ಜಾಗತಿಕವಾಗಿ ಖ್ಯಾತವಾಗಿರುವ ಐಷಾರಾಮಿ ಉತ್ಪನ್ನ ತಯಾರಕ ಸಂಸ್ಥೆ ಎಲ್‌ವಿಎಂಎಚ್ (ಲೂಯಿ ವಿಟಾನ್) ಸಿಇಒ ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ಅಗ್ರ ಶ್ರೀಮಂತ ಪಟ್ಟಕ್ಕೇರಿದ್ದಾರೆ. ಹಾಗಾದರೆ, ಬರ್ನಾರ್ಡ್ ಯಾರು ಎನ್ನುವ ಕುತೂಹಲ ನಿಮಗೆ ಇರಬಹುದು.
ಬರ್ನಾರ್ಡ್ ಅವರು ಜಾಗತಿಕವಾಗಿರುವ ಅತ್ಯಂತ ಜನಪ್ರಿಯ ಐಷಾರಾಮಿ ಸರಕುಗಳ ಬ್ರಾಂಡ್ ಆಗಿರುವ ವಿಎಂಎಚ್(ಲೂಯಿ ವಿಟಾನ್)ನ ಅಧ್ಯಕ್ಷರು ಹಾಗೂ ಸಿಇಒ ಆಗಿದ್ದಾರೆ. ಫೋರ್ಬ್ಸ್ ಪಟ್ಟಿಯ ಪ್ರಕಾರ ಅವರು ಎಲೋನ್ ಮಸ್ಕ್ ಅವರನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಬರ್ನಾರ್ಡ್ ಅರ್ನಾಲ್ಟ್ ಹಾಗೂ ಅವರ ಕುಟುಂಬವು ಕಳೆದ ಹಲವು ದಶಕಗಳಿಂದ ಸಾರ್ವಜನಿಕವಾಗಿ ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್ ಅವರ ಹೂಡಿಕೆಗಳು, ವ್ಯಾಪಾರ ವಹಿವಾಟು ಹಾಗೂ ಐಷಾರಾಮಿ ಜೀವನ ಶೈಲಿ ಬಗ್ಗೆ ಆಗಾಗ ಸುದ್ದಿಯಾಗುತ್ತಿದೆ. ಆದರೆ, ಮೂರು ದಶಕಗಳಿಗೂ ಹೆಚ್ಚು ಕಾಲ ಬಿಲಿಯನೇರ್‌ನೊಂದಿರುವ ಇವರ ಬರ್ನಾರ್ಡ್ ಅವರ ಆರ್ಟಿಸ್ಟ್ ಪತ್ನಿಯ ಬಗ್ಗೆ ಅನೇಕರಿಗೆ ಗೊತ್ತಿಲ್ಲ.
ಬರ್ನಾರ್ಡ್ ಅರ್ನಾಲ್ಟ್ ಅವರ ಪತ್ನಿ ಹೆಲೆನ್ ಮರ್ಸಿಯರ್ ಹೆಸರಾಂತ ಪಿಯಾನೋ ವಾದಕರಾಗಿದ್ದು ಅವರ ಹೆಸರಿನಲ್ಲಿ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ. ಕೆನಡಾದಲ್ಲಿ ಜನಿಸಿದ ಹೆಲೆನ್ ಮರ್ಸಿಯರ್ 1990 ರಲ್ಲಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಮೊದಲ ಬಾರಿಗೆ ಭೇಟಿಯಾದರು.
ಅರ್ನಾಲ್ಟ್ ಅವರು ತಮ್ಮ ಮೊದಲ ಹೆಂಡತಿಗೆ ಅನ್ನಿ ದೇವವ್ರಿನ್ ಅದೇ ವರ್ಷ ಅಂದರೆ 1990ರಲ್ಲಿ ವಿಚ್ಛೇದನ ನೀಡಿದ್ದರು. ಹೆಲೆನ್ ಮರ್ಸಿಯರ್ ಅವರು ಸ್ನೇಹಿತರ ಮನೆಯಲ್ಲಿದ್ದಾಗ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಭೇಟಿಯಾದರು. ಭೇಟಿ ಪ್ರೀತಿಯಾಯಿತು, ನಂತರ ಇಬ್ಬರೂ 1991 ರಲ್ಲಿ ಮದುವೆಯಾಗಲು ನಿರ್ಧರಿಸಿದರು. ಈಗ ಈ ದಂಪತಿಗೆ ಮೂವರು ಗಂಡು ಮಕ್ಕಳಿದ್ದಾರೆ.
ಅಲೆಕ್ಸಾಂಡ್ರೆ, ಫೆಡೆರಿಕ್ ಹಾಗೂ ಜೀನ್ ಅವರ ಪುತ್ರರು. ಅವರು ಕೂಡ ತಮ್ಮ ಪೋಷಕರ ಅಭಿರುಚಿಯಂತೆ ಸಂಗೀತದ ಕಡೆಗೆ ಒಲವು ಬೆಳೆಸಿಕೊಂಡಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್ ಅವರ ಪತ್ನಿ ಹೆಲೆನ್ ಮತ್ಸಿಯರ್ ಅವರು ತಮ್ಮ 6ನೇ ವಯಸ್ಸಿನಲ್ಲಿಯೇ ಪಿಯೊನೊವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದ್ದರು.
ಆರಂಭದಲ್ಲೇ ಅವರ ಪ್ರತಿಭೆ ಸಾರ್ವಜನಿಕವಾಗಿ ಗುರುತಿಸಲ್ಪಟ್ಟಿದ್ದು, ಹಲವು ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಗಳಿಸಿದ್ದಾರೆ. ಅಲ್ಲದೆ ಪ್ರೇಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಚೇಂಬರ್ ಸಂಗೀತ ಸ್ಪರ್ಧೆಯ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ. ತಮ್ಮ 15ನೇ ವಯಸ್ಸಿನಲ್ಲಿ ಅವರು ವಿಯೆನ್ನಾದ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿವಿಯಲ್ಲಿ ಕಲಿಕೆಗೆ ಪ್ರವೇಶ ಪಡೆದುಕೊಂಡಿದ್ದರು.
ಹೆಲೆನ್ ಮರ್ಸಿಯರ್ ಅವರು ಐಕ್ಸ್-ಎನ್-ಪ್ರೊವೆನ್ಸ್, ಮೆಂಟನ್, ಕೊಲ್ಮಾರ್, ನೊಹಾಂಟ್, ಇವಿಯನ್, ರೀಮ್ಸ್, ಪಿಯೊನೊ ಆಕ್ಸ್ ಜಾಕೋಬಿನ್ಸ್, ಲಾ ಚೈಸ್-ಡೈಯು, ರೇಡಿಯೋ ಫ್ರಾನ್ಸ್ ಸೇರಿದಂತೆ ಹಲವಾರು ಉತ್ಸವ-ವೇದಿಕೆಗಳಲ್ಲಿ ಕಾರ್ಯಕ್ರಮ ಪ್ರದರ್ಶನ ನೀಡಿದ್ದಾರೆ.
ಫ್ರಾನಗ್ಸ್ ಮ್ಯೂಸಿಕ್, ರೇಡಿಯೊ ಕ್ಲಾಸಿಕ್, ಫ್ರಾನ್ಸ್-ಕಲ್ಚರ್, ರೇಡಿಯೋ ಸ್ಯೂಸ್, ರೇಡಿಯೋ-ಕೆನಡಾ ಹಾಗೂ ಯುನೈಟೆಡ್ ಸ್ಟೇಟ್ಸ್‌ನ ಸಿಬಿಎಸ್‌ನಲ್ಲಿ ಅವರು ಆಗಾಗ ಕಾರ್ಯಕ್ರಮಗಳನ್ನು ನೀಡುತ್ತಿದ್ದರು.


Click it and Unblock the Notifications