ಭಾರತದ ಅತಿದೊಡ್ಡ ಪೈಪ್‌ಗಳ ಬ್ರಾಂಡ್‌ನ ಬಿಲಿಯನೇರ್ ಮಾಲೀಕರಾದ ಸಂದೀಪ್ ಇಂಜಿನಿಯರ್ ಅವರ ಜೀವನವು ಹಲವು ಏರಿಳಿತಗಳನ್ನು ಕಂಡಿವೆ. ಆದರೆ ಯಶಸ್ವಿ ಉದ್ಯಮಿ ಆಗಬೇಕೆಂಬ ಅವರ ನಿರಂತರ ಪರಿಶ್ರಮ ಹಾಗೂ ಇಚ್ಛೆಯು ಅವರನ್ನು ಯಶಸ್ವಿ ಉದ್ಯಮಿಯನ್ನಾಗಿ ರೂಪಿಸುವಲ್ಲಿ ಮೇಲುಗೈ ಸಾಧಿಸಿದೆ. ಮಾಜಿ ಫಾರ್ಮಾ ಉದ್ಯೋಗಿ ಹಾಗೂ ವಿಫಲಗೊಂಡ ಸುವಾಸನೆ ಭರಿತ ಇಸ್ಬುಗೋಲ್ ವಿತರಕ, ಆಸ್ಟ್ರಲ್ ಪೈಪ್ಸ್‌ನ ಸ್ಥಾಪಕ ಸಂದೀಪ್ ಪಿ. ಇಂಜಿನಿಯರ್ ಅವರು 2019ರಲ್ಲಿ ಅಸ್ಕರ್ ಬಿಲಿಯನೇರ್ಸ್ ಕ್ಲಬ್ ಅನ್ನು ಪ್ರವೇಶಿಸಿದ್ದಾರೆ.
ಅವರು ಪ್ರಾರಂಭಿಸಿದ ಬ್ರಾಂಡ್ ಹಿಟ್ ದಬಾಂಗ್ ಚಲನಚಿತ್ರ ಸರಣಿಯಿಂದ ಹಾಗೂ ಬಾಲಿವುಡ್ ತಾರೆಯರಾದ ಸಲ್ಮಾನ್‌ಖಾನ್ ಮತ್ತು ರಣವೀರ್ ಸಿಂಗ್ ಅವರ ಪ್ರಮೋಷನ್‌ನಿಂದ ಮನೆಮಾತಾಗಿದೆ. 57 ವರ್ಷದ ಸಂದೀಪ್ ಅವರು ಬಿಲಿಯನೇರ್ ಆದ ಬಳಿಕ ಬಿಲಿಯನೇರ್ ಆಗುವುದು ನನ್ನ ಆಕಾಂಕ್ಷೆಯಲ್ಲ ಎಂದು ಫೋರ್ಬ್ಸ್‌ಗೆ ಹೇಳಿದ್ದರು. ಇದೆಲ್ಲವೂ ಬಹಳ ವೇಗವಾಗಿ ಸಂಭವಿಸಿದೆ ಎಂದು ಅವರು ಘೋಷಿಸಿದ್ದಾರೆ. ಈ ನಡುವೆ ಸಂದೀಪ್ ತನ್ನ 20ರ ದಶಕದ ಪ್ರಾರಂಭದಲ್ಲಿ ವಿಫಲಗೊಂಡ ಬಿಸಿನೆಸ್‌ನಿಂದ 5,000ರೂ.ವನ್ನು ಕಳೆದುಕೊಂಡು ಕೈಯಲ್ಲಿ ಏನೂ ಹಣವಿಲ್ಲದ ಪರಿಸ್ಥಿತಿಗೆ ತಲುಪಿದ್ದರು.

ಸಂದೀಪ್ ಅವರ ಕಥೆಯು 1980ರ ದಶಕದಿಂದ ಪ್ರಾರಂಭಗೊಳ್ಳುತ್ತದೆ. ಗುಜರಾತ್‌ನ ಅಹಮದಾಬಾದ್‌ನ ಕ್ಯಾಡಿಲಾ ಲ್ಯಾಬ್ಸ್‌ನಲ್ಲಿ ಫಾರ್ಮಾ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಅವರು ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಬಿಸಿನೆಸ್ ಜಗತ್ತಿಗೆ ಪ್ರವೇಶಿಸಲು ನಿರ್ಧರಿಸಿದರು. ಆ ಸಮಯದಲ್ಲಿ ಅವರಿಗೆ ವ್ಯಾಪಾರ ಮಾಡುವುದರ ಅನುಭವ ಅಥವಾ ಹಿನ್ನೆಲೆ ಇರಲಿಲ್ಲ. ಅವರ ಮೊದಲ ವೆಂಚರ್ ಆದ ಸುವಾಸನೆಭರಿತ ಇಸ್ಬುಗೋಲು ವಿತರಣೆಯು ಸಂದೀಪ್‌ಗೆ ಭಾರೀ ಹಿನ್ನಡೆಯನ್ನು ಉಂಟು ಮಾಡುವ ಮೂಲಕ ವ್ಯವಹಾರಿಕವಾಗಿ ದೊಡ್ಡ ಹೊಡೆತವನ್ನು ನೀಡಿತ್ತು.
ಇಂಥಹ ಸಮಯದಲ್ಲಿ ಬಿಲಿಯನೇರ್ ಉದ್ಯಮಿ ಪಂಕಜ್ ಪಟೇಲ್ ಅವರು ಸಂದೀಪ್‌ಗೆ ಮಾರ್ಗದರ್ಶನ ನೀಡಲು ಪ್ರಾರಂಭಿಸಿದಾಗ ಅವರ ಜೀವನದಲ್ಲಿ ಮೊದಲ ತಿರುವು ಲಭಿಸಿದೆ. ಅವರು ಸಕ್ರೀಯ ಔಷಧೀಯ ಪದಾರ್ಥ(API)ಗಳ ವ್ಯವಹಾರವನ್ನು ಪ್ರವೇಶಿಸುವ ಮೂಲಕ ತಮ್ಮ ಹೋರಾಟವನ್ನು ಮುಂದವರಿಸಿದರು. ಆದರೆ ಸಂದೀಪ್ ಇಂಜಿನಿಯರ್ ಅವರು ತಯಾರಿಸಿದ ಉತ್ಪನ್ನಗಳು ಬಳಕೆಯಲ್ಲಿಲ್ಲದ ಕಾರಣ ಅವುಗಳನ್ನು ಬದಲಾಯಿಸಬೇಕಾಯಿತು.
ಇದು ಸಿಪಿವಿಸಿ ಪೈಪ್ಸ್‌ನೊಂದಿಗೆ ಜಾಕ್‌ಪಾಟ್ ಹೊಡೆಯುವವರೆಗೆ ಕೊಂಡೊಯ್ದಿದೆ. ಯುಎಸ್‌ನ ಹೊಸ ಆವಿಷ್ಕಾರವು 1998ರಲ್ಲಿ ಸಂದೀಪ್ ಇಂಜಿನಿಯರ್ ಅವರನ್ನು ಆಸ್ಟ್ರಲ್ ಪಾಲಿ ಟೆಕ್ನಿಕ್ ಎಂಬ ಹೊಸ ವ್ಯವಹಾರವನ್ನು ಕಂಡುಕೊಳ್ಳಲು ಪ್ರೇರೇಪಿಸಿತ್ತು.
ವ್ಯಾಪಾರದಲ್ಲಿ ಹೆಚ್ಚಿನವರು ಆರಂಭದಲ್ಲಿ ವಿಶ್ವಾಸವನ್ನು ಹೊಂದಿರುವುದಿಲ್ಲ. ಆದರೆ ಸಂದೀಪ್ ಅವರು ನಿಧಾನಕ್ಕೆ ಪ್ರಬಲವಾಗಿ ಬೆಳವಣಿಗೆ ಸಾಧಿಸುತ್ತ 2000ರ ಆರಂಭದ ಹೊತ್ತಿಗೆ ಅವರ ಬ್ರಾಂಡ್‌ನ್ನು ಸ್ಥಾಪಿಸಿದರು. ಆದರೆ 2010ರ ದಶಕದ ಆರಂಭದಲ್ಲಿ ಅವರ ಮಕ್ಕಳಾದ ಕೈರವ್ ಮತ್ತು ಸೌಮ್ಯ ಅವರ ನೆರವಿನಿಂದ ಸಂದೀಪ್ ಅವರು ಆಸ್ಟ್ರಲ್ ಬ್ರಾಂಡ್ ಅನ್ನು ಮನೆಮಾತನ್ನಾಗಿ ಮಾಡಿದರು.
ಅದು ಬ್ಲಾಕ್‌ಬಾಸ್ಟರ್ ಸಲ್ಮಾನ್‌ಖಾನ್ ಅವರ ದಬಾಂಗ್‌ನಲ್ಲಿನ ಸಹ ಪ್ರಚಾರ ಹಾಗೂ ಭವಿಷ್ಯದ ಬ್ರಾಂಡ್ ಅನುಮೋದನೆಗಳಿಂದ ಹೆಚ್ಚಿನ ಜನಪ್ರಿಯತೆಯನ್ನು ಪಡೆಯಿತು. 2023ರ ಏಪ್ರಿಲ್ ವರದಿ ಪ್ರಕಾರ ಸಂದೀಪ್ ಇಂಜಿನಿಯರ್ ಅವರ ನಿವ್ವಳ ಆಸ್ತಿ ಮೌಲ್ಯವು 21,000 ಕೋಟಿ (2.6 ಬಿಲಿಯನ್ ಡಾಲರ್) ಆಗಿ ಉದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆ ಹಾಗೂ ಯಶಸ್ಸನ್ನು ಗಳಿಸಿದ್ದಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications