ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ನಿಂದ ನಿವೃತ್ತರಾಗುತ್ತಾರೆ ಎಂಬ ಊಹಾಪೋಹಗಳು ಇತ್ತೀಚಿಗೆ ಭಾರೀ ಸುದ್ದಿಯಾಗುತ್ತಿದೆ. ಎಲ್ಲಾ ಪ್ರಕಾರದ ಕ್ರಿಕೆಟ್‌ನಿಂದ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯನ್ನು ಪಡೆದುಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿದೆ. ಆದರೂ ಕೂಡಾ ಧೋನಿ ಇನ್ನೂ ಕೋಟಿ ರೂಪಾಯಿಯ ಮೌಲ್ಯದ ಬೃಹತ್ ವ್ಯಾಪಾರ ಸಾಮ್ರಾಜ್ಯವನ್ನು ಹೊಂದಿದ್ದಾರೆ. ಅವರ ಕಂಪನಿಗಳಲ್ಲಿ ಒಂದನ್ನು ಶೀಲಾ ಸಿಂಗ್ ನಡೆಸುತ್ತಿದ್ದಾರೆ.
ಶೀಲಾ ಸಿಂಗ್ ಎಂಎಸ್ ಧೋನಿಯ ನಿರ್ಮಾಣ ಸಂಸ್ಥೆ ಧೋನಿ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದಾರೆ. ಇದು ಬಹುಕೋಟಿ ವ್ಯವಹಾರವಾಗಿದೆ. ಶೀಲಾ ಸಿಂಗ್ ಅವರು ಸಾಕ್ಷಿ ಸಿಂಗ್ ಧೋನಿಯ ತಾಯಿ ಮತ್ತು ಎಂಎಸ್ ಧೋನಿಯ ಅತ್ತೆ ಎಂಬುವುದು ಇಲ್ಲಿ ಗಮನಾರ್ಹ ವಿಚಾರವಾಗಿದೆ. ಶೀಲಾ ಸಿಂಗ್ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

800 ಕೋಟಿ ರೂಪಾಯಿಯ ಸಂಸ್ಥೆ ನಡೆಸುತ್ತಿರುವ ಧೋನಿಯ ಅತ್ತೆ
ತನ್ನ ವ್ಯಾಪಾರ ಸಾಮ್ರಾಜ್ಯವನ್ನು ಹೇಗೆ ವಿಸ್ತರಿಸುವುದು ಎಂದು ನಿರ್ಧರಿಸುವ ವಿಚಾರಕ್ಕೆ ಬಂದಾಗ ಚೆನ್ನೈ ಸೂಪರ್ ಕಿಂಗ್ ನಾಯಕ ಮಹೇಂದ್ರ ಸಿಂಗ್ ಧೋನಿ ಕುಟುಂಬದ ಸಹಾಯ ಪಡೆಯುವ ನಿರ್ಧಾರವನ್ನು ಮಾಡಿದ್ದಾರೆ. ಧೋನಿ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಇಬ್ಬರೂ ಸಿಇಒಗಳಾದ ಸಾಕ್ಷಿ ಧೋನಿ ಮತ್ತು ಅವರ ತಾಯಿ ಶೀಲಾ ಸಿಂಗ್ 2020 ರಿಂದ ಈ ಕಂಪನಿಯ ಮುಖ್ಯಸ್ಥರಾಗಿದ್ದಾರೆ.
ಕಂಪನಿಯೊಂದರ ಮುಖ್ಯಸ್ಥರಾಗಿ ಇದು ಶೀಲಾ ಸಿಂಗ್‌ರ ಮೊದಲ ಅವಧಿಯಾಗಿದೆ. ತಾಯಿ-ಮಗಳ ಜೋಡಿಯ ನಾಯಕತ್ವದಲ್ಲಿ, ಎಂಎಸ್ ಧೋನಿಯ ಪ್ರೊಡಕ್ಷನ್ ಹೌಸ್ ಹೊಸ ಉತ್ತುಂಗಕ್ಕೆ ತಲುಪಿದೆ. ಇದೀಗ ಸಂಸ್ಥೆಯು ಮಲ್ಟಿ ಬಿಲಿಯನ್ ಡಾಲರ್ ಸಂಸ್ಥೆಯಾಗಿ ಬದಲಾಗುತ್ತಿದೆ. ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ.
ಶೀಲಾ ಸಿಂಗ್‌ರ ಪತಿ ಆರ್‌ಕೆ ಸಿಂಗ್ ಎಂಎಸ್ ಧೋನಿಯ ತಂದೆ ಪಾನ್ ಸಿಂಗ್ ಧೋನಿಯೊಂದಿಗೆ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಕನೋಯಿ ಗ್ರೂಪ್‌ನ 'ಬಿನಾಗುರಿ ಟೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅದಾದ ಬಳಿಕ ಶೀಲಾ ಸಿಂಗ್ ಗೃಹಿಣಿಯಾಗಿದ್ದು, ಮನೆ ಮತ್ತು ಅವರ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.
