ಭಾರತದಲ್ಲಿ ಹಲವರು ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡು ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ. ಅವರ ಸಾಲಿನಲ್ಲಿ ಮಾನಸಿ ಟಾಟಾ ಅವರು ಕೂಡ ಸೇರಿದ್ದು, ಪ್ರತಿಷ್ಠಿತ ಕಂಪನಿಯ ಚುಕಾಣಿ ಹಿಡಿದಿದ್ದಾರೆ. 1990ರ ಆಗಸ್ಟ್ 7ರಂದು ಜನಿಸಿರುವ ಮಾನಸಿ ಟಾಟಾ ಅವರು 130 ವರ್ಷ ಹಳೇಯ ಕಿರ್ಲೋಸ್ಕರ್ ಗ್ರೂಪ್‌ನ ಕಿರ್ಲೋಸ್ಕರ್ ಜಾಯಿಂಟ್ ವೆಂಚರ್ ಪ್ರೈವೆಟ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದಾರೆ.
2022ರ ನವೆಂಬರ್‌ನಲ್ಲಿ ಅವರ ತಂದೆ ವಿಕ್ರಮ್ ಕಿರ್ಲೋಸ್ಕರ್ ಅವರ ಹಠಾತ್ ನಿಧನದ ನಂತರ ಮಾನಸಿ ಟಾಟಾ ಅವರಿಗೆ ಈ ಕಂಪನಿಯ ಜವಾಬ್ದಾರಿಯನ್ನು ನೀಡಲಾಯಿತು. ಅವರು ಕಿರ್ಲೋಸ್ಕರ್ ಜಂಟಿ ಉದ್ಯಮದ ಮಂಡಳಿತ ಅಧ್ಯಕ್ಷರಾಗಿ ನೇಮಕಗೊಂಡರು.

ಅವರ ನೇಮಕಾತಿ ನಂತರ ಮಾನಸಿ ಟಾಟಾ ಅವರು ಟೊಯೋಟಾ ಇಂಜಿನ್ ಇಂಡಿಯಾ ಲಿಮಿಟೆಡ್, ಟೊಯೊಟಾ ಮೆಟೀರಿಯಲ್ ಹ್ಯಾಂಡ್ಲಿಂಗ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಹಾಗೂ ಡೆನೋ ಕಿರ್ಲೋಸ್ಕರ್ ಇಂಡಸ್ಟ್ರೀಸ್ ಪ್ರೈವೆಟ್ ಲಿಮಿಟೆಡ್‌ನ ನೇತೃತ್ವ ವಹಿಸಿಕೊಂಡಿದ್ದಾರೆ.
ಮಾನಸಿ ಟಾಟಾ ಅವರು ಮೊದಲಿನಿಂದಲೂ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಪ್ರೈವೆಟ್ ಲಿಮಿಟೆಡ್ ಲಿಮಿಟೆಡ್‌ನಲ್ಲಿ ಇದ್ದರು. ಆದರೆ, ತಂದೆಯ ನಿಧನದ ನಂತರ ಅವರು ಉಪಾಧ್ಯಕ್ಷರಾಗಿ ನೇಮಕಗೊಂಡರು. ಟೊಯೊಟೊ ಕಂಪನಿಯೊಂದಿಗೆ ಭಾರತದಲ್ಲಿ ಟೊಟೊಯೊದ ಫಾರ್ಚೂನರ್ ಹಾಗೂ ಇನ್ನೋವಾ ಕಾರುಗಳನ್ನು ನಿರ್ಮಿಸುವುದಕ್ಕೆ ಕಿರ್ಲೋಸ್ಕರ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಜತೆಗೆ, ಭಾರತದಲ್ಲಿ ಟೊಯೊಟಾದ ನಿರ್ಮಾಣ ಹಾಗೂ ಮಾರಾಟ ವಿಭಾಗವನ್ನು ಕೂಡ ನೋಡಿಕೊಳ್ಳುತ್ತಿದೆ. ಮಾನಸಿ ಟಾಟಾ ಅವರು ಅಮೆರಿಕದ ರೋಡ್ ಐಲ್ಯಾಂಡ್ ಸ್ಕೂಲ್ ಆಫ್ ಡಿಸೈನ್‌ನಿಂದ ಪದವಿ ಪಡೆದುಕೊಂಡಿದ್ದಾರೆ.
ಮಾನಸಿ ಅವರು ತಮ್ಮ ವಿಧ್ಯಾಭ್ಯಾಸವನ್ನು ಮುಗಿಸಿದ ನಂತರ ತಮ್ಮದೇ ಕಂಪನಿಯಲ್ಲಿ ತಂದೆಯೊಂದಿಗೆ ವೃತ್ತಿ ಬದುಕು ಪ್ರಾರಂಭಿಸಿದ್ದರು. 2019ರಲ್ಲಿ ಮಾನಸಿ ಅವರು ಹೆಸರಾಂತ ಕೈಗಾರಿಕೋದ್ಯಮಿ ನೋಯಲ್ ಟಾಟಾ ಅವರ ಮಗ ನೆವಿಲ್ಲೆ ಟಾಟಾ ಅವರನ್ನು ವಿವಾಹವಾಗಿದ್ದಾರೆ.
ನೋಯೆಲ್ ಟಾಟಾ ಅವರು ಹಿರಿಯ ಉದ್ಯಮಿ ರತನ್ ಟಾಟಾ ಅವರ ಮಲಸಹೋದರರು ಎನ್ನುವುದು ಗಮನಾರ್ಹ. ಟಾಟಾ ಕುಟುಂಬದ ಸೊಸೆಯಾಗಿದ್ದರೂ ಮಾನಸಿ ಟಾಟಾ ಅವರು ಜನಪ್ರಿಯತೆಯಿಂದ ಬಹಳ ದೂರ ಉಳಿದುಕೊಂಡಿದ್ದಾರೆ.
"ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನೊಂದಿಗೆ ನನ್ನ ಪ್ರಯಾಣವನ್ನು ಯಶಸ್ವಿನೆಡೆಗೆ ಕೊಂಡೊಯ್ಯುವುದಕ್ಕೆ ಉತ್ಸುಕಳಾಗಿದ್ದೇನೆ. ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ಒದಗಿಸುವ ಜತೆಗೆ ಡೀಲರ್- ಪೂರೈಕೆದಾರರಿಗೆ ಮೌಲ್ಯವರ್ಧಕ ಸೇವೆಯನ್ನು ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ," ಎಂದು ತಮ್ಮ ಹೊಸ ಜವಾಬ್ದಾರಿ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications