ಕಳೆದ ಕೆಲವು ತಿಂಗಳುಗಳು ಟಾಟಾ ಗ್ರೂಪ್ ಪಾಲಿಗೆ ನಿಜವಾಗಿಯೂ ಉತ್ತಮವಾಗಿದೆ. ಏಕೆಂದರೆ, ಟಾಟಾ ಸ್ಟಾರ್‌ಬಕ್ಸ್ 2022-23ರಲ್ಲಿ 1087 ಕೋಟಿ ರೂಪಾಯಿ ಆದಾಯ ಗಳಿಸಿದೆ. ಸ್ಟಾರ್ಬಕ್ಸ್ ಭಾರತೀಯ ಆಧಾರಿತ ಮೆನುವನ್ನು ಪ್ರಾರಂಭಿಸಿದ ಒಂದು ವರ್ಷದ ನಂತರದಲ್ಲಿ ಈ ಬೆಳವಣಿಗೆಯನ್ನು ಸಾಧಿಸಿದೆ. ಈ ಸ್ಟಾರ್‌ಬಕ್ಸ್ ಕಂಪೆನಿಯು ದೇಶಾದ್ಯಂತ 333 ಸ್ಟೋರ್‌ಗಳನ್ನು ಹೊಂದಿವೆ.
ಈ ನಡುವೆ ಗ್ರೂಪ್‌ನ ಮೂಲ ಕಂಪೆನಿ ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್268 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ. ಆದಾಯ ಕೂಡ ಕಳೆದ ಆರ್ಥಿಕ ವರ್ಷದಲ್ಲಿ 3619 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇವೆಲ್ಲವು ಟಾಟಾ ಕನ್ಸೂಮರ್ ಪ್ರಾಡೆಕ್ಟ್ಸ್ ಲಿಮಿಟೆಡ್‌ನ ಸಿಇಒ ಸುನಿಲ್ ಡಿಸೋಜಾ ಅವರ ನಾಯಕ್ವದಲ್ಲಿ ಸಾಧಿಸಲಾಗಿದೆ. ಡಿಸೋಜಾ ಅವರು ಎಫ್‌ಎಂಸಿಜಿ ಕಂಪೆನಿಗಳ ವಲಯದಲ್ಲಿ ಅತಿಹೆಚ್ಚು ವೇತನ ಪಡೆಯುತ್ತಿರುವ ಸಿಇಒಗಳ ಪೈಕಿ ಒಬ್ಬರಾಗಿದ್ದಾರೆ.

ಸುನಿಲ್ ಡಿಸೋಜಾ ಅವರು ಟಾಟಾ ಗ್ರೂಪ್‌ನಲ್ಲಿನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ಸ್ ಎಫ್‌ಎಂಸಿಜಿ ಕ್ಷೇತ್ರಕ್ಕೆ ಆಕ್ರಮಣಕಾರಿ ರೀತಿಯಲ್ಲಿ ಪ್ರವೇಶ ಪಡೆದ ಬಳಿಕ ಸುನಿಲ್ ಡಿಸೋಜಾ ಅವರು ದೊಡ್ಡ ಸವಾಲನ್ನು ಎದುರಿಸುತ್ತಿದ್ದಾರೆ. ಕಳೆದ ತಿಂಗಳು ಮುಕೇಶ್ ಅಂಬಾನಿಯ ರಿಲಯನ್ಸ್ ಬ್ರಾಂಡ್ ಲಿಮಿಟೆಡ್ ಬ್ರಿಟಿಷ್ ಸಾಂಡ್‌ವಿಚ್ & ಕಾಫಿ ಚೈನ್ ಪ್ರೆಟ್ ಎ ಮ್ಯಾಂಗರ್ ಅನ್ನು ಭಾರತದಲ್ಲಿ ಪ್ರಾರಂಭಿಸಿದೆ.
ದರ್ಶನ್ ಮೆಹ್ತಾ ನೇತೃತ್ವದ ಈ ಕಂಪೆನಿಯು ಟಾಟಾ ಸ್ಟಾರ್‌ಬಕ್ಸ್ ಹೊಂದಿರುವ ಮಾರುಕಟ್ಟೆ ಪ್ರಾಬಲ್ಯವನ್ನು ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ. ಸ್ಟಾರ್‌ಬಕ್ಸ್ 2022ರಲ್ಲೇ 50ಕ್ಕೂ ಹೆಚ್ಚು ಸ್ಟೋರ್‌ಗಳನ್ನು ಪ್ರಾರಂಭಿಸಿದೆ. ಸದ್ಯ ಈ ಕ್ಷೇತ್ರದಲ್ಲಿ ಸ್ಟಾರ್‌ಬಕ್ಸ್ ಲೀಡರ್ ಆಗಿ ಮುಂಚೂಣಿಯಲ್ಲಿದೆ. ಹೀಗಾಗಿ, ರಿಲಯನ್ಸ್‌ನ ಈ ಆಕ್ರಮಣಕಾರಿ ಪ್ರವೇಶವು ಇಶಾ ಅಂಬಾನಿ ಹಾಗೂ ದರ್ಶನ್ ಮೆಹ್ತಾ ವಿರುದ್ಧ ಸುನಿಲ್ ಡಿಸೋಜಾ ಅವರನ್ನು ತೀವ್ರ ಪೈಪೋಟಿಗೆ ಇಳಿಸುವಂತೆ ಮಾಡಿದೆ.
ಅಜೋಯ್ ಮಿಸ್ರಾ ಅವರ ರಾಜೀನಾಮೆ ಬಳಿಕ 2020ರ ಏಪ್ರಿಲ್ 4ರಂದು ಸುನಿಲ್ ಡಿಸೋಜಾ ಅವರು ಟಾಟಾಬಕ್ಸ್‌ನ ಸಿಇಒ ಹಾಗೂ ಎಂಡಿ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಟಾಟಾಗೆ ಬರುವ ಮೊದಲು ಸುನಿಲ್ ಡಿಸೋಜಾ ಅವರು ವರ್ಲ್‌ಪೂಲ್ ಇಂಡಿಯಾದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಪೆಪ್ಸಿಕೋ ಕಂಪೆನಿಯಲ್ಲಿಯೂ ಸುನಿಲ್ ಅವರು 15 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದರು.
ಸುನಿಲ್ ಡಿಸೋಜಾ ಅವರು 1993ರಲ್ಲಿ ಬ್ರೂಕ್ ಬಾಂಡ್ ಲಿಪ್ಟನ್ ಇಂಡಿಯಾ ಲಿಮಿಟೆಡ್‌ಗೆ ಸೇರುವ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಸುನಿಲ್ ಅವರು ಪುಡ್ ಹಾಗೂ ಬಿವರೇಜಸ್ ಕ್ಷೇತ್ರದಲ್ಲಿ ಸುಮಾರು ಮೂವತ್ತು ವರ್ಷಗಳ ಸುಧೀರ್ಘ ಅನುಭವವನ್ನು ಹೊಂದಿದ್ದಾರೆ.
ಸುನಿಲ್ ಡಿಸೋಜಾ ಅವರು ಮದ್ರಾಸ್ ಯೂನಿವರ್ಸಿಟಿಯಿಂದ ಎಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ. ಆ ಬಳಿಕ ಅವರು ಐಐಎಂನಿಂದ ಎಂಬಿಎ ಪದವಿಯನ್ನು ಕೂಡ ಪಡೆದುಕೊಂಡಿದ್ದಾರೆ. 2021ರ ಹಣಕಾಸು ವರ್ಷದಲ್ಲಿ ಸುನಿಲ್ ಡಿಸೋಜಾ ಅವರ ವೇತನವು 10.49 ಕೋಟಿ ರೂ. ಅಗಿತ್ತು. ಕಳೆದ ವರ್ಷದಲ್ಲಿ ಸುನಿಲ್ ಅವರು 7.62 ಕೋಟಿ ರೂ.ವನ್ನು ಸಂಪಾದನೆ ಮಾಡಿದ್ದರು.
ಈ ವರ್ಷದ ಆರಂಭದಲ್ಲಿ ಬಿಸ್ಲೇರಿ ಕಂಪೆನಿಯನ್ನು ಸ್ವಾಧೀನಪಡಿಸಿಕೊಳ್ಳುವ ವಿಚಾರವಾಗಿ ಕಂಪೆನಿ ಮಾಲೀಕರಾದ ರಮೇಶ್ ಚೌಹಾಣ್ ಅವರೊಂದಿಗೆ ಸುನಿಲ್ ಡಿಸೋಜಾ ಅವರು ಮಾತುಕತೆಯನ್ನು ನಡೆಸಿದ್ದರು. ಆದರೆ, ಕಂಪೆನಿಯ ಖರೀದಿಗೆ ಸಂಬಂಧಿಸಿದ ಮೌಲ್ಯದ ಬಗ್ಗೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಈ ಖರೀದಿ ಒಪ್ಪಂದವು ಮುರಿದು ಬಿತ್ತು.
ನಂತರದಲ್ಲಿ ರಮೇಶ್ ಚೌಹಾಣ್ ಅವರು ಕೂಡ ಸದ್ಯಕ್ಕೆ ಬಿಸ್ಲೆರಿ ಕಂಪೆನಿಯನ್ನು ಮಾರಾಟ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದರು. ಈ ನಡುವೆಯೂ ಬಿಸ್ಲೆರಿ ಸ್ವಾಧೀನವು ಕಂಪೆನಿಯ ಯೋಜನೆಗಳನ್ನು ಮೂರು ವರ್ಷಗಳವರೆಗೆ ಮುಂದುವರಿಸುತ್ತದೆ ಎಂದು ಸುನಿಲ್ ಡಿಸೋಜಾ ಹೇಳಿದ್ದಾರೆ. ಹೀಗಾಗಿ, ಸುನಿಲ್ ಡಿಸೋಜಾ ಅವರು ಅಸ್ತಿತ್ವದಲ್ಲಿರುವ ಟಾಟಾ ಕನ್ಸೂಮರ್ ಬ್ರಾಂಡ್‌ಗಳ ಬೆಳವಣಿಗೆಗಳತ್ತ ಗಮನಹರಿಸಿದ್ದಾರೆ.
More From GoodReturns

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Adani Total Gas SHareಷೇರು ಮಾರುಕಟ್ಟೆ ಕುಸಿದರೂ, ನಷ್ಟ ಕಾಣದ ಷೇರು ಇದು; ಯಾವುದು ಗೊತ್ತಾ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications