"ಯಶಸ್ಸು" ನಿರ್ಧಾರವಾಗುವುದು ನಿಮ್ಮ ಪ್ರಯಾಣವನ್ನು ಹೇಗೆ ಆರಂಭಿಸುತ್ತೀರಿ ಎಂಬುದರ ಮೇಲೆ ಅಲ್ಲ, ಬದಲಾಗಿ ನಿಮ್ಮ ಸಾಮರ್ಥ್ಯ, ಇಚ್ಛಾಶಕ್ತಿ, ಪರಿಶ್ರಮದಿಂದ. "ಯಶಸ್ಸು: ಎಂಬುವುದು ಯಾರಿಗೂ ಸುಲಭವಾಗಿ ಒಲಿದು ಬರುವುದಿಲ್ಲ, ಬದಲಾಗಿ ವ್ಯಕ್ತಿಯು ಬದ್ಧತೆ, ಶ್ರದ್ಧೆ ಮತ್ತು ತನ್ನಲ್ಲಿ ಅಚಲವಾದ ನಂಬಿಕೆಯಿಂದ ಅದನ್ನು ಸಾಧಿಸಬಹುದು.
ಡೆಲಾಯ್ಟ್‌ನ ಗ್ಲೋಬಲ್ ಸಿಇಒ ಪುನೀತ್ ರೆಂಜೆನ್ ಇದಕ್ಕೆ ಒಂದು ಪ್ರಮುಖ ಉದಾಹರಣೆಯಾಗಿದ್ದಾರೆ. ಅವರು ಸಹಾಯಕ ಸಲಹೆಗಾರರಿಂದ ತಮ್ಮ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಏರಿದವರಾಗಿದ್ದಾರೆ. ಪುನೀತ್ ರೆಂಜೆನ್ ಅವರು ಹರಿಯಾಣದ ರೋಹ್ಟಕ್‌ನಲ್ಲಿ ಹುಟ್ಟಿ ಬೆಳೆದಿದ್ದು, ಅವರ ಕಥೆಯು ನಮಗೆ ಗಿವ್ ಆಪ್ ಮಾಡದಿರುವುದು ಮತ್ತು ಛಲ ಬಿಡದೆ ಸಾಧಿಸುವ ಪ್ರೇರಣೆಯನ್ನು ಒದಗಿಸುತ್ತದೆ.

ಅವರ ನಂಬಲಸಾಧ್ಯವಾದ ಯಶಸ್ಸು ನಮಗೆ ವೃತ್ತಿಪರ ಪ್ರಪಂಚದ ಸ್ವರೂಪದ ಹಾಗೂ ಅವರ ಕಠಿಣ ಪರಿಶ್ರಮ ಮತ್ತು ಅಚಲವಾದ ಸಮರ್ಪಣೆಯ ಬಗ್ಗೆ ನಮಗೆ ಪ್ರಮುಖ ಪಾಠವಾಗುತ್ತದೆ.
ಪುನೀತ್ ರೆಂಜೆನ್ ಯಾರು?
ಹರಿಯಾಣದ ರೋಹ್ಟಕ್ ನಿವಾಸಿಯಾದ ಪುನೀತ್ ಆರ್ಥಿಕ ತೊಂದರೆಯಿಂದ ಶಾಲೆಯನ್ನು ಬಿಡಬೇಕಾಯಿತು. ಆದರೆ, ಅವರೊಳಗಿದ್ದ ಅತೃಪ್ತತೆ ಮತ್ತೆ ರೋಹ್ಟಕ್‌ನಲ್ಲಿ ತನ್ನ ಪದವಿಯನ್ನು ಪೂರ್ಣಗೊಳಿಸಲು ಕಾರಣವಾಯಿತು. ಮುಂದೆ ಪುನೀತ್ ಅವರು 1984 ರಲ್ಲಿ ಗೌರವಾನ್ವಿತ ರೋಟರಿ ಸ್ಕಾಲರ್‌ಶಿಪ್ ಪಡೆದರು. ಹೀಗಾಗಿ ಅವರಿಗೆ ಅಮೇರಿಕಾದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಸಾಧ್ಯವಾಯಿತು.
ಆದರೆ ಅಮೇರಿಕಾ ಇಂಗ್ಲೀಷ್ ಉಚ್ಚಾರಣೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಿ ಕಂಡಿತು. ಈ ಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಅವರು ತಮ್ಮ ಕಾಲೇಜು ವರ್ಷಗಳಲ್ಲಿ ಉಪನ್ಯಾಸಕರ ಒಂದು ಪದವನ್ನೂ ಮಿಸ್ ಆಗಬಾರದೆಂದು ಅವರು ಇಡೀ ಉಪನ್ಯಾಸವನ್ನು ರೆಕಾರ್ಡ್ ಮಾಡಲು ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು.
