ಔಷಧೀಯ ಉದ್ಯಮದ ದೈತ್ಯ ಕಂಪನಿಯ ಚುಕ್ಕಾಣಿ ಹಿಡಿದ ಕೆಲವೇ ಮಹಿಳೆಯರಲ್ಲಿ ವಿನಿತಾ ಗುಪ್ತಾ ಕೂಡ ಒಬ್ಬರಾಗಿದ್ದಾರೆ. ತಮ್ಮ ಉದ್ಯಮದಲ್ಲಿ ಸೆಕೆಂಡ್-ಜನರೇಶನ್ ಲೀಡರ್ ಆಗಿರುವ ವಿನಿತಾ ಅವರು 35,237 ಕೋಟಿ ರೂಪಾಯಿ 'ಕ್ಯಾಪ್ ಲುಪಿನ್' ಲಿಮಿಟೆಡ್‌ನ ಸಿಇಒ ಆಗಿದ್ದಾರೆ.
ವಿನಿತಾ ಅವರ ತಂದೆ ಉದ್ಯಮಿ, ದಿವಂಗತ ದೇಶ್ ಬಂಧು ಗುಪ್ತಾ ಬಹು-ಶತಕೋಟಿ ಡಾಲರ್ ಕಂಪನಿಯನ್ನು ಸ್ಥಾಪಿಸಿದರೆ, ಇದರ ವ್ಯಾಪಾರವನ್ನುಅಂತರರಾಷ್ಟ್ರೀಯ ಮಟ್ಟಕ್ಕೆ ಮತ್ತು ಹೊಸ ಎತ್ತರಕ್ಕೆ ಕೊಂಡೊಯ್ದ ಕೀರ್ತಿ ವಿನೀತಾ ಅವರಿಗೆ ಸೇರುತ್ತದೆ . ವಿನಿತಾ ಅವರು ಫಾರ್ಮಸಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಮುಂಬೈ ವಿಶ್ವವಿದ್ಯಾನಿಲಯದಿಂದ ಪಡೆದಿದ್ದು ಇದಾದ ಬಳಿಕ ಅಮೇರಿಕಾದ ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಎಂಬಿಎ ಪದವಿಯನ್ನು ಪಡೆದರು.

ತನ್ನ ತಂದೆಯ ಕಂಪನಿಗೆ ಸೇರುವ ಮೊದಲು ಲುಪಿನ್‌ನನ್ನು ಯುಎಸ್ ಮಾರುಕಟ್ಟೆ ಕೊಂಡೊಯ್ಯಬೇಕೆಂಬ ಮಹತ್ತರ ಗುರಿ ಇಟ್ಟುಕೊಂಡಿದ್ದ ಅವರು ಅದರಲ್ಲಿ ಸಂಪೂರ್ಣ ಯಶಸ್ವಿಯಾದರು. ಅಮೇರಿಕಾದಲ್ಲಿ ಓದುತ್ತಿದ್ದಾಗ ಅಮೇರಿಕಾದ ಮಾರುಕಟ್ಟೆಯ ಬಗ್ಗೆ ಚೆನ್ನಾಗಿ ಅಧ್ಯಯನ ಮಾಡಿದರು. ಅಲ್ಲಿನ ಮಾರುಕಟ್ಟೆ ಹೇಗಿದೆ ಮತ್ತು ವಿಸ್ತರಣೆ ಮಾಡಲು ಬ್ಲೂ ಪ್ರಿಂಟ್ ರಚಿಸುವಂತೆ ವಿನಿತಾ ಬಳಿ ಅವರ ತಂದೆ ಹೇಳಿದ್ದರು.
ಲುಪಿನ್‌ನ ಒಟ್ಟು ಟರ್ನ್ ಓವರ್ ನ 5 ಶೇಕಡದಿಂದ , ವಿನಿತಾ ಅವರು ಯುಎಸ್ ವ್ಯಾಪಾರದ 45 ಪ್ರತಿಶತದಷ್ಟು ಪಾಲನ್ನು ತೆಗೆದುಕೊಳ್ಳುವತ್ತ ಬೆಳೆದು ನಿಂತರು. ವಿನಿತಾ ಹಲವಾರು ಬ್ಯುಸಿನೆಸ್ ಅವಾರ್ಡ್ ಗಳನ್ನು ಗೆದ್ದಿದ್ದು, ಹಲವು ವರ್ಷಗಳಿಂದ ಪವರ್ ಲಿಸ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲುಪಿನ್ ಭಾರತೀಯ ಫಾರ್ಮಾ ಕಂಪನಿ 2018 ರಲ್ಲಿ ಅಮೇರಿಕಾ ಮೂಲದ ಗೇವಿಸ್ ಫಾರ್ಮಾವನ್ನು 5,610 ಕೋಟಿ ರೂಪಾಯಿಗಳಿಗೆ ($880 ಮಿಲಿಯನ್) ಸ್ವಾಧೀನಪಡಿಸಿಕೊಳ್ಳುವ ಮೂಲಕ, ಅತಿ ದೊಡ್ಡ ಸಾಗರೋತ್ತರ ಕಂಪನಿಯ ಹತೋಟಿಗೆ ತೆಗೆದುಕೊಂಡ ಕೀರ್ತಿಗೂ ಪಾತ್ರರಾದರು.
ವಿನಿತಾ 1993 ರಲ್ಲಿ ಲುಪಿನ್‌ಗೆ ಸೇರಿ, 2013 ರಲ್ಲಿ ಕಂಪನಿಯ ಸಿಇಒ ಆಗಿ, ಈಗ ಎಂಡಿ ಆಗಿರುವ ತನ್ನ ಸಹೋದರ ನಿಲೇಶ್ ಗುಪ್ತಾ ಜೊತೆ ಲುಪಿನ್ ನನ್ನು ಮುನ್ನಡೆಸುತ್ತಿದ್ದಾರೆ. ಅವರ ತಾಯಿ ಮಂಜು ಗುಪ್ತಾ ಕಂಪನಿಯ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿದ್ದಾರೆ. ವಿನಿತಾ ಅವರು ಮಿಲಿಯನೇರ್ ಉದ್ಯಮಿ ಮತ್ತು ಹೂಡಿಕೆದಾರರಾಗಿರುವ ಬ್ರಿಜ್ ಶರ್ಮಾ ಅವರನ್ನು ವಿವಾಹವಾಗಿದ್ದಾರೆ. ದಂಪತಿಗಳು ಅಮೇರಿಕಾದಲ್ಲಿ ವಾಸಿಸುತ್ತಿದ್ದು ಇವರಿಗೆ ಕ್ರಿಶ್ ಶರ್ಮಾ ಎಂಬ ಪುತ್ರನಿದ್ದಾನೆ. ವಿನಿತಾ ಮತ್ತು ಅವರ ಕುಟುಂಬದ ನಿವ್ವಳ ಮೌಲ್ಯ $2.8 ಬಿಲಿಯನ್ ಎಂದು ವರದಿಯಾಗಿದೆ.
ದೇಶದ 2ನೇ, 3ನೇ ಶ್ರೀಮಂತ ಮಹಿಳೆ
ಫೋರ್ಬ್ಸ್ ಪ್ರಕಾರ, 2023ರಲ್ಲಿ ಭಾರತದಲ್ಲಿ ಬಿಲಿಯನೇರ್ ಆದ ಮೂವರು ಮಹಿಳೆಯರಲ್ಲಿ ರೋಹಿಕಾ ಮಿಸ್ತ್ರಿ ಕೂಡ ಒಬ್ಬರು. ಆಕೆಯ ನಿವ್ವಳ ಆಸ್ತಿ ಮೌಲ್ಯ 7 ಶತಕೋಟಿ ಡಾಲರ್ ಆಗಿದ್ದು, ಅದು 56000 ಕೋಟಿ ರೂ. ಆಗಿದೆ. ಅಷ್ಟೇಅಲ್ಲ ಅವರು ಭಾರತದ 2ನೇ ಅತಿದೊಡ್ಡ ಮಹಿಳೆಯಾಗಿದ್ದಾರೆ. 17 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಸಾವಿತ್ರಿ ಜಿಂದಾಲ್ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ದೇಶದ ಪ್ರಸಿದ್ಧ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರ ಪತ್ನಿ ರೇಖಾ ಜುಂಜುನ್‌ವಾಲಾ ಅವರು ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಜುಂಜುನ್‌ವಾಲಾ ಹಾಗೂ ಸರೋಜ್ ರಾಣಿ ಗುಪ್ತ ಅವರು ಬಿಲಿಯನೇರ್ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.


Click it and Unblock the Notifications