ಸುನೀರಾ ಮದನಿ ಒಬ್ಬರು ಸ್ಪೂರ್ತಿದಾಯಕ ಮಹಿಳೆ ಎಂದರೆ ತಪ್ಪಾಗಲಾರದು. ಅವರು ಕೇವಲ ಯಶಸ್ವಿ ಸಾರ್ಟ್‌ಅಪ್ ಮಾತ್ರ ಮಾಡಿಲ್ಲ, ಜತೆಗೆ 300,000 ಮಹಿಳಾ ಸಿಇಒಗಳ ಸ್ವ ಸಹಾಯ ಸಂಘವನ್ನು ಕಟ್ಟಿ ಬೆಳೆಸಿದ್ದಾರೆ. ಅದು ಕೂಡ ಕೇವಲ 34 ವರ್ಷದೊಳಗೆ. ಅವರು ಅಮೆರಿಕದ ಪ್ರಸಿದ್ಧ ಟೆಕ್ ಇನ್‌ಕ್ಯೂಬೇಟರ್ ಸಿಲಿಕಾನ್ ವ್ಯಾಲಿಯಿಂದ ನೂರಾರು ಕಿಮೀ. ದೂರದಲ್ಲಿದ್ದಾರೆ. ಆದರೂ ಸುನೀರಾ ಅವರು ಬಿಲಿಯನ್ ಡಾಲರ್ ಕಂಪೆನಿಯನ್ನು ಕಟ್ಟಿ ಬೆಳೆಸಿದ್ದಾರೆ. ಅದು ಅಮೆರಿಕದ ವರ್ಣ ವ್ಯವಸ್ಥೆಯ ನಡುವೆಯೇ ವಲಸಿಗರೊಬ್ಬರು ತಮ್ಮ ಬೃಹತ್ ಉದ್ಯಮವನ್ನು ಕಟ್ಟಿ ಬೆಳೆಸಿದ ಸ್ಫೂರ್ತಿಯ ಕಥೆಯಿದು.
ಸುನೀರಾ ಮದನಿ ಹಾಗೂ ಸಹೋದರ ಸಾಲ್ ರೆಹಮೆತುಲ್ಲಾ ಅವರು 2014ರಲ್ಲಿ ಸ್ಟಾಕ್ಸ್ ಅನ್ನು ಪ್ರಾರಂಭಿಸಿದರು. ಇದು ಪೇಮೆಂಟ್ ಪ್ಲಾಟ್‌ಫಾರಂ ಆಗಿದೆ. ಆದರೆ ಅದು ಉಳಿದ ಪೇಮೆಂಟ್ ಪ್ಲಾಟ್‌ಫಾರಂನಂತೆ ವ್ಯವಹಾರ ಆಧಾರಿತ ಶೇಕಡವಾರು ಪಾವತಿ ಮಾದರಿಯ ಬದಲಿಗೆ ಚಂದಾದಾರಿಕೆ ಆಧಾರಿತ ಮಾಸಿಕ ಶುಲ್ಕವನ್ನು ವಿಧಿಸುವ ಪ್ಲಾಟ್‌ಫಾರಂ ಆಗಿದೆ. ಹೀಗಾಗಿ, ಕಳೆದ ಎಂಟು ವರ್ಷಗಳಲ್ಲಿ 300 ಮಂದಿಗೆ ಉದ್ಯೋಗಿಗಳನ್ನು ಹೊಂದುವ ಮೂಲಕ $23 ಬಿಲಿಯನ್ ವಹಿವಾಟನ್ನು ನಡೆಸಿ ಎತ್ತರಕ್ಕೆ ಬೆಳೆದಿದೆ.

ತಾನು ಇದು ಇಷ್ಟವಿಲ್ಲದೆ ಅನಿವಾರ್ಯವಾದ ಕಾರಣಕ್ಕೆ ಪ್ರಾರಂಭಿಸಿದ ಉದ್ಯಮ ಹಾಗೂ ತನ್ನ ಬಗ್ಗೆಯೇ ನಂಬಿಕೆಯಿರಲಿಲ್ಲ ಎಂದು ಕಳೆದ ವರ್ಷ ಸುನೀರಾ ಸಿಎನ್‌ಬಿಸಿಗೆ ಹೇಳಿದ್ದರು.
ಇವರ ಪೋಷಕರು ಪಾಕಿಸ್ತಾನದ ಕರಾಚಿಯಿಂದ ವಲಸೆ ಬಂದವರು. ಇವರು ತಮ್ಮ ಅನುಕೂಲಕತೆಗೆ ತಕ್ಕಂತೆ ಅಂಗಡಿಯಿಂದ ಕೆಫೆಯವರೆಗೆ ಅನೇಕ ವ್ಯವಹಾರ ನಡೆಸಿದ್ದರು. ಆದರೆ ಹೆಚ್ಚಿನ ವ್ಯವಹಾರ ವೈಫಲ್ಯದಲ್ಲೇ ಕೊನೆಗೊಂಡಿತ್ತು.
ಪ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಹಣಕಾಸು ವಿಷಯದಲ್ಲಿ ತಮ್ಮ ಕಾಲೇಜು ಅಧ್ಯಯನ ಮುಗಿಸಿದ ನಂತರ ಅಂಟ್ಲಾಂಟಾ ಮೂಲದ ಪೇಮೆಂಟ್ ಬೇಸ್ಡ್ ಪ್ರೊಸೆಸರ್ ಫಸ್ಟ್ ಡೇಟಾದಲ್ಲಿ ವ್ಯಾಪಾರಸ್ಥರಿಗೆ ಪಾವತಿ ಟರ್ಮಿನಲ್‌ಗಳನ್ನು ಮಾರಾಟ ಮಾಡುವ ಕೆಲಸ ಮಾಡಿದರು. ಇಲ್ಲಿ ಅವರಿಗೆ ಪರ್ಸೆಂಟೇಜ್ ಆಧಾರಿತ ವಹಿವಾಟುಗಳ ಬಗ್ಗೆ ಐಡಿಯಾ ದೊರಕಿತ್ತು.
ಈ ಹೊಸ ಆಲೋಚನೆಯನ್ನು ತಮ್ಮ ಮೇಲಾಧಿಕಾರಿಗಳು ಹಾಗೂ 12 ಬ್ಯಾಂಕ್‌ಗಳಿಗೆ ಹೋಗಿ ವಿವರಿಸಿದ್ದರು. ಆದರೆ ಎಲ್ಲರಿಂದಲೂ ಅಪಹಾಸ್ಯಕ್ಕೀಡಾದರು. ಒಂದು ದಿನ ಒರ್‌ಲ್ಯಾಂಡೊದಲ್ಲಿ ಇರುವ ಮನೆಯಲ್ಲಿ ಫ್ಯಾಮಿಲಿಯ ಜತೆಗಿನ ಭೋಜನದ ಸಮಯದ ಚರ್ಚೆಯಲ್ಲಿ ಅವರ ಪೋಷಕರು 'ಹೊಸ ಆಲೋಚನೆ' ಯ ಬಗ್ಗೆ ಆಕೆಯೇ ಖುದ್ದು ಕೆಲಸ ಮಾಡುವಂತೆ ಹೇಳಿದರು. ಹೀಗಾಗಿ ಸಹೋದರ- ಸಹೋದರಿಯರಿಬ್ಬರು ಆರು ತಿಂಗಳು ಕೆಲಸಕ್ಕೆ ರಜೆ ತೆಗೆದುಕೊಂಡು, ಪೋಷಕರ ಮಾತನ್ನು ಕೃತಿಯಲ್ಲಿ ತರಲು ಕಾರ್ಯಪ್ರವೃತ್ತರಾದರು.
ಅವರು ಅದಕ್ಕಾಗಿ ಕೇವಲ ನಾಲ್ಕು ತಿಂಗಳ ಸಂಬಳವನ್ನು ತೆಗೆದುಕೊಂಡು ಹೋಗಿದ್ದರು. ಜತೆಗೆ 500000 ಡಾಲರ್ ಸಾಲವನ್ನು ಪಡೆದುಕೊಂಡರು. ಕಳೆದ ವರ್ಷದಲ್ಲಿ ಅವರು ಒಂದು ಬಿಲಿಯನ್ ಡಾಲರ್ ಫಂಡಿಂಗ್ ಮೌಲ್ಯದಂತೆ $263 ಮಿಲಿಯನ್ ಗಳಿಸಿದರು. ಅವರು ಜತೆಗೆ ಸಿಇಒ ಸ್ಕೂಲ್ ಎಂಬ ಗ್ರೂಪ್ ಕೂಡ ಪ್ರಾರಂಭಿಸಿದ್ದಾರೆ.
ಮಹಿಳಾ ಉದ್ಯಮಿಗಳಿಗೆ ಯಶಸ್ವಿ ಉದ್ಯಮವನ್ನು ಸ್ಥಾಪಿಸುವುದಕ್ಕೆ ಸೂಕ್ತ ಮಾರ್ಗದರ್ಶನ ನೀಡುವುದಕ್ಕಾಗಿಯೇ ನಾನು ಈ ಒಂದು ಕಮ್ಯೂನಿಟಿಯನ್ನು ಪ್ರಾರಂಭಿಸಿದ್ದೇನೆ. ಈ ಆನ್‌ಲೈನ್ ಕಮ್ಯೂನಿಟಿಯಲ್ಲಿ ಉದ್ಯಮ ಸ್ಥಾಪಿಸುವವರಿಗೆ ಎಲ್ಲ ರೀತಿಯ ಕೋರ್ಸ್‌ಗಳು, ತರಬೇತಿ, ಸಂಪನ್ಮೂಲ ಲಭ್ಯವಿದೆ. ನನ್ನ ಕಥೆಯನ್ನು ನೋಡಿ ಸ್ಫೂರ್ತಿಯನ್ನು ಪಡೆದುಕೊಂಡು ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ತಮ್ಮ ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications