ಸೂರತ್ ಇಡೀ ಭಾರತ ದೇಶದಲ್ಲೇ ವಜ್ರದ ಕೇಂದ್ರವಾಗಿದ್ದು, ಇಲ್ಲಿ ಸಾವ್ಜಿ ಧಂಜಿ ಧೋಲಾಕಿಯಾ ಅತ್ಯಂತ ಶ್ರೀಮಂತ ವ್ಯಕ್ತಿ. ಭಾರತದ ಪ್ರಧಾನ ವಜ್ರ ಉತ್ಪಾದನೆ ಹಾಗೂ ರಫ್ತು ಕಂಪನಿಗಳಲ್ಲಿ ಒಂದಾಗಿರುವ ಹರಿಕೃಷ್ಣ ಎಕ್ಸ್‌ಪೋರ್ಟ್ಸ್ ಪ್ರೈವೆಟ್ ಲಿಮಿಟೆಡ್‌ನ ಸ್ಥಾಪಕ ಹಾಗೂ ಅಧ್ಯಕ್ಷರಾಗಿದ್ದು, ಅವರು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ದಿ ಕ್ಯಾಪಿಟಲ್ ಎಂಬ ಸಾಂಪ್ರದಾಯಿಕ-19 ಅಂತಸ್ತಿನ ಕಟ್ಟಡದಲ್ಲಿ ತಮ್ಮ ಪ್ರಧಾನ ಕಚೇರಿಯನ್ನು ಹೊಂದಿದ್ದಾರೆ.
ಸಾವ್ಜಿ ಧಾಂಜಿ ಅವರು ವಜ್ರೋದ್ಯಮದಲ್ಲಿ ಜನಪ್ರಿಯರಾಗಿದ್ದು, ತಮ್ಮ ಮೂರು ಜನ ಸಹೋದರರ ಜತೆ ಸೇರಿಕೊಂಡು ಹರಿ ಕೃಷ್ಣ ಎಕ್ಸ್‌ಪೋರ್ಟ್ಸ್‌ಗೆ ಭದ್ರ ಅಡಿಪಾಯ ಹಾಕಿದರು. ಆ ಮೂಲಕ ವಜ್ರ ಉದ್ಯಮ ಕ್ಷೇತ್ರದಲ್ಲಿ ಪೈಪೋಟಿ ನೀಡಲು ಪ್ರಾರಂಭಿಸಿದ್ದು, ಆ ಮೂಲಕ ಈ ವಲಯದಲ್ಲಿ ಮುಂಚೂಣಿ ಕಂಪನಿಯಾಗಿ ಬೆಳೆಯುವಲ್ಲಿ ಯಶಸ್ವಿಯಾದರು.

ಆದರೆ, ಸಾಕಷ್ಟು ಹೆಸರು ಹಾಗೂ ಯಶಸ್ಸು ಗಳಿಸುವ ನಡುವೆಯೂ ಸಾವ್ಜಿ ಧಾಂಜಿ ಧಂಜಿ ಧೋಲಾಕಿಯಾ ಅವರು ಅತ್ಯಂತ ಜನಪ್ರಿಯತೆ ಗಳಿಸದೆ ಸರಳವಾಗಿ ಇರುವುದನ್ನು ಬಯಸಿದರು. ಉದ್ಯಮದಲ್ಲಿನ ಅವರ ತಂತ್ರಗಾರಿಕೆಯು ದ್ರವ್ಯ ಧೋಲಾಕಿಯಾ ಅವರಿಗೆ ಉದ್ಯಮಶೀಲತಾ ಅನ್ವೇಷಣೆಗಳನ್ನು ಹಾಗೂ ಬದುಕಿನ ಮೌಲ್ಯಗಳನ್ನು ಕಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
1962ರ ಏಪ್ರಿಲ್ 12 ರಂದು ಗುಜರಾತ್‌ನ ಅಮ್ರೇಲಿ ಜಿಲ್ಲೆಗೆ ಸೇರಿದ ದುಧಾಲಾದಲ್ಲಿ ರೈತ ಕುಟುಂಬದಲ್ಲಿ ಜನಿಸಿದರು. ಅವರು ತುಳಸಿ, ಹಿಮ್ಮತ್ ಹಾಗೂ ಘನಶ್ಯಾಮ್ ಎಂಬ ಮೂವರು ಸಹೋದರರನ್ನು ಹೊಂದಿದ್ದಾರೆ. ಆದರೆ, ಕುಟುಂಬದವರು ಎದುರಿಸಿದ ಆರ್ಥಿಕ ಸಮಸ್ಯೆಯಿಂದಾಗಿ 4ನೇ ತರಗತಿಯಲ್ಲಿರುವಾಗಲೇ ಕಲಿಕೆಯನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು.
