ಕಿಂಗ್ ಚಾರ್ಲ್ಸ್ III ನೇತೃತ್ವದ ಬ್ರಿಟನ್ ರಾಜಮನೆಯನದ ನೆಲೆಯಾಗಿರುವ ಯುನೈಟೆಡ್ ಕಿಂಗ್‌ಡಮ್ ಹೆಚ್ಚಿನ ಸಂಖ್ಯೆಯಲ್ಲಿ ಬಿಲಿಯನೇರ್‌ಗಳನ್ನು ಹೊಂದಿದೆ. ವಿಶೇಷವೆಂದರೆ, ಕಳೆದ ಆರ್ಥಿಕ ವರ್ಷದ ಯುಕೆ ಶ್ರೀಮಂತ ಪಟ್ಟಿಯಲ್ಲಿ ಭಾರತೀಯ ಕುಟುಂಬವಾದ ಹಿಂದೂಜಾ ಬಿಸಿನೆಸ್ ಫ್ಯಾನಿಲಿಯು ಅಗ್ರಸ್ಥಾನದಲ್ಲಿದೆ.
ಸಂಡೆ ಟೈಮ್ಸ್‌ನ ಯುಕೆಯ 2023ರ ಶ್ರೀಮಂತರ ಪಟ್ಟಿಯಲ್ಲಿ ಗೋಪಿ ಹಿಂದುಜಾ ಮತ್ತು ಅವರ ಕುಟುಂಬವು ಟಾಪ್‌ನಲ್ಲಿದೆ. ಇದು ಮತ್ತಷ್ಟು ಬೆಳವಣಿಗೆ ಸಾಧಿಸುತ್ತಿರುವ ಬಿಸಿನೆಸ್ ಆಗಿದ್ದು, ನಿವ್ವಳ ಸಂಪತ್ತು ಕೂಡ ಏರಿಕೆಯಾಗಲಿದೆ. ಗೋಪಿ ಹಿಂದುಜಾ ಹಾಗೂ ಅವರ ಸಹೋದರರು ಬಹುರಾಷ್ಟ್ರೀಯ ಹಿಂದುಜಾ ಗ್ರೂಪ್‌ನ ಮುಖ್ಯಸ್ಥರಾಗಿದ್ದಾರೆ.

ಹಿಂದುಜಾ ಕುಟುಂಬದ ಬಿಸಿನೆಸ್‌ನ ನೇತೃತ್ವವನ್ನು ನಾಲ್ವರು ಸಹೋದರರಾದ ಗೋಪಿಚಂದ್ ಹಿಂದುಜಾ, ಅಶೋಕ್ ಹಿಂದುಜಾ, ಪ್ರಕಾಶ್ ಹಿಂದುಜಾ ಹಾಗೂ ಶ್ರೀಚಂದ್ ಹಿಂದುಜಾ ಅವರು ವಹಿಸಿಕೊಂಡಿದ್ದಾರೆ. ಕಂಪನಿಯ ಪ್ರಮುಖರಾದ ಶ್ರೀಚಂದ್ ಎಸ್‌ಪಿ ಹಿಂದುಜಾ ಅವರು 2023ರಲ್ಲಿ ನಿಧನರಾಗಿದ್ದಾರೆ. ಇನ್ನು ಗೋಪಿ ಹಿಂದುಜಾ ಅವರು ಕಂಪನಿಯ ಏಕೈಕ ಅಧ್ಯಕ್ಷರಾಗಿದ್ದಾರೆ.
ಹಿಂದುಜಾ ಕುಟುಂಬದ ನಿವ್ವಳ ಮೌಲ್ಯ ಮತ್ತು ವ್ಯವಹಾರ
ಗೋಪಿಚಂದ್ ಹಿಂದುಜಾ ಮತ್ತು ಎಸ್‌ಪಿ ಹಿಂದುಜಾ ಅವರನ್ನು ಯುಕೆಯಲ್ಲಿ ಅತ್ಯಂತ ಶ್ರೀಮಂತ ಜೋಡಿ ಎಂದು ಕರೆಯಲಾಗುತ್ತದೆ. ಇಬ್ಬರು ಸಹೋದರರು ಭಾರತದಲ್ಲಿ ಜನಿಸಿದ್ದು, ಯುಕೆ ನಾಗರಿಕತ್ವವನ್ನು ಹೊಂದಿಲ್ಲ. ಆದರೆ, ಬಹಳ ದೊಡ್ಡ ವ್ಯಾಪಾರ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ್ದಾರೆ. ಹಿಂದುಜಾ ಗ್ರೂಪ್ ಭಾರತದಲ್ಲಿ ಪ್ರತಿಷ್ಠಿತ ಉದ್ಯಮವಾಗಿದ್ದು, ಟಾಟಾ, ಬಿರ್ಲಾ ಹಾಗೂ ಅಂಬಾನಿಯ ಉದ್ಯಮದ ಸಾಲಿನಲ್ಲಿಯೇ ಗುರುತಿಸಿಕೊಂಡಿದೆ.
ತಮ್ಮ ಸಹೋದರ ಎಸ್ಪಿ ಹಿಂದುಜಾ ಅವರ ನಿಧನದ ನಂತರ ಗೋಪಿಚಂದ್ ಹಿಂದುಜಾ ಅವರು ಯುಕೆಯ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಫೋರ್ಬ್ಸ್ ವರದಿ ಪ್ರಕಾರ ಅವರ ಒಟ್ಟು ನಿವ್ವಳ ಆಸ್ತಿ ಮೌಲ್ಯವು ಗೂಗಲ್ ಸಿಇಒ ಸುಂದರ್ ಪಿಚ್ಚೈ ಹಾಗೂ ಯುಕೆ ಬಿಲಿಯನೇರ್ ಜಯಶ್ರೀ ಉಳ್ಳಾಲ್ ಅವರಿಬ್ಬರ ಒಟ್ಟು ಆಸ್ತಿ ಮೌಲ್ಯಕ್ಕಿಂತ ಜಾಸ್ತಿಯಿದೆ.
ಸುಂದರ್ ಪಿಚ್ಚೈ ಹಾಗೂ ಜಯಶ್ರೀ ಉಳ್ಳಾಲ್ ಅವರ ನಿವ್ವಳ ಆಸ್ತಿ ಮೌಲ್ಯವು ಕ್ರಮವಾಗಿ 10,018 ಕೋಟಿ ರೂಪಾಯಿ ಹಾಗೂ 18,199 ಕೋಟಿ ರೂಪಾಯಿ ಆಗಿದೆ. ಇನ್ನು ಗೋಪಿಚಂದ್ ಅವರು 21 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಸಂಪತ್ತು ಹೊಂದಿದ್ದಾರೆ. ಅಂದರೆ, 1.73 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ.
ಇನ್ನು ನಿಧನರಾಗಿರುವ ಸಹೋದರ ಎಸ್ಪಿ ಹಿಂದುಜಾ ಅವರ ಆಸ್ತಿಯನ್ನು ಒಟ್ಟಿಗೆ ಪರಿಗಣನೆಗೆ ತೆಗೆದುಕೊಂಡಾಗ, ಇಡೀ ಜಗತ್ತಿನಲ್ಲಿಯೇ ಹಿಂದುಜಾ ಶ್ರೀಮಂತ ಬಿಸಿನೆಸ್ ಕಟುಂಬವಾಗಿದೆ. ಅಂದರೆ ಅವರ ಒಟ್ಟು ಆಸ್ತಿ ಮೌಲ್ಯ 36 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಆಗಿದೆ.
ಅದು ಭಾರತೀಯ ರೂಪಾಯಿಯಲ್ಲಿ 2.968 ಲಕ್ಷ ಕೋಟಿ ರೂ. ಆಗಿದೆ. ಗೋಪಿಚಂದ್ ಹಿಂದುಜಾ ಅವರು ಹಿಂದುಜಾ ಗ್ರೂಪ್‌ನ ಮುಖ್ಯಸ್ಥರಾಗಿದ್ದು, ಈ ಕಂಪನಿಯು ಹಣಕಾಸು, ಜವಳಿ, ಆಟೋಮೊಬೈಲ್, ತೈಲ, ಮಾಧ್ಯಮ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.
ಯುಕೆ ಶ್ರೀಮಂತರ ಪಟ್ಟಿ 2022ರಲ್ಲಿ ಕಾಣಿಸಿಕೊಂಡ ಹಿಂದೂಜಾ ಕುಟುಂಬ
ಸಂಡೇ ಟೈಮ್ಸ್ ಯುಕೆ ಶ್ರೀಮಂತರ ಪಟ್ಟಿ 2022ಯಲ್ಲಿ ಶ್ರೀಚಂದ್ ಮತ್ತು ಗೋಪಿಚಂದ್ ಹಿಂದುಜಾ ನೇತೃತ್ವದ ಹಿಂದೂಜಾ ಕುಟುಂಬವು ಅಗ್ರಸ್ಥಾನದಲ್ಲಿದೆ. ಇದು ಬ್ರಿಟನ್‌ನ ಶ್ರೀಮಂತ ವ್ಯಕ್ತಿಗಳ ಪಟ್ಟಿಯಾಗಿದೆ. ಭಾರತೀಯ ಮೂಲದ ಕುಟುಂಬವು ಬ್ರಿಟನ್‌ನ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿ ಇದ್ದಾರೆ.
ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಇರುವ ಹಿಂದೂಜಾ ಕುಟುಂಬ 28.472 ಬಿಲಿಯನ್ ಪೌಂಡ್‌ಗಳ ಅಂದಾಜು ಸಂಪತ್ತನ್ನು ಹೊಂದಿದೆ. ಕಳೆದ ವರ್ಷ ಹಿಂದೂಜಾ ಕುಟುಂಬವು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು. ಆದರೆ ಈಗ ಒಂದು ವರ್ಷದಲ್ಲೇ 11 ಶತಕೋಟಿ ಪೌಂಡ್‌ಗಳ ಸಂಪತ್ತು ಹೆಚ್ಚಳವಾಗಿದ್ದು, ಮೊದಲ ಸ್ಥಾನಕ್ಕೆ ಏರಿದೆ.


Click it and Unblock the Notifications