ಭಾರತೀಯ ಮೂಲದ ಅನೇಕ ನಾಯಕರು ವಿವಿಧ ದೇಶಗಳ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಟೆಕ್ ಜಗತ್ತಿನಲ್ಲಿ ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಮುಂತಾದವರು ಪ್ರಸಿದ್ಧರಾಗಿದ್ದರೆ ರಾಜಕೀಯದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಯುಎಸ್ ಅಧ್ಯಕ್ಷ ಜೋ ಬಿಡನ್ ನೇತೃತ್ವದ ಸರ್ಕಾರದಲ್ಲಿ ಉಪಾಧ್ಯಕ್ಷ ಸ್ಥಾನ ಕಮಲಾ ಹ್ಯಾರಿಸ್ ಅಲಂಕರಿಸಿದ್ದಾರೆ.
ಹೀಗೆ ಹಲವು ಭಾರತೀಯ ಮೂಲದವರು ಇಂದು ವಿಶ್ವದ ಅನೇಕ ದೇಶದಲ್ಲಿ ಅತ್ಯುನ್ನತ ಹುದ್ದೆಯಲ್ಲಿದ್ದಾರೆ. ಇವೆರಲ್ಲರ ನಡುವೆ ಅಮೇರಿಕಾದಲ್ಲಿ ಕಿರಾಣಿ ಅಂಗಡಿಗಳ ಸರಪಳಿಯನ್ನು ಮುನ್ನಡೆಸುವ "ಆಲ್ಬರ್ಟ್‌ಸನ್" ಸಂಸ್ಥೆಯ ವಿವೇಕ್ ಶಂಕರನ್ ಅವರ ಬಗ್ಗೆ ನೀವು ಕೇಳಿರಲಿಕ್ಕಿಲ್ಲ.
ಭಾರತ ಮೂಲದ ಶಂಕರನ್ ಅವರು ಕಾರ್ಪೊರೇಟ್ ಪ್ರಪಂಚದಲ್ಲಿ ತಮ್ಮದೇ ದಾರಿಯಲ್ಲಿ ಸಾಗಿ, 11.5 ಶತಕೋಟಿ ಡಾಲರ್ (95,000 ಕೋಟಿ ರೂಪಾಯಿಗೂ ಹೆಚ್ಚು) ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಕಿರಾಣಿ ಅಂಗಡಿಗಳ ದೈತ್ಯ ಅಲ್ಬರ್ಟ್‌ಸನ್‌ನ ಸಿಇಒ ಸ್ಥಾನಕ್ಕೇರಿದವರು. ಕ್ರೋಗರ್ ನಂತರದ ಅಮೆರಿಕಾದ ಎರಡನೇ ಅತಿ ದೊಡ್ಡ ಕಿರಾಣಿ ಸರಪಳಿ ಆಲ್ಬರ್ಟ್‌ಸನ್ ಹೊರಹೊಮ್ಮಿದೆ.

ಫಾರ್ಚೂನ್ ಗ್ಲೋಬಲ್ 500 ಕಂಪೆನಿಯಲ್ಲಿ ಒಂದಾಗಿರುವ ಪೆಪ್ಸಿಯ ಮಾಜಿ ಕಾರ್ಯನಿರ್ವಾಹಕರಲ್ಲಿ ಒಬ್ಬರಾದ ಶಂಕರನ್ ಅವರು 2019ರಲ್ಲಿ ಆಲ್ಬರ್ಟ್‌ಸನ್ ನೇಮಕಗೊಳ್ಳುವ ಮುನ್ನ ಪೆಪ್ಸಿಕೋ ನಾರ್ತ್ ಅಮೆರಿಕದ ಸಿಇಓ ಆಗಿದ್ದರು. ಭಾರತದಲ್ಲಿ ಹುಟ್ಟಿ ಬೆಳೆದ ಶಂಕರನ್, ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್‌ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ.
ಜೆರಾಕ್ಸ್ ಯಂತ್ರವನ್ನು ರಿಪೇರಿ ಮಾಡುವವರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು "ತಾನು ಇನ್ನೂ ಹಲವು ಯಂತ್ರಗಳನ್ನು ಸರಿಪಡಿಸುತ್ತೇನೆ" ಎಂದು ತಮಾಷೆಯಾಗಿ ಪ್ರತಿಪಾದಿಸುವ ಕೌಶಲ್ಯವೂ ಅವರಿಗಿದೆ. ಇದಾದ ಬಳಿಕ ಶಂಕರನ್ ನಂತರ ಜಾರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಮಿಚಿಗನ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಪದವಿ ಪಡೆಯಲು ಅಮೇರಿಕಾಕ್ಕೆ ತೆರಳಿದರು.
1993 ರಲ್ಲಿ ಪ್ರಮುಖ ಸಲಹಾ ಸಂಸ್ಥೆಯಾದ ಮೆಕಿನ್ಸೆ & ಕಂಗೆ ಸೇರಿ ಅಲ್ಲಿ ಹಂತ ಹಂತವಾಗಿ ಮೇಲುಸ್ತರಕ್ಕೇರಿದರು. ಉದ್ಯಮದಲ್ಲಿ ಅವರಿದ್ದ ಪ್ರತಿ ಹುದ್ದೆಯಲ್ಲೂ ಅತ್ಯುನ್ನತವಾದ ಸಾಧನೆ ಮಾಡಿದರು. ಇದಾದ ಒಂದು ದಶಕದ ನಂತರ, ಅವರು ಪೆಪ್ಸಿಕೋದಲ್ಲಿ ಇಂದ್ರಾ ನೂಯಿ ಅವರ ಕಾರ್ಯತಂತ್ರದಿಂದ ಅಲ್ಲಿದ್ದ ಪ್ರತಿಭೆಗಳಿಗೆ ಉನ್ನತ ಸ್ಥಾನಕ್ಕೆ ಏರಿದ ಬ್ಯುಸಿನೆಸ್ ಲೀಡರ್ ಗಳಲ್ಲಿ ಶಂಕರನ್ ಕೂಡಾ ಓರ್ವರಾದರು.
2009 ರಲ್ಲಿ ನೂಯಿ ಅವರು ಪೆಪ್ಸಿಕೋದಲ್ಲಿ ಶಂಕರನ್ ಅವರಿಗೆ ಮುಖ್ಯ ಕಾರ್ಯತಂತ್ರ ಅಧಿಕಾರಿಯ ಹುದ್ದೆ ನೀಡಿದರು. ಶಂಕರನ್ ಅವರು ಸ್ಟಾರ್‌ಬಕ್ಸ್ ಸಿಇಒ ಲಕ್ಷ್ಮಣ್ ನರಸಿಂಹನ್ ಮತ್ತು ಟಾರ್ಗೆಟ್ ಸಿಇಒ ಬ್ರಿಯಾನ್ ಕಾರ್ನೆಲ್ ಅವರಂತಹ ಹಲವಾರು ಗೆಳೆಯರ ಜೊತೆ ಸೇರಿಕೊಳ್ಳುವ ಮೊದಲು ಪೆಪ್ಸಿಯಲ್ಲಿಹಲವಾರು ನಾಯಕತ್ವದ ಹುದ್ದೆಯಲ್ಲಿ ಒಂದು ದಶಕದ ಸುದೀರ್ಘ ವೃತ್ತಿಜೀವನವನ್ನು ನಡೆಸಿದರು.


Click it and Unblock the Notifications