ಯುಎಇಯ ಶಾರ್ಜಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಏರೀಸ್ ಗ್ರೂಪ್ ಕಂಪೆನೀಸ್ ತನ್ನ 25ನೇ ವಾರ್ಷಿಕೋತ್ಸವವನ್ನು ಉದ್ಯೋಗಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ 300 ಮಿಲಿಯನ್ ಉಡುಗೊರೆಯನ್ನು ನೀಡುವ ಮೂಲಕ ಅದ್ದೂರಿಯಾಗಿ ಆಚರಿಸಿಕೊಂಡಿದೆ. ಕಂಪನಿಯ ಅಧ್ಯಕ್ಷ ಹಾಗೂ ಏರೀಸ್ ಗ್ರೂಪ್ ಸಿಇಒ ಸೋಹನ್ ರಾಯ್ ಅವರು ಉದ್ಯೋಗಿಗಳು, ಅವರ ಪೋಷಕರು ಹಾಗೂ ಮಕ್ಕಳಿಗೆ ಬೆಳ್ಳಿಹಬ್ಬದ ದೊಡ್ಡ ಗಿಫ್ಟ್ ಅನ್ನು ಘೋಷಣೆ ಮಾಡಿದ್ದಾರೆ.
"ನಾವು 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರಬೇಕಾದರೆ ನಮ್ಮ ಉದ್ಯೋಗಿಗಳು ಮತ್ತು ಅವರನ್ನು ಬೆಂಬಲಿಸಿದ ಅವರ ಕುಟುಂಬಗಳ ಬದ್ಧತೆ ಹಾಗೂ ದಕ್ಷತೆಗೆ ನಾವು ಕೃತಜ್ಞರಾಗಿರುತ್ತೇವೆ," ಎಂದು ಮೆರೈನ್ ಇಂಜಿನಿಯರ್ ಆಗಿ ಮಾರ್ಪಟ್ಟಿರುವ ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕರೂ ಆಗಿರುವ ಸೋಹನ್ ರಾಯ್ ಹೇಳಿದ್ದಾರೆ. "ನಮ್ಮ ಸಂಸ್ಥೆಗೆ ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಅವರಿಗೆಲ್ಲ ಧನ್ಯವಾದವನ್ನು ಹೇಳುವ ನಮ್ಮ ರೀತಿ ಇದಾಗಿದೆ," ಎಂದು ಬಿಲಿಯನೇರ್ ಬಿಸಿನೆಸ್‌ಮೆನ್ ಆಗಿರುವ ಸೋಹನ್ ರಾಯ್ ಅವರು ಗಲ್ಫ್‌ನ್ಯೂಸ್‌ಗೆ ಹೇಳಿದ್ದಾರೆ.

ಸೋಹನ್ ರಾಯ್ ಯಾರು?
ಸೋಹನ್ ರಾಯ್ ಅವರು ಏರೀಸ್ ಗ್ರೂಪ್ ಆಫ್ ಕಂಪನೀಸ್‌ನ ಸ್ಥಾಪಕ, ಅಧ್ಯಕ್ಷ ಹಾಗೂ ಸಿಇಒ ಆಗಿದ್ದಾರೆ. ಸೋಹನ್ ರಾಯ್ ಅವರು ಮೆರೈನ್ ಎಂಜಿನಿಯರ್ ಆಗಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿದ್ದು, 1998ರಲ್ಲಿ ಅವರು ಏರೀಸ್ ಮೆರೈನ್ ಅಂಡ್ ಎಂಜಿನಿಯರಿಂಗ್ ಸರ್ವೀಸಸ್ ಅನ್ನು ಪ್ರಾರಂಭಿಸಿದ್ದರು.
ರಾಯ್ ಅವರು DAM999 ಚಲನಚಿತ್ರವನ್ನು ನಿರ್ದೇಶಿಸಿದ್ದು, ಮಲೆಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರ ವಿಸ್ಮಯ ಮ್ಯಾಕ್ಸ್ ಸ್ಟುಡಿಯೋ ಸಂಕೀರ್ಣವನ್ನು ಏರೀಸ್ ಗ್ರೂಪ್ ಖರೀದಿಸಿದೆ.
ಅವರು ಇಂಡಿವುಡ್‌ನ ಕಾನ್ಸೆಪ್ಟ್‌ನ ಸಂಸ್ಥಾಪಕ-ನಿರ್ದೇಶಕರು, ಇಂಡಿವುಡ್ ಬಿಲಿಯನೇರ್ಸ್ ಕ್ಲಬ್‌ನ ಸ್ಥಾಪಕ ಅಧ್ಯಕ್ಷರೂ ಹೌದು.
