ಫಲ್ಗುಣಿ ನಾಯರ್ ಅವರು ಭಾರತದ ಟಾಪ್ ಬ್ಯೂಟಿ ಹಾಗೂ ಫ್ಯಾಶನ್ ರಿಟೇಲ್ ಬ್ರಾಂಡ್ ಆಗಿರುವ ನೈಕಾದ ಸ್ಥಾಪಕರು ಹಾಗೂ ಸಿಇಒ ಆಗಿದ್ದು, ಭಾರತದ ಅತ್ಯಂತ ಶ್ರೀಮಂತ ಮಹಿಳಾ ಉದ್ಯಮಿಯೂ ಆಗಿದ್ದಾರೆ. ಫಲ್ಗುಣಿ ನಾಯರ್ ಅವರು ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್ ಆಗಿದ್ದು, ಸ್ವಂತ ಉದ್ಯಮವನ್ನು ಪ್ರಾರಂಭಿಸುವ ಮಹತ್ವಾಕಾಂಕ್ಷೆಯೊಂದಿಗೆ ಹೆಚ್ಚು ಸಂಬಳ ಬರುತ್ತಿದ್ದ ಉದ್ಯೋಗಕ್ಕೆ ಗುಡ್‌ಬೈ ಹೇಳಿದ್ದರು. ಪ್ರಸ್ತುತ ಫಲ್ಗುಣಿ ನಾಯರ್ ಅವರು ಭಾರತದ ಶ್ರೀಮಂತ ಸ್ವಯಂ ನಿರ್ಮಿತ ಉದ್ಯಮಿಯಾಗಿ ಬೆಳೆದಿದ್ದಾರೆ. ಪ್ರಸ್ತುತ ಇಶಾ ಅಂಬಾನಿಗೆ ಪ್ರತಿಸ್ಪರ್ಧಿಯಾಗಿದ್ದಾರೆ.
ತಮ್ಮ ಸ್ವಂತ ಪ್ರತಿಭೆ ಹಾಗೂ ಕಠಿಣ ಪರಿಶ್ರಮದಿಂದಾಗಿ ಬಹು ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯನ್ನು ಕಟ್ಟಿ ಬೆಳೆಸಿದ್ದಾರೆ. ಫೋರ್ಬ್ಸ್‌ನ 2022ರ ವರದಿಯಂತೆ ಭಾರತದ ಟಾಪ್ 100 ಶ್ರೀಮಂತ ಉದ್ಯಮಿಗಳ ಪೈಕಿ 44ನೇ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ಪ್ರಕಾರ, ಫಲ್ಗುಣಿ ನಾಯರ್ ಅವರು 22,000 ಕೋಟಿ ರೂಪಾಯಿ ಮೌಲ್ಯದ (2.7 ಬಿಲಿಯನ್ ಡಾಲರ್) ಆಸ್ತಿಯನ್ನು ಹೊಂದಿದ್ದಾರೆ.

ಫಲ್ಗುಣಿ ನಾಯರ್ ಅವರು 1963ರ ಫೆಬ್ರವರಿ 19ರಂದು ಮುಂಬೈನಲ್ಲಿ ಜನಿಸಿದ್ದಾರೆ. ಅವರ ಕುಟುಂಬವು ಗುಜರಾತ್ ಮೂಲದವರು. ಫಲ್ಗುಣಿ ನಾಯರ್ ಅವರು ಅಹಮದಾಬಾದ್‌ನಲ್ಲಿ ಎಂಬಿಎ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಫಲ್ಗುಣಿ ನಾಯರ್ ಅವರು ಸಂಜಯ್ ನಾಯರ್ ಅವರನ್ನು ಮದುವೆಯಾಗಿದ್ದಾರೆ. ಸಂಜಯ್ ಅವರು ಕೆಕೆಆರ್ ಅಂಡ್ ಕೋ ಇಕ್ವಿಟಿ ಕಂಪನಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಫಲ್ಗುಣಿ ನಾಯರ್ ಅವರು ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಸುಮಾರು ಎರಡು ದಶಕಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ.
ಫಲ್ಗುಣಿ ನಾಯರ್ ಅವರು ಕೋಟಕ್ ಮಹೀಂದ್ರಾ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ನಲ್ಲಿ ಮ್ಯಾನೇಜಿಂಗ್ ಡೈರಕ್ಟರ್ ಆಗಿದ್ದರು. ಆದರೆ, ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕೆಂಬುದು ಫಲ್ಗುಣಿ ಅವರ ಆಸೆಯಾಗಿತ್ತು. ಆ ಕಾರಣಕ್ಕಾಗಿಯೇ ಫಲ್ಗುಣಿ ಅವರು 2012ರಲ್ಲಿ ಅತ್ಯುನ್ನತ ಹುದ್ದೆಯನ್ನು ತೊರೆದು ನೈಕಾ ಕಂಪನಿಯನ್ನು ಸ್ಥಾಪಿಸಿದ್ದಾರೆ. ಪ್ರಸ್ತುತ ಫಲ್ಗುಣಿ ಅವರು 4,500 ಉತ್ಪನ್ನಗಳನ್ನು ಆನ್‌ಲೈನ್ ಹಾಗೂ ಇತರೆ ಮಳಿಗೆಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ.
2021ರಲ್ಲಿ ಫಲ್ಗುಣಿ ನಾಯರ್ ಅವರ ನೈಕಾ ಕಂಪನಿಯು ಷೇರು ಮಾರುಕಟ್ಟೆಯನ್ನು ಪ್ರವೇಶಿಸಿದೆ. ಆ ಮೂಲಕ ಭಾರತದ ಶ್ರೀಮಂತ ಸ್ವಯಂ ನಿರ್ಮಿತ ಮಹಿಳಾ ಉದ್ಯಮಿಯಾಗಿ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಫಲ್ಗುಣಿ ನಾಯರ್ ಅವರ ಅವಳಿ ಹೆಣ್ಣು ಮಕ್ಕಳು ಹಾಗೂ ಮಗ ಕೂಡ ನೈಕಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಆಡಳಿತ ಮಂಡಳಿಯಲ್ಲಿಯೂ ಇದ್ದಾರೆ.
ಪರಿಣತರು ಹೇಳುವ ಪ್ರಕಾರ, ಫಲ್ಗುಣಿ ನಾಯರ್ ಅವರು ರಿಲಯನ್ಸ್ ರಿಟೇಲ್‌ನಿಂದ ದೊಡ್ಡ ಸ್ಪರ್ಧೆಯನ್ನು ಎದುರಿಸುತ್ತಿದ್ದು, ನೈಕಾ ಬ್ರಾಂಡ್‌ಗೆ ಪ್ರತಿಸ್ಪರ್ಧೆ ನೀಡುವುದಕ್ಕೆ ಅಂಬಾನಿ ಸಮೂಹವು Tiraವನ್ನು ಪ್ರಾರಂಭಿಸಿದೆ. ರಿಲಯನ್ಸ್ ರಿಟೇಲ್ ಅನ್ನು ಮುಕೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ ಮುನ್ನಡೆಸುತ್ತಿದ್ದಾರೆ ಎನ್ನುವುದು ಗಮನಾರ್ಹ.
ಯಶಸ್ವಿ ಉದ್ಯಮಿ ಫಲ್ಗುಣಿ ನಾಯರ್ ಪುತ್ರಿ ಬಗ್ಗೆ ತಿಳಿಯಿರಿ
ಯುವ ಹಾಗೂ ಉನ್ನತ ಶಿಕ್ಷಣ ಪಡೆದಿರುವ ಅದ್ವೈತಾ ನಾಯರ್ ಅವರು 2012ರಲ್ಲಿ ಅಮೆರಿಕದ ಬೈನ್ ಅಂಡ್ ಕಂಪೆನಿಯಲ್ಲಿ ಕನ್ಸಲ್‌ಟೆಂಟ್ ಆಗಿ ಕೇವಲ ಆರು ತಿಂಗಳನ್ನು ಪೂರ್ಣಗೊಳಿಸಿರಬೇಕಾದರೆ ತಮ್ಮ 50 ವರ್ಷದ ತಾಯಿ ಫಲ್ಗುಣಿ ನಾಯರ್ ಅವರು ತಮ್ಮ ಸ್ವಂತ ಉದ್ಯಮದ ಜರ್ನಿ ಪ್ರಾರಂಭಿಸಲು ನಿರ್ಧರಿಸಿದರು. ಸೌಂದರ್ಯ ಉತ್ಪನ್ನಗಳ ಆನ್‌ಲೈನ್ ಮಾರುಕಟ್ಟೆಯಾದ ನೈಕಾ ಅನ್ನು ಪ್ರಾರಂಭಿಸುವ ಉದ್ದೇಶದಿಂದ ಆ ಮಹಿಳೆಯು ಕೋಟಕ್‌ನಲ್ಲಿ ತಮ್ಮ ಉನ್ನತ ಸ್ಥಾನವನ್ನು ತೊರೆದಿದ್ದಳು. ನಾಯರ್ ಅವರು ನ್ಯೂಯಾರ್ಕ್‌ನಲ್ಲಿ ತಮ್ಮ ಹೆಚ್ಚಿನ ಸಂಬಳದ ಉದ್ಯೋಗವನ್ನೇ ತೊರೆದು ನೈಕಾದಲ್ಲಿ ಸಹ- ಸಂಸ್ಥಾಪಕರಾಗಿ ತಾಯಿಯ ವ್ಯಾಪಾರದ ಜತೆ ಸೇರಿಕೊಂಡರು.
ಈ ಇಬ್ಬರು ಮಹಿಳೆಯರು ಸೇರಿಕೊಂಡು ಅಂದಿನಿಂದ ಉದ್ಯಮದ ಕ್ಷೇತ್ರದಲ್ಲಿ ಯಾರು ಕೂಡ ಊಹಿಸಲಾಗದಷ್ಟು ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದ್ದಾರೆ. ಅವರ ತಾಯಿ ಫಲ್ಗುಣಿ ನಾಯರ್ ಅವರು ಸ್ವಯಂ ನಿರ್ಮಿತ ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. ಅವರು ನೈಕಾ ಕಂಪೆನಿಯ ಸಿಇಒ ಆಗಿದ್ದು, 2021ರಲ್ಲಿ ಯಶಸ್ವಿ ಐಪಿಒ ಪ್ರವೇಶದ ನಂತರ ಅದು 36,000 ಕೋಟಿ ರೂ. ಬಂಡವಾಳವನ್ನು ಹೊಂದಿದೆ. ಕಂಪೆನಿಯು ಫ್ಯಾಶನ್ ಎಂಬ ಫ್ಯಾಶನ್ ವಿಭಾಗವನ್ನು ಹೊಂದಿದ್ದು, ಅದ್ವೈತಾ ನಾಯರ್ ಅವರು ಅದನ್ನು ಮುನ್ನಡೆಸುತ್ತಿದ್ದಾರೆ.


Click it and Unblock the Notifications