ಮುಂದೆ ಸ್ಥಳೀಯ ಪಬ್ಲಿಕೇಷನ್ ನಲ್ಲಿ ಟಾಪ್ 10 ವಿದ್ಯಾರ್ಥಿಗಳಲ್ಲಿ ಹೆಸರಿಸಲ್ಪಟ್ಟ ಪ್ರಕಟನೆಯಲ್ಲಿ ಪುನೀತ್ ಕೂಡಾ ಒಬ್ಬರಾಗಿದ್ದರು. ಡೆಲಾಯ್ಟ್ ಪಾಲುದಾರರು ಇದನ್ನು ಗಮನಿಸಿದಾಗ ಪುನೀತ್ ಅವರ ಹಾದಿಯು ನಂಬಲಾಗದ ತಿರುವನ್ನು ಪಡೆದುಕೊಂಡಿತು. 1989 ರಲ್ಲಿ ನಡೆದ ನಿರ್ಣಾಯಕ ಸಭೆಯ ಬಳಿಕ ಪುನೀತ್ ರೆಂಜೆನ್ ಡೆಲಾಯ್ಟ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಪುನೀತ್ ತಮ್ಮ ವೃತ್ತಿಜೀವನದಲ್ಲಿ ಶ್ರದ್ಧೆ ಮತ್ತು ಪರಿಶ್ರಮದಿಂದ ಪ್ರಗತಿ ಸಾಧಿಸಿ ಅಂತಿಮವಾಗಿ 2015 ರಲ್ಲಿ ಡೆಲಾಯ್ಟ್‌ನಲ್ಲಿ ಸಿಇಒ ಸ್ಥಾನಕ್ಕೆ ಏರಿದವರು. ಈ ಮೂಲಕ ಬಿಗ್ ಫೋರ್ ಅಂತಾರಾಷ್ಟ್ರೀಯ ವೃತ್ತಿಪರ ಸೇವಾ ಕಂಪನಿಗಳಲ್ಲಿ ಒಂದಾದ ಮೊದಲ ಏಷ್ಯನ್ ಅಮೇರಿಕನ್ ಆಗಿ ಇತಿಹಾಸವನ್ನು ನಿರ್ಮಿಸಿದರು.
ಡೆಲಾಯ್ಟ್‌ನ ಆದಾಯವನ್ನು ಹೆಚ್ಚಿಸುವಲ್ಲಿ ಮತ್ತು ವ್ಯಾಪಾರವನ್ನು ಹಿಂದೆಂದೂ ಕೇಳಿರದ ಯಶಸ್ಸಿನ ಮಟ್ಟಕ್ಕೆ ತರುವಲ್ಲಿ ಅವರ ನಿರ್ದೇಶನವು ನಿರ್ಣಾಯಕವಾಗಿತ್ತು. ಡೆಲಾಯ್ಟ್ ಗ್ಲೋಬಲ್ ಸಿಇಒ ಆಗಿ ಅವರ ನೇಮಕಾತಿಯನ್ನು 2019 ರಲ್ಲಿ ಹೆಚ್ಚುವರಿ ನಾಲ್ಕು ವರ್ಷಗಳವರೆಗೆ ಮುಂದುವರಿಸಿ ನಂತರ 2022 ರಲ್ಲಿ ಅವರನ್ನು ಗ್ಲೋಬಲ್ ಸಿಇಒ ಎಮೆರಿಟಸ್ ಎಂದು ಹುದ್ದೆಗೇರಿಸಲಾಯಿತು.
ಪುನೀತ್ ರೆಂಜೆನ್ ಸಂಸ್ಥೆಯ ಆದಾಯವೆಷ್ಟಿದೆ?
ಪುನೀತ್ ರೆಂಜೆನ್ ಉತ್ತಮ ಯಶಸ್ಸನ್ನು ಸಾಧಿಸಿದ್ದರೂ, ಅವರು ತಮ್ಮ ಪರಂಪರೆಯೊಂದಿಗೆ ಕೊಂಡಿ ಕಡಿದುಕೊಂಡಿಲ್ಲ. ಅವರು ತನ್ನ ಭಾರತೀಯ ವಾಸ್ತವತೆಯ ಪ್ರಜ್ಞೆಯನ್ನು ಕಾಪಾಡಿಕೊಳ್ಳುತ್ತಾರೆ. ಪ್ರಸ್ತುತ ಓರೆಗಾನ್‌ನ ಪೋರ್ಟ್‌ಲ್ಯಾಂಡ್‌ನಲ್ಲಿ ತನ್ನ ಹೆಂಡತಿ ಮತ್ತು ಮಗನೊಂದಿಗೆ ವಾಸಿಸುತ್ತಿರುವ ಪುನೀತ್ ರೆಂಜೆನ್, ವೈಯಕ್ತಿಕ ಮತ್ತು ವೃತ್ತಿಪರ ಪ್ರಯತ್ನಗಳನ್ನು ಹೇಗೆ ಯಶಸ್ವಿಯಾಗಿ ಸಮತೋಲನಗೊಳಿಸಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ.
2023 ರಲ್ಲಿ, ಸ್ಟ್ಯಾಟಿಸ್ಟಾ ವರದಿ ಪ್ರಕಾರ ಡೆಲಾಯ್ಟ್ ಜಾಗತಿಕವಾಗಿ ಸುಮಾರು 65 ಬಿಲಿಯನ್ ಡಾಲರ್ ಅಥವಾ 5.4 ಲಕ್ಷ ಕೋಟಿ ರೂಪಾಯಿ ಆದಾಯವನ್ನು ಗಳಿಸಿತು, ಇದು ಕಂಪನಿಯ ಇಲ್ಲಿಯವರೆಗಿನ ಅತ್ಯಂತ ಲಾಭದಾಯಕ ವರ್ಷವಾಗಿದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications