ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಹೂಡಿಕೆದಾರರಾಗಿರುವ ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್ ಮುಖ್ಯಸ್ಥೆ ನಮಿತಾ ಥಾಪರ್ ಅತ್ಯಂತ ಪ್ರಭಾವಶಾಲಿ ಹಾಗೂ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಜೊತೆಗೆ ನಮಿತಾ ಥಾಪರ್ ಅವರು ಐಷಾರಾಮಿ ಮನೆಗಳ ಹಾಗೂ ದುಬಾರಿ ಕಾರುಗಳ ಒಡತಿಯಾಗಿದ್ದು, ಇವರ ನಿವ್ವಳ ಮೌಲ್ಯವು ಹಲವು ಕೋಟಿಗಳಲ್ಲಿದೆ.
ನಮಿತಾ ಥಾಪರ್ ಅವರು ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದು ಶಾರ್ಕ್ ಟ್ಯಾಂಕ್ ಕಾರ್ಯಕ್ರಮದ ಸಿರಿವಂತ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ. ನಮಿತಾ ಥಾಪರ್ ಅವರು ಶಾರ್ಕ್ ಟ್ಯಾಂಕ್ ಇಂಡಿಯಾದ ಕಳೆದ 3 ಸೀಸನ್‌ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ನಮಿತಾ ಥಾಪರ್ ಅವರ ನಿವ್ವಳ ಮೌಲ್ಯವು 600 ಕೋಟಿ ರೂಪಾಯಿಗಳಾಗಿದೆ. ಎಂಕ್ಯೂರ್ ಫಾರ್ಮಾದ ಮುಖ್ಯಸ್ಥೆ ಆದ ಬಳಿಕ ಅವರ ಆದಾಯದಲ್ಲಿ ಭಾರೀ ಹೆಚ್ಚಳವಾಗಿದೆ. ನಮಿತಾ ಥಾಪರ್ ಭಾರತದಲ್ಲಿ ಎಂಬಿಎ ಮುಗಿಸಿದ್ದು ಬಳಿಕ ಅಮೇರಿಕಾಕ್ಕೆ ತೆರಳಿ ಅಲ್ಲಿ ಮೆಡಿಕಲ್ ಡಿವೈಸ್ ತಯಾರಕ ಕಂಪನಿಯಾದ ಗೈಡೆಂಟ್ ಕಾರ್ಪೊರೇಷನ್‌ನಲ್ಲಿ ಬಿಸಿನೆಸ್ ಫೈನಾನ್ಸ್ ಮುಖ್ಯಸ್ಥರಾಗಿ ಕೆಲಸ ಮಾಡಿದರು.
ಕೆಲ ವರ್ಷಗಳ ನಂತರ, ನಮಿತಾ ಅವರು ಭಾರತಕ್ಕೆ ಮರಳಲು ನಿರ್ಧರಿಸಿದರು. ತಾಯಾಡ್ನಿಗೆ ಹಿಂದಿರುಗಿದ ನಂತರ ಅವರು ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್‌ನ ಸಿಎಫ್‌ಒ ಆಗಿ ನೇಮಕಗೊಂಡರು. ಶೀಘ್ರದಲ್ಲೇ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಭಡ್ತಿ ಪಡೆದರು.
ಈ ಕಂಪನಿಯನ್ನು ಆಕೆಯ ತಂದೆ ಸತೀಶ್ ಮೆಹ್ತಾ ಸ್ಥಾಪಿಸಿದ್ದು ಅವರು ಈ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಎಂಕ್ಯೂರ್ ಹೊರತಾಗಿ, ನಮಿತಾ ಥಾಪರ್ ಶಿಕ್ಷಣ ಸಂಸ್ಥೆಯಾದ ಇನ್‌ಕ್ರೆಡಿಬಲ್ ವೆಂಚರ್ಸ್ ಲಿಮಿಟೆಡ್‌ನ ಮುಖ್ಯಸ್ಥರಾಗಿದ್ದಾರೆ. ನಮಿತಾ ಅವರು ಶಾರ್ಕ್ ಟ್ಯಾಂಕ್ ಇಂಡಿಯಾದ ಆರಂಭದಿಂದಲೇ ಅದರ ಭಾಗವಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸೀಸನ್ 1 ನಲ್ಲಿ, ಅವರು ಪ್ರತಿ ಸಂಚಿಕೆಗೆ 8 ಲಕ್ಷ ರೂಪಾಯಿಗಳನ್ನು ಸಂಭಾವನೆ ಪಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಸುಮಾರು 25 ಕಂಪನಿಗಳಲ್ಲಿ ಸುಮಾರು 10 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ ಅವರು ಬಮ್ಮರ್, ಸ್ಮಾರ್ಟ್ ಹೆಲ್ಮೆಟ್ ಕಂಪನಿ ಆಲ್ಟರ್, ಕಾಕ್‌ಟೈಲ್ ಕಂಪನಿ ಇನಾಕಾನ್ ಮತ್ತು ರೆಡಿ-ಟು-ಕುಕ್ ಆಹಾರ ತಯಾರಕರಾದ ವಾಕಾವೊ ಫುಡ್ಸ್‌ನಂತಹ ಸ್ಟಾರ್ಟ್-ಅಪ್‌ಗಳು ಇವರಿಗೆ ಆಸಕ್ತಿದಾಯಕವಾಗಿ ಕಂಡಿದ್ದು, ಅದರಲ್ಲಿ ಹಣವನ್ನು ಹೂಡಿಕೆ ಮಾಡಿದ್ದಾರೆ.
ನಮಿತಾ ಥಾಪರ್ ಅವರು ಐಷಾರಾಮಿ ಜೀವನಶೈಲಿ ಹಾಗೂ ಸ್ಟ್ರಾಂಗ್ ಪೋರ್ಟ್ಫೋಲಿಯೊ ಹೊಂದಿದ್ದು, ಪುಣೆಯಲ್ಲಿ 50 ಕೋಟಿ ರೂಪಾಯಿ ಮೌಲ್ಯದ ವೈಭೋವಪೇತ ಮನೆಯನ್ನು ಹೊಂದಿದ್ದಾರೆ. ಇವರು ಎಂಕ್ಯೂರ್‌ನಲ್ಲಿ ಕೆಲಸ ಮಾಡುತ್ತಿದ್ದ ವಿಕಾಸ್ ಥಾಪರ್ ಅವರನ್ನು ವಿವಾಹವಾಗಿದ್ದಾರೆ.
ನಮಿತಾ ಥಾಪರ್‌ಗೆ ಐಷಾರಾಮಿ ಕಾರುಗಳೆಂದಾರೆ ಬಹಳ ಇಷ್ಟ. ಸುಮಾರು 280,000 ಡಾಲರ್‌ನ ಬಿಎಂಡಬ್ಲ್ಯೂ ಎಕ್ಸ್7 ಕಾರನ್ನು ನಮಿತಾ ಥಾಪರ್ ಬಳಸುತ್ತಿದ್ದಾರೆ. ಇದಲ್ಲದೇ ಮರ್ಸೆಡಿಯಸ್-ಬೆನ್ಜ್ ಜಿಎಲ್‌ಇ, ಮತ್ತು ಆಡಿ ಕ್ಯೂ7 ಸೇರಿದಂತೆ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಶಾರ್ಕ್ ಟ್ಯಾಂಕ್ ಇಂಡಿಯಾದ ಅಮಿತ್ ಜೈನ್ ಕೂಡ ಒಮ್ಮೆ ನಮಿತಾ ಅವರನ್ನು ತಮಾಷೆ ಮಾಡಿ, ಅವರು 20 ಲಕ್ಷ ರೂಪಾಯಿ ಮೌಲ್ಯದ ಶೂಗಳನ್ನು ಧರಿಸುತ್ತಾರೆ ಎಂದು ಬಹಿರಂಗಪಡಿಸಿದ್ದರು.!


Click it and Unblock the Notifications