ಅಂಗವೈಕಲ್ಯ, ದಿವಾಳಿತನ ಮೆಟ್ಟಿ ನಿಂತು 798 ಕೋಟಿ ರೂಪಾಯಿ ಮೌಲ್ಯದ ಕಂಪನಿ ಕಟ್ಟಿದರಿವರು!

ನಿಮ್ಮ ಭವಿಷ್ಯವನ್ನು ಸುಧಾರಿಸಲು ನೀವು ಬಯಸಿದರೆ, ಹಾಗೂ ಅದಕ್ಕಾಗಿ ಪ್ರತಿದಿನ ಸಾಕಷ್ಟು ಪ್ರಯತ್ನಗಳನ್ನು ಮಾಡಿ ಕಷ್ಟಪಟ್ಟು ದುಡಿದರೆ ನಿಸ್ಸಂದೇಹವಾಗಿ ಅಂತಿಮವಾಗಿ ಯಶಸ್ಸು ಸಿಕ್ಕೇ ಸಿಗುತ್ತದೆ. ಒಂದು ಕಾಲದಲ್ಲಿಅಂಗಡಿ ತೆರೆಯಲು ಸಾಲ ತೆಗೆದುಕೊಂಡಿದ್ದ ರಾಮ್ ಚಂದ್ರ ಅಗರ್ವಾಲ್ ಇಂದು 798 ಕೋಟಿ ರೂಪಾಯಿ ಕಂಪನಿಯ ಒಡೆಯರಾಗಿದ್ದಾರೆ.

ಅವರು ದಿವ್ಯಾಂಗರಾಗಿದ್ದರೂ ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕಂಪನಿ ಕಟ್ಟಿದ ರೀತಿ ಸಮಾಜಕ್ಕೆ ದೊಡ್ಡ ಉದಾಹರಣೆಯಾಗಿದೆ. ಅಗರ್ವಾಲ್ ಅವರು ಸಣ್ಣಅಂಗಡಿಯಿಂದ ಬಹುಕೋಟಿ ವ್ಯವಹಾರಗಳನ್ನು ನಿರ್ವಹಿಸಿ ಮಿಲಿಯನೇರ್ ಆಗುವವರೆಗೆ ಬಹಳ ಪರಿಶ್ರಮಪಟ್ಟಿದ್ದಾರೆ. ಇಚ್ಛಾಶಕ್ತಿ ಮತ್ತು ಕಠಿಣ ಪರಿಶ್ರಮದ ಬಲದ ಮೇಲೆ, ಸ್ವಂತ ಹಣೆಬರಹವನ್ನು ತಾವೇ ಬರೆದುಕೊಂಡ ರಾಮಚಂದ್ರ ಅಗರ್ವಾಲ್ ಅವರ ಯಶಸ್ಸಿನ ಕಥೆ ಇಲ್ಲಿದೆ.

 ಅಂಗವೈಕಲ್ಯ, ದಿವಾಳಿತನ ಮೆಟ್ಟಿ ನಿಂತು ಕಂಪನಿ ಕಟ್ಟಿದರಿವರು!

ರಾಮಚಂದ್ರ ಅಗರ್ವಾಲ್ ಯಾರು?

ರಾಮ್ ಅವರಿಗೆ ಅಂಗವೈಕಲ್ಯವಿದ್ದರೂ, ಅವರು ತಾನು ಯಾವುದಕ್ಕೂ ಅಸಮರ್ಥನೆಂದು ಭಾವಿಸಿರಲಿಲ್ಲ. ಅವರು ಉದ್ಯಮಿಯಾಗುವ ಮೊದಲು ಸಾಧಾರಣ ವ್ಯವಹಾರ ಹೊಂದಿದ್ದ ಸಾಮಾನ್ಯ ವ್ಯಾಪಾರಿಯಾಗಿದ್ದರು. 1986ರಲ್ಲಿ ಓದು ಮುಗಿಸಿದ ಬಳಿಕ ಪುಟ್ಟದಾದ ಫೋಟೋಸ್ಟಾಟ್ ಅಂಗಡಿ ತೆರೆಯಲು ಸಾಲ ಮಾಡಿದ್ದರು.

ಆದರೆ ಮತ್ತಷ್ಟು ಬೆಳೆಯಬೇಕೆನ್ನುವ ಮಹದಾಸೆಯಿಂದ ಜವಳಿ ಉದ್ಯಮಕ್ಕೆ ಪ್ರವೇಶಿಸಿದರು. ಅವರು ಕೋಲ್ಕತ್ತಾದ ಲಾಲ್ ಬಜಾರ್‌ನಲ್ಲಿ ಬಟ್ಟೆ ಅಂಗಡಿಯನ್ನು ತೆರೆಯುವ ಮೂಲಕ ತಮ್ಮ ಅದೃಷ್ಟ ಪರೀಕ್ಷಿಸಿದರು. ಸರಿಸುಮಾರು ಹದಿನೈದು ವರ್ಷಗಳ ಕಾಲ, ರಾಮಚಂದ್ರ ಅಗರ್ವಾಲ್ ಕೋಲ್ಕತ್ತಾದಲ್ಲಿ ಬಟ್ಟೆ ವ್ಯಾಪಾರ ಮುನ್ನಡೆಸಿದರು. ಮತ್ತೆ ಉದ್ಯಮ ಮತ್ತಷ್ಟು ಬೆಳೆಸಬೇಕೆಂಬ ಆಸೆಯಿಂದ ದೆಹಲಿಗೆ ತೆರಳಿ ಕೋಲ್ಕತ್ತಾದಲ್ಲಿದ್ದ ತಮ್ಮ ಅಂಗಡಿಯನ್ನು ಮುಚ್ಚಿದರು.

