ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ಪದವಿಗಳು ಅನೇಕ ವ್ಯಕ್ತಿಗಳ ಯಶಸ್ಸಿನಲ್ಲಿ ಮಹತ್ವದ ಪ್ರಭಾವವನ್ನು ವಹಿಸುತ್ತದೆ, ಆದರೆ ಆ ಪದವಿಗಳು ಎಂದು ಯಶಸ್ಸಿಗೆ ಗ್ಯಾರಂಟಿಗಳಾಗಿರುವುದಿಲ್ಲ. ಯಾಕೆಂದರೆ ಯಶಸ್ಸು ಕನಸು, ಶೃದ್ದೆ, ಮತ್ತು ಪರಿಶ್ರಮದ ಫಲವಾಗಿ ಸಿಗುತ್ತದೆ.
ಪುಣೆ ಮೂಲದ ನವನಾಥ್ ಯೆವಲೆ, ಕಷ್ಟಗಳನ್ನು ಮೆಟ್ಟಿ ನಿಂತು ಚಹಾ ಉದ್ಯಮ ಮೂಲಕವೇ ಕೋಟ್ಯಾಧಿಪತಿಯಾದರು. ಐಐಟಿ ಅಥವಾ ಐಐಎಂಗಳಿಂದ ಪದವಿ ಪಡೆಯದಿದ್ದರೂ ಇಂದು ಲಾಭದಾಯಕ ಉದ್ಯಮವನ್ನು ಕಟ್ಟಿ ಬೆಳೆಸಿದ್ದಾರೆ. ಸಹಾ ಮಾರಾಟದ ಸಣ್ಣ ಕಂಪನಿಯಿಂದ ವಾರ್ಷಿಕವಾಗಿ ಕೋಟಿಗಳ ಆದಾಯ ಗಳಿಸುತ್ತಿರುವ ಯೆವಲೆ ಅವರು ಅನೇಕ ಯುವಕರಿಗೆ ಪ್ರೇರೇಪಕರಾಗಿದ್ದಾರೆ.

ನವನಾಥ್ ಯೆವಲೆ ಯಾರು?
ನವನಾಥ್ ಯೆವಲೆ ಅವರು ಯೆವಾಲೆ ಟೀ ಹೌಸ್ ಪುಣೆಯ ಅತ್ಯಂತ ಪ್ರಸಿದ್ಧ ಚಹಾ ಅಂಗಡಿ ಮಾಲೀಕರಾಗಿದ್ದಾರೆ. ಪುಣೆಯಲ್ಲಿ ಮೂರು ಟೀ ಸ್ಟಾಲ್‌ಗಳನ್ನು ಹೊಂದಿರುವ ಶ್ರೀಮಂತ ಉದ್ಯಮಿಯಾಗಿದ್ದಾರೆ. ಚಹಾ ಮಾರಾಟದಿಂದ ಯೆವಾಲೆಯ ವಾರ್ಷಿಕ ಆದಾಯವು ಕೋಟ್ಯಂತರ ರೂಪಾಯಿಗಳಾಗಿದೆ.
ಚಹಾ ಮಾರಾಟಗಾರರಾಗಿದ್ದ ಪುತ್ರನಾಗಿ ಜನಿಸಿದ ನವನಾಥ್ ಅವರು ತಂದೆಯ ಮರಣ ನಂತರ ಜೀವನೋಪಾಯಕ್ಕಾಗಿ ಇತರ ಮಾರ್ಗಗಳನ್ನು ಅರಿಸಿಕೊ ಳ್ಳುವುದು ಅನಿವಾರ್ಯವಾಗಿತ್ತು. ತಂದೆಯ ಮರಣದ ನಂತರ ಯೆವಾಲೆಯ ಕುಟುಂಬದ ಆರ್ಥಿಕ ಪರಿಸ್ಥಿತಿಯು ಹದಗೆಟ್ಟಿತ್ತು. ನಗರದಲ್ಲಿ ಸಾಕಷ್ಟು ಚಹಾ ಪ್ರಿಯರಿದ್ದರೂ, ಕೆಲವು ಉತ್ತಮ ಚಹಾ ಅಂಗಡಿಗಳು ಮಾತ್ರ ಚಹಾ ಪ್ರಿಯರ ಅಗತ್ಯ ಪೂರೈಸಬಲ್ಲವು ಎಂದು ಯೇವಾಲೆ ಅರಿತುಕೊಂಡಿದ್ದರು.
