ಬಾಲ್ಯ ಮತ್ತು ಯೌವನದಲ್ಲಿ ಕಷ್ಟಕರ ಪರಿಸ್ಥಿತಿಗಳೊಂದಿಗೆ ಹೋರಾಡುವಂತವರು ಮುಂದೆ ಅವರು ತಮ್ಮ ಜೀವನದಲ್ಲಿ ಸದೃಢರಾಗುತ್ತಾರೆ, ಅವರು ಎಂತಹ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುವ ಮನೋಸ್ಥೈರ್ಯ ಹೊಂದುತ್ತಾರೆ. ಇಂತದ್ದೆ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿ ಬೆಳೆದುನಿಂತ ಒಂದು ಸ್ಪೂರ್ತಿದಾಯಕ ಕಥೆಯು ಸ್ವಯಂ ನಿರ್ಮಿತ ಮಹಿಳೆ, ಜ್ಯೋತಿ ರೆಡ್ಡಿ ಅವರದ್ದು.
ಜ್ಯೋತಿ ಇಂದು ಬಿಲಿಯನ್ ಡಾಲರ್ ಸಾಫ್ಟ್‌ವೇರ್ ಕಂಪನಿಯ ಸಿಇಒ ಆಗಿದ್ದಾರೆ. ಜ್ಯೋತಿಯವರ ಬಾಲ್ಯವು ಎಲ್ಲಾ ಮಕ್ಕಳ ಬಾಲ್ಯದಂತಿರಲಿಲ್ಲ. ಬಡ ಕುಟುಂಬದಲ್ಲಿ ಜನಿಸಿದ್ದ ಜ್ಯೋತಿಯವರು ಐದು ಮಕ್ಕಳಲ್ಲಿ ಎರಡನೆಯವರಾಗಿದ್ದರು. ಅವರ ತಂದೆ ದಿನಗೂಲಿ ಕಾರ್ಮಿಕರಾಗಿದ್ದು, ಬಡತನದ ಕಾರಣದಿಂದ ಜ್ಯೋತಿ 8 ನೇ ವಯಸ್ಸಿರುವಾಗ ಅವರನ್ನು ಅನಾಥಾಶ್ರಮಕ್ಕೆ ಕಳುಹಿಸಿದರು.

ಇಲ್ಲಿಗೆ ಅವರ ನೋವು ಸಂಕಷ್ಟ ಕೊನೆಯಾಗಿರಲಿಲ್ಲ. ಜ್ಯೋತಿ 16 ನೇ ವಯಸ್ಸು ತುಂಬುತಿದ್ದಂತೆ ಆಕೆಗಿಂತ 10 ವರ್ಷ ಹಿರಿಯನಾಗಿದ್ದ ರೈತನಾಗಿ ದುಡಿಯುತ್ತಿದ್ದ ವ್ಯಕ್ತಿಯೊಂದಿಗೆ ಒತ್ತಾಯವಾಗಿ ಮದುವೆ ಮಾಡಿಸಲಾಯಿತು. ಕೇವಲ 18 ವರ್ಷಕ್ಕೆ ಜ್ಯೋತಿಯವರು ಇಬ್ಬರು ಹೆಣ್ಣುಮಕ್ಕಳ ತಾಯಿಯಾದರು.
ಇದೆಲ್ಲದರೊಂದಿಗೆ ಅವರು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಕುಗ್ಗಿಹೋಗಿದ್ದರು. ಕೇವಲ 5 ರೂಪಾಯಿ ಅತ್ಯಲ್ಪ ಹಣಕ್ಕಾಗಿ ದಿನಗೂಲಿಯಾಗಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದರು. 1985 ರಿಂದ 1990 ರವರೆಗೆ ಐದು ವರ್ಷಗಳ ಕಾಲ ತೆಲಂಗಾಣದ ಬಿಸಿಲಿನ ಬೇಗೆಯ ನಡುವೆಯೂ ಕೆಲಸ ಮಾಡಿದರು.
ಅದರ ನಂತರ, ಅವರ ಜೀವನವು ಕೇಂದ್ರ ಸರ್ಕಾರದ ಯೋಜನೆ ಪರಿಣಾಮ ಸ್ವಲ್ಪ ಸುಧಾರಿಸಿ,, ಇದರ ಪರಿಣಾಮ ಅವರು ಶಿಕ್ಷಕಿಯಾಗಿ ಕೆಲಸ ಮಾಡಲಾರಂಭಿಸಿದರು. ಆದರೆ ಅಲ್ಲಿ ಸಿಗುತ್ತಿದ್ದ ಹಣ ಸಾಕಾಗದೇ ರಾತ್ರಿ ವೇಳೆ ಟೈಲರಿಂಗ್ ಕೆಲಸ ಮಾಡುತ್ತಿದ್ದರು. ಸಮಾಜ ಮತ್ತು ತನ್ನ ಕುಟುಂಬದ ಪೂರ್ವಾಗ್ರಹ ಪೀಡಿತ ಯೋಚನೆ ಮತ್ತು ಅವಹೇಳನಗಳನ್ನು ಎದುರಿಸಿಕೊಂಡೇ ಜ್ಯೋತಿ ಅವರು 1994 ರಲ್ಲಿ ಡಾ ಬಿಆರ್ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯದಿಂದ ಬಿಎ ಪದವಿ ಪಡೆದರು.
