ಭಾರತ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ 49ನೇ ಏಕದಿನ ಶತಕ ದಾಖಲಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ದಾಖಲೆಯ ಬಳಿಕ ಕೊಹ್ಲಿ ಅವರು ವಿಶ್ವದೆಲ್ಲೆಡೆ ಟ್ರೆಂಡಿಂಗ್‌ನಲ್ಲಿದ್ದಾರೆ. ಈ ವಿಶ್ವಕಪ್ ಪಂದ್ಯದಲ್ಲಿ ಕೊಹ್ಲಿಯು ಸೆಂಚುರಿ ಹೊಡೆದು ಮಿಂಚಿದ್ದರೆ, ಅತ್ತ ರವೀಂದ್ರ ಜಡೇಜಾ ಅವರು ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನವನ್ನು ನೀಡಿ ಪಂದ್ಯವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ತಮ್ಮ ನಿಜ ಜೀವನದಲ್ಲಿಯೂ ಕೊಹ್ಲಿಗೆ ಸ್ನೇಹಿತರಾದ ವಾರ್ತಿಕ್ ತಿಹಾರ ಅವರು ನೆರವಾಗುವ ಮೂಲಕ 1050 ಕೋಟಿ ರೂ.ಗೂ ಹೆಚ್ಚಿನ ನಿವ್ವಳ ಮೌಲ್ಯದ ಆಸ್ತಿ ಸಂಪಾದಿಸುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಕೊಹ್ಲಿ ಅವರು ಕೇವಲ ಕ್ರಿಕೆಟ್ ಕ್ಷೇತ್ರದಲ್ಲಿ ಮಾತ್ರ ಮಿಂಚುತ್ತಿಲ್ಲ; ಜತೆಗೆ ಒಬ್ಬ ಯಶಸ್ವಿ ಉದ್ಯಮಿಯಾಗಿಯೂ ಹಲವು ರಂಗಗಳಲ್ಲಿ ಹೂಡಿಕೆಯನ್ನು ಕೂಡ ಮಾಡಿದ್ದಾರೆ.

ಹಾಗೆಯೇ ವರ್ತಿಕ್ ತಿಹಾರಾ ಅವರು ವಿರಾಟ್ ಕೊಹ್ಲಿ ಸಾಹಸಗಳಲ್ಲಿ ಒಂದನ್ನು ನೋಡಿಕೊಳ್ಳುವ ಥ್ರಸ್ಟರ್‌ನ ಪಾಲುದಾರರಾಗಿದ್ದಾರೆ. ಹಾಗಾದರೆ ಕೊಹ್ಲಿ ವಾರ್ತಿಕ್ ತಿಹಾರಾ ಅವರನ್ನು ಏಕೆ ಹೂಡಿಕೆಗೆ ಆಯ್ಕೆ ಮಾಡಿಕೊಂಡಿದ್ದಾರೆ? ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ವಾರ್ತಿಕ್ ತಿಹಾರಾ ಯಾರು?
ವಾರ್ತಿಕ್ ತಿಹಾರಾ ಅವರು ವಿರಾಟ್ ಕೊಹ್ಲಿ ಅವರ ಬಾಲ್ಯ ಸ್ನೇಹಿತರಾಗಿದ್ದು, ಅವರನ್ನು ಯಾವಾಗಲೂ ಕಿಂಗ್ ಕೊಹ್ಲಿಗೆ ಹೋಲಿಸಲಾಗುತ್ತದೆ. ವಾರ್ತಿಕ್ ತಿಹಾರಾ ಅವರು ಕೊಹ್ಲಿ ಅವರ ಅತ್ಯಂತ ಆಪ್ತ ಸ್ನೇಹಿತರಲ್ಲಿ ಒಬ್ಬರು. ಅಷ್ಟೇಅಲ್ಲ, ಅವರಿಬ್ಬರು ಸುಮಾರು ಎರಡು ದಶಕಗಳಿಂದ ಆಪ್ತರಾಗಿದ್ದಾರೆ. ವಿರಾಟ್ ಕೊಹ್ಲಿ ಅವರಂತೆ ವಾರ್ತಿಕ್ ಕೂಡ ಕ್ರಿಕೆಟ್ ಆಟಗಾರನಾಗಿದ್ದು, ಇಬ್ಬರು ಕೂಡ ಅಂಡರ್-17ನಲ್ಲಿ ದಿಲ್ಲಿ ತಂಡದ ಪರ ಆಡಿದ್ದರು.
ಈ ಒಡನಾಟವು ಇಬ್ಬರ ಬಾಂಧವ್ಯವನ್ನು ಮತ್ತಷ್ಟು ಹತ್ತಿರ ಮಾಡುತ್ತ ಹೋಗಿದೆ. ಆದರೆ, ಮುಂದೆ ಕೊಹ್ಲಿಯು ಭಾರತದ ಭವಿಷ್ಯದ ಭರವಸೆಯ ಕ್ರಿಕೆಟ್ ಆಟಗಾರನಾಗಿ ಆಯ್ಕೆಗಾರರಿಂದ ಸೆಲೆಕ್ಟ್ ಆದರು. ಇನ್ನು ವಾರ್ತಿಕ್ ಅವರು ಕ್ರಿಕೆಟ್ ಹೊರತಾಗಿ ಬೇರೆ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ನಿರ್ಧರಿಸಿದ್ದರು. ಅದರ ಪರಿಣಾಮ, ಟ್ರೂ ಪ್ಯಾಲೇಟ್ ಹಾಸ್ಪಿಟಾಲಿಟಿ ಎಂಬ ಸ್ವಂತ ಕಂಪನಿಯನ್ನು ಸ್ಥಾಪಿಸಿದರು.
ವಾರ್ತಿಕ್ ತಿಹಾರಾ ಅವರ ಈ ಕಂಪನಿಯಲ್ಲಿ ಆತಿಥ್ಯ ಹಾಗೂ ರೆಸ್ಟೊರೆಂಟ್ ಕಂಪನಿಯಾದ ಒನ್8ನ ಮಾಲೀಕರಾದ ವಿರಾಟ್ ಕೊಹ್ಲಿ ಕೂಡ ಸಹ ಮಾಲೀಕರಾಗಿದ್ದಾರೆ. ಕೊಹ್ಲಿ ಅವರ 18 ನಂಬರ್ ಜರ್ಸಿ ನಂತರ ಈ ಬ್ರಾಂಡ್ ಜನಪ್ರಿಯತೆ ಪಡೆದಿದೆ. ಕಾಲಕ್ರಮೇಣ ಒನ್8 ಹೆಚ್ಚಿನ ಪ್ರಸಿದ್ಧಿಯನ್ನು ಪಡೆದಿದ್ದು, ಈಗ ದಿಲ್ಲಿ, ಪುಣೆ ಹಾಗೂ ಬೆಂಗಳೂರಿನಲ್ಲಿ ರೆಸ್ಟೊರೆಂಟ್ ಅನ್ನು ಹೊಂದಿದೆ. ವರದಿಗಳ ಪ್ರಕಾರ, ಒನ್18 ಈಗ ಸುಮಾರು 110 ಕೋಟಿ ರೂಪಾಯಿ ಆಸ್ತಿ ಮೌಲ್ಯವನ್ನು ಹೊಂದಿದೆ. ಒನ್8 ಕೆಫೆಯು ರುಚಿಯಾದ ಪಾಕ ಪದ್ಧತಿ ಹಾಗೂ ಅತ್ಯಾಧುನಿಕ ಅಲಂಕಾರಕ್ಕೆ ಹೆಸರುವಾಸಿಯಾಗಿದೆ.


Click it and Unblock the Notifications