Simone Tata: 49000 ಕೋಟಿ ಸಂಸ್ಥೆ ಕಟ್ಟಿದ ರತನ್‌ ಟಾಟಾರ ಮಲತಾಯಿ 93 ವರ್ಷದ ಸಿಮೋನ್‌ ಟಾಟಾ!

ರತನ್‌ ಟಾಟಾ ಪ್ರಪಂಚದಾದ್ಯಂತ ಅತ್ಯಂತ ಪ್ರಸಿದ್ಧ ಹಾಗೂ ಜನಪ್ರೀಯ ಭಾರತೀಯ ಕೈಗಾರಿಕೋದ್ಯಮಿಗಳ ಪೈಕಿ ಒಬ್ಬರು. ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷರ ಕುಟುಂಬವು ತಲೆಮಾರುಗಳಿಂದ ಹಲವಾರು ವ್ಯವಹಾರಗಳನ್ನು ಮುನ್ನಡೆಸಿದ್ದು ಮತ್ತು ಅವರ ಕುಟುಂಬದ ಹೆಚ್ಚಿನ ಸದಸ್ಯರು ತಮ್ಮ ಜನೋಪಕಾರಿ ಚಟುವಟಿಕೆಗಳಿಂದಲೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಭಾರತೀಯ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳಲ್ಲಿ ರತನ್‌ ಟಾಟಾ ಅವರ ತಂದೆ, ಅಜ್ಜ ಹಾಗೂ ಮುತ್ತಜ್ಜನ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ, ಜನಪ್ರಿಯ ಸೌಂದರ್ಯ ವರ್ಧಕ ಬ್ರಾಂಡ್‌ ಲ್ಯಾಕ್ಮೆಯ ಅಧ್ಯಕ್ಷರಾಗಿದ್ದ, ಕೈಗಾರಿಕೋದ್ಯಮಿ ಸಿಮೋನ್‌ ಟಾಟಾ ಬಗ್ಗೆ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.

 49000 ಕೋಟಿ ಸಂಸ್ಥೆ ಕಟ್ಟಿದ ರತನ್‌ ಟಾಟಾರ 93 ವರ್ಷದ ಮಲತಾಯಿ!

ರತನ್‌ ಟಾಟಾ ಅವರ ತಂದೆಯನ್ನು ಭೇಟಿಯಾಗಿದ್ದಾಗ ಸಿಮೋನ್‌ ಅವರು ಭಾರತದ ಪ್ರವಾಸಿಯಾಗಿದ್ದರು.
ಸಿಮೋನ್‌ ಟಾಟಾ ಅವರು ಸ್ವಿಟ್ಜರ್‌ಲ್ಯಾಂಡ್‌ನ ಜಿನಿವಾದಲ್ಲಿ ಹುಟ್ಟಿ ಬೆಳೆದವರು. ಸಿಮೋನ್‌ ಅವರು ಜಿನೆವಾ ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡಿದ್ದಾರೆ. 23 ವರ್ಷದ ಯುವ ತರುಣಿ ಸಿಮೋನ್‌ ಅವರು ರತನ್‌ ಟಾಟಾ ಅವರ ತಂದೆ ನವನ್‌ ಹೊರ್ಮುಸ್ಜಿ ಟಾಟಾ ಅವರನ್ನು 1953ರಲ್ಲಿ ಭೇಟಿಯಾಗಿದ್ದಾಗ ಅವರು ಒಬ್ಬರು ಪ್ರವಾಸಿಯಾಗಿ ಭಾರತಕ್ಕೆ ಬಂದಿದ್ದರು.

ನವನ್‌ ಅವರು ಸರ್‌ ರತನ್ಜಿ ಟಾಟಾ ಅವರ ದತ್ತುಪುತ್ರರಾಗಿದ್ದರು. ಕೆಲವು ವರ್ಷಗಳ ಕಾಲ ಒಟ್ಟಿಗೆ ಇದ್ದು, 1955ರಲ್ಲಿ ನವನ್‌ ಹೊರ್ಮುಸ್ಜಿ ಹಾಗೂ ಸಿಮೋನ್‌ ಪರಸ್ಪರ ಮದುವೆಯಾಗಿದ್ದರು. ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದ ರತನ್‌ ಟಾಟಾ ಹಾಗೂ ಜಿಮ್ಮಿ ಅವರು ನವನ್‌ ಅವರ ಮೊದಲ ಹೆಂಡತಿಯ ಮಗ. ನಂತರ ಸಿಮೋನ್‌ ಅವರು ಭಾರತದ ವಾಣಿಜ್ಯ ನಗರಿ ಮುಂಬೈಗೆ ಬಂದು ಶಾಶ್ವತವಾಗಿ ನೆಲೆಸಿದರು. ನಂತರದಲ್ಲಿ ಅಂದರೆ ಈ ದಂಪತಿಯು ರತನ್‌ ಟಾಟಾ ಅವರ ಮಲ ಸಹೋದರ ನೋಯೆಲ್‌ ಟಾಟಾ ಅವರಿಗೆ 1957ರಲ್ಲಿ ಜನ್ಮ ನೀಡಿದ್ದರು.

ನೋಯೆಲ್‌ಗೆ ಜನ್ಮ ನೀಡಿದ ಕೆಲವು ವರ್ಷಗಳ ನಂತರ ಅಂದರೆ 1962ರಲ್ಲಿ ಸಿಮೋನ್‌ ಟಾಟಾ ಅವರು ಟಾಟಾ ಆಯಿಲ್‌ ಮಿಲ್ಸ್‌ನ ಸಣ್ಣ ಅಂಗಸಂಸ್ಥೆಯಾದ ಲ್ಯಾಕ್ಮೆಗೆ ಸೇರಿಕೊಂಡರು. ಅಲ್ಲಿ ಅವರು ಸುಮಾರು ನಾಲ್ಕು ವರ್ಷಗಳ ಬಳಿಕ ಅದರ ವ್ಯವಸ್ಥಾಪಕ ನಿರ್ದೇಶಕರಾದರು. ಅಲ್ಲಿ ಅವರು ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಅದರ ಅಧ್ಯಕ್ಷ ಸ್ಥಾನಕ್ಕೇರಿದರು.

ಆ ಮೂಲಕ ಸೌಂದರ್ಯ ವರ್ಧಕ ಲೋಕದಲ್ಲಿ ಲ್ಯಾಕ್ಮೆಯನ್ನು ಏಷ್ಯಾದ ಅತಿದೊಡ್ಡ ಬ್ರಾಂಡ್‌ ಆಗಿ ಬೆಳೆಸುವಲ್ಲಿ ಸಿಮೋನ್‌ ಅವರ ಪರಿಶ್ರಮ ಬಹಳ ಇತ್ತು. ಲ್ಯಾಕ್ಮೆಯ ಯಶಸ್ವಿನ ನಂತರ 1989ರಲ್ಲಿ ಸಿಮೋನ್‌ ಅವರು ಟಾಟಾ ಇಂಡಸ್ಟ್ರೀಸ್‌ ಆಡಳಿತ ಮಂಡಳಿಗೆ ನೇಮಕಗೊಂಡರು. ಸಿಮೋನ್‌ ಅವರು ವೆಸ್ಟ್‌ಸೈಡ್‌ ಹಿಂದಿನ ಪ್ರಮುಖ ವ್ಯಕ್ತಿಯಾಗಿದ್ದರು.

ಟಾಟಾ ಕಂಪೆನಿಯು 1996ರಲ್ಲಿ ಲ್ಯಾಕ್ಮೆ ಅನ್ನು ಹಿಂದೂಸ್ತಾನ್‌ ಲಿವರ್‌ ಲಿಮಿಟೆಡ್‌(ಎಚ್‌ಎಲ್‌ಎಲ್‌)ಗೆ ಮಾರಾಟ ಮಾಡಿದರು ಹಾಗೂ ಅದರ ಮಾರಾಟದಿಂದ ಬಂದ ಹಣದಿಂದ ಟ್ರೆಂಟ್‌ ಎಂಬ ಹೊಸ ಗ್ರೂಪ್‌ ಅನ್ನು 1998ರಲ್ಲಿ ಸ್ಥಾಪಿಸಿದರು. ಈ ಟ್ರೆಂಟ್‌ ಲಿಮಿಟೆಡ್‌ ರಿಟೇಲ್‌ ಫ್ಯಾಷನ್‌ ಚೈನ್‌ ಆಗಿರುವ ವೆಸ್ಟ್‌ಸೈಡ್‌ ಹಾಗೂ ಲ್ಯಾಂಡ್‌ಮಾರ್ಕ್‌ ಎಂಬ ಬುಕ್‌ಸ್ಟೋರ್‌ನ್ನು ನಿರ್ವಹಿಸುತ್ತಿದೆ.

ಆಗ ಕೇವಲ ಒಂದು ಮಳಿಗೆಯೊಂದಿಗೆ ಪ್ರಾರಂಭಿಸಿದ ವೆಸ್ಟ್‌ಸೈಡ್‌ ಪ್ರಸ್ತುತ ದೇಶದೆಲ್ಲೆಡೆ 200ಕ್ಕೂ ಅಧಿಕ ಸ್ಟೋರ್‌ಗಳನ್ನು ಹೊಂದಿವೆ. ಲ್ಯಾಕ್ಮೆಯನ್ನು ಮಾರಾಟ ಮಾಡಿದ ಬಳಿಕ ಅದರ ಷೇರುದಾರರಿಗೆ ಟ್ರೆಂಟ್‌ನಲ್ಲಿಯೂ ಸಮಾನವಾದ ಷೇರು ಪಾಲನ್ನು ನೀಡಲಾಯಿತು. ಈ ಟ್ರೆಂಟ್‌ ಸುಮಾರು 2515 ನಿವ್ವಳ ಮೌಲ್ಯದ ಆಸ್ತಿಯಾಗಿದೆ. ಆ ಮೂಲಕ ಸಿಮೋನ್‌ ಟಾಟಾ ಅವರು ಕಾರ್ಯ ನಿರ್ವಾಹಕೇತರ ಅಧ್ಯಕ್ಷರಾಗಿ 2006ರ ಅಕ್ಟೋಬರ್‌ 30ರವರೆಗೆ ಕಾರ್ಯ ನಿರ್ವಹಿಸಿದ್ದರು.

ಸಿಮೋನ್‌ ಅವರು ಟಾಟಾ ಸಂಸ್ಥೆಯ ವ್ಯಾಪಾರ ಉದ್ಯಮಕ್ಕೆ ಮಾತ್ರ ತಮ್ಮ ಕೊಡುಗೆಯನ್ನು ನೀಡಿಲ್ಲ. ಜತೆಗೆ ಸಾಮಾಜಿಕ ಸೇವಾ ಕಾರ್ಯಗಳಿಗೂ ಅಪಾರ ನೆರವನ್ನು ಒದಗಿಸಿದ್ದಾರೆ. ಅವರು ಮಕ್ಕಳ ವರ್ಲ್ಡ್‌ ಇಂಡಿಯಾ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿಯೂ ಆಗಿದ್ದಾರೆ. ಅವರು ತಮ್ಮ ಪತಿಯ ನಂತರ ಸರ್‌ ರತನ್‌ ಟಾಟಾ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷರಾಗಿದ್ದು ಹತ್ತಾರು ಜನೋಪಕಾರಿ ಕೆಲಸಗಳನ್ನು ಕೂಡ ಮಾಡಿದ್ದಾರೆ. ಜತೆಗೆ ಸಿಮೋನ್‌ ಅವರು ಇಂಡಿಯನ್‌ ಫೌಂಡೇಷನ್‌ ಫಾರ್‌ ಆರ್ಟ್ಸ್‌ ಇದರ ಟ್ರಸ್ಟಿ ಕೂಡ ಆಗಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+