ಇದಕ್ಕಾಗಿ ವರ್ಷಗಳ ಕಾಲ ಸಂಶೋಧನೆ ಮತ್ತು ನಾಲ್ಕು ವರ್ಷಗಳ ಚಹದ ಕುರಿತು ಅಧ್ಯಯನದ ಮಾಡಿ, ಯೆವಲೆ ಮತ್ತು ಅವರ ಸಹೋದರರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಉಳಿತಾಯದ ಹಣವನ್ನು ಹಾಕಿ 2011 ರಲ್ಲಿ ಯೆವಲೆ ಟೀ ಹೌಸ್ ಅನ್ನು ತೆರೆದರು.
ಯೆವಲೆ ಪುಣೆಯ ನೆಚ್ಚಿನ ಟೀ ಹೌಸ್
ಯೆವಲೆ ಟೀ ಹೌಸ್ ಅನ್ನು 2011 ರಲ್ಲಿ ಪ್ರಾರಂಭಿಸಲಾಯಿತು. ಗ್ರಾಹಕರಿಗೆ ಯೆವಾಲೆ ಟೀ ರುಚಿ ಹತ್ತತೊಡಗಿತು. ಸಾಲು ಸಾಲು ಗ್ರಾಹಕರು ಯೆವಾಲೆ ಟೀ ಹೌಸ್ ನತ್ತ ಬರಲಾರಂಭಿಸಿದರು. ಟೀ ಹೌಸ್‌ನ ಪ್ರತಿಯೊಬ್ಬ ಗ್ರಾಹಕನೂ ಅವರ ಆಯ್ಕೆಯ ಚಹಾವನ್ನು ಸ್ವೀಕರಿಸುವುದನ್ನು ಯೆವಾಲೆ ಅವರು ಖುದ್ದ ಮೇಲ್ವಿಚಾರಣೆ ಮಾಡುತ್ತಿದ್ದರು. ಕಾಲಾನಂತರದಲ್ಲಿ, ಅವರ ಚಹಾ ಕಂಪನಿಯು ವೇಗವಾಗಿ ಬೆಳೆದುನಿಂತಿತು. ಯೆವಾಲೆ ಪುಣೆಯಲ್ಲಿ ಒಂದು ಶಾಪ್ ನಿಂದ ಎರಡಕ್ಕೆ ಏರಿಕೆಯಾಯಿತು.
ಮಾದ್ಯಮ ವರದಿಗಳ ಪ್ರಕಾರ, ಯೆವಾಲೆ ಟೀ ಹೌಸ್ ಪ್ರಸ್ತುತ ಪ್ರತಿ ತಿಂಗಳು 10 ಲಕ್ಷ ರೂಪಾಯಿಯಿಂದ 12 ಲಕ್ಷ ರೂಪಾಯಿಗಳನ್ನು ಹಾಗೂ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಗಳಿಸುತ್ತದೆ. ಯೆವಲೆ ಟೀ ಹೌಸ್ ವಿವಿಧ ಬಗೆ ಚಹಾಗಳು, ಬಿಸ್ಕತ್ತುಗಳು ಮತ್ತು ತಂಪು ಪಾನೀಯಗಳನ್ನು ವ್ಯಾಪಾರ ಮಾಡುತ್ತದೆ.
ಒಂದು ಟೀ ಹೌಸ್‌ನಲ್ಲಿ ಸರಿಸುಮಾರು ಹನ್ನೆರಡು ಮಂದಿ ಕೆಲಸಗಾರರಿದ್ದಾರೆ. ಯೆವಲೆ ಮತ್ತಷ್ಟು ದೊಡ್ಡದಾಗಿ ಬೆಳೆಯಲು, ತಮ್ಮ ವ್ಯಾಪಾರವನ್ನು ಭಾರತದ ಹಲವು ನಗರಗಳಿಗೆ ಕೊಂಡೊಯ್ಯಲ್ಲು ಯೆವಲೆ ಸಹೋದರರು ಶ್ರಮಿಸುತ್ತಿದ್ದಾರೆ.


Click it and Unblock the Notifications