ಶ್ರೇಷ್ಠ ಕಂಪ್ಯೂಟರ್ ವಿಜ್ಞಾನಿಯಾಗಿರುವ ಅನಿರುದ್ಧ್ ದೇವಗನ್ ಅವರು ದೆಹಲಿಯ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಅನಿರುದ್ಧ್ ದೇವಗನ್, ಪ್ರಸ್ತುತ ಸಾಫ್ಟ್‌ವೇರ್ ದೈತ್ಯ ಸಂಸ್ಥೆಯಾಗಿರುವ "ಕ್ಯಾಡೆನ್ಸ್ ಡಿಸೈನ್ ಸಿಸ್ಟಮ್ಸ್"ನ ಸಿಇಒ ಆಗಿದ್ದು, ಇದು 5,17,000 ಕೋಟಿ ರೂಪಾಯಿ ($ 62.14 ಬಿಲಿಯನ್) ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
ಅನಿರುದ್ಧ್ ದೇವಗನ್ ಅವರ ತಂದೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿದ್ದು, ಹೀಗಾಗಿ ಇವರು ಐಐಟಿ ಕ್ಯಾಂಪಸ್‌ನಲ್ಲಿ ಬೆಳೆದರು. ಅನಿರುದ್ಧ್ ದೇವಗನ್ ಕೂಡಾ ಐಐಟಿಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ದೇವಗನ್ ತಮ್ಮ ತಂದೆಯಂತೆ ಶೈಕ್ಷಣಿಕ ಕ್ಷೇತ್ರದತ್ತ ಒಲವು ತೋರುವ ಬದಲು ಕಾರ್ಪೊರೇಟ್ ಜಗತ್ತಿಗೆ ಪ್ರವೇಶಿಸಲು ನಿರ್ಧರಿಸುತ್ತಾರೆ.
ಅನಿರುದ್ಧ್ ದೇವಗನ್ ಅವರು ತಮ್ಮ ಶಾಲಾ ಶಿಕ್ಷಣವನ್ನು ದೆಹಲಿ ಪಬ್ಲಿಕ್ ಸ್ಕೂಲ್ (DPS) ನಲ್ಲಿ ಮಾಡಿ ನಂತರ ಐಐಟಿ ದೆಹಲಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಇದಾದ ನಂತರ ಭಾರತವನ್ನು ತೊರೆದ ಅನಿರುದ್ಧ್ ದೇವಗನ್ ಅಮೇರಿಕಾಕ್ಕೆ ತೆರಳಿ ಅಲ್ಲಿನ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯ (Carnegie Mellon University) ದಿಂದ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪದವಿ ಪಡೆದುಕೊಂಡರು.
ಲೆಜೆಂಡರಿ ಐಟಿ ಕಂಪನಿಯಾದ ಐಬಿಎಂನೊಂದಿಗೆ ಅನಿರುದ್ಧ್ ದೇವಗನ್ ಅವರು ತಮ್ಮ ವೃತ್ತಿ ಬದುಕಿನ ಪ್ರಯಾಣವನ್ನು ಆರಂಭಿಸಿದರು. ರಿಸರ್ಚ್ ಆಂಡ್ ಮ್ಯಾನೇಜ್‌ಮೆಂಟ್‌ನ ವಿವಿಧ ವಿಭಾಗಗಳಲ್ಲಿ ಐಬಿಎಂನಲ್ಲಿ ಕೆಲಸ ಮಾಡಿದ ಒಂದು ದಶಕದ ಬಳಿಕ 6 ವರ್ಷಗಳ ಕಾಲ ಮ್ಯಾಗ್ಮಾ ಡಿಸೈನ್ ಆಟೊಮೇಷನ್‌ನಲ್ಲಿ ಕರ್ತವ್ಯ ನಿರ್ವಹಿಸಿದರು.
2017 ರಲ್ಲಿ ದೇವಗನ್ ಅವರು ಕ್ಯಾಡೆನ್ಸ್ ಡಿಸೈನ್ ಸಿಸ್ಟಮ್ಸ್ ಅಧ್ಯಕ್ಷ ಸ್ಥಾನಕ್ಕೇರಿದ್ದು, ಅಂತಿಮವಾಗಿ 2021 ರಲ್ಲಿ ನಿರ್ದೇಶಕರ ಮಂಡಳಿ ಮತ್ತು ಸಿಇಒ ಹುದ್ದೆ ಅಲಂಕರಿಸಿಕೊಂಡರು. ಕ್ಯಾಲಿಫೊರ್ನಿಯದ ಸಿಲಿಕಾನ್ ವ್ಯಾಲಿಯಲ್ಲಿ ವಾಸವಾಗಿರುವ ದೇವಗನ್ ಅವರು ಭಾರತೀಯ ಮೂಲದವರಾಗಿರುವ ಮತ್ತು ಐಟಿ ಕ್ಷೇತ್ರದ ದಿಗ್ಗಜರೆಣಿಸಿಕೊಂಡಿರುವ ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ, ಗೂಗಲ್‌ನ ಸುಂದರ್ ಪಿಚೈ, ಅರಿಸ್ಟಾದ ಜಯಶ್ರೀ ಉಲ್ಲಾಲ್ ಮತ್ತು ಐಬಿಎಂನ ಅರವಿಂದ್ ಕೃಷ್ಣ ಅಂತವರ ಸಾಲಿನಲ್ಲಿದ್ದಾರೆ.
ಅನಿರುದ್ಧ್ ದೇವಗನ್ ಸಿಇಒ ಆಗಿದ್ದಾಗ, ಅವರಿಗೆ ಮೂಲ ವೇತನದ ಶೇಕಡ 125 ಟಾರ್ಗೆಟ್ ಬೋನಸ್‌ನೊಂದಿಗೆ 725,000 ಡಾಲರ್ ಮೂಲ ವೇತನವನ್ನು ನೀಡಲಾಯಿತು. ಮಾಧ್ಯಮ ವರದಿಗಳ ಪ್ರಕಾರ, 2022 ರಲ್ಲಿ ಕ್ಯಾಡೆನ್ಸ್‌ನ ಅಧ್ಯಕ್ಷ ಮತ್ತು ಸಿಇಒ ಆಗಿ ಅವರ ವಾರ್ಷಿಕ ವೇತನ 2,201 ಕೋಟಿ ರೂಪಾಯಿ (ಅಂದಾಜು 264 ಮಿಲಿಯನ್ ಡಾಲರ್) ಆಗಿದೆ.


Click it and Unblock the Notifications