ಮುಂದೆ ಅವರು ಸೂರತ್‌ನಲ್ಲಿ ತಮ್ಮ ತಂದೆಯ ಚಿಕ್ಕಪ್ಪನ ವಜ್ರದ ವ್ಯಾಪಾರದ ಜತೆಗೆ ಸೇರಿಕೊಳ್ಳುವ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಲ್ಲಿ ತಮ್ಮ ಸಹೋದರರಾದ ಹಿಮ್ಮತ್ ಹಾಗೂ ತುಳಸಿ ಅವರು ಕೂಡ ನಂತರದಲ್ಲಿ ಸೇರಿಕೊಂಡರು.
1992ರಲ್ಲಿ ಹರಿಕೃಷ್ಣ ಎಕ್ಸ್‌ಪೋರ್ಟ್ಸ್ ಸ್ಥಾಪನೆ
1992ರಲ್ಲಿ ಸಾವ್ಜಿ ಅವರು ಸಹೋದರರಾದ ಘನಶ್ಯಾಮ್, ಹಿಮ್ಮತ್ ಹಾಗೂ ತುಳಸಿ ಅವರೊಂದಿಗೆ ಸೇರಿಕೊಂಡು ಹರಿಕೃಷ್ಣ ಎಕ್ಸ್‌ಪೋರ್ಟ್ಸ್ ಲಿಮಿಟೆಡ್‌ನ್ನು ಸ್ಥಾಪಿಸಿದರು. ಕಂಪನಿಯ ಡೈಮಂಡ್-ಕಟ್ಟಿಂಗ್ ಹಾಗೂ ಪಾಲಿಶಿಂಗ್ ಘಟಕವನ್ನು ಕೂಡ ಸೂರತ್‌ನಲ್ಲಿ ಸ್ಥಾಪಿಸಲಾಯಿತು.
ಆದರೆ, ರಫ್ತು ಕಚೇರಿಯನ್ನು ಮುಂಬೈ ನಗರದ ಪ್ರಮುಖ ಸ್ಥಳದಲ್ಲಿ ಸ್ಥಾಪಿಸಿದರು. 2014ರ ವೇಳೆಗೆ 6500 ಉದ್ಯೋಗಿಗಳೊಂದಿಗೆ ವಜ್ರೋದ್ಯಮದಲ್ಲಿ ಪ್ರಮುಖ ಕಂಪನಿಯನ್ನಾಗಿ ಎತ್ತರಕ್ಕೆ ಬೆಳೆಸಿದ್ದರು. ಸಾವ್ಜಿ ಧಂಜಿ ಧೋಲಾಕಿಯಾ ಅವರು 2005ರಲ್ಲೇ KISNA ಎಂಬ ಆಭರಣ ಬ್ರಾಂಡ್ ಅನ್ನು ಹರಿ ಕೃಷ್ಣ ಎಕ್ಸ್‌ಪೋರ್ಟ್ಸ್ ಮೂಲಕ ಪರಿಚಯಿಸಿದ್ದರು.
ಪ್ರಸ್ತುತ KISNA ದೇಶದ ಪ್ರಮುಖ ಜ್ಯವೆಲ್ಲರಿ ಬ್ರಾಂಡ್ ಆಗಿದ್ದು, 6250 ಮಳಿಗೆಗಳನ್ನು ಹೊಂದಿವೆ. ಸಾವ್ಜಿ ಧಂಜಿ ಧೋಲಾಕಿಯಾ ಅವರ ಈ ಕಂಪನಿಯು ತನ್ನ ಉದ್ಯೋಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದಾಗಿ ಮತ್ತಷ್ಟು ಮೆಚ್ಚುಗೆ ಹಾಗೂ ಜನಪ್ರಿಯತೆಯನ್ನು ಗಳಿಸಿದೆ.
