ವಿವೇಕ್ ರಣದಿವ್ ಅವರು ಭಾರತೀಯ- ಅಮೆರಿಕನ್ ಉದ್ಯಮಿಯಾಗಿದ್ದು, ಅವರು ಟಿಐಬಿಸಿಒ ಎಂಬ ಸಾಫ್ಟ್‌ವೇರ್ ಸ್ಥಾಪಿಸಿದ್ದು, ಇದು ಇಂಟೆಲಿಜೆನ್ಸ್ ಸಾಫ್ಟ್‌ವೇರ್ ಕಂಪನಿಯಾಗಿದೆ. 66 ಹರೆಯದ ವಿವೇಕ್ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಅಸೋಸಿಯೇಷನ್‌ನ (NBA) ಸ್ಯಾಕ್ರಮೆಂಟೊ ಕಿಂಗ್ಸ್‌ನ ಮಾಲೀಕರಾಗಿದ್ದಾರೆ. ಇವರ ಪೂರ್ಣ ಹೆಸರು ವಿವೇಕ್ ಯಶವಂತ ರಣದಿವ್.
ವಿವೇಕ್ ರಣದಿವ್ ಅವರ ಹಿನ್ನಲೆ ಬಗ್ಗೆ ನೋಡೋದಾದ್ರೆ ಅವರು ಮುಂಬೈನಲ್ಲಿ ಬೆಳೆದಿದ್ದು, ಮೂರು ಮಕ್ಕಳಲ್ಲಿ ವಿವೇಕ್ ಅವರು ಕಿರಿಯವರಾಗಿದ್ದರು. ಮುಂಬೈನ ಬಾಬುಲ್‌ನಾಥ್‌ನಲ್ಲಿರುವ ಬಾಂಬೆ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಓದಿದ್ದರು.

ವಿವೇಕ್ ಅವರು ವಿರಾಟ್ ಕೊಹ್ಲಿ ಅವರ ಅಪ್ಪಟ ಅಭಿಮಾನಿಯಾಗಿದ್ದು, ಪ್ರಸ್ತುತ ನಡೆಯುತ್ತಿರುವ ಒಡಿಐ ವಿಶ್ವಕಪ್‌ನಲ್ಲಿ ಅವರ ಅದ್ಭುತ ಪ್ರದರ್ಶನಕ್ಕಾಗಿ ಸ್ಟಾರ್ ಬ್ಯಾಟರ್ ಮತ್ತು ಅವರ ತಂಡವನ್ನು ಅಭಿನಂದಿಸಿದ್ದಾರೆ.
ರಣದಿವ್ ಅವರು ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಅಸೋಸಿಯೇಶನ್‌ನ ಸ್ಯಾಕ್ರಮೆಂಟೊ ಕಿಂಗ್ಸ್‌ನ ಸಹ-ಮಾಲೀಕ ಮತ್ತು ಅಧ್ಯಕ್ಷರೂ ಆಗಿದ್ದು, 2022 ರಲ್ಲಿ, ರಣದಿವ್ ಅವರು ಮೈನರ್ ಲೀಗ್ ಬೇಸ್‌ಬಾಲ್ ಫ್ರ್ಯಾಂಚೈಸ್ ಸ್ಯಾಕ್ರಮೆಂಟೊ ಅನ್ನು ಖರೀದಿಸಿದ್ದರು.
ವಿವೇಕ್ ಅವರು ಟಿಐಬಿಸಿಒ (TIBCO) ಸಂಸ್ಥೆಯ ಸ್ಥಾಪಕರಾಗಿದ್ದು, ಇದು ವ್ಯಾಪಾರ ಇಂಟೆಲಿಜೆನ್ಸ್ ಸಾಫ್ಟ್‌ವೇರ್ ಕಂಪನಿಯಾಗಿದೆ. ಫೋರ್ಬ್ಸ್ ಪ್ರಕಾರ, ಅಕ್ಟೋಬರ್ 2023 ರ ವೇಳೆಯಲ್ಲಿ ಬಾಸ್ಕೆಟ್‌ಬಾಲ್ ತಂಡದ ಮೌಲ್ಯ 3.33 ಬಿಲಿಯನ್ ಡಾಲರ್ ಆಗಿದೆ. ರೂಪಾಯಿಗಳಲ್ಲಿ ಹೇಳುವುದಾದರೆ ಸುಮಾರು 27,720 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.
ಆದರೆ, ಈ ವರ್ಷದ ಆರಂಭದಲ್ಲಿ ಹೌಲಿಹಾನ್ ಲಾಕಿ ಬಿಡುಗಡೆ ಮಾಡಿದ ವರದಿಯಲ್ಲಿ ಆರ್‌ಸಿಬಿ ಕ್ರಿಕೆಟ್ ತಂಡ 195 ಮಿಲಿಯನ್ ಡಾಲರ್ ಮೌಲ್ಯದ್ದಾಗಿತ್ತು. ಅಂದರೆ ಇದು ಸುಮಾರು 1,620 ಕೋಟಿ ರೂಪಾಯಿ ಆಗಿದೆ.
ವಿವೇಕ್ ಅವರು ಎಂಐಟಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಗಳಿಸಿದ್ದು,ಇದರ ನಂತರ 1983 ರಲ್ಲಿ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಿಂದ ಎಂಬಿಎ ಪಡೆದರು. ವಿವೇಕ್ ಅವರು ಉದ್ಯಮಿಯಾಗಿರುವುದರ ಜೊತೆಗೆ 'ಲೋಕೋಪಕಾರಿ' ಹಾಗೂ 'ಟೆಕ್ನಾಲಜಿ ದಾರ್ಶನಿಕ' ಆಗಿದ್ದಾರೆ.
ರಣದಿವ್ ಮತ್ತು ಅವರ ಮಾಜಿ ಪತ್ನಿ ಡೆಬೊರಾ ಅಡಿಕಾಟ್ ಅವರಿಗೆ ಮೂವರು ಮಕ್ಕಳಿದ್ದಾರೆ. 1997 ರಲ್ಲಿ, ಸಿಸ್ಕೋ ಮತ್ತು ರಾಯಿಟರ್ಸ್‌ನಿಂದ ಸಹಾಯದೊಂದಿಗೆ ವಿವೇಕ್ ಅವರು ಟಿಐಬಿಸಿಒ ಸಾಫ್ಟ್‌ವೇರ್ ಇಂಕ್ ಅನ್ನು ಸ್ಥಾಪಿಸಿದರು.
2016 ರಲ್ಲಿ, ಅವರು ಕ್ಯಾಲಿಫೋರ್ನಿಯಾ ರೀಜೆಂಟ್ಸ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಆರಂಭಿಕ ಹೂಡಿಕೆ ಸಂಸ್ಥೆಯಾದ ಬೋ ಕ್ಯಾಪಿಟಲ್ ಸ್ಟಾರ್ಟಪ್ ಅನ್ನು ಸ್ಥಾಪಿಸಿದರು. 2022 ರಲ್ಲಿ, ರಣದಿವ್ ಮೈನರ್ ಲೀಗ್ ಬೇಸ್‌ಬಾಲ್ ಫ್ರ್ಯಾಂಚೈಸ್, ಸ್ಯಾಕ್ರಮೆಂಟೊ ರಿವರ್ ಕ್ಯಾಟ್ಸ್ ಅನ್ನು ಖರೀದಿಸಿದರು.


Click it and Unblock the Notifications