ಕಡುಬಡತನದಿಂದ ಶ್ರೀಮಂತಿಕೆಗೆ ಏರಿದ ಭಾರತದ ಅತ್ಯಂತ ಸ್ಪೂರ್ತಿದಾಯಕ ಈ ಕಥೆಯು ದೇಶದ ಕೋಟಿಗಟ್ಟಲೆ ಮನೆಗಳ ಭಾಗವಾಗಿದೆ. ಯಾಕೆಂದರೆ ಈ ಕಥೆಯು "ಎಂಡಿಎಚ್" ಮಸಾಲ ಬ್ರ್ಯಾಂಡ್ ಅನ್ನು ಪ್ರತಿ ಮನೆ- ಮನೆಯಲ್ಲೂ ಚಿರಪರಿಚಿತವನ್ನಾಗಿಸಿದ ವ್ಯಕ್ತಿಗೆ ಸೇರಿದೆ. ಸದ್ಯ ಎಂಡಿಎಚ್ ದೇಶದ ಅಗ್ರಗಣ್ಯ ಮಸಾಲ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿದೆ
ದೇಶದ ಪ್ರಖ್ಯಾತ ಮಸಾಲ ಬ್ರ್ಯಾಂಡ್ ಎಂಡಿಎಚ್ ಮಸಾಲ ಸಂಸ್ಥೆಯ ಸಂಸ್ಥಾಪಕ ಧರ್ಮಪಾಲ್ ಗುಲಾಟಿ 'ಮಸಾಲೆ ರಾಜ' ಎಂದು ಖ್ಯಾತಿ ಜೊತೆಗೆ ಸಂಪತ್ತನ್ನು ಗಳಿಸಿದರು. ಮಾತ್ರವಲ್ಲದೇ ತಮ್ಮ ಮಸಾಲ ಬ್ರ್ಯಾಂಡ್ ಎಂಡಿಎಚ್ ಉತ್ಪನ್ನಗಳನ್ನು ಲಕ್ಷಾಂತರ ಅಡಿಗೆ ಮನೆಗಳ ಮಸಾಲೆಯ ಘಮದ 'ಆಯ್ಕೆ'ಯನ್ನಾಗಿ ಮಾಡಲು ತಮ್ಮ ಕೊನೆಗಾಲದವರೆಗೂ ಶ್ರಮಿಸಿದರು.

ಎಂಡಿಎಚ್ ಮಾಲೀಕರ ಮುಖ ಚಿರಪರಿಚಿತವಾಗಿದ್ದು "ಮಹಾಶಯ್" ಎಂಬ ಹೆಸರಿನಿಂದ ಜನಪ್ರಿಯರಾಗಿದ್ದಾರೆ. ಅವರು ಎಂಡಿಎಚ್ ಮಸಾಲ ಕಂಪನಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಅಜ್ಜ ಎಂದೇ ಗುರುತಿಸಲ್ಪಡುತ್ತಿದ್ದರು. ಎಂಡಿಎಚ್ ಬ್ರ್ಯಾಂಡ್ ಕಟ್ಟಿ ಬೆಳೆಸಿದ ಧರ್ಮಪಾಲ್ ಗುಲಾಟಿ ಡಿಸೆಂಬರ್ 2020 ರಲ್ಲಿ 98ನೇ ವಯಸ್ಸಿನಲ್ಲಿ ನಿಧನರಾದರೂ ಅವರ ಸ್ಪೂರ್ತಿದಾಯಕ ಜೀವನ ಕಥೆ ಜೀವಂತವಾಗಿದೆ.
ಎಲ್ಲರ ಗಮನ ಸೆಳೆದ ಉದ್ಯಮಿಯ ಕಥೆಯು 1923ರಲ್ಲಿ ಪ್ರಾರಂಭವಾಗುತ್ತದೆ. ಅವರು ಈಗೀನ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಜನಿಸಿದರು. ಇವರ ತಂದೆ ಮಸಾಲೆ ವ್ಯಾಪಾರಿ ಚುನ್ನಿ ಲಾಲ್ , ತಾಯಿ ಚನ್ನನ್ ದೇವಿ. ಚಿಕ್ಕಂದಿನಿಂದಲೇ ತಂದೆಗೆ ಸಹಾಯ ಮಾಡಲು ಆರಂಭಿಸಿದ ಅವರು ಕುಟುಂಬದ ಮಸಾಲ ಪದಾರ್ಥಗಳ ವ್ಯಾಪಾರವನ್ನು ಕಲಿತರು. ಆದರೆ, 1947ರಲ್ಲಿ ದೇಶ ವಿಭಜನೆಯಾದಾಗ, ಜೇಬಿನಲ್ಲಿದ್ದ 1,500 ರೂ. ನಂಬಿಕೊಂಡು ಧರ್ಮಪಾಲ್ ಗುಲಾಟೆ ಭಾರತಕ್ಕೆ ಹೊರಟು ಬಂದರು.
650 ರೂ.ಗೆ ಕುದುರೆ ಗಾಡಿ ಖರೀದಿಸಿ ಆ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಸಾಲೆ ಮಾರಾಟ ಮಾಡಲು ಪ್ರಾರಂಭಿಸಿದರು.ಬಳಿಕ ದೆಹಲಿಯಕರೋಲ್ ಬಾಗ್ ಪ್ರದೇಶದಲ್ಲಿ ಪುಟ್ಟ ಕಿರಾಣಿ ಅಂಗಡಿ ತೆರೆದು ಇದಕ್ಕೆ ಸಿಯಾಲ್‌ಕೋಟ್‌ನ ಮಹಾಶಿಯಾನ್ ದಿ ಹಟ್ಟಿ (ಎಂಡಿಎಚ್) - "ಡೆಗ್ಗಿ ಮಿರ್ಚ್ ವಾಲೆ" ಎಂದು ಹೆಸರಿಟ್ಟರು. 1959ರಲ್ಲಿ ತಮ್ಮದೇ ಕಂಪನಿಯನ್ನು ಅವರು ಸ್ಥಾಪಿಸಿದರು. ಪ್ರಯತ್ನಕ್ಕೆ ಎಂದಿಗೂ ಕೊನೆಯಿಲ್ಲಎಂಬಂತೆ ಧರ್ಮಪಾಲ್ ಗುಲಾಟಿ ತಮ್ಮ ಪುಟ್ಟಅಂಗಡಿಯನ್ನು ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಪ್ರಸಿದ್ಧವಾದ ಬಹುಕೋಟಿ ಉದ್ಯಮವಾಗಿ ಪರಿವರ್ತಿಸಿದರು.
2017 ರಲ್ಲಿ 21 ಕೋಟಿ ರೂ.ಗಳ ವೇತನ ಪಡೆಯುತ್ತಿದ್ದ ಧರ್ಮಪಾಲ್ ಗುಲಾಟಿ ಅವರು, ಆ ವೇಳೆ ಭಾರತದ FMCG ವಲಯದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒ ಆದರು. ಅವರ ನಾಯಕತ್ವದಲ್ಲಿ ಮುನ್ನಡೆದ ಎಂಡಿಎಚ್ ಮಸಾಲೆ 1,000 ಕೋಟಿ ರೂ. ವ್ಯವಹಾರವಾಗಿ ಪರಿವರ್ತನೆಯಾಯಿತು. ಅವರು ನಿಧನರಾದಾಗ ಅವರ ನಿವ್ವಳ ಮೌಲ್ಯ ಸುಮಾರು 5,000 ಕೋಟಿ ರೂ.ಗಳಷ್ಟಿತ್ತು ಎಂದು ಹೇಳಲಾಗುತ್ತದೆ. ಮಸಾಲೆ ಬ್ರ್ಯಾಂಡ್ ಬೆಳೆಸಿ ವಾರ್ಷಿಕ 21 ಕೋಟಿ ಸಂಬಳ ಗಳಿಸುತ್ತಿದ್ದರೂ ಗುಲಾಟಿ ಅವರು ತಮ್ಮ ಸಂಬಳದಲ್ಲಿ ಬಹುಪಾಲು ದೇಣಿಗೆ ನೀಡುತ್ತಿದ್ದರು. 2 019ರಲ್ಲಿ ಇವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಗೌರವ ನೀಡಿತ್ತು.
ಪಾಕ್‌ನ ಶ್ರೀಮಂತ ಹಿಂದೂ ವ್ಯಕ್ತಿ
ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಕಡಿಮೆ ಇರುವಂತೆ ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆಯು ಕಡಿಮೆಯಾಗಿದೆ. ಅಲ್ಲಿ ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಪರಿಗಣಿಸಲಾಗುತ್ತದೆ. ಆದರೂ ಕೂಡಾ ಪಾಕಿಸ್ತಾನದಲ್ಲಿ ಕೆಲವು ಹಿಂದೂಗಳು ಭಾರೀ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದು, ಶ್ರೀಮಂತರು ಆಗಿದ್ದಾರೆ. ಪಾಕಿಸ್ತಾನದ ಅತೀ ಶ್ರೀಮಂತ ಹಿಂದೂ ವಕ್ತಿಯಾದ ದೀಪಕ್ ಪೆರ್ವಾನಿ ಆಗಿದ್ದಾರೆ.


Click it and Unblock the Notifications