ಝೆಸ್ಟ್‌ಮನಿ ಸಹ ಸಂಸ್ಥಾಪಕಿ ಲಿಜ್ಜಿ ಚಾಪ್‌ಮನ್ ಅವರು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್‌ನ ಡಿಜಿಟಲ್ ಕಂಪನಿಯಾದ ಜಿಯೋ ಪ್ಲಾಟ್‌ಫಾರ್ಮ್ ಸೇರಿಕೊಂಡಿರುವುದಾಗಿ ವರದಿಯಾಗಿದೆ. ಜೆಸ್ಟ್‌ಮನಿಯು ಹೊಸ ಖರೀದಿದಾರರನ್ನು ಹುಡುಕಿ ವಿಫಲಗೊಂಡ ಬಳಿಕ ಅದು ಸ್ಥಗಿತಗೊಂಡಿದೆ.
2015ರಲ್ಲಿ ಲಿಜ್ಜಿ ಚಾಪ್‌ಮನ್, ಪ್ರಿಯಾ ಶರ್ಮಾ ಹಾಗೂ ಆಶೀಶ್ ಅನಂತರಾಮನ್ ಅವರು ಸೇರಿಕೊಂಡು ಝೆಸ್ಟ್‌ಮನಿಯನ್ನು ಸ್ಥಾಪಿಸಿದ್ದರು. ಆದರೆ, ಪೋನ್‌ಪಿ ಜತೆಗೆ ನಡೆದ ಖರೀದಿ ಒಪ್ಪಂದ ವಿಫಲಗೊಂಡ ಹಿನ್ನಲೆಯಲ್ಲಿ 2023ರ ಮೇ ತಿಂಗಳಲ್ಲಿ ಕಂಪನಿಯನ್ನು ಬಂದ್ ಮಾಡಿದ್ದರು. ಈ ಕಂಪನಿಯು 2021ರ ಸೆಪ್ಟಂಬರ್‌ನಲ್ಲಿ 3200 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿತ್ತು.

ಚಾಪ್‌ಮನ್ ಅವರು ರಿಲೈನ್ಸ್‌ನ ಜಿಯೋ ಪ್ಲಾಟ್‌ಫಾರಂಗೆ ಸೇರಿದ್ದು, ಅವರು ಜಿಯೋ ಸುಪರ್ ಆಪ್ ಪ್ರಾಜೆಕ್ಟ್‌ನ ಹೊಣೆ ವಹಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಚಾಪ್‌ಮನ್ ಅವರು ಈಗಾಗಲೇ ಜಿಯೋ ಸಂಸ್ಥೆಗೆ ಸೇರ್ಪಡೆಗೊಂಡಿದ್ದು, ಅವರು ನಿರ್ವಹಿಸುವ ಹುದ್ದೆಯ ಬಗ್ಗೆ ಹೆಚ್ಚಿನ ಬಹಿರಂಗವಾಗಿಲ್ಲ.
ಆದರೆ, ಈ ಸುದ್ದಿಯನ್ನು ಅಲ್ಲಗಳೆಯಲಾಗಿದ್ದು, ಚಾಪ್‌ಮನ್ ಅವರು ಜಿಯೋ ಸಂಸ್ಥೆಗೆ ಸೇರ್ಪಡೆಯಾಗಿಲ್ಲ, ಇದೆಲ್ಲ ಊಹಾಪೋಹಾ ಎಂದು ಕೂಡ ಹೇಳಲಾಗುತ್ತಿದೆ.
ಚಾಪ್‌ಮನ್ ಅವರು ಸುಮಾರು ಒಂದು ದಶಕಗಳಿಂದ ಭಾರತದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಯುಕೆ ಸ್ಟಾರ್ಟ್‌ಅಪ್ ಆದ ವೋಂಗಾ ಹಾಗೂ ಡಿಎಸ್‌ಬಿ ಬ್ಯಾಂಕ್‌ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಡಿಎಸ್‌ಬಿ ಬ್ಯಾಂಕ್‌ನಲ್ಲಿ ಡಿಜಿಬ್ಯಾಂಕ್ ಪ್ರಾಜೆಕ್ಟ್ ಅನ್ನು ಮುನ್ನಡೆಸುತ್ತಿದ್ದರು.


Click it and Unblock the Notifications