ಉತ್ತಮವಾಗಿ ಓದಿ ಉನ್ನತ ಹುದ್ದೆಯನ್ನು ಪಡೆದುಕೊಂಡು ಕೈತುಂಬ ಸಂಬಳ ಗಳಿಸಬೇಕೆಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ, ಐಐಟಿಯಂಥಹ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಓದಿದರೂ 20 ಲಕ್ಷ ರೂಪಾಯಿ ಪಡೆಯುವುದು ಸಾಧ್ಯವಾಗಿರುವುದಿಲ್ಲ.
ಆಶ್ಚರ್ಯವೆಂದರೆ, ಒಬ್ಬರು ಉಬರ್ ಡ್ರೈವರ್ ಹೆಚ್ಚಿನ ರೈಡ್‌ಗಳನ್ನು ರದ್ದುಗೊಳಿಸುವ ಮೂಲಕ 23ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಆದರೆ, ಇಷ್ಟೊಂದು ಸಂಪಾದನೆ ಮಾಡುತ್ತಾರೆ ಎಂಬುದನ್ನು ಆ ಚಾಲಕ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ನಾವು ಮಾತನಾಡುತ್ತಿರುವ ಆ ಚಾಲಕನ ಹೆಸರು ಬಿಲ್. ಅವರು ಪ್ರಯಾಣಿಕರನ್ನು ಆನ್‌ಬೋರ್ಡ್ ಮಾಡದೆಯೇ ಅತ್ಯುತ್ತಮವಾದ ರೂಟ್‌ಗಳನ್ನು ಮ್ಯಾಪ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಬಿಲ್ ಅವರು ಹೆಚ್ಚುವರಿ ಹಣ ಸಂಪಾದಿಸುವ ಉದ್ದೇಶದಿಂದ ಆರು ವರ್ಷಗಳ ಹಿಂದೆ ಉಬರ್ ಕ್ಯಾಬ್ ಓಡಿಸಲು ಪ್ರಾರಂಭಿಸಿದ್ದರು. ಕೆಲವು ವರ್ಷದ ನಂತರ ಅವರು ತಮ್ಮ ಕಾರ್ಯತಂತ್ರದ ಮೂಲಕ ಹಣ ಸಂಪಾದನೆ ಮಾಡಲು ಪ್ರಾರಂಭಿಸಿದ್ದರು. 70 ವರ್ಷ ವಯಸ್ಸಿನ ಚಾಲಕ ಬಿಲ್ ಅವರು ಶೇಕಡ 10ಕ್ಕಿಂತ ಕಡಿಮೆ ರೈಡ್ ರಿಕ್ವೆಸ್ಟ್‌ಗಳನ್ನು ಮಾತ್ರ ಸ್ವೀಕರಿಸುತ್ತಾರೆ ಹಾಗೂ ಉಳಿದ ಶೇಕಡ 30ರಷ್ಟು ರೈಡ್‌ಗಳನ್ನು ಕ್ಯಾನ್ಸಲ್ ಮಾಡುತ್ತಾರೆ ಎನ್ನುತ್ತಾರೆ ಸ್ವತಃ ಬಿಲ್.
ಅವರು ಸ್ವೀಕರಿಸುವ ಏಕೈಕ ರೈಡ್‌ಗಳು ಅದು ಅವರ ಸಮಯಕ್ಕೆ ಸರಿಹೊಂದುವ ರೂಟ್ ಆಗಿರುತ್ತದೆ. ಈ ರೀತಿ, 1500ಕ್ಕೂ ಹೆಚ್ಚು ಉಬರ್ ಟ್ರಿಪ್‌ಗಳನ್ನು ರದ್ದುಗೊಳಿಸಿದ ನಂತರ ಚಾಲಕ ಬಿಲ್ 28000 ಡಾಲರ್(23 ಲಕ್ಷ ರೂಪಾಯಿ) ಗಳಿಸಿದ್ದಾರೆ.
