ಉದ್ಯಮಿಯಾಗಿ ದೇಣಿಗೆ ನೀಡುವ ಮೂಲಕ ಸಮಾಜ ಸೇವೆಯಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳ ಪೈಕಿ ಇನ್ಫೋಸಿಸ್‌ನ ಸುಧಾಮೂರ್ತಿ ಅವರು ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಸುಧಾಮೂರ್ತಿ ಅವರ ಸಹೋದರಿಯರು, ಸೋದರ ಮಾವ ಕೂಡ ಜನೋಪಕಾರಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸುಧಾಮೂರ್ತಿ ಅವರ ಸೋದರ ಮಾವನಾದ ಗುರುರಾಜ್ ದೇಶಪಾಂಡೆ ಅವರು 208 ಕೋಟಿ ರೂಪಾಯಿಗಳನ್ನು ದಾನ ಮಾಡುವ ಮೂಲಕ ಗಮನಸೆಳೆದಿದ್ದಾರೆ. ತಮ್ಮಲ್ಲಿನ ಬಿಸಿನೆಸ್ ಕೌಶಲ್ಯತ, ಹೂಡಿಕೆಯ ದೂರದೃಷ್ಟಿಯಿಂದಾಗಿ ದೇಶಪಾಂಡೆ ಅವರು ಶಿಕ್ಷಣ ಸಂಸ್ಥೆಗಳಿಗೆ ದಾನ ಮಾಡುವುದಕ್ಕಾಗಿ ದೇಶಪಾಂಡೆ ಸೆಂಟರ್ ಫಾರ್ ಟೆಕ್ನಾಲಜಿಕಲ್ ಇನ್ನೋವೇಷನ್‌ನ್ನು ಸ್ಥಾಪಿಸಿದ್ದಾರೆ.

ಬಹು ವಲಯಗಳಲ್ಲಿ ತೊಡಗಿಸಿಕೊಂಡಿರುವ ದೇಶಪಾಂಡೆ ಅವರು ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳನ್ನು ಮಾರಾಟ ಮಾಡಿದ್ದಾರೆ. ಅವರು ತಮ್ಮ ಮೊದಲ ಕಂಪನಿಯಾದ ಕೊರಲ್ ನೆಟ್‌ವರ್ಕ್ ಅನ್ನು 15 ಮಿಲಿಯನ್ ಡಾಲರ್‌ಗೆ 1993 ರಲ್ಲಿ ಮಾರಾಟ ಮಾಡಿದ್ದಾರೆ. ಜತೆಗೆ ಅವರು 1997ರಲ್ಲಿ ಸ್ಥಾಪಿಸಿದ್ದ 3.7 ಬಿಲಿಯನ್ ಡಾಲರ್ ಕಾಸ್‌ಕೇಡ್ ಕಮ್ಯೂನಿಕೇಷನ್ಸ್ ಅನ್ನು ಕೂಡ ಮಾರಾಟ ಮಾಡಿದ್ದಾರೆ.
ಗುರುರಾಜ್ ದೇಶಪಾಂಡೆ ಅವರು ಹುಬ್ಬಳ್ಳಿಯಲ್ಲಿ ಹುಟ್ಟಿದ್ದು, ಪದವಿ ಶಿಕ್ಷಣವನ್ನು ಪೂರ್ಣಗೊಳಿಸುವ ತನಕ ಭಾರತದಲ್ಲೇ ನೆಲೆಸಿದ್ದರು. ಅವರು ಮದ್ರಾಸ್‌ನ ಐಐಟಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಬಳಿಕ ಉನ್ನತ ವ್ಯಾಸಂಗಕ್ಕಾಗಿ ಕೆನಡಾಗೆ ತೆರಳಿದ್ದರು.
ಪ್ರಸ್ತುತ ಗುರುರಾಜ್ ದೇಶಪಾಂಡೆ ಅವರು A123Systems, Sycamore Networks, ತೇಜಸ್ ನೆಟ್‌ವರ್ಕ್ಸ್, ಹವಿಫೈರ್, ಸಾಂಡ್‌ಸ್ಟೋನ್ ಕ್ಯಾಪಿಟಲ್ ಹಾಗೂ ಸ್ಪರ್ಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. ಜತೆಗೆ ಅವರು ಏರ್‌ವಾನಾದಲ್ಲಿ ಬೋರ್ಡ್ ಸದಸ್ಯರು ಕೂಡ ಆಗಿದ್ದಾರೆ.
2010ರಲ್ಲಿ ಅಮೆರಿಕಾದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರು ದೇಶಪಾಂಡೆ ಅವರನ್ನು ಇನ್ನೋವೇಷನ್ ಎಂಟರ್‌ಪ್ರೆನಾರ್‌ಶಿಫ್‌ನಲ್ಲಿ ನ್ಯಾಷನಲ್ ಎಡ್‌ವೈಸರಿ ಕೌನ್ಸಿಲ್‌ನ ಅಧ್ಯಕ್ಷ ಸ್ಥಾನ ನೀಡುವಲ್ಲಿ ನಂಬಿಕೆಯನ್ನು ಇಟ್ಟಿದ್ದರು.
ಅಮೆರಿಕ ಅಧ್ಯಕ್ಷರ ವಿನೂತನ ಕಾರ್ಯತಂತ್ರಗಳನ್ನು ಬೆಂಬಲಿಸುವುದಕ್ಕೆ ಈ ಗ್ರೂಪ್ ಅನ್ನು ಸ್ಥಾಪಿಸಲಾಗಿದೆ. ದೇಶಪಾಂಡೆ ಅವರು ಸುಧಾಮೂರ್ತಿ ಅವರ ಸಹೋದರಿ ಜೈಶ್ರೀ ಅವರನ್ನು ಮದುವೆಯಾಗಿದ್ದಾರೆ. ಅವರು ಕೂಡ ದೇಶಪಾಂಡೆ ಸೆಂಟರ್ ಫಾರ್ ಟೆಕ್ನಾಲಜಿಕಲ್ ಇನ್ನೋವೇಷನ್‌ನಲ್ಲಿ ಸಹ ಸಂಸ್ಥಾಪಕರಾಗಿದ್ದಾರೆ.


Click it and Unblock the Notifications