ಅಮೆಜಾನ್ ಸಂಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಅವರ ಮಾಜಿ ಪತ್ನಿ ಮ್ಯಾಕಿಂಜಿ ಸ್ಕಾಟ್, ವಿಶ್ವದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಜೆಫ್ ಬೆಜೋಸ್‌ಗೆ ವಿಚ್ಚೇದನ ನೀಡಿದ ಬಳಿಕ, ಮ್ಯಾಕಿಂಜಿ ಅವರು ಸುಮಾರು 19.7 ಮಿಲಿಯನ್ ಷೇರುಗಳನ್ನು ಪಡೆದುಕೊಂಡಿದ್ದು ಇದು, ಅಮೆಜಾನ್‌ನ ಒಟ್ಟು ಔಟ್ ಸ್ಟ್ಯಾಂಡಿಂಗ್ ಷೇರುಗಳ 4% ಗೆ ಸಮನಾಗಿರುತ್ತದೆ.
ಈ ಮೂಲಕ ಅವರು ಮೊದಲ ಬಾರಿಗೆ ಎಲ್ ಒರಿಯಲ್ ಎಸ್‌ಎ ಉತ್ತರಾಧಿಕಾರಿಯಾದ ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್ ಅನ್ನು ಹಿಂದಿಕ್ಕಿ, ವಿಶ್ವದ ಶ್ರೀಮಂತ ಮಹಿಳೆಯಾದರು. ಅಮೆಜಾನ್‌ನಲ್ಲಿ ತಮಗೆ ದೊರಕಿದ ಪಾಲಿನಲ್ಲಿ ಅಂದಿನಿಂದ ದೇಣಿಗೆಗಾಗಿಯೇ ಹಲವು ಬಿಲಿಯನ್ ಡಾಲರ್ ಗಳನ್ನು ದಾನ ಮಾಡಿದ್ದಾರೆ.

2023 ರಲ್ಲಿ, ಬ್ಲೂಮ್‌ಬರ್ಗ್ ಪಡೆದ ನಿಯಂತ್ರಕ ಫೈಲಿಂಗ್ ಪ್ರಕಾರ , 53 ವರ್ಷದಮ್ಯಾಕಿಂಜಿ ಸ್ಕಾಟ್ 65.3 ಮಿಲಿಯನ್ Amazon.com Inc. ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅನ್‌ಲೋಡ್ ಮಾಡಲಾದ ಷೇರುಗಳು $10.4 ಶತಕೋಟಿ ಮೌಲ್ಯದ್ದಾಗಿದೆ ಎಂದು ತಿಳಿದುಬಂದಿದೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಮ್ಯಾಕಿಂಜಿ ಅವರ ನಿವ್ವಳ ಮೌಲ್ಯವು 33.4 ಶತಕೋಟಿ ಡಾಲರ್‌ಗಳಾಗಿದ್ದು, ಜಾಗತಿಕವಾಗಿ ಅವರು ಐದನೇ ಶ್ರೀಮಂತ ಮಹಿಳೆಯಾಗಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬ ಮತ್ತು ಎಲಾನ್ ಮಸ್ಕ್ ಮೊದಲನೇ ಹಾಗೂ ಎರಡನೇ ಸ್ಥಾನದಲ್ಲಿದ್ದು ಅವರ ನಂತರ, 181.3 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಜೆಫ್ ಬೆಜೋಸ್ ಪ್ರಸ್ತುತ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
1992 ರಲ್ಲಿ ಉದ್ಯೋಗ ಸಂದರ್ಶನದ ವೇಳೆ ಜೆಫ್ ಬೆಜೋಸ್ ಅವರನ್ನು ಮ್ಯಾಕಿಂಜಿ ಸ್ಕಾಟ್ ಭೇಟಿಯಾದ ವೇಳೆ ಅವರ ಅಪಾರ ಸಂಪತ್ತಿ ಒಡೆಯರಾಗುವ ಪ್ರಯಾಣ ಪ್ರಾರಂಭವಾಯಿತು. ಒಂದು ವರ್ಷದ ನಂತರ, ಅಂದರೆ 1993 ರಲ್ಲಿ, ಜೆಫ್ ಮತ್ತು ಮ್ಯಾಕೆಂಜಿ ವಿವಾಹವಾಗಿದ್ದು.
1994 ರಲ್ಲಿ, ಅಂದರೆ ಅವರು ಮದುವೆಯ ಕೇವಲ ಒಂದು ವರ್ಷದ ನಂತರ, ಜೆಫ್ ಬೆಜೋಸ್ ಅಮೆಜಾನ್ ಅನ್ನು ಸ್ಥಾಪಿಸಿದರು. ಕುತೂಹಲಕಾರಿ ವಿಚಾರವೆಂದರೆ, ಮ್ಯಾಕಿಂಜಿ ಅವರ ಕಂಪನಿಯ ಮೊದಲ ಉದ್ಯೋಗಿಯಾಗಿದ್ದರು. ಆರಂಭದಲ್ಲಿ ಇವರು ಬಳಸಿದ ಪುಸ್ತಕಗಳ ಮಾರಾಟ ಮಾಡುವ ಬಗ್ಗೆ ತಮ್ಮ ಗಮನ ಕೇಂದ್ರೀಕರಿಸಿದ್ದರು.
ಜುಲೈ 1995 ರ ಹೊತ್ತಿಗೆ, ಅಮೆಜಾನ್‌ನ ವೆಬ್‌ಸೈಟ್ ಅನ್ನು ಪ್ರಾರಂಭಿಸಲಾಗಿ, ಬಳಿಕ ಅದು ಹಿಂತಿರುಗಿ ನೋಡಲಿಲ್ಲ. ಯಾಕೆಂದರೆ 1997 ರ ಅಂತ್ಯದ ವೇಳೆಗೆ, ಈ ಕಂಪನಿಯು 150 ದೇಶಗಳಲ್ಲಿ 15 ದಶಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿ ಬೆಳೆದು ನಿಂತಿತ್ತು. ಇಂದು, ಅಮೆಜಾನ್ 1.644 ಟ್ರಿಲಿಯನ್ ಡಾಲರ್‌ಗಳ ಮಾರುಕಟ್ಟೆ ಬಂಡವಾಳೀಕರಣದೊಂದಿಗೆ ಜಾಗತಿಕ ದೈತ್ಯವಾಗಿದೆ, ಇದು ವಿಶ್ವದ ಐದನೇ ಅತಿದೊಡ್ಡ ಕಂಪನಿಯಾಗಿದೆ.
2019 ರಲ್ಲಿ ಜೆಫ್ ಬೆಜೋಸ್‌ರಿಂದ ಮ್ಯಾಕೆಂಜಿ ಸ್ಕಾಟ್ ವಿಚ್ಛೇದನ ಪಡೆದುಕೊಂಡಾಗ ಗಣನೀಯ ಸಂಪತ್ತನ್ನು ಗಳಿಸುವ ಅವಕಾಶ ಒದಗಿ ಬಂತು. ವಾಷಿಂಗ್ಟನ್ ಕಾನೂನಿನ ಪ್ರಕಾರ, ಮದುವೆಯ ಸಮಯದಲ್ಲಿ ಸ್ವಾಧೀನವಿರುವ ಆಸ್ತಿಯನ್ನು ಸಾಮಾನ್ಯವಾಗಿ ವಿಚ್ಛೇದನದ ಸಮಯದಲ್ಲಿ ಸಂಗಾತಿಗಳ ನಡುವೆ ಸಮಾನವಾಗಿ ವಿಂಗಡಿಸಲಾಗುತ್ತದೆ.
ಈ ಪ್ರಕಾರ ಸ್ಕಾಟ್ ಬಳಿ ಸುಮಾರು 184 ಬಿಲಿಯನ್ ಡಾಲರ್ ಇರಬೇಕಿತ್ತು. ಆದರೆ ಮ್ಯಾಕೆಂಜಿ ಸ್ಕಾಟ್ ಅವರು ಕೇವಲ ನಾಲ್ಕು ಪ್ರತಿಶತ ಷೇರು ಭಾಗ ಆರಿಸಿಕೊಂಡು, ಬೆಜೋಸ್ ಅವರ ಸಂಪತ್ತಿನ ಬೃಹತ್ ಭಾಗದಿಂದ ದೂರವಿದ್ದರು. ಸ್ಕಾಟ್ ಅವರು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಅತಿ ಹೆಚ್ಚು ದೇಣಿಗೆಗಳನ್ನು ನೀಡುವ ಮೂಲಕ ಲೋಕೋಪಕಾರಿಯಾಗಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಅವರು 2019 ರಲ್ಲಿ "ದಿ ಗಿವಿಂಗ್ ಪ್ಲೆಡ್ಜ್‌ಗೆ" ಸಹಿ ಹಾಕವ ಮೂಲಕ ತನ್ನ ಹೆಚ್ಚಿನ ಸಂಪತ್ತನ್ನು ದೇಣಿಗೆ ಕಾರ್ಯಗಳಿಗೆ ನೀಡಲು ಬದ್ಧರಾಗಿದ್ದಾರೆ. 2023 ರಲ್ಲಿ ಸುಮಾರು $2.2 ಬಿಲಿಯನ್ ದೇಣಿಗೆಗಳನ್ನು 360 ಸಂಸ್ಥೆಗಳಿಗೆ ಘೋಷಿಸಿದರು. ಡಿಸೆಂಬರ್ 2023 ರ ಹೊತ್ತಿಗೆ, ಸ್ಕಾಟ್ ಲಾಭೋದ್ದೇಶವಿಲ್ಲದ ಸಂಸ್ಥೆಗಳಿಗೆ $16 ಶತಕೋಟಿಗಿಂತ ಹೆಚ್ಚು ದೇಣಿಗೆ ನೀಡಿದ್ದರು.
ಮಾರ್ಚ್ 2023 ರಲ್ಲಿ, ಸ್ಕಾಟ್ ಅವರು ಸಮುದಾಯ-ಕೇಂದ್ರಿತ ಲಾಭರಹಿತ ಸಂಸ್ಥೆಗಳಿಗೆ "ಮುಕ್ತ ಕರೆ" ಯನ್ನು ಘೋಷಿಸಿದರು. ಪ್ರಕ್ರಿಯೆಯಲ್ಲಿ ಆಯ್ಕೆಯಾದ 250 ಲಾಭರಹಿತ ಸಂಸ್ಥೆಗಳಿಗೆ ಅನಿರ್ಬಂಧಿತ $1 ಮಿಲಿಯನ್ ದೇಣಿಗೆ ನೀಡಲು ಸ್ಕಾಟ್ ಯೋಜಿಸಿದ್ದಾರೆ.


Click it and Unblock the Notifications