ಏನೆಲ್ಲ ಗಿಫ್ಟ್ ನೀಡಿದ್ದಾರೆ?
ಅವರು ಪ್ರತಿ ವರ್ಷ ದೀಪಾವಳಿ ಹಬ್ಬಕ್ಕೆ ಉದ್ಯೋಗಿಗಳಿಗೆ ಜ್ಯುವೆಲ್ಲರಿ, ಕಾರು, ಫ್ಲ್ಯಾಟ್ ಹಾಗೂ ಠೇವಣಿ ಹಣದ ರೂಪದಲ್ಲಿ ಬೋನಸ್ ಅನ್ನು ನೀಡುತ್ತಿದ್ದಾರೆ. 2018ರಲ್ಲಿ ಅವರು ತಮ್ಮ ಉದ್ಯೋಗಿಗಳಿಗೆ 600 ಕಾರುಗಳನ್ನು ಗಿಫ್ಟ್ ನೀಡಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರು.
ಸಾವ್ಜಿ ಅವರು 2016ರಲ್ಲಿಯೂ ತಮ್ಮ ಉದ್ಯೋಗಿಗಳಿಗೆ 400 ಫ್ಲ್ಯಾಟ್ ಹಾಗೂ 1200 ಕಾರುಗಳನ್ನು ಗಿಫ್ಟ್ ನೀಡಿದ್ದರು. ಜೀವನದಲ್ಲಿ ಪ್ರತಿಯೊಬ್ಬರು ಕೂಡ ಸ್ವಂತ ಕಾರು, ಮನೆ ಹೊಂದುವ ಕನಸು ಕಂಡಿರುತ್ತಾರೆ. ಅದನ್ನು ನಾನು ನನಸು ಮಾಡುವ ಪ್ರಯತ್ನ ಮಾಡಿರುವುದಾಗಿ ತಮ್ಮ ದೀಪಾವಳಿ ಬೋನಸ್ ಬಗ್ಗೆ ಹೇಳಿಕೊಂಡಿದ್ದಾರೆ.
ಸಾವ್ಜಿ ಅವರು ಗೌರಿಬೆನ್ ಧೋಲಾಕಿಯಾ ಅವರನ್ನು ವಿವಾಹವಾಗಿದ್ದು, ಹೆಚ್ಚು ಪ್ರಚಾರ ಬಯಸದೆ ವೈಯಕ್ತಿಕ ಬದುಕನ್ನು ಮುನ್ನಡೆಸುತ್ತಿದ್ದಾರೆ. ಈ ದಂಪತಿಗೆ ಮೇನಾ, ನಿಮಿಷ, ದ್ರವ್ಯ ಹಾಗೂ ಕಿಸ್ನಾ ಎಂಬ ನಾಲ್ವರು ಮಕ್ಕಳಿದ್ದಾರೆ. ಸಾವ್ಜಿ ಧಾಂಜಿಯಾ ಅವರು ಒಟ್ಟು 12,000 ಕೋಟಿ ರೂಪಾಯಿ ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ.
ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದರೂ ತಂದೆ ಸಾವ್ಜಿ ಅವರು ತಮ್ಮಮಗ ದ್ರವ್ಯ ಅವರನ್ನು ಸ್ವಂತ ಕಾಲ ಮೇಲೆ ನಿಲ್ಲಬೇಕು. ಯಾವುದೇ ಕಾರಣಕ್ಕೂ ಕುಟುಂಬದ ಹೆಸರನ್ನು ಬಳಸಬಾರದು ಎಂದಿದ್ದರು. ಹೀಗಾಗಿ, ದ್ರವ್ಯ ಮೆಕ್‌ಡೊನಾಲ್ಡ್, ಶೂ ಅಂಗಡಿ, ಕಾಲ್ ಸೆಂಟರ್ ಹೀಗೆ ಹಲವೆಡೆ ಕೆಲಸ ಮಾಡಿದ್ದರು. ದಿನಕ್ಕೆ ಬೇಕರಿಯಲ್ಲಿ 200 ರೂಪಾಯಿ ಸಂಪಾದನೆ ಮಾಡಿ ಆ ಮೂಲಕ ಜೀವನದ ಪಾಠವನ್ನು ಕಲಿತುಕೊಂಡಿದ್ದರು.


Click it and Unblock the Notifications