ರಾಮ್ ಚಂದ್ರ ಅಗರ್ವಾಲ್ ರ ಯಶಸ್ಸಿನ ಕಥೆ:

2001-2002 ರಲ್ಲಿ ವಿಶಾಲ್ ರೀಟೇಲ್ ಗೆ ಅಡಿಪಾಯ ಹಾಕಿದರು. ವಿಶಾಲ್ ರಿಟೇಲ್ ವ್ಯಾಪಾರವು ಹಂತಹಂತವಾಗಿ ವಿಸ್ತರಿಸಿದಂತೆ ಮುಂದೆ ಇದು ವಿಶಾಲ್ ಮೆಗಾ ಮಾರ್ಟ್ ಆಗಿ ಬದಲಾಯಿತು. ಆ ಮೂಲಕ ಕೋಟ್ಯಾಂತರ ರೂಪಾಯಿಯ ಮಾಲೀಕರಾದರು.

ಇದರ ಬೆನ್ನಲ್ಲೇ ರಾಮಚಂದ್ರ ಅಗರ್ವಾಲ್ ಅವರ ಉದ್ಯಮ ವಿಶಾಲ್ ಮೆಗಾ ಮಾರ್ಟ್ ಷೇರು ಎಕ್ಸ್ಚೇಂಜ್ ಕೇಂದ್ರದಲ್ಲಿ ಲಿಸ್ಟ್ ಆಯಿತು. ಆದರೆ ಕಂಪನಿ ದಿವಾಳಿಯಾದಾಗ ರಾಮಚಂದ್ರ ತಮ್ಮ ಪ್ರಯಾಣದಲ್ಲಿ ಕೆಟ್ಟ ಹಂತವನ್ನು ಅನುಭವಿಸಿದರು. 2008ರಲ್ಲಿ ಷೇರು ಮಾರುಕಟ್ಟೆ ಕುಸಿತದ ಪರಿಣಾಮವಾಗಿ ಅವರ , ವಿಶಾಲ್ ಮೆಗಾ ಮಾರ್ಟ್ ಉದ್ಯಮ ಸಂಪೂರ್ಣವಾಗಿ ಕುಸಿಯಿತು. ಹೀಗಾಗಿ ಸಾಲ ಅವರನ್ನು ಆವರಿಸಿಕೊಂಡಿತು.

ಇದರ ಪರಿಣಾಮ ಕಂಪನಿಯ ಷೇರುಗಳನ್ನು ಸಹ ಮಾರಾಟ ಮಾಡಬೇಕಾಯಿತು. ಶ್ರೀರಾಮ್ ಗ್ರೂಪ್ ತನ್ನ ಕಂಪನಿಯಾದ ವಿಶಾಲ್ ರಿಟೇಲ್‌ನ ಪಾಲನ್ನು ಖರೀದಿಸಿತ್ತು. ಪರಿಣಾಮ ಶ್ರೀ ರಾಮ್ ಗ್ರೂಪ್ ಅವರ ವ್ಯವಹಾರದ ಒಂದು ಭಾಗವನ್ನು ವಿಶಾಲ್ ರಿಟೇಲ್ ಅನ್ನು ಸ್ವಾಧೀನಪಡಿಸಿಕೊಂಡಿತು.

ವ್ಯವಹಾರವನ್ನು ಎರಡು ವಿಭಾಗಗಳಾಗಿ ವಿಂಗಡಿಸಿದ ಪರಿಣಾಮ ಕಂಪನಿಯು ಮಾರಾಟದಿಂದ ಉಳಿಸಿಕೊಂಡರು.ಆದರೆ ಅದು ಮುಂದೆ ಎರಡು ಭಾಗವಾಯಿತು. ರಾಮಚಂದ್ರ ಮತ್ತೆ ಬುದ್ಧಿವಂತಿಕೆ ಉಪಯೋಗಿಸಿದರು. ಕೆಲ ವರ್ಷಗಳ ನಂತರ "ವಿ2 ರಿಟೇಲ್‌" ಎಂಬ ಹೆಸರಿನಲ್ಲಿ ರಿಟೇಲ್‌ ಉದ್ಯಮಕ್ಕೆ ವಾಪಾಸ್‌ ಬಂದರು.

ಇಂದು, ವಿ2 ರಿಟೇಲ್ ಲಿಮಿಟೆಡ್ 17 ರಾಜ್ಯಗಳಲ್ಲಿ 101 ಮಳಿಗೆಗಳನ್ನು ಹೊಂದಿರುವ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಅತ್ಯಂತ ಯಶಸ್ವಿ ಕಂಪನಿಗಳಲ್ಲಿ ಒಂದಾಗಿದೆ ಮತ್ತು 2023ರ ಹಣಕಾಸು ವರ್ಷದಲ್ಲಿ ವಿ2 ರಿಟೇಲ್‌ 845 ಕೋಟಿ ಆದಾಯವನ್ನು ಗಳಿಸಿರುವ ಕಂಪನಿಯಾಗಿದ್ದು ರಾಮ್ ಅವರು V2 ರಿಟೇಲ್ ಮಾರುಕಟ್ಟೆಯಲ್ಲಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರ ಸ್ಥಾನಗಳನ್ನು ಹೊಂದಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+