ಭಾರ್ತಿ ಎಂಟರ್‌ಪ್ರೈಸಸ್‌ನ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಸುನಿಲ್ ಭಾರ್ತಿ ಮಿತ್ತಲ್ ಅವರು ಭಾರತೀಯ ಬಿಲಿಯನೇರ್ ಮಾತ್ರವಲ್ಲ ಜನೋಪಕಾರಿ ವ್ಯಕ್ತಿಯೂ ಹೌದು. ದೂರ ಸಂಪರ್ಕ, ಬಾಹ್ಯಾಕಾಶ ಪರಿಶೋಧನೆ, ವಿಮೆ, ರಿಯಲ್ ಎಸ್ಟೇಟ್, ಹೋಟೆಲ್‌ಗಳು ಹಾಗೂ ಆಹಾರ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಭಾರತದಲ್ಲಿ ಅತಿದೊಡ್ಡ ಟೆಲಿಕಾಂ ಪೂರೈಕೆದಾರ ಭಾರ್ತಿ ಏರ್‌ಟೆಲ್, ಇದು ಭಾರ್ತಿ ಎಂಟರ್‌ಪ್ರೈಸ್‌ನ ನಿರ್ಣಾಯಕ ಉದ್ಯಮವಾಗಿದೆ.
ಫೋರ್ಬ್ಸ್‌ನ ವರದಿ ಪ್ರಕಾರ, 2023ರಲ್ಲಿ ಸುನಿಲ್ ಭಾರ್ತಿ ಮಿತ್ತಲ್ ಅವರು ಭಾರತದ 10ನೇ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದು, ಅವರು 14.8 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 14,800,000,000 ಕೋಟಿ) ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ. ಸುನಿಲ್ ಭಾರ್ತಿ ಮಿತ್ತಲ್ ಕುಟುಂಬವು ರಾಜಕೀಯ ಹಿನ್ನಲೆಯನ್ನು ಹೊಂದಿದೆ. ಅವರ ತಂದೆ ಸತ್ ಪಾಲ್ ಮಿತ್ತಲ್ ಅವರು ಸಂಸತ್ ಸದಸ್ಯರಾಗಿ ರಾಜ್ಯಸಭೆಯಲ್ಲಿ ಸೇವೆಯನ್ನು ಸಲ್ಲಿಸಿದ್ದರು.

ಸುನಿಲ್ ಭಾರ್ತಿ ಮಿತ್ತಲ್ ಅವರು ಪಂಜಾಬ್ ವಿಶ್ವವಿದ್ಯಾಲಯದಿಂದ ಕಲೆ ಮತ್ತು ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ. 18ನೇ ವಯಸ್ಸಿನಲ್ಲಿ ಈ ಸ್ವಯಂ ನಿರ್ಮಿತ ಬಿಲಿಯನೇರ್ ಸುನಿಲ್ ಭಾರ್ತಿ ಮಿತ್ತಲ್ ತಮ್ಮ ತಂದೆಯಿಂದ ಸಾಲ ಪಡೆದ 20,000 ರೂಪಾಯಿ ಬಂಡವಾಳ ಹೂಡಿಕೆಯೊಂದಿಗೆ ಪ್ರಾದೇಶಿಕ ಬೈಸಿಕಲ್ ತಯಾರಕರಿಗೆ ಕ್ರಾನ್‌ಶೆಫ್ಟ್‌ಗಳನ್ನು ಉತ್ಪಾದಿಸುವ ಮೂಲಕ ತಮ್ಮ ಉದ್ಯಮಶೀಲ ವೃತಿಜೀವನವನ್ನು ಪ್ರಾರಂಭಿಸಿದರು.
ನಿಧಾನಕ್ಕೆ ಸುನಿಲ್ ಭಾರ್ತಿ ಮಿತ್ತಲ್ ಹಲವಾರು ಇತರೆ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. 1980ರಲ್ಲಿ ತಮ್ಮ ಸಹೋದರನ ಜತೆ ಸೇರಿಕೊಂಡು ಆಮದು ವ್ಯವಹಾರ ಕ್ಷೇತ್ರದಲ್ಲಿ ಭಾರ್ತಿ ಓವರ್‌ಸೀಸ್ ಟ್ರೇಡಿಂಗ್ ಕಂಪೆನಿಯನ್ನು ಸ್ಥಾಪಿಸಿದರು. ಅಲ್ಲದೆ, ಸುನಿಲ್ ಭಾರ್ತಿ ಮಿತ್ತಲ್ ಜಪಾನೀಸ್ ಪೋರ್ಟಬಲ್ ಎಲೆಕ್ಟ್ರಿಕ್ ಜನರೇಟರ್‌ಗಳನ್ನು ತರುವುದಕ್ಕೆ ಸುಜುಕಿ ಮೋಟಾರ್ಸ್ ಡೀಲರ್‌ಶಿಪ್‌ನ್ನು ಪಡೆದುಕೊಂಡರು.
ಸುನಿಲ್ ಮಿತ್ತಲ್ ಅವರು ನಂತರ 1984ರಲ್ಲಿ ಭಾರತದಲ್ಲಿ ಪುಶ್ ಬಟನ್ ಫೋನ್‌ಗಳನ್ನು ತಯಾರಿಸಲು ಪ್ರಾರಂಭಿಸಿದರು. ಅವರು ಆಗಷ್ಟೇ ಭಾರ್ತಿ ಟೆಲಿಕಾಂ ಲಿಮಿಟೆಡ್ ಅನ್ನು ಪ್ರಾರಂಭಿಸಿದ್ದರು. ಬಳಿಕ 1992ರಲ್ಲಿ ಸರ್ಕಾರವು ಮೊಬೈಲ್ ಟೆಲಿಫೋನ್‌ಗಾಗಿ ಬಿಡ್‌ಗಳನ್ನು ಕರೆದಿದ್ದು, ಅವರು ಹರಾಜಿನಲ್ಲಿದ್ದ ಮೊಬೈಲ್ ಫೋನ್ ನೆಟ್‌ವರ್ಕ್‌ಗಳಿಗಾಗಿ ನಾಲ್ಕು ಲೈಸೆನ್ಸ್‌ಗಳಲ್ಲಿ ಒಂದಕ್ಕೆ ವಿಜೇತ ಬಿಡ್ ಅನ್ನು ಸಲ್ಲಿಸಿದ್ದರು.
ಮುಂದೆ ಅವರು ದೇಶದಲ್ಲಿ ಟೆಲಿಕಾಂ ಸೇವೆಗಳನ್ನು ನೀಡಲು ಪ್ರಾರಂಭಿಸಿದ್ದು, ಬಹುರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಪಾಲುದಾರಿಕೆಯ ಮೂಲಕ ಏರ್‌ಟೆಲ್ ಬ್ರಾಂಡ್ ಅನ್ನು ಸ್ಥಾಪಿಸಿದರು. ಬಹಳ ಗಣನೀಯ ತಂತ್ರಜ್ಞಾನ ವ್ಯವಹಾರದಲ್ಲಿ ಈ ಉದ್ಯಮಿಗೆ ಉತ್ತಮ ಅವಕಾಶಗಳನ್ನು ತೆರೆದುಕೊಂಡಿದೆ. ಅವರು ಭಾರ್ತಿ ಏರ್‌ಟೆಲ್‌ನ್ನು ಆಫ್ರಿಕಾದಲ್ಲಿ ಎರಡನೇಯ ಅತಿದೊಡ್ಡ ಮೊಬೈಲ್ ಆಪರೇಟರ್ ಆಗುವ ಜತೆಗೆ ಭಾರತದಲ್ಲಿಯೂ ಅತಿದೊಡ್ಡ ಟೆಲಿಕಾಂ ಪೂರೈಕೆದಾರರಾಗಿ ಬೆಳೆದಿದ್ದಾರೆ.
2007ರಲ್ಲಿ ಉದ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿ ಪದ್ಮಭೂಷಣ ಗೌರವವನ್ನು ಪಡೆದುಕೊಂಡರು. ಜತೆಗೆ ಇಂಟರ್‌ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷರು ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಹಲವಾರು ನಾಯಕತ್ವದ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ತಮ್ಮ ಬಹುದೊಡ್ಡ ಉದ್ಯಮದ ಮೂಲಕ ಲಾಭಾಂಶದಲ್ಲಿ ಒಂದಷ್ಟು ಪಾಲನ್ನು ಸಮಾಜ ಸೇವೆಗೂ ಮುಡಿಪಾಗಿರಿಸಿದ್ದಾರೆ. ಸಮಾಜದಲ್ಲಿ ದುರ್ಬಲ ವರ್ಗದ ಜನರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವ ಮೂಲಕ ಸುನಿಲ್ ಮಿತ್ತಲ್ ಎಂಬ ಈ ಸಾಧಾರಣ ವ್ಯಕ್ತಿಯು ಜನಪ್ರಿಯ ಜನೋಪಕಾರಿಯಾಗಿಯೂ ಗುರುತಿಸಿಕೊಂಡಿದ್ದಾರೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications