ಶಾರುಖ್ ಖಾನ್ ಅವರು ಖ್ಯಾತ ನಟರಷ್ಟೇ ಅಲ್ಲದೆ ಒಬ್ಬ ಉದ್ಯಮಿ ಕೂಡ ಹೌದು. ಅವರು ವಿವಿಧ ರೀತಿ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಕೆಕೆಆರ್ ತಂಡದಲ್ಲಿ ಶಾರುಖ್ ಖಾನ್ ಜತೆಗೆ ನಟಿ ಜೂಹಿ ಚಾವ್ಲಾ ಹಾಗೂ ಅವರ ಉದ್ಯಮಿ ಪತಿ ಜೈ ಮೆಹ್ತಾ ಅವರು ಕೂಡ ಸಹ ಮಾಲೀಕರಾಗಿದ್ದಾರೆ.
ಜೈ ಮೆಹ್ತಾ ಭಾರತೀಯ ಉದ್ಯಮಿಗಳಲ್ಲಿ ಅಗ್ರಗಣ್ಯರಾಗಿದ್ದಾರೆ. ಜೈ ಮೆಹ್ತಾ ಅವರು ಮೆಹ್ತಾ ಗ್ರೂಪ್ ಎಂಬ ಬಹುರಾಷ್ಟ್ರೀಯ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಮೆಹ್ತಾ ಗ್ರೂಪ್ ಆಫ್ರಿಕಾ, ಭಾರತ, ಕೆನಡಾ ಮತ್ತು ಅಮೆರಿಕದಲ್ಲಿ ತನ್ನ ವ್ಯಾಪಾರ- ವಹಿವಾಟು ಹೊಂದಿದೆ.

ಅಧಿಕೃತ ವೆಬ್‌ಸೈಟ್ ಪ್ರಕಾರ, ಮೆಹ್ತಾ ಗ್ರೂಪ್ 500 ಮಿಲಿಯನ್ ಯುಎಸ್ ಡಾಲರ್‌ಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಜತೆಗೆ ಜಗತ್ತಿನಾದ್ಯಂತ 15,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಅವರು ಭಾರತದಲ್ಲಿ ಸೌರಾಷ್ಟ್ರ ಸಿಮೆಂಟ್ ಲಿಮಿಟೆಡ್ ಮತ್ತು ಗುಜರಾತ್ ಸಿದ್ಧೀ ಸಿಮೆಂಟ್ ಲಿಮಿಟೆಡ್ ಎನ್ನುವ ಕಂಪನಿಯನ್ನು ಹೊಂದಿದ್ದಾರೆ.
1961ರ ಜನವರಿ 18 ರಂದು ಮಹೇಂದ್ರ ಮೆಹ್ತಾ ಮತ್ತು ಸುನಯನಾ ಮೆಹ್ತಾ ಅವರ ಮಗನಾಗಿ ಜನಿಸಿದರು. ಅವರು ಬಹುರಾಷ್ಟ್ರೀಯ ಕಂಪನಿಯಾದ ಮೆಹ್ತಾ ಗ್ರೂಪ್‌ನ ನಾಂಜಿ ಕಾಳಿದಾಸ್ ಮೆಹ್ತಾ ಅವರ ಮೊಮ್ಮಗ. ಜೈ ಮೆಹ್ತಾ ಅವರು ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆದುಕೊಂಡಿದ್ದಾರೆ. ನಂತರ ಅವರು ಸ್ವಿಟ್ಜರ್ಲೆಂಡ್‌ನ ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್‌ನಿಂದ ಎಂಬಿಎ ಪದವಿ ಪಡೆದುಕೊಂಡಿದ್ದಾರೆ.
ಅವರು ಜೂಹಿ ಚಾವ್ಲಾ ಅವರನ್ನು ವಿವಾಹವಾಗಿದ್ದು, ಜಾನ್ಹವಿ ಹೆಸರಿನ ಮಗಳು ಹಾಗೂ ಅರ್ಜುನ್ ಹೆಸರಿನ ಮಗ ಇದ್ದಾರೆ. ಜೈ ಅವರು ಚಾವ್ಲಾ ಅವರು ಚಾವ್ಲಾ ಅವರನ್ನು ಮದುವೆಯಾಗುವ ಮೊದಲು ಯಶ್ ಬಿರ್ಲಾ ಅವರನ್ನು ಮದುವೆಯಾಗಿದ್ದರು. 1990ರಲ್ಲಿ ನಡೆದ ವಿಮಾನ ದುರಂತದಲ್ಲಿ ಸುಜಾತ ಮೃತಪಟ್ಟಿದ್ದರು. ನಂತರ ಜೂಹಿ ಅವರೊಂದಿಗೆ ಸ್ನೇಹ ಬೆಳೆದು ಅವರನ್ನು ಮದುವೆಯಾದರು.


Click it and Unblock the Notifications