ಭಾರತದ ಶ್ರೀಮಂತರದಲ್ಲಿ ಒಬ್ಬರಾದ ಅಭಯ್ ಫಿರೋಡಿಯಾ ಅವರು ಫೋರ್ಸ್ ಮೋಟಾರ್ಸ್ ಅಧ್ಯಕ್ಷರಾಗಿದ್ದಾರೆ. ಈ ಕಂಪನಿಯು ವ್ಯಾನ್‌ಗಳು, ಪಿಕಪ್ ಟ್ರಕ್‌ಗಳು, ಎಸ್‌ಯುವಿ ಹಾಗೂ ಇತರೆ ವಾಹನಗಳನ್ನು ತಯಾರಿಸುತ್ತಿವೆ. ಜತೆಗೆ ಇದು ಮರ್ಸಿಡೀಸ್-ಬೆನ್‌ಝ್, ಬಿಎಂಡಬ್ಲ್ಯು ಹಾಗೂ ರೋಲ್ಸ್ ರೋಯ್ಸ್ ವಾಹನಗಳಿಗೆ ಎಂಜಿನ್ ಅನ್ನು ತಯಾರಿಸುತ್ತಿದೆ.
78 ವರ್ಷದ ಬಿಲಿಯನೇರ್ ಬಿಸಿನೆಸ್‌ಮೆನ್ ಅವರು 1975ರಲ್ಲಿ ಕಂಪನಿಗೆ ಸೇರಿದ್ದರು. ಈ ಕಂಪನಿಯನ್ನು ಅವರ ತಂದೆ ನವಲ್‌ಮಲ್ ಫಿರೋಡಿಯಾ ಅವರು 1958ರಲ್ಲಿ ಸ್ಥಾಪಿಸಿದ್ದರು. ಅಭಯ್ ಫಿರೋಡಿಯಾ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಅಭಯ್ ಫಿರೋಡಿಯಾ ಅವರ ನಿವ್ವಳ ಆಸ್ತಿ
ಫೋರ್ಬ್ಸ್ ಪ್ರಕಾರ, ಅಭಯ್ ಫಿರೋಡಿಯಾ ಅವರು 2023ರ ಜುಲೈ 24ರ ವರದಿ ಪ್ರಕಾರ 3.4 ಬಿಲಿಯನ್ ಅಮೆರಿಕನ್ ಡಾಲರ್ (27,810 ಕೋಟಿ ರೂಪಾಯಿ) ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ. ಫೋರ್ಬ್ಸ್ ಪಟ್ಟಿಯ ಪ್ರಕಾರ, ಫಿರೋಡಿಯಾ ಅವರು ಸದ್ಯ ಶ್ರೀಮಂತರ ಪಟ್ಟಿಯಲ್ಲಿ 895ನೇ ಸ್ಥಾನದಲ್ಲಿದ್ದಾರೆ. 2022ರಲ್ಲಿ ಅವರು ಭಾರತದ ಶ್ರೀಮಂತರ ಪಟ್ಟಿಯಲ್ಲಿ 67ನೇ ಸ್ಥಾನದಲ್ಲಿದ್ದರು.
ಫೋರ್ಬ್ಸ್ ಪ್ರಕಾರ, ದೊಡ್ಡ ಮೊತ್ತದ ಸಂಪತ್ತು ಅವರಿಗೆ ಬಜಾಜ್ ಆಟೋ ಸೇರಿದಂತೆ ಬಜಾಜ್‌ಗೆ ಸೇರಿದ ಕಂಪನಿಗಳ ಷೇರುಗಳಿಂದ ಬರುತ್ತಿದೆ. 2023ರ ಜುಲೈ 24ರ ಮಾಹಿತಿಯಂತೆ ಫೋರ್ಸ್ ಮೋಟಾರ್ಸ್ 34.35 ಬಿಲಿಯನ್ ರೂ. ಮಾರ್ಕೆಟ್ ಕ್ಯಾಪಿಟಲ್ ಅನ್ನು ಹೊಂದಿದೆ. ಇದು ಸುಮಾರು 3435 ಕೋಟಿ ರೂಪಾಯಿ ಆಗಿದೆ. ಕಂಪನಿಯ ಷೇರು ಮೌಲ್ಯವು ಇದೀಗ 2,606.60 ರೂಪಾಯಿ ಇದೆ. ಬಜಾಜ್ ಸಮೂಹದ ಜತೆ ಇದ್ದಾಗ ಫೋರ್ಸ್ ಮೋಟಾರ್ಸ್ ಬಜಾಜ್ ಟೆಂಪೋ ಎಂದು ಕರೆಯಲಾಗುತ್ತಿತ್ತು.
78 ವರ್ಷದ ಅಭಯ್ ಫಿರೋಡಿಯಾ ಅವರು ಜೈನ ಕುಟುಂಬದಲ್ಲಿ ಹುಟ್ಟಿದ್ದಾರೆ. ಅಲ್ಲದೆ ಅವರು ಆಟೋ ಬಿಡಿಭಾಗಗಳ ಕಂಪನಿ ಜಯಹಿಂದ್ ಇಂಡಸ್ಟ್ರೀಸ್‌ನ ಮುಖ್ಯಸ್ಥರಾಗಿದ್ದಾರೆ. ಅಭಯನ್ ಫಿರೋಡಿಯಾ ಅವರು 2009ರವರೆಗೆ ಫೋರ್ಬ್ಸ್ ಮೋಟಾರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ನಂತರ ಅಭಯ್ ಫಿರೋಡಿಯಾ ಅವರು ತಮ್ಮ ಉದ್ಯಮ ಸಾಮ್ರಾಜ್ಯವನ್ನು ಪುತ್ರ ಪ್ರಸನ್ನ ಅವರಿಗೆ ಒಪ್ಪಿಸಿದ್ದಾರೆ. ಅವರು ಸದ್ಯ ಪುಣೆಯಲ್ಲಿ ನೆಲೆಸಿದ್ದಾರೆ. ಅವರಿಗೆ ನಾಲ್ವರು ಮಕ್ಕಳಿದ್ದಾರೆ. ವರದಿಗಳ ಪ್ರಕಾರ ಅಭಯ್ ಫಿರೋಡಿಯಾ ಅವರು ಗ್ವಾಲಿಯಾರ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿದ್ದು, ಬಳಿಕ ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಇ (ಆನರ್ಸ್) ಪದವಿಯನ್ನು ಪಡೆದುಕೊಂಡಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications