್ ಬರುವಾ ಅವರು ಕಂಪನಿಯ ಸಿಇಒ ಆಗಿದ್ದಾರೆ. ಅವರ ಯಶಸ್ವಿ ಉದ್ಯಮದ ಸ್ಟೋರಿ ಇಲ್ಲಿದೆ.

ಬರುವಾ ಅವರು ಕರ್ನಾಟಕದ ಎನ್‌ಐಟಿಯಿಂದ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಬಳಿಕ ಬೆಂಗಳೂರಿನ ಐಐಎಂನಲ್ಲಿ ಎಂಬಿಎ ಪದವಿ ಮಾಡಿದ್ದಾರೆ. ಮುಂದೆ ರಾಷ್ಟ್ರ ರಾಜಧಾನಿಯ ಅಪಾರ್ಟ್‌ಮೆಂಟ್‌ನಲ್ಲಿ ಕಂಪನಿಯನ್ನು ಪ್ರಾರಂಭಿಸಲಾಯಿತು.
ಮೊದಲು ಈ ಕಂಪನಿಯು ಇ-ಕಾಮರ್ಸ್ ಸಂಸ್ಥೆಗಳಿಗೆ ಕೊರಿಯರ್ ಸೇವೆ ನೀಡುವುದನ್ನು ಪ್ರಾರಂಭಿಸಿತ್ತು. ಕಡಿಮೆ ವೆಚ್ಚದ ಇಂಟರ್‌ನೆಟ್ ಸೇವೆಯಿಂದಾಗಿ ಗ್ರಾಹಕರ ಖರೀದಿ ಮನೋಭಾವದಲ್ಲಿನ ಬದಲಾವಣೆಯಿಂದಾಗಿ ಹೋಮ್ ಡೆಲಿವರಿಯು ಹೆಚ್ಚಿನ ಬೇಡಿಕೆ ಪಡೆದುಕೊಳ್ಳಲಾರಂಭಿಸಿತ್ತು.
ಅದರ ಅವಕಾಶವನ್ನು ಪಡೆದುಕೊಂಡು ಕಂಪನಿಯು ವೇಗವಾಗಿ ಬೆಳೆಯಲಾರಂಭಿಸಿತು. ಏಕೆಂದರೆ, ಆ ಸಮಯದಲ್ಲಿ ಇ-ಕಾಮರ್ಸ್ ಕಂಪನಿಗಳಿಗೆ ವಿತರಣೆ ಸೇವೆ ಒದಗಿಸುವುದಕ್ಕೆ ಹೆಚ್ಚಿನ ಕಂಪನಿಗಳು ಇರಲಿಲ್ಲ. ಇದನ್ನೇ ಬರುವಾ ಹಾಗೂ ಅವರ ಸ್ನೇಹಿತರು ಒಂದು ಉತ್ತಮ ಅವಕಾಶವಾಗಿ ಕಂಡುಕೊಂಡರು.
ಈ ಕಂಪನಿ ಪ್ರಾರಂಭಗೊಂಡ ಎರಡು ವರ್ಷಗಳ ನಂತರ ಫ್ಯಾಷನ್ ಚಿಲ್ಲರೆ ವ್ಯಾಪಾರ ಮತ್ತು ದಿನಸಿ ಕ್ಷೇತ್ರಗಳಿಗೂ ಪ್ರವೇಶ ಪಡೆಯಿತು. ಅದಾದ ಬಳಿಕ ಅಮೆಜಾನ್ ಪ್ರೈಮ್ ನೌ ಹಾಗೂ ಫ್ಲಿಪ್‌ಕಾರ್ಟ್‌ನೊಂದಿಗೆ ಸೇವೆ ಒದಗಿಸಲಾರಂಭಿಸಿತು. ಸಾಹಿಲ್ ಅವರು 2008ರಲ್ಲಿ ಐಐಎಂನಿಂದ ಪಾಸ್‌ಔಟ್ ಆಗಿದ್ದಾರೆ.
ಅವರು ಅತ್ಯಂತ ಪ್ರತಿಭಾವಂತರಾಗಿದ್ದು, ಎಲ್ಲದರಲ್ಲಿಯೂ ಆಲ್‌ರೌಂಡ್ ಗೋಲ್ಡ್ ಮೆಡಲಿಸ್ಟ್ ಕೂಡ ಆಗಿದ್ದಾರೆ. 2005ರಲ್ಲಿ ಅವರು ಮೇರಿಲ್ಯಾಂಡ್ ವಿಶ್ವವಿದ್ಯಾಲಯಕ್ಕೆ ಹೋಗಿದ್ದು, ಅಲ್ಲಿ ಅವರು ನಾಲ್ಕು ತಿಂಗಳು CALCE ಲ್ಯಾಬ್ಸ್‌ನಲ್ಲಿ ಇಂಟರ್ನ್ ಆಗಿ ಕೆಲಸ ಮಾಡಿದ್ದರು. ಬಳಿಕ ಅವರು ಬೆಂಗಳೂರಿನ ಸ್ಟೇಗ್ಲಾಡ್ ಎಂಬ ಕಂಪನಿಯಲ್ಲಿ ಕೆಲಸ ಮಾಡಿರುವುದಾಗಿ 2007ರಲ್ಲಿ ಟಾಕಿ ಸ್ಟಾರ್ಟಪ್ ವರದಿ ಮಾಡಿದೆ.
