ಬಿರಿಯಾನಿ ಮಾರಾಟದಿಂದ ದಿನಕ್ಕೆ 37 ಲಕ್ಷ ಆದಾಯ ಗಳಿಸ್ತಾರೆ ವಿಶಾಲ್‌ ಜಿಂದಾಲ್‌!

ವಿಶಾಲ್‌ ಜಿಂದಾಲ್‌ ಅವರು 2015ರಲ್ಲಿ ಬಿರಿಯಾನಿ ಬೈ ಕಿಲೋ ಅನ್ನು ಸ್ಥಾಪಿಸಿದ್ದು, ಇದು ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುವ ಫುಡ್‌ ಬ್ರಾಂಡ್‌ ಆಗಿದೆ. ಈ ಕಂಪನಿಯು ಆರಂಭ ಆದಾಗಿನಿಂದ ಅದರ ಆದಾಯದಲ್ಲಿ ಏರಿಕೆಯಾಗುತ್ತ ಹೋಗಿದೆ. ಆದರೂ ಕಳೆದ ಕೆಲವು ವರ್ಷಗಳಿಂದ ಅವರ ಈ ಬ್ರಾಂಡ್‌ ಸಾಧಿಸಿರುವ ಯಶಸ್ವಿನಿಂದ ಅವರು ತೃಪ್ತರಾಗಿಲ್ಲ.

ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಅವರು 1000 ಕೋಟಿ ರೂ. ವಹಿವಾಟು ನಡೆಸಲಿದ್ದಾರೆ. ಐಐಟಿ ಪದವೀಧರರೊಬ್ಬರು ಬಿರಿಯಾನಿ ಮಾರಾಟ ಮಾಡುವ ಮೂಲಕ ಅದರಲ್ಲಿ ಗಳಿಸಿರುವ ಯಶಸ್ವಿನ ಕುರಿತ ಕಥೆಯೊಂದು ಇಲ್ಲಿದೆ. ಜಿಂದಾಲ್‌ ಅವರು ತಮ್ಮ ವ್ಯಾಪಾರ ಉದ್ಯಮದ ತಂತ್ರಗಾರಿಕೆ ಹಾಗೂ ಮಾರುಕಟ್ಟೆಯನ್ನು ನೋಡಿಕೊಳ್ಳುತ್ತಿದ್ದಾರೆ.

 ಬಿರಿಯಾನಿ ಮಾರಾಟದಿಂದ ದಿನಕ್ಕೆ 37 ಲಕ್ಷ ಆದಾಯ ಗಳಿಸ್ತಾರೆ!

ಜಿಂದಾಲ್‌ ಅವರು ಸ್ವಯಂ ಫುಡ್ಡಿ ಆಗಿರುವುದು ಕೂಡ ಅವರ ಈ ಆಹಾರ ಉದ್ಯಮಕ್ಕೆ ಅನುಕೂಲವುಂಟು ಮಾಡಿದೆ. ಅವರು ಬೇರೆ ಹಲವಾರು ಬಿಸಿನೆಸ್‌ನಲ್ಲಿಯೂ ಭಾಗಿಯಾಗಿದ್ದಾರೆ. ಹೀಗಾಗಿ, ಬಿರಿಯಾನಿ ಬಿಸಿನೆಸ್‌ ಜಿಂದಾಲ್‌ ಅವರಿಗೆ ಒಂದು ಪ್ಯಾಶನ್‌ ಆಗಿದೆ. ಪ್ರತಿಯೊಂದು ಆರ್ಡರ್‌ ಅನ್ನು ವೈಯಕ್ತಿಕವಾಗಿ ತಯಾರಿಸಬೇಕೆಂಬ ಭಾರತದ ಖಾಂಶಮ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವುದೇ ಅವರ ಈ ಬಿಸಿನೆಸ್‌ನ ಹಿಂದಿನ ಮುಖ್ಯ ಐಡಿಯಾ ಆಗಿದೆ.

ಅಲ್ಲಿ ತಯಾರಿಸುವ ಬಿರಿಯಾನಿ ಮಣ್ಣಿನ ಮಡಿಕೆಯಲ್ಲಿ ಪ್ಯಾಕ್‌ ಮಾಡಿ ವಿಶೇಷ ರೀತಿಯಲ್ಲಿ ಮಾರಾಟ ಮಾಡಲಾಗುತ್ತದೆ. ಜಿಂದಾಲ್‌ ಅವರು ಸಿಂಗಾಪುರ ಮೂಲದ ಇಕೋಸಿಸ್ಟಮ್‌ ಅಡ್ವೈಸರಿ ಮಂಡಳಿಯಲ್ಲಿಯೂ ಇದ್ದಾರೆ. ಇದು ಅವರ ಮೊದಲ ಕಂಪೆನಿ ಅಲ್ಲ; ಅವರು ಗುರ್ಗಾಂವ್‌ ಮೂಲದ ಕಾರ್ಪೆಡಿಯಂ ಕ್ಯಾಪಿಟಲ್‌ ಪಾರ್ಟನರ್ಸ್‌ ಎಂಬ ಖಾಸಗಿ ಇಕ್ವಿಟಿ ಫಂಡ್‌ ಅನ್ನು ಕೂಡ ಸ್ಥಾಪಿಸಿದ್ದರು. ಜತೆಗೆ ಜಿಂದಾಲ್‌ ಅವರು ಫಿಡಿಲಿಟಿ ವೆಂಚರ್ಸ್‌ನ ಎಂಡಿ ಹಾಗೂ ಅಕ್ಷಯಂ ಕ್ಯಾಪಿಟಲ್‌ನ ಸಿಇಒ ಕೂಡ ಆಗಿದ್ದಾರೆ.

ಜಿಂದಾಲ್‌ ಅವರು ಭಾರತೀಯ ಎಲೆಕ್ಟ್ರಾನಿಕ್ಸ್‌ ಪ್ರೈವೆಟ್‌ ಲಿಮಿಟೆಡ್ ಎಂಬ ಕಂಪೆನಿಯ ನಿರ್ದೇಶಕರೂ ಆಗಿದ್ದರು. ಅವರು ಬಿಸಿನೆಸ್‌ನ್ನು ಸ್ಥಾಪಿಸಿ ಅದನ್ನು ಬಹು ಮಿಲಿಯನ್‌ ಡಾಲರ್‌ಗಳ ಕಂಪೆನಿಯನ್ನಾಗಿ ಬೆಳೆಸಿದ್ದಾರೆ. ಇದು 100 ಮಂದಿ ಉದ್ಯೋಗಿಗಳೊಂದಿಗೆ ಎಲ್ಲ ಮಹಾನಗರಗಳಲ್ಲಿಯೂ ಕಚೇರಿಯನ್ನು ಹೊಂದಿತ್ತು. ಈ ನಡುವೆ ಅವರು 1994ರಲ್ಲಿ ಅಮೆರಿಕದಲ್ಲಿ ಅಮನೊ ಸಿನ್ಸಿನಾಟಿ ಇಂಕ್‌ನಲ್ಲಿ ಮಾರ್ಕೆಟಿಂಗ್‌ ಅಸೋಸಿಯೇಟ್‌ ಆಗಿಯೂ ಕೆಲಸ ಮಾಡಿದ್ದಾರೆ.

ಜಿಂದಾಲ್‌ ಅವರು ಐಐಟಿಯಿಂದ ಎಂಜಿನಿಯರಿಂಗ್‌ ಪದವಿ ಪಡೆದುಕೊಂಡಿದ್ದಾರೆ. ನಂತರ ಅವರು ನ್ಯೂಯಾರ್ಕ್‌ನ ಸಿರಾಕ್ಯೂಸ್‌ ವಿಶ್ವವಿದ್ಯಾಲಯದಲ್ಲಿ ತಮ್ಮ ಎಂಬಿಎ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಜತೆಗೆ ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಹಣಕಾಸು ವಿಷಯದಲ್ಲಿ ಉನ್ನತ ವ್ಯಾಸಂಗವನ್ನು ಮಾಡಿದ್ದಾರೆ.

2023ರ ಹಣಕಾಸು ವರ್ಷದಲ್ಲಿ ಅವರು 300 ಕೋಟಿ ರೂ. ಆದಾಯವನ್ನು ನಿರೀಕ್ಷೆ ಮಾಡಿದ್ದಾರೆ. ಈ ಕಂಪೆನಿಯು ಸದ್ಯ ನಷ್ಟದಲ್ಲಿದೆ. ಹೀಗಾಗಿ, 2023ರಲ್ಲಿ ಲಾಭದತ್ತ ಮುನ್ನಡೆಯಲು ಪ್ರಯತ್ನಿಸುತ್ತಿದೆ. ಕಂಪೆನಿಯು ಪ್ರತಿದಿನ 700-750 ರೂ. ದರದಲ್ಲಿ ಗ್ರಾಹಕರಿಂದ 10000 ಆರ್ಡರ್‌ಗಳನ್ನು ಪಡೆಯುತ್ತಿದೆ. ಮಹಾನಗರಗಳನ್ನು ಒಳಗೊಂಡಂತೆ ಬಿರಿಯಾನಿ ಬೈ ಕಿಲೋ ಕಂಪೆನಿ ದೇಶಾದ್ಯಂತ 45 ನಗರಗಳಲ್ಲಿ 100 ಔಟ್‌ಲೆಟ್‌ಗಳನ್ನು ಹೊಂದಿದೆ.

ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಸುಮಾರು 1000 ಕೋಟಿ ರೂ.ಗಳ ವಹಿವಾಟು ನಡೆಸುವ ಗುರಿಯನ್ನು ಕಂಪೆನಿ ಹೊಂದಿದೆ. ಅವರು ಪ್ರಸ್ತುತ ಹಣಕಾಸು ವರ್ಷದಲ್ಲಿ ಮಾರ್ಕೆಟಿಂಗ್‌ಗೆ ಹೆಚ್ಚಿನ ಹಣ ಖರ್ಚು ಮಾಡುವ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಂತೆ ಜಿಂದಾಲ್‌ ಅವರು ತಮ್ಮ ಈ ಕಂಪೆನಿಯನ್ನು ಮೆಕ್‌ಡೊನಾಲ್ಡ್‌ ಹಾಗೂ ಸ್ಟಾರ್‌ಬಕ್ಸ್‌ಗಿಂತ ದೊಡ್ಡ ಉದ್ಯಮವಾಗಿ ಬೆಳೆಸುವ ಗುರಿಯನ್ನು ಹೊಂದಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+