"ನಾನು ಹೆಚ್ಚಿನ ಸಮಯವನ್ನು ಇಲ್ಲ ಎಂದು ಹೇಳುತ್ತ ಕಳೆಯುತ್ತೇನೆ. ನನಗೆ ಸರಿ ಹೊಂದುವ ರೈಡ್ ಹೊರತಾಗಿ ನಾನು ಕೆಲಸ ಮಾಡುವುದಿಲ್ಲ," ಎನ್ನುತ್ತಾರೆ . ಬಿಲ್ ಅವರು ಏರ್‌ಪೋರ್ಟ್ ಸುತ್ತಮುತ್ತಲು ಹೆಚ್ಚು ಓಡಾಡುತ್ತಾ, ಹೆಚ್ಚು ಬಿಜಿ ಸಮಯದಲ್ಲಿನ ಹೆಚ್ಚಿನ ಬಾಡಿಗೆಯ ರೈಡ್‌ಗಳನ್ನು ಮಾತ್ರ ಸ್ವೀಕರಿಸುತ್ತಾರೆ.
"ಯಾವಾಗ ವಿಮಾನ ಬಂದು ಲ್ಯಾಂಡ್ ಆಗುವ ವೇಳೆ ಪ್ರಯಾಣಿಕರು ಉಬರ್ ಬುಕ್ ಮಾಡುತ್ತಾರೆ. ಆಗ ಸಹಜವಾಗಿಯೇ ಬಾಡಿಗೆ ದರ ಗನಕ್ಕೇರುತ್ತದೆ. ಕೇವಲ 20 ನಿಮಿಷದ ರೈಡ್‌ನ ಪ್ರಯಾಣ ದರ ಏಕಾಏಕಿ 10ರಿಂದ 20 ಅಥವಾ 40, 50 ಡಾಲರ್‌ಗೆ ಏರಿಕೆಯಾಗುತ್ತದೆ. ಆಗ ಚಾಲಕ ಶೇಕಡ 50ರಷ್ಟು ಕಡಿಮೆ ಹಣ ಪಡೆಯುತ್ತಾರೆ. ಹೀಗಾಗಿ, 35 ನಿಮಿಷದ ರೈಡ್‌ನಿಂದ 30 ರಿಂದ 60 ಡಾಲರ್‌ನಷ್ಟು ಸಂಪಾದನೆ ಮಾಡಬಹುದುʼ ಎನ್ನುತ್ತಾರೆ ಬಿಲ್.
ಅವರು ಹೇಳುವ ಪ್ರಕಾರ, ಪ್ರತಿ ಶುಕ್ರವಾರ ಹಾಗೂ ಶನಿವಾರದಂದು ರಾತ್ರಿ 10ರಿಂದ ಬೆಳಗ್ಗಿನ ಜಾವ 2.30ರ ನಡುವೆ ಈ ರೀತಿಯ ಬೇಡಿಕೆ ಕಂಡುಬರುತ್ತದೆ. ಅದೇ ರೀತಿ ಒನ್-ವೇ ರೈಡ್ ಅನ್ನು ತಪ್ಪಿಸುವುದು ಬಿಲ್ ಅಳವಡಿಸಿಕೊಂಡಿರುವ ಮತ್ತೊಂದು ತಂತ್ರವಾಗಿದೆ. ಅವರು ಒಂದು ಕಾಲದಲ್ಲಿ ತಮ್ಮ ನಗರದಿಂದ ಪ್ರಯಾಣಿಕರನ್ನು ಸುಮಾರು ಎರಡು ತಾಸು ಕರೆದುಕೊಂಡು ಹೋಗಿ ಕೇವಲ 2246 ರೂಪಾಯಿ ಸಂಪಾದಿಸಿರುವುದನ್ನು ನೆನಪಿಸಿಕೊಳ್ಳುತ್ತಾರೆ.


Click it and Unblock the Notifications