ಆರ್‌ಪಿಜಿ ಎಂಟರ್‌ಪ್ರೈಸೆಸ್‌ಗೆ ಸೇರಿದ ಸೀಟ್ ಲಿಮಿಟೆಡ್ (Ceat Ltd) ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹುದ್ದೆಗೆ ಅನಂತ್ ಗೋಯೆಂಕಾ ಅವರು 2023ರ ಮಾರ್ಚ್‌ನಲ್ಲಿ ರಾಜೀನಾಮೆ ನೀಡಿದ್ದರು. ಇದೀಗ ಅವರು ಟೈರ್ ತಯಾರಕರ ಉಪಾಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅವರು 2012ರ ಏಪ್ರಿಲ್ 1ರಿಂದ ಕಂಪನಿಯ ಎಂಡಿ ಹಾಗೂ ಸಿಇಒ ಆಗಿದ್ದರು. ಅನಂತ್ ಅವರ ಬಳಿಕ ಅರ್ನಾಬ್ ಬ್ಯಾನರ್ಜಿ ಅವರು ಕಂಪನಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಗ್ರೂಪ್ ಮಟ್ಟದಲ್ಲಿ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಕಂಪನಿ ತೊರೆದಿರುವುದಾಗಿ ಈ ಹಿಂದೆ ಹೇಳಿದ್ದರು. CEAT ಲಿಮಿಟೆಡ್‌ನಲ್ಲಿ ಬೋರ್ಡ್ ಸದಸ್ಯರಾಗಿ ಮುಂದುವರಿದ್ದಾರೆ.

ಕಂಪನಿಯ ಆಡಳಿತ ಮಂಡಳಿಯು ಗೋಯೆಂಕಾ ಅವರನ್ನು ಕಾರ್ಯನಿರ್ವಹಣೇತರ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಕಗೊಳಿಸಿದ್ದು ಆ ಮೂಲಕ ಉಪಾಧ್ಯಕ್ಷ ಹುದ್ದೆ ನೀಡುವ ಮೂಲಕ 2023ರ ಏಪ್ರಿಲ್ 1ರಿಂದ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಅನಂತ್ ಗೋಯೆಂಕಾ ಅವರು ಆರ್‌ಪಿಜಿ ಗ್ರೂಪ್‌ನ ಅಧ್ಯಕ್ಷ ಹರ್ಷ ಗೋಯಂಕಾ ಅವರ ಮಗ ಎನ್ನುವುದು ಅನೇಕರಿಗೆ ಗೊತ್ತಿಲ್ಲ.
ಅವರು ಸುಮಾರು 33,000 ಕೋಟಿ ರೂಪಾಯಿ ಆಸ್ತಿ ಮೌಲ್ಯದ ಆರ್‌ಪಿಜಿ ಗ್ರೂಪ್‌ನ ಉತ್ತರಾಧಿಕಾರಿಯಾಗಿದ್ದಾರೆ. ಜತೆಗೆ ಕಂಪನಿಯ ಮಾರುಕಟ್ಟೆ ಬಂಡವಾಳವು 370 ಕೋಟಿಯಿಂದ 5800 ಕೋಟಿ ರೂಪಾಯಿಗೆ ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢಗೊಳಿಸುವಲ್ಲಿ 10 ವರ್ಷಗಳ ಕಾಲ ಅವರು ದುಡಿದಿದ್ದರು. ಆ ಮೂಲಕ ಕಂಪನಿಯನ್ನು ಕೂಡ ಯಶಸ್ವಿಯಾಗಿ ಮುನ್ನಡೆಸಿದ್ದರು.
ಅವರು ತಮ್ಮ ಉದ್ಯಮದ ಬೆಳವಣಿ ಕಡೆಗೆ ಗಮನಹರಿಸುವ ನಡುವೆಯೂ ಫಿಟ್‌ನೆಸ್ ಅನ್ನು ಕಾಪಾಡುವುದಕ್ಕೂ ಹೆಚ್ಚಿನ ಸಮಯ ನೀಡುತ್ತಿದ್ದರು. ಜತೆಗೆ ಅವರು ಒಳ್ಳೆಯ ಟೂರ್ ಮಾಡುವ ವ್ಯಕ್ತಿ ಕೂಡ ಹೌದು. ಅವರು ಸ್ಕ್ವ್ಯಾಷ್ ಆಡುವುದಕ್ಕೆ ಹಾಗೂ ರನ್ನಿಂಗ್ ಮಾಡುವತ್ತ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.
ಗೋಯೆಂಕಾ ಅವರು ಯುಎಸ್‌ನ ನಾರ್ತ್‌ವೆಸ್ಟರ್ನ್ ಯೂನಿವರ್ಸಿಟಿಯ ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಜತೆಗೆ ಪೆನ್ಸಿಲ್ವೇನಿಯಾ ವಿವಿಯ ವಾರ್ಟನ್ ಶಾಲೆಯಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಕೂಡ ಪಡೆದುಕೊಂಡಿದ್ದಾರೆ.
CEAT ಗಿಂತ ಮೊದಲು ಅನಂತ್ ಗೋಯೆಂಕಾ ಅವರು ಕೆಇಸಿ ಇಂಟರ್‌ನ್ಯಾಷನಲ್‌ನ ಅವಿಭಾಗ್ಯ ಅಂಗವಾಗಿದ್ದು, ಅಲ್ಲಿ ಡಿಸ್ಟ್ರೀಬೂಷನ್ ಚೈನ್ ಹಾಗೂ ಪ್ಲ್ಯಾನಿಂಗ್ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಹೊಂದಿದ್ದರು.
ಆರ್‌ಪಿಜಿ ಗ್ರೂಪ್‌ನ ವೆಬ್‌ಸೈಟ್ ಪ್ರಕಾರ, ಅನಂತ್ ಗೋಯೆಂಕಾ ಅವರು ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಅಕ್ಸೆಂಚರ್ ಹಾಗೂ ಮೋರ್ಗಾನ್ ಸ್ಟಾನ್ಲಿಯಂಥಹ ಎಂಎನ್‌ಸಿಯಲ್ಲಿಯೂ ಕೆಲಸ ಮಾಡಿದ್ದಾರೆ. ಗೋಯೆಂಕಾ ಅವರು 2013ರಲ್ಲಿ ಆಟೋಮೋಟಿವ್ ಟೈರ್ ತಯಾರಕರ ಸಂಘ(ಎಟಿಎಂಎ)ದ ಅಧ್ಯಕ್ಷರು ಕೂಡ ಆಗಿದ್ದರು.


Click it and Unblock the Notifications