ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಕೊರೊನಾ ಜಾಗತಿಕ ಸಾಂಕ್ರಾಮಿಕ ಪಿಡುಗು ಭಾರತದ ಔದ್ಯೋಗಿಕ ಕ್ಷೇತ್ರದ ಮೇಲೆ ಹೆಚ್ಚಿನ ಅಡ್ಡ ಪರಿಣಾಮವನ್ನು ಬೀರಿದೆ. ಹೊಸದಾಗಿ ಹಲವಾರು ಉದ್ಯಮಗಳು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಹಳ ಸಂಕಷ್ಟದ ಸಮಯವನ್ನು ಎದುರಿಸುತ್ತಿವೆ. ಆದರೆ, ಮುಂಬೈಯ ಕೊಳೆಗೇರಿಯಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು ಕೆಲಸದ ತುರ್ತು ಅಗತ್ಯವಿರುವ ನಿರುದ್ಯೋಗಿಗಳಿಗಾಗಿ ಬಹಳ ವಿನೂತನ ವಿಧಾನವೊಂದನ್ನು ಪ್ರಾರಂಭಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಉದಯ್ ಪವಾರ್ ಯಾರು?: ಉದಯ್ ಪವಾರ್ ಅವರು ಮುಂಬೈ ನಗರದ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರು ಒಂದು ವಿಶಿಷ್ಟವಾದ ಆಪ್ ಅನ್ನು ಅಭಿವೃದ್ಧಿಪಡಿಸಿದ್ದು, ಇದು ಆಸಕ್ತರಿಗೆ ತಮ್ಮ ಅರ್ಹತೆಗೆ ಅನುಗುಣವಾಗಿ ಕೇವಲ ಒಂದು ರೂಪಾಯಿಯನ್ನು ಪಾವತಿಸುವ ಮೂಲಕ ಉದ್ಯೋಗವನ್ನು ಪಡೆದುಕೊಳ್ಳಲು ಅನುಕೂಲ ಕಲ್ಪಿಸುತ್ತದೆ.

ಉದಯ್ ಅವರ ಯೋಚನೆ ಹಾಗೂ ಯೋಜನೆ ಪ್ರಕಾರ ಈ ಆಪ್ ಏಷ್ಯಾದಲ್ಲಿ ಕಡಿಮೆ ವಿದ್ಯಾಭ್ಯಾಸದ ಅರ್ಹತೆ ಹೊಂದಿರುವವರು ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಯಾರಾದರೂ ಕೆಲಸ ಮಾಡುವ ಆಸಕ್ತಿಯನ್ನು ಹೊಂದಿದ್ದರೆ ಈ ಆಪ್ಲಿಕೇಷನ್‌ನಲ್ಲಿ ಲಾಗಿನ್ ಆಗುವ ಮೂಲಕ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಈ ಆಪ್ ಕೆಲಸ ಪಡೆಯಲು ಹೇಗೆ ನೆರವಾಗುತ್ತದೆ?
ಉದಯ್ ಅವರು ಪ್ರಾರಂಭಿಸಿರುವ ಈ ಆಪ್ ಅನ್ನು ಟಿಂಗ್ ಟಾಂಗ್ ಎಂದು ಕರೆಯಲಾಗುತ್ತದೆ. ಅವರು ಹೇಳುವ ಪ್ರಕಾರ, ಈ ಅಪ್ಲಿಕೇಷನ್ ಹತ್ತಿರದ ಕ್ಲಿನಿಕ್, ಪ್ಲಂಬರ್, ಎಲೆಕ್ಟ್ರೀಷಿಯನ್, ವಕೀಲರು, ಸಿಎ ಸೇರಿದಂತೆ ವಿವಿಧ ರೀತಿಯ ಉದ್ಯೋಗಾವಕಾಶದ ಮಾಹಿತಿಯನ್ನು ಹೊಂದಿದೆ.
ಪ್ರತಿಯೊಬ್ಬರು ಕೂಡ ತಮ್ಮ ತಮ್ಮ ಅರ್ಹತೆಗೆ ಅನುಗುಣವಾಗಿ ಉದ್ಯೋಗವನ್ನು ಪಡೆಯಲು ಹಾಗೂ ಹುಡುಕುವುದಕ್ಕೆ ಈ ಆಪ್ ಸಹಾಯ ಮಾಡುತ್ತದೆ. ಈ ಅಪ್ಲಿಕೇಷನ್ ಮೂಲಕ ನೀವು ಹತ್ತಿರದ ಪಾನಿಪುರಿ ಮಾರಾಟಗಾರರ ಬಗ್ಗೆಯೂ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಒಂದು ರೂ. ಪಾವತಿಸಿ ಉದ್ಯೋಗ ಪಡೆಯಿರಿ
ಉದಯ್ ಪವಾರ್ ಅವರು ಹೇಳುವ ಪ್ರಕಾರ, "ನಾವು ಈ ಪ್ಲಾಟ್‌ಫಾರ್ಮ್‌ಗೆ ಮಾರಾಟಗಾರರ ಮಾಹಿತಿಯನ್ನು ಸೇರ್ಪಡೆಗೊಳಿಸುತ್ತಿದ್ದೇವೆ. ನಮಗೆ ಗೊತ್ತಿದೆ, ನಾವು ಪ್ರಾರಂಭಿಸಿದ ಅಪ್ಲಿಕೇಷನ್ಸ್ ಮಾದರಿಯಲ್ಲಿ ದೊಡ್ಡ ಕಾರ್ಪೊರೇಷನ್ಸ್‌ಗಳು ಕೂಡ ಆಪ್‌ನ್ನು ಹೊಂದಿವೆ ಎಂಬುದು. ಆದರೆ, ದೊಡ್ಡ ಕಾರ್ಪೊರೇಷನ್‌ಗಳ ಆಪ್‌ಗಳ ಮೊರೆ ಹೋದರೆ ಅವುಗಳು ಹೆಚ್ಚಿನ ಕಮಿಷನ್‌ನ್ನು ಪಡೆದುಕೊಳ್ಳುತ್ತವೆ. ಆ ಮೂಲಕ ನೀವು ಬಹಳ ಕಡಿಮೆ ಸಂಬಳವನ್ನು ಪಡೆದುಕೊಳ್ಳುತ್ತೀರಿ."
"ಆದರೆ, ಈ ಕಾರಣಕ್ಕಾಗಿಯೇ ನನ್ನ ಈ ಆಪ್‌ನಲ್ಲಿ ಯಾವುದೇ ರೀತಿಯ ಕಮಿಷನ್ ಅಥವಾ ಶುಲ್ಕವನ್ನು ಪಡೆದುಕೊಳ್ಳುವುದಿಲ್ಲ. ಬದಲಿಗೆ ಪ್ರತಿ ದಿನವೂ ಕೇವಲ ಒಂದು ರೂಪಾಯಿಯನ್ನು ಪಾವತಿಸುವ ಮೂಲಕ ಉದ್ಯೋಗಾವಕಾಶಗಳ ಕುರಿತ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅಂದರೆ, ಒಂದು ವರ್ಷಕ್ಕೆ 365 ರೂ.ವನ್ನು ಪಾವತಿಸಿದರೆ ನಿರಂತರವಾಗಿ ಉದ್ಯೋಗದ ಮಾಹಿತಿ ಲಭ್ಯವಾಗುತ್ತಿರುತ್ತದೆ," ಎಂದು ಉದಯ್ ಪವಾರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.


Click it and Unblock the Notifications