ಸೋಹನ್ ರಾಯ್ ಅವರ ಏರೀಸ್ ಗ್ರೂಪ್ ಹಡಗುಗಳ ಡಿಸೈನ್ ಕನ್ಸಲ್‌ಟೆನ್ಸಿಯಾಗಿದ್ದು, 2200ಕ್ಕೂ ಹೆಚ್ಚು ವೃತ್ತಿಪರ ಉದ್ಯೋಗಿಗಳನ್ನು ಹೊಂದಿದೆ. ಈ ಕಂಪೆನಿಯು 25 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಫೋರ್ಬ್ಸ್ ಪ್ರಕಾರ, ಏರೀಸ್ ಗ್ರೂಪ್ ಆಫ್ ಕಂಪೆನೀಸ್ 56 ಕಂಪೆನಿಗಳ ಒಕ್ಕೂಟವಾಗಿದೆ. ಸೋಹನ್ ರಾಯ್ ಅವರು ಫೋರ್ಬ್ಸ್ ಪಟ್ಟಿಯಲ್ಲಿ 2015 ರಿಂದ 2019ರವರೆಗೆ ಸತತ ನಾಲ್ಕು ವರ್ಷಗಳ ಕಾಲ ಅರಬ್ ದೇಶಗಳ ಭಾರತೀಯ ಮೂಲದ ಅಗ್ರ ನಾಯಕರ ಪಟ್ಟಿಯಲ್ಲಿದ್ದರು.
ಸೋಹನ್ ರಾಯ್ ಅವರು ಪ್ಯಾರೀಸ್‌ನ ಯೂರೋಪಿಯನ್ ಇಂಟರ್‌ನ್ಯಾಷನಲ್ ಯೂನಿವರ್ಸಿಟಿ (ಇಐಯು)ಯು ಗ್ಲೋಬಲ್ ಲೀಡರ್‌ಶಿಪ್ ಅಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ವೃತ್ತಿಪರ ಗೌರವ ಡಾಕ್ಟರೇಟ್ ಅನ್ನು ನೀಡಿದೆ. ಸೋಹನ್ ರಾಯ್ ಅವರು ಕೇರಳದ ಪುನಲೂರ್ ಮೂಲದವರು. ಅವರ ಕಂಪೆನಿಯ ಕೇಂದ್ರ ಕಚೇರಿಯು ಶಾರ್ಜಾದಲ್ಲಿದೆ. ಅವರು ನೇಹಲ್ ಆರ್ಕಿಟೆಕ್ಟ್ ಎನ್ನುವ ಕಂಪನಿಯನ್ನು ಕೂಡ ಹೊಂದಿದ್ದಾರೆ.
ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ನೀಡಿದ ಎವರ್‌ಗ್ರೀನ್
ಈ ಹಿಂದೆ ಕಾಲುವೆಯಲ್ಲಿ ಸಿಲುಕುವ ಮೂಲಕ ಭಾರೀ ಸುದ್ದಿಯಾಗಿದ್ದ ತೈವಾನ್ ಮೂಲದ ಹಡಗು ಸಂಸ್ಥೆ ಎವರ್‌ಗ್ರೀನ್ ಇತ್ತೀಚೆಗೆ ತನ್ನ ಸಿಬ್ಬಂದಿಗಳಿಗೆ ಭರ್ಜರಿ ಗಿಫ್ಟ್ ನೀಡುವ ಮೂಲಕ ಸುದ್ದಿಯಾಗಿದೆ. ಎವರ್‌ಗ್ರೀನ್ ತಮ್ಮ ಉದ್ಯೋಗಿಗಳಿಗೆ ಬರೋಬ್ಬರಿ 4 ವರ್ಷದ ಅಂದರೆ 52 ವಾರಗಳ ವೇತನವನ್ನು ಬೋನಸ್ ಆಗಿ ನೀಡಿದೆ. ಕೆಲವು ಉದ್ಯೋಗಿಗಳಿಗೆ ಮಾತ್ರ ಸಂಸ್ಥೆಯು ಈ ವರ್ಷಾಂತ್ಯದ ಬೋನಸ್ ಅನ್ನು ನೀಡಿದೆ.


Click it and Unblock the Notifications