ಧೋನಿ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಶೀಲಾ ಸಿಂಗ್ ಮತ್ತು ಸಾಕ್ಷಿ ಧೋನಿಯ ನಾಯಕತ್ವದ ನಾಲ್ಕು ವರ್ಷಗಳಲ್ಲಿ, ಕಂಪನಿಯು ಈಗ ಒಟ್ಟು 800 ಕೋಟಿ ರೂಪಾಯಿಗಳಷ್ಟು ನಿವ್ವಳ ಮೌಲ್ಯವನ್ನು ಹೊಂದಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಸಾಕ್ಷಿ ಧೋನಿ ಪ್ರಸ್ತುತ ಎಂಎಸ್ ಧೋನಿಯ ಪ್ರೊಡಕ್ಷನ್ ಹೌಸ್‌ನ ಅತಿದೊಡ್ಡ ಷೇರುದಾರರಾಗಿದ್ದಾರೆ.
ಧೋನಿ ಎಂಟರ್‌ಟೈನ್‌ಮೆಂಟ್ ಹಲವಾರು ಕಂಪನಿಗಳು ಮತ್ತು ವ್ಯಾಪಾರ ಉದ್ಯಮಗಳಲ್ಲಿ ಒಂದಾಗಿದೆ. ಇದನ್ನು ಮಾಜಿ ಭಾರತೀಯ ನಾಯಕ ಎಂಎಸ್ ಧೋನಿ ಸ್ಥಾಪಿಸಿದ್ದಾರೆ. ಧೋನಿ ನಿವ್ವಳ ಆದಾಯ 1030 ಕೋಟಿ ರೂಪಾಯಿಗೆ ಈ ಸಂಸ್ಥೆಯ ಕೊಡುಗೆ ಮಹತ್ತರವಾಗಿದೆ.
ಧೋನಿಯ ಸಿಎಸ್‌ಕೆಯ ಮಾಲೀಕ ಎನ್ ಶ್ರೀನಿವಾಸನ್ ಪುತ್ರಿ ಬಗ್ಗೆ ತಿಳಿಯಿರಿ
ಸಿಎಸ್‌ಕೆ ತಂಡದ ಮಾಲಿಕತ್ವವನ್ನು ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ ಹೊಂದಿದ್ದು, ಇದರ ವ್ಯವಸ್ಥಾಪಕ ನಿರ್ದೇಶಕರು ಎನ್. ಶ್ರೀನಿವಾಸನ್. ಸಿಎಸ್‌ಕೆಯ ಈಗಿನ ಮಾಲೀಕರಾದ ಶ್ರೀನಿವಾಸನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮಾಜಿ ಅಧ್ಯಕ್ಷರು ಹಾಗೂ ಭಾರತೀಯ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಮಾಜಿ ಅಧ್ಯಕ್ಷರೂ ಹೌದು.
1945ರ ಜನವರಿ 3ರಂದು ಜನಿಸಿದ ಶ್ರೀನಿವಾಸನ್ ಅವರು ಇಂಡಿಯಾ ಸಿಮೆಂಟ್ಸ್‌ನ ಸಹ-ಸಂಸ್ಥಾಪಕ ಟಿಎಸ್ ನಾರಾಯಣಸ್ವಾಮಿ ಅವರ ಮಗ. ಶ್ರೀನಿವಾಸನ್ ಅವರ ಪುತ್ರಿ ರೂಪಾ ಗುರುನಾಥ್ ಅವರು ಇಂಡಿಯಾ ಸಿಮೆಂಟ್ಸ್‌ನ ಪೂರ್ಣಾವಧಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರೂಪಾ ಗುರುನಾಥ್ ಅವರು ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ ಸೇರಿದಂತೆ ಒಟ್ಟು ಎಂಟು ವಿವಿಧ ಕಂಪೆನಿಗಳ ಆಡಳಿತ ಮಂಡಳಿಯಲ್ಲಿದ್ದಾರೆ. ಚೆನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್ (ಸಿಎಸ್‌ಕೆಸಿಎಲ್) ಹೋಲ್ಡಿಂಗ್ ಕಂಪನಿ ಮೂಲಕ ಸಿಎಸ್‌ಕೆ ಫ್ರಾಂಚೈಸಿ ಮಾಲೀಕರಾಗಿದ್ದಾರೆ. ಅವರು ಒಮ್ಮೆ ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು.


Click it and Unblock the Notifications