ವಿಶ್ವದ ಶ್ರೀಮಂತ ಚೆಫ್ (ಬಾಣಸಿಗ) ಗಳ ಸ್ಥಾನದಲ್ಲಿ ವಿಕ್ರಮ್ ವಿಜೆ ಕೂಡಾ ಓರ್ವರಾಗಿ ನಿಲ್ಲುತ್ತಾರೆ. ವಿಕ್ರಮ ಕೇವಲ ಚೆಫ್ ಮಾತ್ರವಲ್ಲದೇ ಉದ್ಯಮಿಯೂ ಆಗಿದ್ದು, ಮಲ್ಟಿಪಲ್ ಬ್ಯುಸಿನೆಸ್ ಮತ್ತು ರೆಸ್ಟೋರೆಂಟ್ಸ್ ನ ಮಾಲೀಕರಾಗಿದ್ದಾರೆ. ವಿಕ್ರಮ ಅವರು ವಿಶ್ವದ ವೆಸ್ಟರ್ನ್ ಭಾಗದಲ್ಲಿ ಓರ್ವ ಪ್ರಸಿದ್ಧ ಚೆಫ್ ಮತ್ತು ಲೇಖಕರಾಗಿ ಹೊರಹೊಮ್ಮಿದ್ದಾರೆ.
ಅಮೃತಸರದಲ್ಲಿ ಹುಟ್ಟಿದ ವಿಕ್ರಮ್ ಮುಂಬೈ ಮತ್ತು ದೆಹಲಿಯಲ್ಲಿ ಬೆಳೆದಿದ್ದು, ಚೆಫ್ ಆಗಿ ಏನ್ನನಾದರೂ ಸಾಧಿಸಬೇಕು ಎಂದು ವಿದೇಶಕ್ಕೆ ತೆರಳುವ ವೇಳೆ ಅವರಲ್ಲಿದ್ದುದೂ "ಒನ್ ವೇ ಟಿಕೆಟ್" ಮತ್ತು ತಾಯಿಯಿಂದ ಪಡೆದುಕೊಂಡಿದ್ದ ವಿವಿಧ ಬಗೆಯ ಮಸಾಲೆಗಳು ಮಾತ್ರ.

ಅಡಿಗೆ ಬಗ್ಗೆಆಸಕ್ತಿ ಇದ್ದ ವಿಕ್ರಮ್ ತಮ್ಮ ಎಳೆವಯಸ್ಸಿನಲ್ಲಿಯೇ ಅಂದರೆ 10ನೇ ವಯಸ್ಸಿನಲ್ಲಿ ಅಡಿಗೆ ಮತ್ತು ಅಡುಗೆಯಲ್ಲಿ ತಾಯಿಗೆ ಸಹಾಯ ಮಾಡಲು ಪ್ರಾರಂಭಿಸಿದ್ದರು . ಹೊಸ ಊರುಗಳಿಗೆ ಅಥವಾ ಎಲ್ಲೇ ಭೇಟಿ ಕೊಟ್ಟರೂ ಅಲ್ಲಿನ ಆಹಾರ ಖಾದ್ಯಗಳನ್ನು ಕಲಿತು ಮನೆಯಲ್ಲಿ ಪ್ರಯೋಗ ಮಾಡುತ್ತಿದ್ದರು.
ನನಗಿಂತ ನನ್ನ ಮಗನೇ ಅಡುಗೆ ಮನೆಯನ್ನು ಆಕ್ರಮಿಸಿಕೊಳ್ಳುತ್ತಿದ್ದ ಎಂದು ವಿಕ್ರಮ್ ಅವರ ತಾಯಿ ಅಡುಗೆ ಅಭಿರುಚಿಯ ಬಗ್ಗೆ ವಿವರಿಸುತ್ತಾರೆ. ಭಾರತೀಯ ಪೋಷಕರಲ್ಲಿದ್ದ ಆಸೆಯಂತೆ ತಮ್ಮ ಮಗನು ಸರ್ಕಾರಿ ನೌಕರ ಆಗಬೇಕು ಎಂದು ಬಯಸಿದ್ದೆವು. ಆದರೆ ವಿಕ್ರಮ್‌ಗಿದ್ದ ತುಡಿತದಿಂದ ಆತನ ಬೇಡಿಕೆಗೆ ನಾವು ಮಣಿಯಲೇ ಬೇಕಾಯಿತು ಎನ್ನುತ್ತಾರೆ ಅವರ ತಾಯಿ.
ವಿಕ್ರಮ ಅವರ ಕಥೆ ಆಸ್ಟ್ರಿಯಾದಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಯಾಗಿ ಪ್ರಾರಂಭವಾಗುತ್ತದೆ. ಕೆಲವೊಮ್ಮೆ, ಅವರು ಸ್ಥಳೀಯವಾಗಿದ್ದ "ಹರೇ ಕೃಷ್ಣ ಚಾಪ್ಟರ್ ನಲ್ಲಿ" ಸಿಗುತ್ತಿದ್ದ ಉಚಿತ ಊಟದಲ್ಲಿ ಬದುಕಬೇಕಾಗಿತ್ತು. ವಿಕ್ರಮ ಪ್ರಗತಿ ಹೊಂದಿದಾಗ ಆಲ್ಪ್ಸ್‌ನಲ್ಲಿರುವ ಹಲವು ಸರಣಿ ಐಷಾರಾಮಿ ಹೋಟೆಲ್ ಗಳಲ್ಲಿ ಕೆಲಸ ಮಾಡಿದರು.
ಹೀಗಿರುವಾಗ ಅವರು ತಯಾರಿಸಿದ ಖಾದ್ಯವೊಂದರಿಂದ ಪ್ರಭಾವಿತರಾದ ಹೊಟೇಲ್ ನ ಟಾಪ್ ಎಕ್ಯೂಕೂಟಿವ್ ವಿಕ್ರಮ್ ಅವರಿಗೆ ಕೆನಡಾದ ಬ್ಯಾನ್ಫ್ ಸ್ಪ್ರಿಂಗ್ಸ್ ಹೋಟೆಲ್‌ನಲ್ಲಿ ಕೆಲಸದ ಆಫರ್ ನೀಡಿದರು. 1994 ರಲ್ಲಿ ಅವರು ತಮ್ಮ ಮೊದಲ ಉದ್ಯಮ ಸಣ್ಣ ಫೈನ್ ಡೈನಿಂಗ್ ಜಾಯಿಂಟ್ ನ್ನು ಪ್ರಾರಂಭಿಸುವ ಮೊದಲು ವ್ಯಾಂಕೋವರ್ ನ ಹಲವು ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡಿದರು.
ಅವರು ಅದೇ ವರ್ಷ ತಮ್ಮ ಭವಿಷ್ಯದ ವ್ಯಾಪಾರ ಪಾಲುದಾರರಾದ ಮೀರು ಧಲ್ವಾಲಾ ಅವರನ್ನು ವಿವಾಹವಾದರು. Vij's on Cambie, Vij's at Home curry factory ರಂಗೋಲಿ ಮತ್ತು ಮೈ ಶಾಂತಿ ಹೀಗೆ ದಂಪತಿಗಳು ಜೊತೆಯಾಗಿ ಅನೇಕ ವ್ಯವಹಾರಗಳನ್ನು ಪ್ರಾರಂಭಿಸಿದರು. ಆದರೆ ಈ ಜೋಡಿ 2012 ರಲ್ಲಿ ಬೇರೆ ಬೇರೆಯಾದರು.
ಕೆನಡಾದ ರಿಯಾಲಿಟಿ ಟಿವಿ ಶೋ ಡ್ರಾಗನ್ಸ್ ಡೆನ್‌ನಲ್ಲಿ ವಿಕ್ರಮ್ ವಿಜ್ ಹೂಡಿಕೆದಾರರಾಗಿದ್ದಾರೆ. ಅವರು ಎರಡು ಪ್ರಶಸ್ತಿ ವಿಜೇತ ಕುಕ್ಕಿಂಗ್ ಬುಕ್ ಗಳನ್ನು ಬರೆದಿದ್ದಾರೆ. ಹಲವಾರು ವರದಿಗಳ ಪ್ರಕಾರ, ವಿಕ್ರಮ್ ವಿಜ್ ಅವರು 2023 ರಲ್ಲಿ 50 ಮಿಲಿಯನ್ ಡಾಲರ್ ( 410 ಕೋಟಿ ರೂಪಾಯಿಗಿಂತ ಹೆಚ್ಚು) ನಿವ್ವಳ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ. ಚೆಫ್ ವಿಕ್ರಮ್ ಕೈರುಚಿ ಸವಿಯಲು ಟಾಮ್ ಕ್ರೂಸ್ ಕ್ಯೂನಲ್ಲಿ ಕಾಯುತ್ತಿದ್ದರು ಎಂದು ವರದಿಯಾಗಿದೆ.
ಟಾಮ್ ಕ್ರೂಸ್ ಯಾರು ಗೊತ್ತೆ?
ಥಾಮಸ್ ಕ್ರೂಸ್ ಓರ್ವ ಅಮೇರಿಕನ್ ನಟ ಮತ್ತು ನಿರ್ಮಾಪಕ. ಜುಲೈ 3, 1962ರಂದು ಥಾಮಸ್ ಕ್ರೂಸ್ ಜನಿಸಿದ್ದಾರೆ. ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಥಾಮಸ್ ಕ್ರೂಸ್ ನಾಲ್ಕು ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದಾರೆ.
ಗೌರವ ಪಾಮ್ ಡಿ'ಓರ್ ಮತ್ತು ಮೂರು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಒಳಗೊಂಡಂತೆ ವಿವಿಧ ಪುರಸ್ಕಾರಗಳನ್ನು ಪಡೆದಿದ್ದಾರೆ. ಅವರ ಚಲನಚಿತ್ರಗಳು ಉತ್ತರ ಅಮೇರಿಕಾದಲ್ಲಿ $4 ಶತಕೋಟಿ ಮತ್ತು ವಿಶ್ವಾದ್ಯಂತ $11.5 ಶತಕೋಟಿಗಿಂತ ಹೆಚ್ಚಿನ ಹಣವನ್ನು ಗಳಿಸಿವೆ.


Click it and Unblock the Notifications