ಅಲ್ಲದೆ ಬರುವಾ ಅವರು ಬೈನ್ ಅಂಡ್ ಕಂಪನಿಯಲ್ಲಿ ಸಮ್ಮರ್ ಅಸೋಸಿಯೇಟ್ ಆಗಿ ಮೂರು ತಿಂಗಳು ಕೆಲಸ ಮಾಡಿದ್ದಾರೆ. 2008ರಲ್ಲಿ ಅವರು ಅಲ್ಲಿ ಪೂರ್ಣಾವಧಿ ಉದ್ಯೋಗಿಯಾಗಿ ಕೆಲಸ ಮಾಡಿದ್ದಾರೆ. ಒಂದು ವರ್ಷದ ಬಳಿಕ ಅವರು ಹಿರಿಯ ಸಹಾಯಕ ಸಲಹೆಗಾರರಾದರು.
ಬೈನ್ ಅಂಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿರಬೇಕಾದರೆ ಭಾರತದಲ್ಲಿ ಆನ್‌ಲೈನ್ ರಿಟೇಲ್ ಉದ್ಯಮವು ವಿಪುಲ ಅವಕಾಶವನ್ನು ತೆರೆದುಕೊಂಡಿದೆ ಎಂಬುದನ್ನು ಮನಗಂಡರು. ಜತೆಗೆ ಲಾಜಿಸ್ಟಿಕ್ ಉದ್ಯಮವು ವಿಘಟಿತವಾಗಿದ್ದು ಮತ್ತು ತುಂಬಾ ಹಳೆಯದಾಗಿದೆ ಎಂಬುದನ್ನು ಅರ್ಥಮಾಡಿಕೊಂಡಿದ್ದರು.
ಈ ಉದ್ಯಮ ವಲಯದಲ್ಲಿ ವಿಪುಲ ಮಾರುಕಟ್ಟೆ ಸಾಮರ್ಥ್ಯ ಇರುವುದನ್ನು ಗಮನಿಸಿದ ಅವರು ಲಾಜಿಸ್ಟಿಕ್ ಹಾಗೂ ಕೈಗಾರಿಕೆಗಳ ನಡುವಿನ ಅಂತರ ಕಡಿಮೆಗೊಳಿಸುವತ್ತ ಗಮನಹರಿಸಿದರು. ಅದರಂತೆ ಮೋಹಿತ್ ಟಂಡನ್, ಭವೇಶ್ ಮಂಗ್ಲಾನಿ, ಸೂರಜ್ ಸಹರಾನ್ ಹಾಗೂ ಕಪಿಲ್ ಭಾರತಿ ಅವರೊಂದಿಗೆ ಡೆಲಿವೆರಿ ಕಂಪನಿಯನ್ನು ಸ್ಥಾಪಿಸಿದರು.
ಅವರ ಈ ಕಂಪನಿ ಹುಟ್ಟಿಕೊಂಡ ಸ್ಥಳ ಒಂದು ಅಪಾರ್ಟ್‌ಮೆಂಟ್ ಆಗಿತ್ತು. ನಂತರ ಮೊದಲ ಕಾರ್ಪೊರೇಟ್ ಕಚೇರಿಯನ್ನು ಗುರುಗ್ರಾಮ್‌ನಲ್ಲಿ ಪ್ರಾರಂಭಿಸಲಾಯಿತು. ಆರಂಭದ ದಿನಗಳಲ್ಲಿ ಕೇವಲ ನಾಲ್ಕು ಮಂದಿ ವಿತರಣಾ ಮಂದಿಯನ್ನು ಹೊಂದಿತ್ತು. ಆರಂಭದಲ್ಲಿ ಸ್ಥಳೀಯ ರೆಸ್ಟೊರೆಂಟ್‌ಗಳಿಗೆ ಆಹಾರವನ್ನು ವಿತರಣೆ ಮಾಡುವುದನ್ನು ಪ್ರಾರಂಭಿಸಿದ್ದರು ಎಂದು ವೆಬ್‌ಸೈಟ್‌ವೊಂದು ವರದಿ ಮಾಡಿದೆ.
ಅವರ ಯುಎಸ್‌ಪಿ ಕೇವಲ ಅರ್ಧ ಗಂಟೆಯಲ್ಲಿ ಆಹಾರವನ್ನು ಗ್ರಾಹಕರಿಗೆ ತಲುಪಿಸುತ್ತಿತ್ತು. ಮುಂದೆ ಅದು ಇ-ಕಾಮರ್ಸ್ ಸೈಟ್‌ಗಳಿಗೆ ವಿಸ್ತರಣೆಯಾಯಿತು. ಪ್ರಾರಂಭದ ನಾಲ್ಕು ವರ್ಷಗಳಲ್ಲಿ ಕಂಪನಿಯು ಬಹಳ ವೇಗವಾಗಿ ಬೆಳೆಯಿತು. ಅವರ ಮೊದಲ ಗ್ರಾಹಕ ಸಂಸ್ಥೆ ಅರ್ಬನ್ ಟಚ್ ಆಗಿತ್ತು.
ನಂತರ ಪ್ರಮುಖ ಇ-ಕಾಮರ್ಸ್ ಕ್ಲೈಂಟ್‌ಗಳಿಗೆ ಸೇವೆ ಒದಗಿಸಲು ಪ್ರಾರಂಭಿಸಿದರು. ಆ ಮೂಲಕ 2019ರಲ್ಲಿ ಒಂದು ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿ ಬೆಳೆಯಿತು. ಪ್ರಸ್ತುತ ಈ ಕಂಪನಿಯ ಯುಎಸ್‌ಪಿ ಅಂದರೆ ಇ-ಕಾಮರ್ಸ್ ಕಂಪನಿಗಳು ತಮ್ಮ ಸಾಗಣೆಯನ್ನು ಸಂಪೂರ್ಣವಾಗಿ ಟ್ರ್ಯಾಕ್ ಮಾಡಬಹುದು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications