ಧೀರೂಬಾಯಿ ಅಂಬಾನಿ, ರತನ್ ಟಾಟಾ ಮುಂತಾದವರು ಭಾರತ ಕಂಡ ಮುಂಚೂಣಿಯ ಉದ್ಯಮಿಗಳು. ಅವರಂತೆ ಇದೀಗ ಎರಡನೇ ತಲೆಮಾರಿನ ಹಲವಾರು ಉದ್ಯಮಿಗಳು ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸುತ್ತಿದ್ದಾರೆ. ವಿನತಿ ಸರಾಫ್ ಮುತ್ರೇಜಾ ಅವರು ವಿನತಿ ಆರ್ಗಾನಿಕ್ಸ್ ಲಿಮಿಟೆಡ್‌ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಮುನ್ನಡೆಸುತ್ತಿದ್ದಾರೆ.
1989ರಲ್ಲಿ ಅವರ ವಿನೋದ್ ಸರಾಫ್ ಸ್ಥಾಪಿಸಿದ ಕಂಪನಿಯು ಹೆಚ್ಚು ಜನಪ್ರಿಯ ನೋವು ನಿವಾರಕವಾದ ಐಬುಪ್ರೊಫೇನ್‌ನ ಪದಾರ್ಥಗಳನ್ನು ತಯಾರಿಸಲು ಹೆಸರುವಾಸಿಯಾಗಿದೆ. ವಿನತಿ ಅವರು 2018ರಿಂದ ತಮ್ಮ ನೇತೃತ್ವದಲ್ಲಿ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಈ ಕಂಪನಿಯು ವಿನತಿ ಹೆಸರಿನಲ್ಲೇ ಮುನ್ನಡೆಯುತ್ತಿದ್ದು, ಪ್ರಸ್ತುತ ಅದು 18,032 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.

ವಿನತಿ ಅವರು 2006ರಲ್ಲಿ ವಿಒಎಲ್ ಕಂಪನಿಗೆ ಸೇರಿದ್ದು, ಆ ಕಂಪನಿಯಲ್ಲಿ ಮ್ಯಾನೇಜರ್‌ಗಳ ತಂಡದಲ್ಲಿದ್ದುಕೊಂಡು 16 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ವಿನತಿ ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯಕ್ಕೆ ಸೇರಿದ ವಾರ್ಟನ್ ಸ್ಕೂಲ್‌ನಿಂದ ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಮತ್ತು ಸ್ಕೂಲ್ ಆಫ್ ಇಂಜಿನಿಯರಿಂಗ್‌ನಿಂದ ಅಪ್ಲೈಡ್ ಸೈನ್ಸ್‌ನಲ್ಲಿ ಬ್ಯಾಚುಲರ್ ಪದವಿ ಪಡೆದಿದ್ದಾರೆ.
ವಿನತಿ ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನ ಹಳೇ ವಿದ್ಯಾರ್ಥಿ ಕೂಡ ಆಗಿದ್ದಾರೆ. ವಿನತಿಗೆ ಕ್ಲೀನ್ ಮತ್ತು ಲೀನ್ ಕೆಮಿಸ್ಟ್ರಿ ಬಗ್ಗೆ ಒಲವು ಇದೆ. ಫೋರ್ಬ್ಸ್ ಪ್ರಕಾರ, ವಿನತಿ ಅವರ ತಂದೆಯು ನವೆಂಬರ್ 12ರ ಮಾಹಿತಿಯಂತೆ 14,160 ಕೋಟಿ ರೂಪಾಯಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಅವರು ಐಬುಪ್ರೊಫೇನ್ ತಯಾರಿಸಲು ಬಳಸುವ ಕಚ್ಚಾ ವಸ್ತುವಾದ ಐಸೊಬ್ಯುಟೈಲ್ ಬೆಂಜೀನ್ ಅನ್ನು ತಯಾರಿಸುವ ಉದ್ದೇಶದಿಂದ ಈ ಕಂಪನಿಯನ್ನು ಸ್ಥಾಪಿಸಿದ್ದಾರೆ.
ಈ ಕಂಪನಿಯು ಮುಂಬೈ ನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಕೆಮಿಕಲ್ಸ್ ಹಾಗೂ ಆರ್ಗಾನಿಕ್ ಉತ್ಪನ್ನಗಳನ್ನು ತಯಾರಿಸುತ್ತಿದೆ. ಜತೆಗೆ ಫಾರ್ಮಾಸುಟಿಕಲ್, ವಾಟರ್ ಟ್ರೀಟ್‌ಮೆಂಟ್, ನಿರ್ಮಾಣ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ.


Click it and Unblock the Notifications