1997 ರಲ್ಲಿ ಕಾಕತೀಯ ವಿಶ್ವವಿದ್ಯಾಲಯದಿಂದ ಪಿಜಿ ಪದವಿಯನ್ನು ಪೂರ್ಣಗೊಳಿಸಿದರು. ಪದವಿ ಪಡೆದುಕೊಂಡ ಪರಿಣಾಮ ಹೆಚ್ಚಿನ ಸಂಬಳ ಉದ್ಯೋಗ ದೊರಕಿತು. ಆದರೆ ಮಾಸಿಕವಾಗಿ ಅವರಿಗೆ 398 ರೂ. ಸಿಗುತ್ತಿದ್ದರು, ಕುಟುಂಬ ನಿರ್ವಹಣೆಗೆ ಇದು ಸಾಲುತ್ತಿರಲಿಲ್ಲ.
ಜ್ಯೋತಿಯವರ ಜೀವನದ ಎರಡನೇ ಮಹತ್ವದ ಹಂತವೆಂದರೆ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದ್ದು. ಅಮೇರಿಕಾದಲ್ಲಿದ್ದ ಸಂಬಂಧಿಯೊಬ್ಬರು ಅವರನ್ನು ಭೇಟಿ ಮಾಡಿದಾಗ ಜ್ಯೋತಿಯವರಿಗೆ ವಿದೇಶದಲ್ಲಿ ಕೆಲಸ ಮಾಡುವಂತೆ ಪ್ರೋತ್ಸಾಹಿಸಿದ್ದರು. ಕಲಿಕೆಯ ಹಸಿವಿದ್ದ ಜ್ಯೋತಿ ಅವರು ಕಂಪ್ಯೂಟರ್ ಕೋರ್ಸ್‌ಗಳನ್ನು ಪೂರ್ಣಗೊಳಿಸಿ, ಕೆಲಸಕ್ಕಾಗಿ ತಮ್ಮಿಬ್ಬರು ಹೆಣ್ಣುಮಕ್ಕಳನ್ನು ಭಾರತದಲ್ಲಿ ಬಿಟ್ಟು ಅಮೇರಿಕಾಕ್ಕೆ ತೆರಳಿದರು.
ಆದರೆ ಜ್ಯೋತಿಯವರು ಅಮೇರಿಕಾದಲ್ಲಿ ಮತ್ತೆ ಜೀವನ ಆರಂಭಿಸಬೇಕಿತ್ತು. ಇದಕ್ಕಾಗಿ ಅವರು ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುವುದು, ಶಿಶುಪಾಲನಾ ಕೇಂದ್ರದಲ್ಲಿ ದುಡಿಯುವ ಮೂಲಕ ಸಣ್ಣ ಕೆಲಸಗಳನ್ನು ಮಾಡಲಾರಂಭಿಸಿದರು. ಬಳಿಕ ಒಂದೊಂದೆ ಹೆಜ್ಜೆ ಮೇಲೇರಿ ನೇಮಕಾತಿ ವೃತ್ತಿಪರರಾಗಿ ಕೆಲಸ ಮಾಡಲಾರಂಭಿಸಿದರು.
2001ರಲ್ಲಿ ಫೀನಿಕ್ಸ್‌ನಲ್ಲಿ ತಮ್ಮದೇ ಆದ ಕೀ ಸಾಫ್ಟ್‌ವೇರ್ ಸೊಲ್ಯೂಷನ್ ಇಂಕ್ ಸ್ಥಾಪಿಸಿ ಸಂಸ್ಥೆಯನ್ನು ಸಿಇಒ ಆಗಿ ಮುನ್ನಡೆಸಿದರು. ಕಂಪನಿ ಲಾಭದತ್ತ ಸಾಗುತ್ತಿರುವಂತೆಯೇ ಮಕ್ಕಳನ್ನು ಅಮೆರೀಕಕ್ಕೆ ಕರೆಯಿಸಿಕೊಂಡರು. ಅವರ ಸಂಸ್ಥೆ ಕ್ರಮೇಣವಾಗಿ $15 ಮಿಲಿಯನ್ ಗಳಿಸಿ, 2017 ರಲ್ಲಿ ಅಂತಿಮವಾಗಿ ಶತಕೋಟಿ ಡಾಲರ್ ಕಂಪನಿಯಾಗಿ ಬೆಳೆದು ನಿಂತಿತು. ನಿಜಕ್ಕೂ ಆಶಾವಾದಿಯಾಗಿದ್ದ ಜ್ಯೋತಿಯವರ ಪರಿಶ್ರಮದ ಕಥೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications